ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪಿಸ್ ಮಿಸ್ ಅಂತ ಹೊಡೆದಾಟ: ಮದುವೆ ಮನೆಯಾಯ್ತು ರಣಾಂಗಣ
ಬಿರಿಯಾನಿಯಲ್ಲಿ ಚಿಕನ್ ಲೆಗ್ ಪಿಸ್ ಕಾಣಿಸ್ತಿಲ್ಲ ಅಂತ ಮದುವೆ ಮನೆಯಲ್ಲಿ ಹೊಡೆದಾಟ ಶುರುವಾಗಿ ಮದುವೆ ಮನೆಯೊಂದು ರಣಾಂಗಣವಾದ ಘಟನೆ ಉತ್ತರಪ್ರದೇಶದ ಬರೇಲಿಯ ನವಾಬ್‌ಗಂಜ್ ಬಳಿ ನಡೆದಿದೆ.
ಬರೇಲಿ: ಬಿರಿಯಾನಿಯಲ್ಲಿ ಚಿಕನ್ ಲೆಗ್ ಪಿಸ್ ಕಾಣಿಸ್ತಿಲ್ಲ ಅಂತ ಮದುವೆ ಮನೆಯಲ್ಲಿ ಹೊಡೆದಾಟ ಶುರುವಾಗಿ ಮದುವೆ ಮನೆಯೊಂದು ರಣಾಂಗಣವಾದ ಘಟನೆ ಉತ್ತರಪ್ರದೇಶದ ಬರೇಲಿಯ ನವಾಬ್‌ಗಂಜ್ ಬಳಿ ನಡೆದಿದೆ. ಆದರೆ ಘಟನೆಗೆ ಸಂಬಂಧಿಸಿದಂತೆ ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿಲ್ಲ ಎಂದು ನವಾಬ್‌ಗಂಜ್ ಪೊಲೀಸರು ಹೇಳಿದ್ದರು. ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನರು ಪರಸ್ಪರರತ್ತ ಚೇರ್ ಎಸೆದುಕೊಂಡು ಹೊಡೆದಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ಕೆಲ ವರದಿಗಳ ಪ್ರಕಾರ, ಗಂಡಿನ ಕಡೆಯವರು ಚಿಕನ್ ಬಿರಿಯಾನಿಯಲ್ಲಿ ಲೆಗ್ ಫೀಸ್( ಕೋಳಿ ಕಾಲು) ಇಲ್ಲ ಎಂದು ಆಕ್ಷೇಪವೆತ್ತಿದ್ದು, ಇದರಿಂದ ಸಿಟ್ಟಿಗೆದ್ದ ಹುಡುಗಿ ಕಡೆಯವರು, ವರನ ಕುಟುಂಬದವರು ಹಾಗೂ ಸಂಬಂಧಿಗಳನ್ನು ಹೊಡೆದಿದ್ದಾರೆ. ಘಟನೆಯಿಂದ ಸಿಟ್ಟಿಗೆದ್ದ ವರನ ಕಡೆಯವರು ಮದುವೆ ಪ್ರಕ್ರಿಯೆ ಮುಂದುವರೆಸುವುದಕ್ಕೆ ನಿರಾಕರಿಸಿದ್ದಾರೆ. ಆದರೆ ನಂತರದಲ್ಲಿ ಅಲ್ಲಿದ್ದ ಸಂಬಂಧಿಗಳು ಹಿರಿಯರು ಸೇರಿ ಮನವೊಲಿಸಿದ ನಂತರ ಎರಡೂ ಕುಟುಂಬಗಳು ಮನವೊಲಿಕೆ ಮಾಡಿ ಮದುವೆಯ ಕ್ರಮ ಮುಂದುವರೆಸಿದ್ದಾರೆ.
ಮದ್ವೆ ಖುಷೀಲಿ ಡ್ಯಾನ್ಸ್ ಮಾಡುತ್ತಾ ಮಂಟಪದಿಂದ ಜಿಗಿದ ವರ, ಅತಿಥಿಗಳು ಕಕ್ಕಾಬಿಕ್ಕಿ!
ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಒಂದು ಕಡೆ ಮದುವೆಯ ಸಂಪ್ರದಾಯಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ದಿಬ್ಬಣ ಬಂದವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಹುಡುಗನ ಕಡೆಯವರಿಗೆ ಬಿರಿಯಾನಿಯಲ್ಲಿ ಲೆಗ್ ಪೀಸ್ ಸಿಕ್ಕಿಲ್ಲ, ಇದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದಾಗ ಗಲಾಟೆ ಆರಂಭವಾಗಿದ್ದು, ಪರಸ್ಪರ ಎರಡು ಕಡೆಯವರು ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿದ್ದಾರೆ.
ಈ ಗಲಾಟೆಯಲ್ಲಿ ವರನೂ ಸೇರಿಕೊಂಡಿದ್ದು, ಯಾರೋ ಈ ಘಟನೆಯನ್ನು ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನವಾಬ್‌ಗಂಜ್ ಪೊಲೀಸರ ಪ್ರಕಾರ ಘಟನೆಗೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ದಾಖಲಾಗಿಲ್ಲ, ದೂರು ದಾಖಲಾದರೆ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.
ಮದುವೆ ಮಂಟಪದಲ್ಲೇ ವಧುವಿಗೆ ಮುತ್ತಿಕ್ಕಿದ ವರ: ರಣಾಂಗಣವಾಯ್ತು ಮದ್ವೆ ಮನೆ