ಕೆಲವರನ್ನು ತುಂಬಾನೇ ನೆಚ್ಚಿಕೊಂಡಿರುತ್ತೇವೆ. ಅವರನ್ನು ಅಷ್ಟು ಇಷ್ಟಪಡಲು ಕಾರಣವೇನು ಎಂಬುದೇ ತಿಳಿದಿರೋದಿಲ್ಲ. ಇನ್ನೂ ಕೆಲವರೊಂದಿಗೆ ನಮಗೆ ಜಾಸ್ತಿ ಅಟ್ಯಾಚ್‍ಮೆಂಟ್ ಇರಲ್ಲ. ಪ್ರತಿ ವ್ಯಕ್ತಿಯೊಂದಿಗೆ ನಮಗಿರುವ ಸಂಬಂಧದ ಗಾಢತೆ ನಾವು ಅವರನ್ನು ಎಷ್ಟರ ಮಟ್ಟಿಗೆ ನೆಚ್ಚಿಕೊಂಡಿದ್ದೇವೆ ಎಂಬುದನ್ನು ಆಧರಿಸಿರುತ್ತದೆ. ಇದು ಸ್ನೇಹ, ಪ್ರೀತಿ ಎರಡಕ್ಕೂ ಅನ್ವಯಿಸುತ್ತದೆ.ಇನ್ನು ವ್ಯಕ್ತಿ ಸಂಬಂಧಕ್ಕೆ ಎಷ್ಟು ಪ್ರಾಮುಖ್ಯತೆ ನೀಡುತ್ತಾನೆ,ಅದನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಆತನ ಆಲೋಚನೆ, ವರ್ತನೆ ಹಾಗೂ ಭಾವನೆಗಳನ್ನು ಅವಲಂಭಿಸಿರುತ್ತದೆ. ಹೀಗೆ ಸಂಬಂಧವನ್ನು ನೆಚ್ಚಿಕೊಳ್ಳೋದು ಸಂಪೂರ್ಣವಾಗಿ ವೈಯಕ್ತಿಕ ವಿಷಯವಾಗಿದೆ. ಯಾರೋ ಹೇಳಿದರೂ ಎಂಬ ಕಾರಣಕ್ಕೆ ಈ ಭಾವನೆಗಳನ್ನು ಬದಲಾಯಿಸಿಕೊಳ್ಳಲು ಸಾಧ್ಯವಿಲ್ಲ.ಅದು ನಮ್ಮೊಳಗೇ ಹುಟ್ಟಬೇಕು, ಅರಳಬೇಕು. ಬದುಕಿನಲ್ಲಿ ಪ್ರತಿ ಸಂಬಂಧವು ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತದೆ.ನಂಬಿಕೆ, ಅಸೂಯೆ, ಮೋಹ ಇವೆಲ್ಲವೂ ಸಂಬಂಧವನ್ನು ನಾವು ನೆಚ್ಚಿಕೊಳ್ಳುವ ರೀತಿಯನ್ನು ಅವಲಂಬಿಸಿಯೇ ಜನ್ಮ ತಾಳುತ್ತವೆ ಕೂಡ. ಸರಳವಾಗಿ ಹೇಳಬೇಕೆಂದ್ರೆ ನಾವು ಸಂಬಂಧವನ್ನು ಹೇಗೆ ನಿಭಾಯಿಸುತ್ತೇವೆ ಅನ್ನೋದು ನಮ್ಮ ಸ್ವಭಾವವನ್ನು ಅವಲಂಬಿಸಿರುತ್ತದೆ. ಹಾಗಾದ್ರೆ ನಾವು ಇನ್ನೊಬ್ಬರನ್ನು ನೆಚ್ಚಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಅಂಶಗಳು ಯಾವುವು?

ನಿಮ್ಮ ನಂಬರ್‌ಗೂ ಸೆಕ್ಸ್‌ ಲೈಫ್‌ಗೂ ಸಂಬಂಧ ಇದೆಯಾ?

ನಂಬಿಕೆ
ಯಾವುದೇ ಸಂಬಂಧ ಹುಟ್ಟಲು, ಬೆಳೆಯಲು ಹಾಗೂ ಉಳಿಯಲು ನಂಬಿಕೆ ಅಗತ್ಯ. ಸ್ನೇಹ, ಪ್ರೀತಿ, ದಾಂಪತ್ಯ ಸೇರಿದಂತೆ ಎಲ್ಲ ಸಂಬಂಧಕ್ಕೂ ನಂಬಿಕೆಯೇ ಸೇತುವೆ. ನಂಬಿಕೆ ಹಾಗೂ ವಿಶ್ವಾಸ ಕುಸಿದ ದಿನ ಸಂಬಂಧವೂ ಶಿಥಿಲಗೊಳ್ಳಲಾರಂಭಿಸುತ್ತದೆ.ಯಾರನ್ನು ನಾವು ನಂಬುತ್ತೇವೆಯೋ ಆ ವ್ಯಕ್ತಿಯನ್ನು ಹೆಚ್ಚು ನೆಚ್ಚಿಕೊಳ್ಳುತ್ತೇವೆ.ನಂಬಿಕೆ ಇರುವ ವ್ಯಕ್ತಿಗಳೊಡನೆ ಮಾತು, ಒಡನಾಟ ಎಲ್ಲವೂ ಹೆಚ್ಚಿರುವ ಕಾರಣ ಅವರೊಂದಿಗಿನ ಸಂಬಂಧ ದೃಢವಾಗಿರುತ್ತದೆ. ನಂಬಿಕೆಯಿರಿಸಿರುವ ವ್ಯಕ್ತಿಗಳೊಂದಿಗೆ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಗುತ್ತೆ. ಇವರು ನಮ್ಮ ಭಾವನೆಗಳಿಗೆ ಸರಿಯಾಗಿ ಸ್ಪಂದಿಸುತ್ತಾರೆ ಎಂಬ ನಂಬಿಕೆಯೇ ಇವರನ್ನು ನಾವು ನೆಚ್ಚಿಕೊಳ್ಳಲು ಕಾರಣವಾಗುತ್ತೆ. 


ಕಮೀಟ್‍ಮೆಂಟ್

ನಾವು ಒಬ್ಬ ವ್ಯಕ್ತಿಯೊಂದಿಗಿನ ಸಂಬಂಧಕ್ಕೆ ಎಷ್ಟು ಕಮೀಟ್ ಆಗಿದ್ದೇವೆ ಎಂಬುದು ಕೂಡ ಅವರೊಂದಿಗಿನ ನಮ್ಮ ಅಟ್ಯಾಚ್‍ಮೆಂಟ್ ಅನ್ನು ನಿರ್ಧರಿಸುತ್ತೆ. ಕೆಲವರೊಂದಿಗೆ ನಾವು ಅಷ್ಟೇನು ಕಮೀಟ್ ಆಗಿರಲ್ಲ. ಎಷ್ಟು ಬೇಕೋ ಅಷ್ಟೇ ಎಂಬ ವರ್ತನೆ ತೋರುತ್ತೇವೆ. ಆದ್ರೆ ಕೆಲವರೊಂದಿಗಿನ ಸಂಬಂಧಕ್ಕೆ ತುಂಬಾ ಕಮೀಟ್ ಆಗಿರುತ್ತೇವೆ. ಆ ವ್ಯಕ್ತಿಯೊಂದಿಗಿನ ಸಂಬಂಧ ನಮ್ಮ ಬದುಕಿಗೆ ಅತ್ಯಂತ ಮಹತ್ವದಾಗಿರುತ್ತೆ. ಕಮೀಟ್‍ಮೆಂಟ್ ಅಥವಾ ಬದ್ಧತೆ ಅನ್ನೋದು ಪ್ರೀತಿ, ದಾಂಪತ್ಯ ಹಾಗೂ ಸ್ನೇಹ ಸಂಬಂಧಗಳನ್ನು ಭದ್ರವಾಗಿ ಹಿಡಿದಿಡುವ ಸಂಗತಿಗಳಲ್ಲೊಂದಾಗಿದೆ. 

ಈ ಸೆಲೆಬ್ರಿಟಿಗಳು ರಿಯಲ್‌ ಲೈಫ್‌ನಲ್ಲೂ ಸಖತ್ ರೊಮ್ಯಾಂಟಿಕ್

ಪ್ರೀತಿ ಮತ್ತು ಕಾಳಜಿ
ಸಂಬಂಧ ಅರಳೋದೇ ಪ್ರೀತಿಯಿಂದ. ಇನ್ನು ಸಂಬಂಧವನ್ನು ಗಟ್ಟಿಗೊಳಿಸೋದು, ನೀರೆರೆದು ಪೋಷಿಸೋದು ಕಾಳಜಿ. ನಮ್ಮೆಡೆಗೆ ಪ್ರೀತಿ ಮತ್ತು ಕಾಳಜಿ ತೋರುವ ವ್ಯಕ್ತಿಗಳು ಕ್ರಮೇಣ ಹತ್ತಿರವಾಗುತ್ತಾರೆ, ಅವರೊಂದಿಗೆ ನಮ್ಮ ಅಟ್ಯಾಚ್‍ಮೆಂಟ್ ಸಮಯ ಕಳೆದಂತೆ ಹೆಚ್ಚುತ್ತ ಹೋಗುತ್ತದೆ. ದಾಂಪತ್ಯದಲ್ಲಿ ಪತಿ -ಪತ್ನಿ ನಡುವೆ ಪ್ರೀತಿ ಹಾಗೂ ಕಾಳಜಿಯಿದ್ದಾಗ ಮಾತ್ರ ಅವರಿಬ್ಬರ ನಡುವಿನ ಅಟ್ಯಾಚ್‍ಮೆಂಟ್ ಹೆಚ್ಚುತ್ತೆ. 

ಭಾವನಾತ್ಮಕ ಸೆಳೆತ
ನಾವು ಕೆಲವರಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿರುತ್ತೇವೆ. ಅಂಥ ವ್ಯಕ್ತಿಗಳನ್ನು ತುಂಬಾನೇ ನೆಚ್ಚಿಕೊಳ್ಳುತ್ತೇವೆ. ಅಣ್ಣ, ತಮ್ಮ ಅಥವಾ ಅಕ್ಕ, ತಂಗಿ ಇವರೊಂದಿಗೆ ನಮಗಿರೋದು ಭಾವನಾತ್ಮಕ ಅಟ್ಯಾಚ್‍ಮೆಂಟ್. ಭಾವನಾತ್ಮಕ ಸಂಬಂಧವಿರುವ ವ್ಯಕ್ತಿಗಳಿಂದ ನಾವು ಅಷ್ಟು ಸುಲಭವಾಗಿ ದೂರಾಗೋದಿಲ್ಲ. ಇಲ್ಲಿ ಭಾವನೆಗಳೇ ಸಂಬಂಧವನ್ನು ಬೆಸೆಯುತ್ತೇವೆ. ಹೀಗಾಗಿ ಸಹಜವಾಗಿ ಇಂಥ ವ್ಯಕ್ತಿಗಳನ್ನು ನಾವು ಅತಿಯಾಗಿ ನೆಚ್ಚಿಕೊಳ್ಳುತ್ತೇವೆ. ಅಲ್ಲದೆ, ಇವರೊಂದಿಗೆ ನಮಗೆ ಅತ್ಯಂತ ಕಂಫರ್ಟ್ ಆಗಿರಲು, ಇಷ್ಟ ಬಂದಂತೆ ಮಾತನಾಡಲು ಹಾಗೂ ವರ್ತಿಸಲು ಸಾಧ್ಯವಾಗುತ್ತೆ.

ಮತ್ತೊಮ್ಮೆ ನಿಮ್ಮಿಬ್ಬರ ನಡುವೆ ಪ್ರೀತಿಯನ್ನೆಳೆದು ತನ್ನಿ

ಲೈಂಗಿಕ ತೃಪ್ತಿ
ಲೈಂಗಿಕ ಬಯಕೆಗಳ ಈಡೇರಿಕೆ ಹಾಗೂ ಅದ್ರಿಂದ ಸಿಗುವ ತೃಪ್ತಿ ಕೂಡ ಸಂಬಂಧದ ಮೇಲೆ ಪರಿಣಾಮ ಬೀರುತ್ತೆ. ಇದು ದಾಂಪತ್ಯ ಬದುಕಿನಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತೆ. ಪತಿ ಹಾಗೂ ಪತ್ನಿ ನಡುವೆ ಅಟ್ಯಾಚ್‍ಮೆಂಟ್ ಹೆಚ್ಚುವಲ್ಲಿ ಲೈಂಗಿಕ ತೃಪ್ತಿ ಕೂಡ ನಿರ್ಣಾಯಕ ಪಾತ್ರ ವಹಿಸುತ್ತದೆ.