ಸೀನ್‌ವೊಂದರಲ್ಲಿ ಬಲವಂತವಾಗಿ ಮುತ್ತಿಟ್ಟ ನಟ, ಬಿಕ್ಕಿ ಬಿಕ್ಕಿ ಅತ್ತ ರೇಖಾ!
ರೇಖಾ, ಬಾಲಿವುಡ್ ಆಳಿದ ದಕ್ಷಿಣ ಭಾರತೀಯ ನಟಿಯರಲ್ಲಿ ಪ್ರಮುಖರು. ಎಷ್ಟೇ ವಯಸ್ಸಾದರೂ ಬಾಲಿವುಡ್‌ನ ಎವರ್‌ಗ್ರೀನ್ ಹೀರೋಯನ್ ಅನ್ನೋದರಲ್ಲಿ ಅನುಮಾನವೇ ಇಲ್ಲ. ಅಪ್ರತಿಮ ಸೌಂದರ್ಯದ ಜೊತೆ ಡ್ರೆಸ್ಸಿಂಗ್ ಸೆನ್ಸ್ ರೇಖಾಳನ್ನು ಮತ್ತೂ ಆಕರ್ಷಿತರಾಗಿಸುವುದರಲ್ಲಿ ಅನುಮಾನವೇ ಇಲ್ಲ. ಇಂಥ ಸುಂದರಿ ತಮಗಾದ ಒಂದು ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದರು

ಬ್ಲಾಕ್‌ಬಸ್ಟರ್ ಚಿತ್ರಗಳನ್ನು ಕೊಟ್ಟು ಸೈ ಎನಿಸಿಕೊಂಡವರು ರೇಖಾ. 80-90ರ ದಶಕದಲ್ಲಿ ಬಾಲಿವುಡ್ ಆಳಿದ ಅಪ್ರತಿಮ ಸುಂದರಿ. ಈಗಲೇ ಪಡ್ಡೆ ಹುಡುಗರ ನಿದ್ದೆ ಕದಿಯುವಂಥ ಬ್ಯೂಟಿ ಮೆಂಟೈನ್ ಮಾಡಿದ ನಟಿ ಆಗ ಹೇಗಿರಬಹುದೆಂಬುದನ್ನು ಊಹಿಸಿಕೊಳ್ಳಬಹುದು.
ಈ ನಟಿಯನ್ನು ನೋಡಿದರೆ ಯಾರಾದರೂ 68 ವರ್ಷ ಮೀರಿದೆ ಅಂತಾರಾ? ಅಷ್ಟು ಅದ್ಭುತವಾಗಿ ಫಿಸಿಕ್ ಮೆಂಟೈನ್ ಮಾಡಿದ ನಟಿ, ಆಮಿತಾಭ್ ಬಚ್ಚನ್ ಜೊತೆಗಿನ ಅಫೇರ್‌ನಿಂದ ಹಿಡಿದು ವಿವಿಧ ಕಾರಣಗಳಿಗೆ ಸದಾ ಸುದ್ದಿಯಲ್ಲಿರುತ್ತಿದ್ದರು.
ಒಂದು ರೀತಿಯ ನಿಗೂಢ ಜೀವನ ನಡೆಸುತ್ತಿರುವ ರೇಖಾ ಸುತ್ತ ಹತ್ತು ಹಲವು ಊಹಾಪೋಹಗಳು ಹರಿದಾಡುತ್ತಲೇ ಇರುತ್ತವೆ. ಆ ಕಾರಣದಿಂದಲೇ ಸದಾ ಸುದ್ದಿಯಲ್ಲಿರುತ್ತಾರೆ. ತಮ್ಮ ಮ್ಯಾನೇಜರ್ ಜೊತೆಯೇ ರೇಖಾಗೆ ದೈಹಿಕ ಸಂಬಂಧವಿತ್ತು ಎಂಬ ಸುದ್ದಿಯೂ ಒಮ್ಮೆ ಸದ್ದು ಮಾಡಿತ್ತು.
ದಕ್ಷಿಣ ಭಾರತದ ಖ್ಯಾತ ನಟ ಜೆಮಿನಿ ಗಣೇಶನ್ಹಾಗೂ ನಟಿ ಕೆ.ಪುಷ್ಫವಲ್ಲಿ ಮಗಳಾಗಿ ಜನಿಸಿದ ರೇಖಾ ತಮ್ಮ ಸ್ವಂತ ಪರಿಶ್ರಮದಿಂದಲೇ ಮೇಲೆ ಬಂದವರು. ಸ್ಟಾರ್ ಕಿಡ್ ಎಂಬ ಕಿರೀಟ ಇವರಿಗೆ ಇರಲಿಲ್ಲ.
ಆಮಿತಾಭ್ ಜೊತೆಗಿನ ಅಫೇರ್ ನಿನ್ನೆ ಮೊನ್ನೆಯವರೆಗೂ ಸದ್ದು ಮಾಡಿತ್ತು. ತಮ್ಮ ಪ್ರೇಮದ ಬಗ್ಗೆ ರೇಖಾ ಅಪ್ಪಿ ತಪ್ಪಿ ಹೇಳಿಕೊಂಡಿದ್ದರೂ, ಸಂಸಾರಸ್ಥ ಅಮಿತಾಭ್ ಮಾತ್ರ ಎಂದಿಗೂ ಬಾಯಿ ಬಿಟ್ಟಿಲ್ಲ.
1979ರಲ್ಲಿ 'ಅಂಜಾನಾ ಸಫರ್' (Anjana Safar) ತೆರೆಕಂಡಿತ್ತು. ಆಗಿನ್ನೂ ರೇಖಾಗೆ 15 ವರ್ಷ ವಯಸ್ಸು, ಹೀರೋಗೆ ಸುಮಾರು 33 ವರ್ಷ. ಚಿತ್ರದ ದೃಶ್ಯವೊಂದರಲ್ಲಿ ನಟಿಗೆ ಮುತ್ತಿಡುವ ದೃಶ್ಯವೊಂದಿತ್ತು.
ಇಂಥ ದೃಶ್ಯಗಳ ಬಗ್ಗೆ ನಟಿಯಾಗಿ ನಟಿಸುವವರಿಗೆ ಸೂಕ್ತ ಮಾಹಿತಿ ಕೊಡಬೇಕು. ಆದರೆ, ರೇಖಾಗೆ ಈ ಬಗ್ಗೆ ಯಾವುದೇ ಮಾಹಿತಿಯೂ ಇರಲಿಲ್ಲ. ಹಾಗಂತ ಈ ದೃಷ್ಯ ಚಿತ್ರೀಕರಿಸುವುದು ಪೂರ್ವ ನಿಯೋಜಿತವಾಗಿತ್ತು.
ನಟ ಬಿಸ್ವಜಿತ್ ಚಟರ್ಜಿಗೂ ಸಂಪೂರ್ಣ ಅರಿವಿತ್ತು. ಈ ದೃಶ್ಯದ ಚಿತ್ರೀಕರಣ ಹೇಗೆ ನಡೆಯಬೇಕೆಂಬ ಕುರಿತು ಎಲ್ಲವೂ ಪ್ಲ್ಯಾನ್ ಆಗಿದ್ದರೂ ರೇಖಾ ಗಮನಕ್ಕೆ ತಂದರೆ ಎಲ್ಲಿ ನಿರಾಕರಿಸುವರೋ ಎಂಬ ಕಾರಣದಿಂದ ವಿಷಯವನ್ನು ಅವರಿಂದ ಹೈಡ್ ಮಾಡಲಾಗಿತ್ತು.
ನಟ ಬಿಸ್ವಜೀತ್, (Biswajith) ತಮ್ಮನ್ನು ಬಲವಂತವಾಗಿ ಎಳೆದು ಅವಳ ತುಟಿಗಳಿಗೆ ಗಟ್ಟಿಯಾಗಿ ಮುತ್ತಿಟ್ಟಿದ್ದರು ಎಂದು ರೇಖಾ ಆರೋಪಿಸಿದ್ದಾರೆ. ಇದೊಂದು ಅನಿರೀಕ್ಷಿತ ಚಿತ್ರೀಕರಣವಾಗಿದ್ದರಿಂದಲೋ ಏನೋ ರೇಖಾಗಿದು ಮುಜುಗರ ತಂದಿತ್ತು.
Rekha
ಶೂಟಿಂಗ್ ಆರಂಭ ಆಗುತ್ತಿದ್ದಂತೆ ರೇಖಾಳನ್ನು ಎಳೆದು 5 ನಿಮಿಷಗಳ ಕಾಲ ಕಿಸ್ ಮಾಡುತ್ತಲೇ ಇದ್ದನಂತೆ ನಟ. ನಟನ ಈ ವರ್ತನೆಯಿಂದ ಇನ್ನೂ ಚಿಕ್ಕ ವಯಸ್ಸಿನವಳಾಗಿದ್ದ ರೇಖಾಗೆ ಸಿಕ್ಕಾಪಟ್ಟೆ ಗಾರಿಯಾಗಿತ್ತಂತೆ.
ದೃಶ್ಯದ ಮುಗಿದ ನಂತರೆ ಸೆಟ್‌ನಲ್ಲಿ ಕೆಲಸ ಮಾಡುತ್ತಿದ್ದವರು ಶಿಳ್ಳೆ ಹೊಡೆಯುತ್ತಿದ್ದರೆ ಅವಮಾನದಿಂದ ಕುಸಿದು ಹೋಗಿದ್ದ ರೇಖಾ, ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ. ಒಂದು ರೀತಿ ನಟಿ ಅವಮಾನಿತರಾಗಿದ್ದರು.
ನೈರೋಬಿ ಮೂಲದ ಉದ್ಯಮಿ ಕುಲ್ಜಿತ್ ಪಾಲ್ ಈ ಸಿನಿಮಾಕ್ಕೆ ಹಣ ಹೂಡಿಕೆ ಮಾಡಿದ್ದರು. ಜೆಮಿನಿ ಸ್ಟುಡಿಯೋದಲ್ಲಿ ಇವರ ಕಣ್ಣಿಗೆ ಬಿದ್ದಿದ್ದ ರೇಖಾ ಜೊತೆ 5 ವರ್ಷ ಕಾಂಟ್ರ್ಯಾಕ್‌ಗೆ (Contract) ಸಹಿ ಮಾಡಿಕೊಂಡಿದ್ದರು. ಈ ಸಿನಿಮಾ ಒಪ್ಪಿಕೊಂಡು ಬಾಂಬೆಗೆ ತೆರಳಿದ್ದ ರೇಖಾ, ಅಲ್ಲೇ ನಾಯಕಿಯಾಗಿ ಮೊದಲ ಸಿನಿಮಾ 'ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿಐಡಿ 999'ರಲ್ಲಿ ನಟಿಸಿದ್ದರು. ರಾಜ್‌ಕುಮಾರ್ ಚಿತ್ರದ ನಾಯಕ. ಈ ಸಿನಿಮಾ ರೇಖಾಗೆ ಯಶ ತಂದುಕೊಟ್ಟಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.