ಅಪ್ಪಿ ಹಿಡಿದ ಮಗನ ಬಿಡಲೇ ಇಲ್ಲ ಅಮ್ಮ | ವರ್ಷಗಳ ಬಳಿಕ ಮಡಿಲು ಸೇರಿದ ಮಗ | ಕಣ್ಣೀರಾದ್ರು ಪೋಷಕರು

ಟೆಕ್ನಾಲಜಿ ತುಂಬಾ ಮುಂದುವರಿದಿದೆ. ಸ್ವಯಂ ಚಾಲಿತ ಕಾರುಗಳಿಂದ ತೊಡಗಿ ಪ್ಯಾಕೇಜ್ ಡೆಲಿವರಿ ಮಾಡುವ ಡ್ರೋನ್‌ಗಳೂ ಇವೆ. ಇದೀಗ ಇದೇ ತಂತ್ರಜ್ಞಾನ ಬಳಸಿರೋ ತೆಲಂಗಾಣ ಪೊಲೀಸರು ಹೊಸ ಎಪ್ಲಿಕೇಷನ್ ಅಭಿವೃದ್ಧಿಪಡಿಸಿದ್ದಾರೆ. ಕಾಣೆಯಾದವರನ್ನೂ ಮರಳಿ ಮನೆ ಸೇರಿಸುತ್ತೆ ಈ ಎಪ್ಲಿಕೇಷನ್

ಉತ್ತರ ಪ್ರದೇಶದ ಹಂಡಿಯಾದ ಸೋಮ್ ಸೊನಿ ಎಂಬ ಬಾಲಕ ಕೊನೆಗೂ ಅಮ್ಮನ ಮಡಿಲು ಸೇರಿದ್ದಾನೆ. 2015 ಜು.14ರಂದು ಕಾಣೆಯಾಗಿದ್ದ ಬಾಲಕ 5 ವರ್ಷಗಳ ನಂತರ ಪೋಷಕರ ಮಡಿಲು ಸೇರಿದ್ದಾನೆ. ಬಾಲಕ ಕಾಣೆಯಾದಾಗ ಪೋಷಕರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದರು. ಗೋಲ್ಪಾರ ಪೊಲೀಸರು ಬಾಲಕನನ್ನು ಅಸ್ಸಾಂನ ಮಕ್ಕಳ ಕಲ್ಯಾಣ ಕೆಂದ್ರದಲ್ಲಿ ದಾಖಲಿಸಿದ್ದರು.

"

ಬೆಂಗಳೂರು ಪೊಲೀಸ್ ಸೂಪರ್ ಚೇಸಿಂಗ್: ತಾಯಿ ಮಡಿಲು ಸೇರಿದ ಕಂದಮ್ಮ

ಇತ್ತೀಚೆಗೆ ತೆಲಂಗಾಣ ಪೊಲೀಸರು ಡರ್ಪಾನ್ ಟೂಲ್ ಬಳಸಿ ಕಾಣೆಯಾದ ಮಕ್ಕಳ ಮುಖವನ್ನು ಮ್ಯಾಚ್ ಮಾಡುವಾಗ ಬಾಲಕನ ಪರಿಚಯ ಪತ್ತೆಯಾಗಿದೆ. ಈ ಬಗ್ಗೆ ಮಾಹಿತಿ ನೀಡಿದಾಗ ಪೋಷಕರು ಮಗನನ್ನು ನೋಡಲು ಓಡಿ ಬಂದಿದ್ದರು. 

Scroll to load tweet…

2018ರಿಂದ ಇಲ್ಲಿತನಕ ಇದೇ ಟೂಲ್ ನೆರವಿನಿಂದ 23 ಮಕ್ಕಳನ್ನು ಪೋಷಕರ ಮಡಿಲು ಸೇರಿಸಲಾಗಿದೆ. ಇದನ್ನು ನಾವೇ ಅಭಿವೃದ್ಧಿಪಡಿಸಿದ್ದೇವೆ. ಮಗುವನ್ನು 10 ಅಥವಾ 15 ವರ್ಷಗಳ ನಂತರ ಪತ್ತೆಹಚ್ಚಿದರೂ ಸಹ ಮುಖದ ಮ್ಯಾಟ್ರಿಕ್ಸ್ ಒಂದೇ ಆಗಿರುತ್ತದೆ. ಈ ಮೂಲಕ ಈ ಎಪಲ್ಇಕೇಷನ್ ಕಾರ್ಯನಿರ್ವಹಿಸುತ್ತದೆ. ಭಾರತದಾದ್ಯಂತ ಕಾಣೆಯಾದ ಅನೇಕ ಮಕ್ಕಳನ್ನು ಈ ಮೂಲಕ ಪತ್ತೆಹಚ್ಚಲು ಹೆಚ್ಚಿನ ಡೇಟಾವನ್ನು ಪಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದಿದ್ದಾರೆ ಐಪಿಎಸ್ ಸ್ವಾತಿ ಲಾಕ್ರಾ.