Asianet Suvarna News Asianet Suvarna News

ಅಷ್ಟೊಂದು ವರ್ಷದ ಹಿಂದೆ ಅಲ್ಲಿ ನಡೆದಿತ್ತು ಮೊದಲ ಚುಂಬನ!

ಸುಮ್ಮನೆ ಕುಳಿತು ಆಲೋಚನೆ ಮಾಡಿದಾಗ ನಾನಾ ಪ್ರಶ್ನೆಗಳು ನಮ್ಮಲ್ಲಿ ಮೂಡುತ್ವೆ. ವಸ್ತು, ಆಹಾರದ ಆವಿಷ್ಕಾರ ಎಲ್ಲಿಂದ ಆಯ್ತು, ಮನುಷ್ಯ ಪ್ರೀತಿ ಅನ್ನೋದನ್ನು ಹೇಗೆ ಅಳವಡಿಸಿಕೊಂಡ… ಹೀಗೆ ನಮ್ಮನ್ನು ಕಾಡುವ ನಾನಾ ವಿಷ್ಯದಲ್ಲಿ ಮುತ್ತು ಸೇರಿದೆ. ಯಾವ ಜಾಗದ ಜನರು ಮೊದಲು ಮುತ್ತು ನೀಡಲು ಶುರು ಮಾಡಿದ್ರು ಎಂಬುದಕ್ಕೆ ಈಗ ಉತ್ತರ ಸಿಕ್ಕಿದೆ. 
 

Evidence Of First Human Kiss Discovered By Archaeologists In Middle East roo
Author
First Published Mar 2, 2024, 3:34 PM IST

ಇತಿಹಾಸದ ಪುಟಗಳನ್ನು ತಿರುಗಿಸುತ್ತ ಹೋದಂತೆ ಅನೇಕ ವಿಷಯಗಳು ಬಹಿರಂಗವಾಗುತ್ತವೆ. ಸಾವಿರಾರು ವರ್ಷಗಳ ಹಿಂದೆ ಜನಜೀವನ, ಪುರಾತನ ನಾಗರೀಕತೆ, ಸಂಸ್ಕೃತಿಗಳು ಹೇಗಿತ್ತು ಎನ್ನುವುದು ಶೋಧನೆಗಳಿಂದ ತಿಳಿದು ಬರುತ್ತದೆ. ವಿಜ್ಞಾನಿಗಳ ಆವಿಷ್ಕಾರದಿಂದ ನಮಗೆ ತಿಳಿಯದ ಅಥವಾ ಗತಿಸಿಹೋದ ಎಷ್ಟೋ ಪರಂಪರೆಯ ಬಗ್ಗೆ ಸಾಕ್ಷಿ ಪುರಾವೆಗಳು ದೊರೆಯುತ್ತವೆ.

ಪುರಾತನ ಇತಿಹಾಸಗಳು, ಅನೇಕ ದೇವಾಲಯ (Temple) ಗಳಲ್ಲಿರುವ ಕೆತ್ತನೆಗಳು, ಶಾಸನಗಳು ನಮಗೆ ಗತವೈಭವವನ್ನು ತೋರಿಸುತ್ತವೆ. ಇಂತಹ ಕೆತ್ತನೆಗಳು, ಇತಿಹಾಸಗಳು, ಆವಿಷ್ಕಾರ (Invention) ಗಳ ಮೂಲಕ ಅಂದಿನ ಜನರ ಬದುಕಿನ ಚಿತ್ರಣ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಆಧುನಿಕ ಯುಗದಂತೆ ತಂತ್ರಜ್ಞಾನ ಇಲ್ಲದೇ ಇರುವ ಸಮಯದಲ್ಲೇ ಜನರು ಹೇಗೆ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದರು ಎನ್ನುವುದಕ್ಕೆ ಅನೇಕ ಸಾಕ್ಷಿ ಪುರಾವೆಗಳನ್ನು ನಾವು ಕಾಣುತ್ತೇವೆ. ಹೊಸ ಹೊಸ ಆವಿಷ್ಕಾರಗಳಿಂದ ನಮಗೆ ಗತಿಸಿಹೋದ ಸಂಗತಿಗಳನ್ನು ತಿಳಿಯಲು ಸಹಾಯ ಮಾಡುತ್ತವೆ.

ಇಂತಹ ಆವಿಷ್ಕಾರವು ಈಗ ಮೊದಲ ಚುಂಬನ (Kiss) ಎಷ್ಟು ವರ್ಷದ ಹಿಂದೆ ಆಗಿತ್ತು ಎನ್ನುವುದರ ಕುರಿತು ಮಾಹಿತಿ ನೀಡಿದೆ. ಸೈನ್ಸ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನವು, ಮಧ್ಯಪ್ರಾಚ್ಯದ ಪುರಾತನ ಸ್ಥಳಗಳಲ್ಲಿ ನಡೆದ ಸಂಶೋಧನೆಯ ಬಗ್ಗೆ ಹೇಳಿದೆ. ಇದರಲ್ಲಿ ಮೆಸೊಪೊಟಮಿಯಾ ಯುಗದಲ್ಲಿ ಚುಂಬನಗಳು ಇದ್ದವು ಎನ್ನುವುದರ ಕುರಿತು ಸಾಕ್ಷಿ ಒದಗಿಸಿದೆ. ಈ ಅಧ್ಯಯನದಿಂದ 4500 ವರ್ಷದ ಹಿಂದೆಯೇ ಮೊದಲ ಬಾರಿ ಮುತ್ತು ನೀಡಲಾಗಿತ್ತು ಎಂಬುದು ತಿಳಿದು ಬಂದಿದೆ. ಇದಕ್ಕೂ ಮೊದಲು ನಡೆದ ಸಂಶೋಧನೆಯೊಂದು 3500 ವರ್ಷಗಳ ಹಿಂದೆ ಮೊದಲ ಚುಂಬನ ನಡೆದಿತ್ತು ಎಂದು ಹೇಳಿತ್ತು.

ಸೀನ್‌ವೊಂದರಲ್ಲಿ ಬಲವಂತವಾಗಿ ಮುತ್ತಿಟ್ಟ ನಟ, ಬಿಕ್ಕಿ ಬಿಕ್ಕಿ ಅತ್ತ ರೇಖಾ!

ಪ್ರಾಚೀನ ಗ್ರಂಥಗಳಲ್ಲಿ ಮೊದಲ ಚುಂಬನದ ದಾಖಲೆ : ಜನರು ಪ್ರೀತಿಯನ್ನು ಹಲವಾರು ವಿಧದಲ್ಲಿ ವ್ಯಕ್ತಪಡಿಸುತ್ತಾರೆ. ತಾಯಿ ಮಗುವಿನ ನಡುವೆ, ಸಂಬಂಧಿಗಳ ನಡುವೆ ಹಾಗೂ ಪ್ರೇಮಿಗಳಲ್ಲಿ ಸತತವಾಗಿ ಪ್ರೀತಿ ವ್ಯಕ್ತವಾಗುತ್ತಲೇ ಇರುತ್ತದೆ. ಪ್ರೀತಿಯನ್ನು ವ್ಯಕ್ತಪಡಿಸುವ ರೀತಿ ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತದೆಯಷ್ಟೇ. ಹಿಂದಿನ ಕಾಲದ ದೇವಾಲಯಗಳ ಮೇಲೂ ಪ್ರೀತಿಯನ್ನು ವ್ಯಕ್ತಪಡಿಸುವಂತಹ ಅನೇಕ ಕೆತ್ತನೆಗಳು ಅಂದಿನ ಕಾಲದಲ್ಲೂ ಚುಂಬನ ಮುಂತಾದವುಗಳು ಇದ್ದವು ಎನ್ನುವುದಕ್ಕೆ ಸಾಕ್ಷಿಯಾಗಿವೆ.

ಮೆನಪೊಟಾಮಿಯ ಸಮಾಜದ ಜನರಲ್ಲಿ ಚುಂಬನಗಳು ಇದ್ದವು ಎನ್ನುವುದರ ಕುರಿತು ಸಾಕಷ್ಟು ಪುರಾವೆಗಳು ಸಿಕ್ಕಿವೆ. ಇದು ಕ್ರಿ.ಪೂ 2500 ರ ಪ್ರಾಚೀನ ಗ್ರಂಥಗಳಲ್ಲೇ ಮೊದಲ ಕಿಸ್ ಕುರಿತು ಅನೇಕ ದಾಖಲೆಗಳಿವೆ. ಸಂಶೋಧಕರು ಬಾಯಿ ಹುಣ್ಣು ಮುಂತಾದ ಕೆಲವು ಸಾಂಕ್ರಾಮಿಕ ರೋಗಗಳಿಗೆ ಚುಂಬನವೇ ಕಾರಣವಾಗಿರಬಹುದೆಂದು ಸಂಶೋಧಕರು ಹೇಳಿದ್ದಾರೆ. ಅದಕ್ಕೆ ಪೂರಕವಾದ ಕೆಲವು ದಾಖಲೆಗಳನ್ನು ಕೂಡ ಅವರು ಒದಗಿಸಿದ್ದಾರೆ.

ಮೊದಲಿನ ಸಂಶೋಧನೆಯಲ್ಲಿ ಕ್ರಿ.ಪೂ 1500ರ ಸುಮಾರಿಗೆ ಪ್ರಾಚೀನ ಭಾರತದಲ್ಲಿ ಪ್ರಥಮ ಚುಂಬನವಾಗಿತ್ತು ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ ಹಾಗೂ ಪ್ರಾಚೀನ ಮೆಸಪೊಟಾಮಿಯ ಗ್ರಂಥಗಳಿಂದ ಮಧ್ಯಪ್ರಾಚ್ಯದಲ್ಲಿ ಚುಂಬನದಂತಹ ಪ್ರಣಯ ಸನ್ನಿವೇಶಗಳು ನಡೆದಿದ್ದವು ಎನ್ನುವುದನ್ನು ತೋರಿಸುತ್ತದೆ. ಡೆನ್ಮಾರ್ಕ್ ನ ಕೋಪನ್ ಹ್ಯಾಗನ್ ವಿಶ್ವವಿದ್ಯಾಲಯದಲ್ಲಿ ಮೆಸಪೊಟಾಮಿಯಾ ಇತಿಹಾಸ ವಿಶೇಷಜ್ಞರಾದ ಡಾ. ಟ್ರಾಲ್ಸ್ ಪ್ಯಾಂಕ್ ಅರ್ಬೋಲ್ ಅವರು,  ಪ್ರಾಚೀನ ಮೆಸಪೊಟಾಮಿಯಾದಲ್ಲಿ ಆರಂಭದಲ್ಲಿದ್ದ ಸಂಸ್ಕೃತಿಯು ಇಂದಿನ ಇರಾಕ್ ಮತ್ತು ಸಿರಿಯಾದಲ್ಲಿ ಯೂಫ್ರಟಿಸ್ ಮತ್ತು ಟೈಗ್ರಿಸ್ ನದಿಗಳ ನಡುವೆ ಅಸ್ತಿತ್ವದಲ್ಲಿತ್ತು ಎಂದು ಹೇಳಿದ್ದಾರೆ.

ಅಪ್ತಾಪ್ತೆಗೆ ಮುತ್ತು ಕೊಟ್ಟವನಿಗೆ 3 ವರ್ಷ ಜೈಲು ಶಿಕ್ಷೆ, ಏನಿದು ಪ್ರಕರಣ?

ಅಂದಿನ ಕಾಲದಲ್ಲಿ ಜನರು ಮಣ್ಣಿನ ಫ್ರೇಮ್ ಗಳ ಮೇಲೆ ಕ್ಯೂನಿಫಾರ್ಮ್ ಲಿಪಿಯಲ್ಲಿ ಬರೆಯುತ್ತಿದ್ದರು. ಅಂತಹ ಸಾವಿರಾರು ಲಿಪಿಗಳು ಇಂದಿಗೂ ಲಭ್ಯವಿದೆ. ಇವುಗಳ ಮೂಲಕ ಅಂದಿನ ಕಾಲದಲ್ಲಿ ಕೂಡ ಹೆಚ್ಚು ರೊಮ್ಯಾಂಟಿಕ್ ಆಗಿ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದರು, ಎಷ್ಟು ಅನ್ಯೋನ್ಯವಾಗಿದ್ದರು ಎನ್ನುವುದು ತಿಳಿದುಬರುತ್ತವೆ. ಇದರ ಜೊತೆಗೆ ಚುಂಬನವು ಕುಟುಂಬ ಸದಸ್ಯರ ಮತ್ತು ಸಂಬಂಧಗಳ ಭಾಗವಾಗಿರುವ ಸಾಧ್ಯತೆಯೂ ಇದೆ ಎಂದು ಸಂಶೋಧನಾಕಾರರು ಹೇಳುತ್ತಾರೆ.

Follow Us:
Download App:
  • android
  • ios