Real Story: ಗಣಿತ ಶಿಕ್ಷಕರ ಪತ್ನಿ ಮೇಲೆ ಶುರುವಾಗಿತ್ತು ಪ್ರೀತಿ
ಪ್ರೀತಿಗೆ ಯಾವುದೇ ಗಡಿಯಿಲ್ಲ. ವಯಸ್ಸಿನ ಮಿತಿಯಿಲ್ಲ. ಚಿಕ್ಕ ವಯಸ್ಸಿನಲ್ಲೇ ಪ್ರೀತಿ ಚಿಗುರಬಹುದು. ಆದ್ರೆ ಎಲ್ಲವೂ ನಾವಂದುಕೊಂಡಂತೆ ಆಗಲು ಸಾಧ್ಯವಿಲ್ಲ. ಈ ವ್ಯಕ್ತಿ ಕೂಡ ಹಳೆ ಪ್ರೀತಿ ನೆನೆದು ಈಗ ಭಾವುಕನಾಗಿದ್ದಾನೆ.
ಪ್ರೀತಿಯ ಭಾವನೆಯನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಪ್ರೀತಿ ಅಧ್ಬುತವಾದದ್ದು. ಮೊದಲ ಪ್ರೀತಿಯನ್ನು ಮರೆಯಲು ಸಾಧ್ಯವಿಲ್ಲ. ಪ್ರೀತಿಸಿದ ವ್ಯಕ್ತಿ ಜೊತೆಯಲ್ಲಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ಆದ್ರೆ ಪ್ರೀತಿಸಿದ ವ್ಯಕ್ತಿ ಜೊತೆಯಲ್ಲಿಲ್ಲವೆಂದ್ರೂ ಅವರ ನೆನಪು ಆಗಾಗ ಕಾಡುತ್ತಿರುತ್ತದೆ. ಪ್ರೀತಿ ಜಾತಿ, ವಯಸ್ಸು ನೋಡಿ ಹುಟ್ಟುವುದಿಲ್ಲ ಎನ್ನುತ್ತಾರೆ. ಈ ವ್ಯಕ್ತಿ ವಿಷ್ಯದಲ್ಲೂ ಅದೇ ಆಗಿದೆ. ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವ ವ್ಯಕ್ತಿಗೆ ಪದವಿಯಲ್ಲಾದ ಪ್ರೀತಿಯನ್ನು ಮರೆಯಲು ಸಾಧ್ಯವಾಗ್ತಿಲ್ಲ.
ಆತನಿಗೆ ಮದುವೆ (Marriage) ಯಾಗಿದೆ. ಪತ್ನಿ (Wife) ಯನ್ನು ಅತಿಯಾಗಿ ಪ್ರೀತಿ ಮಾಡ್ತಾನೆ. ಮದುವೆಗೆ ಮುನ್ನ ಪ್ರೀತಿಸಿ ಮದುವೆಯಾಗಬೇಕೆಂಬ ಆಸೆ ಆತನಲ್ಲಿತ್ತಂತೆ. ಪದವಿ ಓದುತ್ತಿದ್ದ ವ್ಯಕ್ತಿಗೆ ಗಣಿತ ಕಬ್ಬಿಣದ ಕಡಲೆಯಾಗಿತ್ತಂತೆ. ಗಣಿತ (Mathematics) ದಲ್ಲಿ ಪಾಸ್ ಆಗುವುದು ಅನಿವಾರ್ಯವಾಗಿತ್ತಂತೆ. ಗಣಿತ ಶಿಕ್ಷಕರೊಬ್ಬರ ಬಗ್ಗೆ ಕೇಳಿದ್ದ ವ್ಯಕ್ತಿ ಅವರ ಬಳಿ ಟ್ಯೂಷನ್ ಗೆ ಹೋಗಿದ್ದನಂತೆ.
ಗಣಿತ ಶಿಕ್ಷಕರು ಆತನನ್ನು ಸರಿಯಾಗಿ ಅರ್ಥ ಮಾಡಿಕೊಂಡಿದ್ದರಂತೆ. ಅರ್ಥವಾಗುವ ರೀತಿಯಲ್ಲಿ ಗಣಿತ ಕಲಿಸಲು ಶುರು ಮಾಡಿದ್ದರಂತೆ. ಇದ್ರಿಂದ ವ್ಯಕ್ತಿ ಸುಲಭವಾಗಿ ಗಣಿತ ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದನಂತೆ. ಶಿಕ್ಷಕರು ಕೂಡ ಈತನ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರಂತೆ. ಗಣಿತ ಶಿಕ್ಷಕರು ಮಾತ್ರವಲ್ಲ ಶಿಕ್ಷಕರ ಪತ್ನಿ ಕೂಡ ಈತ ಪದೇ ಪದೇ ಅವರ ಮನೆಗೆ ಹೋಗಲು ಕಾರಣವಾಗಿದ್ದಳಂತೆ. ಗಣಿತ ಶಿಕ್ಷಕರ ಪತ್ನಿ ಮನೆಯಲ್ಲಿ ಏಕಾಂಗಿತನ ಅನುಭವಿಸುತ್ತಿದ್ದಳಂತೆ. ಇದೇ ಕಾರಣಕ್ಕೆ ಪತಿ ಪಾಠ ಹೇಳುವ ಸಂದರ್ಭದಲ್ಲಿ ಅಲ್ಲಿ ಬಂದು ಕುಳಿತುಕೊಳ್ಳುತ್ತಿದ್ದಳಂತೆ. ಆಕೆಯ ಸೌಂದರ್ಯ ಹಾಗೂ ಆಕೆಯ ಮುಗ್ದತೆ ಈ ವ್ಯಕ್ತಿಯನ್ನು ಸೆಳೆದಿತ್ತಂತೆ.
ಇದನ್ನೂ ಓದಿ: ಅಬ್ಬಬ್ಬಾ..ಇವಳೆಂಥಾ ಲೈಂಗಿಕ ವ್ಯಸನಿ, 700 ಗಂಡಸರೊಂದಿಗೆ ಮಲಗಿದ್ದಳಂತೆ !
ಶಿಕ್ಷಕರ ಪತ್ನಿ ನೋಡಲು ವ್ಯಕ್ತಿ ಶಿಕ್ಷಕರ ಮನೆಗೆ ಹೆಚ್ಚೆಚ್ಚು ಹೋಗಲು ಶುರು ಮಾಡಿದ್ದನಂತೆ. ಒಂದು ದಿನ ಶಿಕ್ಷಕರಿಗೆ ಆರೋಗ್ಯ ಹಾಳಾಗಿತ್ತಂತೆ. ಅದನ್ನು ತಿಳಿಯದೆ ವ್ಯಕ್ತಿ ಅವರ ಮನೆಗೆ ಹೋಗಿದ್ದನಂತೆ. ಈ ವೇಳೆ ಎದುರಿಗೆ ಬಂದ ಶಿಕ್ಷಕರ ಪತ್ನಿ, ಪತಿಗೆ ಹುಷಾರಿಲ್ಲ ಎಂದಿದ್ದಳಂತೆ. ಜೊತೆಗೆ ಟೀ ಕುಡಿದು ಹೋಗುವಂತೆ ಹೇಳಿದ್ದಳಂತೆ.
ಆಕೆ ಟೀ ಕುಡಿಯುವಂತೆ ಹೇಳಿದಾಗ ಅಚ್ಚರಿಗೊಂಡ ವ್ಯಕ್ತಿ ಮನಸ್ಸಿನಲ್ಲಿ ಎಲ್ಲಿಲ್ಲದ ಖುಷಿಯಾಗಿತ್ತಂತೆ. ಇದ್ರಿಂದ ಆತನ ಮನಸ್ಸು ಮತ್ತಷ್ಟು ಹಾಳಾಗಿತ್ತಂತೆ. ಶಿಕ್ಷಕರ ಆರೋಗ್ಯ ವಿಚಾರಿಸುವ ನೆಪದಲ್ಲಿ ಮತ್ತಷ್ಟು ಬಾರಿ ಶಿಕ್ಷಕರ ಮನೆಗೆ ಹೋಗ್ತಿದ್ದನಂತೆ.
ಶಿಕ್ಷಕರ ಪತ್ನಿ ಹಾಗೂ ವ್ಯಕ್ತಿ ಕುಳಿತು ಅನೇಕ ವಿಷ್ಯಗಳನ್ನು ಮಾತನಾಡ್ತಿದ್ದರಂತೆ. ನೀನು ನನಗೆ ಸ್ನೇಹಿತನಂತೆ ಆಗಿದ್ದೀಯಾ ಎಂದು ಪತ್ನಿ ಹೇಳ್ತಿದ್ದರಂತೆ. ಶಿಕ್ಷಕ ಹಾಗೂ ಆಕೆ ಪತ್ನಿ ಮಧ್ಯೆ 10 ವರ್ಷಗಳ ಅಂತರವಿತ್ತು ಎನ್ನಿಸುತ್ತದೆ ಎನ್ನುತ್ತಾನೆ ವ್ಯಕ್ತಿ. ಒಂದು ದಿನ ತಿಂಡಿ ಪಾತ್ರೆಯನ್ನು ಸಿಂಕ್ ಗೆ ಹಾಕಲು ಅಡುಗೆ ಮನೆಗೆ ಹೋಗಿದ್ದನಂತೆ. ಅಡುಗೆ ಮನೆಯಲ್ಲಿ ಈಗಾಗಲೇ ಶಿಕ್ಷಕರ ಪತ್ನಿ ಇದ್ದಳಂತೆ. ಈ ಸಂದರ್ಭದಲ್ಲಿ ಇಬ್ಬರು ಎಷ್ಟು ಹತ್ತಿರಕ್ಕೆ ಬಂದಿದ್ದರೆಂದ್ರೆ ಪರಸ್ಪರ ಇಬ್ಬರ ಉಸಿರು ಕೇಳ್ತಿತ್ತಂತೆ. ಆ ಕ್ಷಣ ಏನಾಗ್ತಿದೆ ಎಂಬುದು ಗೊತ್ತಾಗದೆ ಅಲ್ಲಿಂದ ಹೊರಗೆ ಬಂದಿದ್ದನಂತೆ ವ್ಯಕ್ತಿ.
ಇದನ್ನೂ ಓದಿ: Relationship Tips: ಗಂಡ ಅಥವಾ ಹೆಂಡತಿ ಬೇರೆಯವರನ್ನ ಇಷ್ಟ ಪಡ್ತಿದ್ದಾರೆ ಅಂದ್ರೆ ಹೀಗೆ ಮಾಡ್ತಾರೆ
ಆದ್ರೆ ಅದೇ ಕೊನೆ ದಿನ ಎನ್ನುತ್ತಾನೆ ಆತ. ಆ ನಂತ್ರ ನನಗೆ ಶಿಕ್ಷಕರ ಪತ್ನಿ ಭೇಟಿಯಾಗುವ ಅವಕಾಶ ಸಿಗಲಿಲ್ಲ ಎನ್ನುತ್ತಾರೆ. ಪದವಿ ಪರೀಕ್ಷೆ ಮುಗಿಸಿದ ಮೇಲೆ ಶಿಕ್ಷಕರಿಗೆ ಧನ್ಯವಾದ ಹೇಳಿ, ಕೊನೆ ಬಾರಿ ಅವರ ಪತ್ನಿ ನೋಡಲು ಹೋಗಿದ್ದರಂತೆ. ಆದ್ರೆ ಅಲ್ಲಿ ಬರೀ ಶಿಕ್ಷಕರಿದ್ದರಂತೆ. ಆಗಿದ್ದಲ್ಲ ಒಳ್ಳೆಯದಕ್ಕೆ ಎನ್ನುತ್ತಾರೆ. ಶಿಕ್ಷಕರ ಪತ್ನಿಯನ್ನು ನಾನು ಮದುವೆಯಾಗಲು ಸಾಧ್ಯವಿಲ್ಲ ಎಂಬುದು ಗೊತ್ತಿದ್ದರೂ ನಾನು ಅವರ ಬಗ್ಗೆ ಕನಸು ಕಂಡಿದ್ದೆ. ಆದ್ರೆ ಯಾವುದೇ ತಪ್ಪು ಮಾಡಲು ಹೋಗಿರಲಿಲ್ಲ. ಶಿಕ್ಷಕರ ಮನೆಗೆ ಹೋದಾಗ ಅವರ ಪತ್ನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ಗೊತ್ತಾಯ್ತು ಎನ್ನುತ್ತಾರೆ ವ್ಯಕ್ತಿ. ಶಿಕ್ಷಕರ ಪತ್ನಿಯನ್ನು ಇನ್ನೂ ಮರೆಯಲು ಸಾಧ್ಯವಿಲ್ಲ. ಅದೊಂದು ಸುಂದರ ಕ್ಷಣ ಎನ್ನುತ್ತಾರೆ ವ್ಯಕ್ತಿ.