ನ್ಯೂಮರಾಲಜಿ ಪ್ರಕಾರ ನಿಮ್ಮ ನಂಬರ್‌ ಲೆಕ್ಕ ಹಾಕೋದು ಹೀಗೆ- ನಿಮ್ಮ ಬರ್ತ್‌ಡೇ ಜನವರಿ ಒಂದು, 1999 ಅಂತ ಇಟ್ಟುಕೊಳ್ಳಿ. ಈಗ ಈ ನಂಬರ್‌ಗಳೆಲ್ಲವನ್ನೂ ಕೂಡಿಸಿ. ಅಂದರೆ 1+1+1+9+9+9= 30=3+0=3. ಇಲ್ಲಿ ನಿಮ್ಮ ನಂಬರ್‌ ಮೂರು. ಹೀಗೆ ಪ್ರತಿಯೊಬ್ಬರೂ ತಮ್ಮ ನಂಬರ್‌ ಲೆಕ್ಕ ಹಾಕಿಕೊಳ್ಳಬಹುದು. ನಂಬರ್‌ಗೆ ತಕ್ಕಂತೆ ನಿಮ್ಮ ಸೆಕ್ಸ್ ಲೈಫು ಹೇಗಿರುತ್ತೆ ಅಂತ ನ್ಯೂಮರಾಲಜಿ ಹೇಳುತ್ತದೆ. ಇದು ನ್ಯೂಮರಾಲಜಿಯನ್ನು ಆಳವಾಗಿ ಅಧ್ಯಯನ ಮಾಡಿದ ಅಮೆರಿಕದ ತಜ್ಞರು ಸಿದ್ಧಪಡಿಸಿದ ವಿವರಗಳು. 

ನಂಬರ್‌ 1
ಚಂದ್ರನ ಪ್ರೀತಿಮಯ ಶಾಂತ ಸ್ವಭಾವ ಹಾಗೂ ಸೂರ್ಯನ ಡಾಮಿನೇಟಿಂಗ್ ಸ್ವಭಾವಗಳು ಸೇರಿಕೊಂಡು, ಸೆಕ್ಸ್ ವಿಷಯದಲ್ಲಿ ನೀವೇ ಬಾಸ್‌ ಅಂತ ಆಗಲಿದೆ. ನಿಮ್ಮ ಪ್ರಿಯತಮ ಅಥವಾ ಪ್ರಿಯತಮೆ ನೀವು ಹೇಳಿದಂತೆ ಕೇಳುತ್ತಾರೆ. ಇದನ್ನು ಚೆನ್ನಾಗಿ ಬಳಸಿಕೊಳ್ಳಲು ನಿಮಗೆ ಗೊತ್ತಿದೆ. ಸಂಭೋಗದ ವೇಳೆ ನೀವು ಮೇಲಿರುವ ಭಂಗಿ ನಿಮಗೆ ಪ್ರಿಯ.

ನಂಬರ್‌ 2
ನಿಮ್ಮ ಲೈಂಗಿಕ ಜೀವನಕ್ಕೆ ಆರಂಭದಲ್ಲಿ ನೀವಂದುಕೊಂಡಂಥ ತೀವ್ರತೆ ಸಿಗದೇ ಇದ್ದಿರಬಹುದು. ಆದರೆ ಒಂದು ಟೈಮ್‌ ಇದೆ, ಅಲ್ಲೀತನಕ ಕಾಯಲೇಬೇಕು. ನಿಮ್ಮ ಹೃದಯ ಬೆಚ್ಚಗಾಗುವಂಥ ಸಂಗಾತಿ ಸಿಕ್ಕಿದಾಗ ರೋಮಾಂಚಕ ಸಂಗತಿಗಳು ಘಟಿಸಬಹುದು. ಸಣ್ಣಪುಟ್ಟ ಮನಸ್ತಾಪಗಳು ಪ್ರಣಯದ ರುಚಿಯನ್ನು ಹೆಚ್ಚಿಸುತ್ತವೆ. ಇದು ನಿಮ್ಮ ಪ್ರೀತಿಯನ್ನೂ ಇನ್ನಷ್ಟು ಗಟ್ಟಿಮಾಡುತ್ತಾ ಹೋಗುತ್ತದೆ.

ನಂಬರ್‌ 3
ಸಂಗಾತಿಯನ್ನು ಪೂರ್ತಿಯಾಗಿ ಡಾಮಿನೇಟ್‌ ಮಾಡುತ್ತೀರಿ ನೀವು. ಆಕೆಯ ಇಷ್ಟಾನಿಷ್ಟಗಳಿಗೂ ತುಸು ಗಮನ ಕೊಟ್ಟರೆ ಅವರೂ ನಿಮಗೆ ಇನ್ನಷ್ಟು ಒಲಿಯುತ್ತಾರೆ. ಯಾವಾಗಲೂ ನೀವೇ ಮೇಲಿರುವುದಲ್ಲ, ಅವರಿಗೂ ಮೇಲೆ ಬರಲು ಅವಕಾಶ ಮಾಡಿಕೊಡಿ! ಇದು ಇನ್ನಷ್ಟು ಸುಖವನ್ನು ಉಂಟುಮಾಡುತ್ತದೆ.

ನಂಬರ್‌ 4 
ನೀವು ಬಹಳ ಆಕ್ರಮಣಕಾರಿ, ಮಂಚದ ಮೇಲೂ ಹಾಗೇ. ಆದ್ದರಿಂದ ನಿಮಗೆ ಉದ್ರೇಕವಾಗುವುದು ಬೇಗ. ತಣಿಯುವುದೂ ಬೇಗನೆ. ಆದರೆ ಮತ್ತಷ್ಟು ಬೇಗನೇ ಇನ್ನೊಂದು ಪ್ರಣಯದಾಟಕ್ಕೂ ನೀವು ತಯಾರಾಗುತ್ತೀರಿ. ನಿಮ್ಮ ಸಂಗಾತಿಯಾಗುವವರಿಗೆ ನಿಮ್ಮನ್ನು ಸಂಭಾಳಿಸುವುದೇ ಕಷ್ಟವಾಗಲಿದೆ. 

ನಂಬರ್‌ 5
ನಿಮಗೆ ತುಂಬಾ ತಾಳ್ಮೆಯ ಸ್ವಭಾವ. ಸೆಕ್ಸ್ ಫಲಿಸುವುದಕ್ಕೆ ನೀವು ಎಷ್ಟು ಹೊತ್ತಾದರೂ ತೆಗೆದುಕೊಳ್ಳಬಲ್ಲಿರಿ. ನೀವೂ ಉದ್ರೇಕಿತರಾಗುವುದು ನಿಧಾನ. ಪ್ರಣಯದಾಟವೂ ನಿಧಾನ. ಆದರೆ ಫಲಿತಾಂಶ ಮಾತ್ರ ಪಕ್ಕಾ ಆಗಿರುತ್ತದೆ ಎಂದು ಬೇರೆ ಹೇಳಬೇಕಿಲ್ಲ. ನಿಮ್ಮನ್ನು ಸುಲಭವಾಗಿ ಒಲಿಸುವುದು ಸಾಧ್ಯವಿಲ್ಲ. 

ನಂಬರ್‌ 6
ಎಲ್ಲವನ್ನೂ ತಮಾಷೆಯಾಗಿ ತೆಗೆದುಕೊಳ್ಳುತ್ತೀರಿ. ಹಾಗೆಯೇ ಸೆಕ್ಸನ್ನೂ ಕೂಡ. ಮುನ್ನಲಿವು ಹಾಗೂ ಸಂಭೋಗದಲ್ಲೂ ವಿನೋದ ಮತ್ತು ಸಂಭ್ರಮ ಕಾಣುವ ಪೈಕಿ ನೀವು. ಆದ್ದರಿಂದ ಸುಖಿಯಾಗಿರುತ್ತೀರಿ. ಸಂಗಾತಿಗೂ ನಿಮ್ಮದೇ ಸ್ವಭಾವ ಇದ್ದರೆ ಸೆಕ್ಸ್ ಲೈಫು ಸೂಪರೋ ಸೂಪರ್ರು. 

ನಂಬರ್‌ 7
ನಿಮಗೆ ಸೆಕ್ಸ್‌ಗಿಂತಲೂ ಪ್ರಣಯದ ಮೇಲೆ ಹೆಚ್ಚು ಗಮನ. ಸಂಭೋಗಕ್ಕಿಂತಲೂ ಸಂಗಾತಿಯ ಮೇಲೆ ಹೆಚ್ಚು ಪ್ರೀತಿ. ಅಂದರೆ ಸೆಕ್ಸ್‌ನಿಂಧ ಸಿಗುವ ಸುಖಕ್ಕಿಂತಲೂ ಸಂಗಾತಿಯ ಸಂತೋಷದಲ್ಲಿ ಸಂತಸ ಕಾಣುವ ನೀವು ಆದರ್ಶ ಗಂಡ ಆಗಬಹುದು. ಹಾಗಂತ ಮಂಚದಲ್ಲಿ ನೀವು ಕಳಪೆಯೇನಲ್ಲ. ಅಲ್ಲೂ ಸಮರ್ಥರೇ.

ನಿಮ್ಮ ರಾಶಿಗೆ ಇವರು ಆರೋಗ್ಯ ದೇವತೆ! 

ನಂಬರ್‌ 8
ನಿಮಗೆ ನಿಮ್ಮ ಮೇಲೇ ಗಮನ ಹೆಚ್ಚು. ಸಂಗಾತಿಯ ತೃಪ್ತಿಗಿಂತಲೂ ನಿಮ್ಮ ಸುಖದ ಮೇಲೆ ಹೆಚ್ಚು ಗಮನ. ಹೀಗಾಗಿ ಸಂಭೋಗದ ತೀವ್ರತೆ ತಲುಪಿದ ಕೂಡಲೇ ಸಂಗಾತಿಯಿಂದ ಬೇರೆಯಾಗಿಡಬಿಡುತ್ತೀರಿ. ಆದರೆ ಸಂಗಾತಗೆ ಪೂರ್ತಿ ಸುಖ ಸಿಗದೆ ಹೋದರೆ, ನಿಮ್ಮ ಮೇಲೆ ಸಿಟ್ಟು ಬರಬಹುದು. ಆಗ ನೀವು ಗಳಿಸಿದ ಸುಖವೂ ನಾಶವಾಗುತ್ತದೆ.

ಅಪರಾಧಿಯಾಗಲು ಜಾತಕದ ಈ ಗ್ರಹಗಳೇ ಕಾರಣ! 

ನಂಬರ್‌ 9
ನಿಮಗೆ ಸೆಕ್ಸ್ ಅನ್ನುವುದು ಆಟ ಇದ್ದಂತೆ. ಅದು ಜೀವನಕ್ಕೆ ಅವಶ್ಯಕವಾದ ಸಂಗತಿಯಂತೆ. ಅಂದರೆ ಆಟದಂಗಳದಲ್ಲಿ ನಿಮ್ಮ ಪರ್‌ಫಾರ್ಮೆನ್ಸ್‌ಗೆ ನೀವು ಚಪ್ಪಾಳೆ ಬಯಸುತ್ತೀರಲ್ವೇ, ಹಾಗೇ ಇಲ್ಲೂ ಮಂಚದ ಮೇಲಿನ ನಿಮ್ಮ ಪರ್‌ಫಾರ್ಮೆನ್ಸ್‌ಗೆ ಚಪ್ಪಾಳೆ ಸಿಗಬೇಕೆಂದು ಬಯಸುತ್ತೀರಿ. ಸೆಕ್ಸ್ ಕುರಿತಾದ ಹೊಸ ಹೊಸ ತಂತ್ರಗಳನ್ನು ಕಲಿಯಲು ಮುಂದಾಗುತ್ತೀರಿ. 

ಸೂರ್ಯ ಕಟಕ ರಾಶಿಗೆ ಪ್ರವೇಶ: ನಿಮ್ಮ ಅದೃಷ್ಟ ಹೇಗಿದೆ?