Asianet Suvarna News Asianet Suvarna News

ಗುಣಮಟ್ಟದ ವೀರ್ಯಬೇಕೆಂದ್ರೆ ಟಿವಿ, ಮೊಬೈಲ್ ಬಳಸೋ ಚಟ ಬಿಟ್ ಬಿಡಿ

ನಮ್ಮ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.  ಟಿವಿ ಅಥವಾ ಮೊಬೈಲ್ ವೀಕ್ಷಣೆ ಟೈಂ ಪಾಸ್ ಗೆ ಒಳ್ಳೆಯದು. ಇದು ತಾತ್ಕಾಲಿಕ ಮನರಂಜನೆ ಕೂಡ ನೀಡ್ಬಹುದು. ಆದ್ರೆ ನಿಮ್ಮ ಆರೋಗ್ಯ, ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. 
 

Watching TV Or Mobile Reduce The Sperm  Count
Author
First Published Jan 10, 2023, 4:01 PM IST

ಹತ್ತು ನಿಮಿಷಕ್ಕೊಮ್ಮೆಯಾದ್ರೂ ಸಾಮಾಜಿಕ ಜಾಲತಾಣವನ್ನು ಇಣುಕಿ ನೋಡದೆ ಹೋದ್ರೆ ಅನೇಕರಿಗೆ ಸಮಾಧಾನವಿಲ್ಲ. ಇಡೀ ದಿನ ಮೊಬೈಲ್ ಹಿಡಿದು ಕುಳಿತುಕೊಳ್ಳುವವರಿದ್ದಾರೆ. ಕೆಲಸದಲ್ಲಿ ಸ್ವಲ್ಪ ಬಿಡುವು ಸಿಕ್ಕಿದ್ರೂ ಅವರ ಹೋಗೋದು ಮೊಬೈಲ್ ಅಥವಾ ಟಿವಿ ಬಳಿ. ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಟಿವಿ ಹಾಗೂ ಮೊಬೈಲ್ ನಲ್ಲಿ ಸಿನಿಮಾ ಅಥವಾ ಧಾರಾವಾಹಿ ನೋಡೋದನ್ನು ಹೆಚ್ಚು ಇಷ್ಟಪಡ್ತಾರೆ. ತಡರಾತ್ರಿಯವರೆಗೆ ಸಿನಿಮಾ ವೀಕ್ಷಣೆ ಮಾಡುವವರಿದ್ದಾರೆ. ಇದು ಒಂದು ರೀತಿ ಚಟವಿದ್ದಂತೆ. ಈ ಚಟ ನಮ್ಮ ಕಣ್ಣಿನ ಆರೋಗ್ಯ ಮೇಲೆ ಮಾತ್ರವಲ್ಲ ಸಂತಾನೋತ್ಪತ್ತಿ ಮೇಲೂ ಪರಿಣಾಮ ಬೀರುತ್ತದೆ.

ಟಿವಿ (TV) ಅಥವಾ ಮೊಬೈಲ್ (Mobile) ಮುಂದೆ ಗಂಟೆಗಟ್ಟಲೆ ಕುಳಿತಿರುವುದ್ರಿಂದ  ದೇಹದಲ್ಲಿನ ಶಾಖ ಹೆಚ್ಚಾಗುತ್ತದೆ. ಇದು ನಮ್ಮ ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಧ್ಯಯನವೊಂದರ ಪ್ರಕಾರ, ಟಿವಿ ಹಾಗೂ ಮೊಬೈಲ್ ವೀಕ್ಷಣೆ ಮಾಡುವ ಪುರುಷರಲ್ಲಿ ವೀರ್ಯ (Sperm) ದ ಸಂಖ್ಯೆ ಕಡಿಮೆಯಾಗ್ತಿದೆ.  ವೀರ್ಯ ಕೋಶಗಳು ತಂಪಾದ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಆದರೆ ದೇಹವು ತುಂಬಾ ಬಿಸಿಯಾಗಿರುವಾಗ ಅವುಗಳ ಬೆಳವಣಿಗೆ ಕಡಿಮೆಯಾಗುತ್ತದೆ. ವಾರದಲ್ಲಿ 20 ಗಂಟೆಗಳಿಗಿಂತ ಹೆಚ್ಚು ಕಾಲ ಟಿವಿ ಅಥವಾ ಮೊಬೈಲ್ ವೀಕ್ಷಣೆ ಮಾಡುವ ಪುರುಷರ ವೀರ್ಯ ಉತ್ಪಾದನೆ ಗಣನೀಯವಾಗಿ ಕಡಿಮೆಯಾಗುತ್ತದೆ. ಅವರಲ್ಲಿ ವೀರ್ಯ ಉತ್ಪಾದನೆ ಶೇಕಡಾ 35 ರಷ್ಟು ಕಡಿಮೆ ಎನ್ನುತ್ತದೆ ಅಧ್ಯಯನ.  ವರದಿಯೊಂದರ ಪ್ರಕಾರ, ದಿನದಲ್ಲಿ ನೀವು 5 ಗಂಟೆಗಳಿಗಿಂತ ಹೆಚ್ಚು ಕಾಲ ಟಿವಿ ನೋಡಿದ್ರೂ ನಿಮ್ಮ ವೀರ್ಯದ ಪ್ರಮಾಣದಲ್ಲಿ ಇಳಿಕೆಯಾಗುತ್ತದೆಯಂತೆ. 

ಮಧುಮೇಹಿಗಳಿಗೆ ಬೀಟ್ ರೂಟ್ ಬೆಸ್ಟ್! ಎಷ್ಟು ಪ್ರಮಾಣ ಬೆಟರ್?

ವೀರ್ಯ ಕಡಿಮೆಯಾಗಲು ಇದೂ ಕಾರಣ : ಸಾಮಾನ್ಯವಾಗಿ ಟಿವಿ ಅಥವಾ ಮೊಬೈಲ್ ವೀಕ್ಷಣೆ ಮಾಡುವವರು ಸೋಮಾರಿಗಳಾಗಿರ್ತಾರೆ. ಅವರು ವ್ಯಾಯಾಮ (Exercise) ಮಾಡುವುದಿಲ್ಲ. ಆರೋಗ್ಯಕರ ಆಹಾರ ಸೇವಿಸುವುದಿಲ್ಲ. ಅವರ ಈ ಕೆಟ್ಟ ಜೀವನ ಶೈಲಿ ಅವರ ವೀರ್ಯದ ಮೇಲೆ  ಪರಿಣಾಮ ಬೀರುತ್ತವೆ. ಇದ್ರಿಂದ ಬಂಜೆತನ ಕಾಡುತ್ತದೆ. 

ಮೊಬೈಲ್ ವೀಕ್ಷಣೆಯಿಂದ ಬೊಜ್ಜು : ಇದೊಂದು ರೀತಿಯ ಕೊಂಡಿ ಇದ್ದ ಹಾಗೆ. ಹೆಚ್ಚೆಚ್ಚು ಮೊಬೈಲ್ ನೋಡೋದ್ರಿಂದ ದೈಹಿಕ ಚಟುವಟಿಕೆ ಕಡಿಮೆಯಾಗುತ್ತದೆ. ದೈಹಿಕ ಚಟುವಟಿಕೆ ಕಡಿಮೆಯಾದ್ರೆ ಬೊಜ್ಜು ಆವರಿಸುತ್ತದೆ. ಬೊಜ್ಜು (Obesity) ಬಂಜೆತನಕ್ಕೆ ಕಾರಣವಾಗುತ್ತದೆ. ಬೊಜ್ಜಿನಿಂದ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ಸಂಭೋಗದ ವೇಳೆ ಆರಂಭಿಕ ಸ್ಖಲನಕ್ಕೂ ಇದು ಕಾರಣವಾಗುತ್ತದೆ.

ಸಂಶೋಧನೆ ಹೇಳೋದೇನು? : ಬ್ರಿಟಿಷ್ ಜನರಲ್ ಆಫ್ ಸ್ಪೋರ್ಟ್ಸ್ ಮೆಡಿಸಿನ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಸಂಶೋಧಕರು 18 ರಿಂದ 22 ವರ್ಷದೊಳಗಿನ 200 ವಿದ್ಯಾರ್ಥಿಗಳ ವೀರ್ಯ ಮಾದರಿಗಳನ್ನು ಪರೀಕ್ಷೆ ಮಾಡಿದ್ದಾರೆ. ವೀರ್ಯದ ಸಂಖ್ಯೆ ಇಳಿಯಲು ಜಡ ಜೀವನಶೈಲಿ ನೇರ ಸಂಬಂಧ ಹೊಂದಿದೆ ಎಂಬುದು ಆಗ ತಿಳಿದಿದೆ. ಹೆಚ್ಚು ಟಿವಿ ವೀಕ್ಷಿಸುವ ವಿದ್ಯಾರ್ಥಿಗಳ ವೀರ್ಯದ ಎಣಿಕೆ ಪ್ರತಿ ಮಿಲಿಗೆ 37 ಮಿಲಿಯನ್ ಮೈಕ್ರಾನ್ಸ್ ಆದ್ರೆ ಕಡಿಮೆ ಟಿವಿ ವೀಕ್ಷಿಸುವ ವಿದ್ಯಾರ್ಥಿಗಳ ವೀರ್ಯಾಣು ಪ್ರತಿ ಮಿಲಿಗೆ 52 ಮಿಲಿಯನ್ ಮೈಕ್ರಾನ್ ಆಗಿತ್ತು.  

ಬೇಡದ ಆಲೋಚನೆಗಳು ಬೇಕಾ? MENTAL HEALTH ಸರಿ ಇರ್ಬೇಕು ಅಂದ್ರೆ ಬೇಡ!

ವ್ಯಾಯಾಮದಿಂದ ಕಾಡುತ್ತಾ ಸಮಸ್ಯೆ? : ಅರಿಯಾದ ಟಿವಿ ವೀಕ್ಷಣೆ ಮಾಡಿದ್ರೆ ವೀರ್ಯದ ಸಂಖ್ಯೆ ಕಡಿಮೆಯಾಗುತ್ತೆ ಸರಿ. ಅತಿಯಾದ ವ್ಯಾಯಾಮ ಮಾಡಿದ್ರೂ ಸಮಸ್ಯೆ ಕಾಡುತ್ತೆ ಎಂಬುದು ನಿಮಗೆ ಗೊತ್ತಾ? ವಾರಕ್ಕೆ ಸರಾಸರಿ 18 ಗಂಟೆಗಳ ವ್ಯಾಯಾಮವು ವೀರ್ಯದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಆದ್ರೆ ಅತಿಯಾದ ವ್ಯಾಯಾಮ ಸ್ವತಂತ್ರ ರಾಡಿಕಲ್‌ಗಳ ಉತ್ಪಾದನೆ ಮತ್ತು ವಿಸರ್ಜನೆಯನ್ನು ಉತ್ತೇಜಿಸುತ್ತದೆ. ಇದರಿಂದಾಗಿ ವೀರ್ಯ ಕೋಶಗಳು ಸಾಯುತ್ತವೆ. ಇದು ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ.

Follow Us:
Download App:
  • android
  • ios