ಬೆಂಗಳೂರು, [ಜ.19]: ಬೆಂಗಳೂರಿನಿಂದ ತಮಿಳುನಾಡಿನವರೆಗೆ ಸಿನಿಮೀಯ ರೀತಿಯಲ್ಲಿ ಬರೋಬ್ಬರಿ 250 ಕೀಲೋ ಮೀಟರ್ ಚೇಸಿಂಗ್ ಮಾಡಿ ಎಳೇ ಕಂದಮ್ಮನನ್ನು ರಕ್ಷಿಸಿದ್ದಾರೆ.

ಬೆಂಗಳೂರಿನ ಮಲ್ಲತ್ತಹಳ್ಳಿ ನಿವಾಸಿಗಳಾದ ಚಂದನ್ ಮತ್ತು ರಾಣಿ ದಂಪತಿಯ ಮಗು ಕಿಡ್ನಾಪ್​ ಆಗಿತ್ತು. ಉತ್ತರ ಭಾರತ ಮೂಲದ  ಚಂದನ್ ಮತ್ತು ರಾಣಿ ದಂಪತಿ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ಮಲ್ಲತ್ತಹಳ್ಳಿಯಲ್ಲಿ ವಾಸವಾಗಿದ್ದರು. 

ಬಿಗ್ 3 ಆ್ಯಂಡ್ ಸಿಸಿಬಿ ಟೀಂ: ನಂದಿನಿ ವಾಪಸ್ ಕರುನಾಡಿಗೆ!

ದಂಪತಿಗೆ ಪರಿಚಿತನಾಗಿದ್ದ ಕುಮಾರ್ ಎಂಬಾತ ಹಣಕ್ಕಾಗಿ 11 ತಿಂಗಳ ಮುದ್ದಾದ ಮಗುವನ್ನ ಕಿಡ್ನಾಪ್ ಮಾಡಿದ್ದ. ಚಂದನ್ ಮನೆಗೆ ಆಗಾಗ ಬರ್ತಿದ್ದ ಕುಮಾರ್, ಕಂದಮ್ಮನನ್ನ ನೋಡಿದ್ದ. 

ಜ.16ರಂದು ಮಲಗಿದ್ದ ಮಗುವನ್ನು ಎತ್ತೊಯ್ದಿದ್ದ. ಮಗುವಿನೊಂದಿಗೆ ಕಾರಿನಲ್ಲಿ ತಮಿಳುನಾಡಿಗೆ ಪರಾರಿಯಾಗಿದ್ದ ಕುಮಾರ್, 2 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ.

ಮಗುವಿನ ಅಪಹರಣ ಸಂಬಂಧ ದೂರು ಸ್ವೀಕರಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಜ್ಞಾನಭಾರತಿ ಪೊಲೀಸರು, ಆರೋಪಿಯನ್ನ ಬೆನ್ನಟ್ಟಿದ್ದರು. ಬರೋಬ್ಬರಿ 250 ಕೀಲೋ ಮೀಟರ್ ಚೇಸಿಂಗ್ ಮಾಡಿ ಕೊನೆಗೂ ತಮಿಳುನಾಡಿನಲ್ಲಿ ಮಗುವನ್ನ ರಕ್ಷಣೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.  

ಕುಮಾರ್ ಮತ್ತು ತಂಡವನ್ನು ಜ್ಞಾನಭಾರತಿ ಪೊಲೀಸರು ಬಂಧಿಸಿದ್ದು, ಮಗುವನ್ನ ಸುರಕ್ಷಿತವಾಗಿ ಕರೆತಂದು ಪೋಷಕರಿಗೆ ಒಪ್ಪಿಸಿದ್ದಾರೆ. ಬೆಂಗಳೂರು ಪೊಲೀಸರ ಈ ಕಾರ್ಯಕ್ಕೆ ಪ್ರಶಂಸೆಗಳ ಮಹಾಪುರವೇ ಹರಿದು ಬರುತ್ತಿದೆ.