ಒಬ್ಬ ಹೀರೋ ಅಥವಾ ಹೀರೋಯಿನ್‌ ತೆರೆಯ ಮೇಲೆ ರೊಮ್ಯಾನ್ಸ್ ಮಾಡುತ್ತಿದ್ದರೆ ರಿಯಲ್‌ ಲೈಫ್‌ನಲ್ಲೂ ಅವರು ಹಾಗೇ ಇರುತ್ತಾರೆ ಅಂತ ಬಹಳ ಮಂದಿ ಭಾವಿಸುತ್ತಾರೆ. ಆದರೆ ಸ್ಕ್ರೀನ್‌ ಮೇಲೆ ರೊಮ್ಯಾಂಟಿಕ್‌ ಆಗಿ ಕಾಣಿಸಿಕೊಂಡವರು ಎಷ್ಟೋ ಸಲ ರಿಯಲ್ ಲೈಫ್ ನಲ್ಲಿ ಅನ್‌ ರೊಮ್ಯಾಂಟಿಕ್‌ ಆಗಿರುತ್ತಾರೆ. ತಮ್ಮ ಬಾಳ ಸಂಗಾತಿ ಜೊತೆಗೆ ಹೊರಗೆ ಕಾಣಿಸಿಕೊಂಡರೂ ಡಿಸ್ಟೆನ್ಸ್‌ ಮೈಂಟೇನ್ ಮಾಡುತ್ತಾರೆ. ಆದರೆ ಕೆಲವರು ಹಾಗಲ್ಲ. ಅವರು ಸ್ಕ್ರೀನ್ ಮೇಲೆ ಎಷ್ಟು ರೊಮ್ಯಾಂಟಿಕ್ಕೋ ರಿಯಲ್‌ ಲೈಫ್‌ನಲ್ಲೂ ಅಷ್ಟೇ ರೊಮ್ಯಾಂಟಿಕ್. ಅಂಥ ಜೋಡಿಗಳ್ಯಾರು ಗೊತ್ತಾ?

1. ಸಮಂತಾ- ನಾಗ ಚೈತನ್ಯ
ಈ ದಂಪತಿಯ ಒಂದು ಫೋಟೋ ಶಾನೆ ವೈರಲ್ ಆಗ್ತಿದೆ. ಈ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಸಮಂತಾನೇ ಪೋಸ್ಟ್‌ ಮಾಡಿದ್ದಾರೆ. ನಾಗಚೈತನ್ಯ- ಸಮಂತ ಜೋಡಿ ಎಲ್ಲೋ ಟ್ರಾವೆಲ್ ಹೋಗ್ತಿರುತ್ತಾರೆ. ಫ್ಲೈಟ್‌ನಲ್ಲಿ ನಾಗಚೈತನ್ಯ ಲ್ಯಾಪ್‌ಟಾಪ್‌ನಲ್ಲಿ ಏನೋ ಕೆಲಸ ಮಾಡ್ತಿದ್ರೆ ಸಮಂತಾಗೆ ಆಕಳಿಕೆ. ಹಾಗೇ ಪತಿ ನಾಗಚೈತನ್ಯ ಹೆಗಲ ಮೇಲೊರಗಿದ್ದಾರೆ. ಅಲ್ಲೇ ಮಂಪರು, ನಿದ್ದೆ. ಈ ಟೈಮ್‌ಗೆ ಅವರ ಆಪ್ತರೋ, ಅಭಿಮಾನಿಗಳೋ ಫೋಟೋ ಕ್ಲಿಕ್ಕಿಸಿದ್ದಾರೆ. ಆ ಫೋಟೋ ಸಮಂತಾಗೆ ಸಿಕ್ಕಿದೆ. ಅವರದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಈ ಪೋಸ್ಟ್ಅನ್ನು ಮೆಚ್ಚಿಕೊಂಡಿದ್ದಾರೆ. 

2. ಯಶ್- ರಾಧಿಕಾ
ಕೊರೋನಾ ಬಂದ್ಮೇಲೆ ಹೆಂಡ್ತಿ ಹೇಳಿದಂಗೇ ಲೈಫ್‌ ಅನ್ನೋ ಥರ ಡೈಲಾಗ್ ಹೊಡೆದು ಜೊತೆಗೆ ಮೂರು ಬೆರಳನ್ನೂ ತೋರಿಸಿ ಅಭಿಮಾನಿಗಳನ್ನು ಕನ್‌ಫ್ಯೂಸ್ ಮಾಡಿದ್ದವರು ಯಶ್. ಸ್ಯಾಂಡಲ್ ವುಡ್ ನ ಈ ಮುದ್ದಾದ ಜೋಡಿಯ ಲವ್ ಪುರಾಣ ಬಹಳ ಹಳೆಯದು. ಆದರೆ ಇವತ್ತಿಗೂ ಚಾರ್ಮ್ ಕಳೆದುಕೊಳ್ಳದೇ ಇರೋದೇ ವಿಶೇಷ. ಮಕ್ಕಳ ತುಂಟಾಟ ಸವಿಯುತ್ತಲೇ ದಾಂಪತ್ಯವನ್ನೂ ಎನ್‌ಜಾಯ್ ಮಾಡ್ತಿರೋ ಈ ಕಪಲ್ ಸಖತ್ ರೊಮ್ಯಾಂಟಿಕ್ ಜೊತೆಗೆ ಬಲು ಸುಂದರ ಜೋಡಿಯೂ ಹೌದು. 

3. ದೀಪಿಕಾ ಪಡುಕೋಣೆ- ರಣವೀರ್‌ ಸಿಂಗ್‌
'ಟೇಬಲ್‌ ಮೇಲೆ ಬ್ರೇಕ್‌ಫಾಸ್ಟ್ ತಂದಿಟ್ಟು ಮೂವತ್ತು ಸಲ ಕೂಗಿದ್ರೂ ಹಾಂ ಇಲ್ಲ, ಹೂಂ ಇಲ್ಲ..' ಹೀಗಂತ ತನ್ನ ಪತಿ ರಣವೀರ್ ಸಿಂಗ್ ಕಾಲೆಳೆಯುತ್ತಾರೆ ದೀಪಿಕಾ. ಸದಾ ಲವ್ಲೀ ಮೂಡ್‌ನಲ್ಲಿರುವ ಈ ದಂಪತಿ ಫ್ರೆಶ್‌ಲುಕ್‌ಗೆ ಫೇಮಸ್. ಸೋಷಲ್ ಮೀಡಿಯಾದಲ್ಲಿ ತನ್ನ ಪತಿಯ ಬಗ್ಗೆ, ದಾಂಪತ್ಯದ ರಸ ನಿಮಿಷಗಳ ಬಗ್ಗೆ ದೀಪಿಕಾ ಹೇಳ್ತನೇ ಇರುತ್ತಾರೆ. ಮೊದಲು ಪ್ರೇಮಿಗಳಾಗಿದ್ದಾಗಲೂ ಈ ಜೋಡಿ ಒಂದಿಲ್ಲೊಂದು ರೊಮ್ಯಾಂಟಿಕ್ ಕ್ಷಣಗಳಲ್ಲಿ ಕ್ಯಾಮರಾದಲ್ಲಿ ಸೆರೆಯಾಗಿದ್ದುಂಟು. ಮದುವೆಯಾದ ಮೇಲೂ ಈ ಕ್ಷಣಗಳು ಮುಂದುವರಿದಿವೆ. ತನ್ನ ಪ್ರೀತಿಯ ಪತ್ನಿಗಾಗಿ ತಾನೇನು ಮಾಡಲೂ ಸಿದ್ಧ ಅಂತ ರಣವೀರ್ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. 

ಅನ್ನ‌ ಸಾರು, ಮಿಡಿ ಉಪ್ಪಿನಕಾಯಿ ನನ್ನ ಫೇವರೆಟ್ ಅಂತಾರೆ ದೀಪಿಕಾ 

4. ಸೋನಮ್ ಕಪೂರ್ - ಆನಂದ್ ಅಹುಜಾ
ಸೋನಮ್ ಕಪೂರ್ ಎಂಬ ಬಾಲಿವುಡ್‌ನ ಸ್ಟೈಲಿಶ್ ಲೇಡಿ ಆನಂದ ಅಹುಜಾ ಅನ್ನೋ ಉದ್ಯಮಿಯನ್ನು ಮದುವೆಯಾಗೋವರೆಗೂ ಆನಂದ್ ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಲ್ಲ. ಆದರೆ ಯಾವಾಗ ಅನಿಲ್ ಕಪೂರ್ ಪುತ್ರಿ ಸೋನಂ ಕೈ ಹಿಡಿದರೋ ಆವಾಗಿಂದ ಆನಂದ್ ಅವರು ಎಲ್ಲಿದ್ದರೂ ಜನ ಗುರುತಿಸುತ್ತಾರೆ. ಸೋಷಲ್ ಮೀಡಿಯಾಗಳಲ್ಲಿ ಸೋನಮ್ ಪತಿಯೊಂದಿಗಿನ ರೊಮ್ಯಾಂಟಿಕ್ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಲೇ ಇರುತ್ತಾರೆ. ಲಕ್ಷಾಂತರ ಜನ ಈ ಫೋಟೋಗಳನ್ನು ಮೆಚ್ಚಿ ಕಮೆಂಟ್‌ ಮಾಡುತ್ತಾರೆ. 

35 ಸಾವಿರ ಸಲ ಅರ್ಲಾಮ್ ಸ್ನೂಝ್ ಮಾಡಿದ ರಣವೀರ್: ದೀಪಿಕಾ ಮಾಡಿದ್ದೇನು.. ... 

5. ಅನುಷ್ಕಾ ಶರ್ಮಾ- ವಿರಾಟ್‌ ಕೊಯ್ಲಿ
ತುಂಟಾಟಕ್ಕೂ ಸೈ, ರೊಮ್ಯಾನ್ಸ್‌ಗೂ ಜೈ ಅಂತಿರೋ ಬಾಲಿವುಡ್‌ನ ಮೋಸ್ಟ್‌ ಚಾರ್ಮಿಂಗ್ ಜೋಡಿ ವಿರುಷ್ಕಾ. ಮೊನ್ನೆ ಮೊನ್ನೆ ವಿರಾಟ್ ಹೇಗೆ ತೂಕ ಮಾಡಿ ತಿಂಡಿ ತಿನ್ತಾರೆ ಅನ್ನೋದನ್ನು ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡಿ ಮಹಾನ್ ತುಂಟಿ ಅನಿಸಿಕೊಂಡಿದ್ದರು ಅನುಷ್ಕಾ. ಈ ಜೋಡಿಗೆ ಸುತ್ತಾಟ ಅಂದರೆ ಬಹಳ ಆಸಕ್ತಿ. ಎಲ್ಲ ಜರ್ನಿಗಳಲ್ಲೂ ಇಬ್ಬರೂ ಜೊತೆಯಾಗಿರುತ್ತಾರೆ. ಈಗಂತೂ ಕೊರೋನಾ ಕಾರಣಕ್ಕೆ ಶೂಟಿಂಗೂ ಇಲ್ಲ, ಕ್ರಿಕೆಟ್ ಮ್ಯಾಚೂ ಇಲ್ಲ. ಬ್ಯುಸಿ ಜೋಡಿ ಮನೆಯಲ್ಲೇ ಇದ್ದಾರೆ. ಬಿಡುವಿನಲ್ಲಿ ಇವರ ರೊಮ್ಯಾನ್ಸ್ ಇನ್ನೂ ಹೆಚ್ಚಾದಂತಿದೆ ಅನ್ನೋದು ಸೋಷಲ್ ಮೀಡಿಯಾಗಳಲ್ಲಿ ಹರಿದಾಡ್ತಿರೋ ಇವರ ಫೋಟೋಸ್ ನೋಡಿದ್ರೇ ಗೊತ್ತಾಗುತ್ತೆ. 

ತಲಾ ಅಜಿತ್ ಮಗಳಾಗಿ ನಟಿಸಿದ ಹುಡುಗಿಯ ಆಸೆ ಕೇಳಿದ್ರೆ ದಂಗಾಗ್ತೀರ! 

6. ದುಲ್ಖರ್ ಸಲ್ಮಾನ್ - ಅಮಲ್ ಸುಫಿಯಾ
ಈ ಜೋಡಿ ಮದ್ವೆಯಾಗಿ ಆಗ್ಲೇ ಹತ್ರತ್ರ ೧೦ ವರ್ಷ. ಆದರೆ ಇವರ ದಾಂಪತ್ಯ ನವದಂಪತಿಗಳಿಗೇನೂ ಕಡಿಮೆ ಇಲ್ಲ. ಹೇಳಿ ಕೇಳಿ ದುಲ್ಖರ್ ಪಕ್ಕಾ ಫ್ಯಾಮಿಲಿ ಮ್ಯಾನ್. ಶೂಟಿಂಗ್ ಮುಗಿಸಿದ ಕೂಡಲೇ ಪತ್ನಿಯ ಜೊತೆಗೆ ಎಲ್ಲಾದರೂ ಔಟಿಂಗ್ ಹೋಗದಿದ್ದರೆ ನೆಮ್ಮದಿ ಇರಲ್ಲ. ಪ್ರತೀ ಸಿನಿಮಾ ಶೂಟಿಂಗ್ ಬಳಿಕವೂ ಪತ್ನಿಯ ಜೊತೆಗೆ ಚಂದದ ಜಾಗಗಳಲ್ಲಿ ವಿಹರಿಸಿ ಬರುತ್ತಾರೆ ದುಲ್ಖರ್. ಸೋಷಲ್ ಮೀಡಿಯಾದಲ್ಲಿ ಪತ್ನಿಯ ಬಗ್ಗೆ ಆಗಾಗ ಅಕ್ಕರೆಯ ಮಾತುಗಳನ್ನು ದುಲ್ಖರ್ ಪೋಸ್ಟ್ ಮಾಡುತ್ತಿರುತ್ತಾರೆ.