ಇಲ್ಲಿ ಹೇಳಹೊರಟಿರುವುದು ಮದುವೆ ಆಗಬೇಕೋ ಬೇಡವೋ, ಪೋಷಕರು ಸರಿಯೋ ಅಥವಾ ಮಕ್ಕಳು ಸರಿಯೋ ಎಂಬ ಚರ್ಚೆಯಲ್ಲ. ಆದರೆ, ಮದುವೆ ಆದವರಿಗೂ ಆಗದಿರುವವರಿಗೂ ಇರುವ ವ್ಯತ್ಯಾಸ.. ಏನೆಲ್ಲಾ ಇದೆ? ತುಂಬಾ ಆಸಕ್ತಿಕರವಾಗಿದೆ ನೋಡಿ.. 

ಮದುವೆ ಆದವರು, ಆಗದೇ ಇರುವವರು ಎಲ್ಲರಿಗೂ ಇದು ಗೊತ್ತಿರಲಿ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೊದಲೆಲ್ಲಾ, ಅಂದರೆ 40-50 ವರ್ಷಗಳ ಹಿಂದೆಲ್ಲಾ ವಯಸ್ಕರಾದ ಮೇಲೆ ಒಂದು ಹಂತದಲ್ಲಿ ಮದುವೆ (Marriage) ಆಗುವುದು ಸಮಾಜದಲ್ಲಿ ಒಂದು ಅಲಿಖಿತ ನಿಯಮ ಎಂಬಂತಿತ್ತು. ಹುಟ್ಟಿದ ಪ್ರತಿಯೊಂದು ಮನುಷ್ಯರೂ ಮದುವೆಯೆಂಬ ಬಂಧನಕ್ಕೆ ಒಳಗಾಗುತ್ತಿದ್ದರು. ಆದರೆ ಕಾಲ ಬದಲಾದಂತೆ ನಿಧಾನವಾಗಿ ಮದುವೆ ಎಂಬುದು ಕೆಲವರ ಪಾಲಿಗೆ ಇಲ್ಲವಾಗುತ್ತ ಬಂತು. ಆದರೆ, ಇಂದು ಮದುವೆ ಎಂಬುದು ಒಂದು ಪದ್ಧತಿಯಾಗಿ ಉಳಿದುಕೊಂಡಿದ್ದು ಅದೊಂದು ಆಯ್ಕೆಯಾಗಿ ಬದಲಾಗುತ್ತಿದೆ.

ಹೌದು, ಇಂದು ನಾಗರೀಕ ಸಮಾಜದಲ್ಲಿ ಮದುವೆ ಎಂಬುದು ಕಟ್ಟುಪಾಡು ಆಗಿ ಉಳಿದಿಲ್ಲ, ಬದಲಿಗೆ ವ್ಯಕ್ತಿಗತ ಆಯ್ಕೆಯಾಗಿ ಬದಲಾಗಿದೆ. ಹಲವು ದೇಶಗಳಲ್ಲಿ, ಸಮಾಜಗಳಲ್ಲಿ ಮದುವೆ ಎಂಬುದು ಕೇವಲ ಆಯ್ಕೆ ಎಂಬಂತಾಗಿ ಯಾವುದೋ ಕಾಲವಾಯ್ತು. ಆದರೆ ಭಾರತೀಯ ಸಮಾಜದಲ್ಲಿ ಹಾಗಿಲ್ಲ, ಇತ್ತೀಚೆಗೆ ಅದು ಅವರವರ ಇಷ್ಟಕ್ಕೆ ಬಿಟ್ಟಿದ್ದು ಎಂಬ ಮನೋಭಾವ ಬೆಳೆಯುತ್ತಿದೆ. ಆದರೆ, ಪೋಷಕರು ತಮ್ಮ ಮಕ್ಕಳ ಮದುವೆಗೆ ಒತ್ತಾಯಪಡಿಸುವ ಪರಿಪಾಠ ಭಾರತದಲ್ಲಿ ಇಂದಿಗೂ ಕಡಿಮೆಯಾಗಿಲ್ಲ. ಆದರೆ, ಪೋಷಕರ ನಿಲುವಿಗೆ ಮಕ್ಕಳು ಬದ್ಧರಾಗಿ ಒಪ್ಪಿಕೊಂಡು ಮದುವೆಗೆ ಕೊರಳೊಡ್ಡುವ ರೀತಿ ಕಡಿಮೆ ಆಗುತ್ತಿದೆ ಎನ್ನಬಹುದು.

ಇಲ್ಲಿ ಹೇಳಹೊರಟಿರುವುದು ಮದುವೆ ಆಗಬೇಕೋ ಬೇಡವೋ, ಪೋಷಕರು ಸರಿಯೋ ಅಥವಾ ಮಕ್ಕಳು ಸರಿಯೋ ಎಂಬ ಚರ್ಚೆಯಲ್ಲ. ಆದರೆ, ಮದುವೆ ಆದವರಿಗೂ ಆಗದಿರುವವರಿಗೂ ಇರುವ ವ್ಯತ್ಯಾಸ, ಮದುವೆ ಆಗುವುದು-ಆಗದಿರುವುದರ ಸಾಧಕ-ಬಾಧಕಗಳನ್ನಷ್ಟೇ ಹೇಳುತ್ತಿರುವುದು. ಅಂದರೆ, ಮದುವೆ ಆದವರು ಏನನ್ನು ಪಡೆದುಕೊಂಡು ಏನನ್ನು ಕಳೆದುಕೊಂಡಿರುತ್ತಾರೆ, ಅದೇರೀತಿ ಆಗದಿರುವವ ಜೀವನದಲ್ಲಿ ಗಳಿಸಿದ್ದು-ಕಳೆದುಕೊಂಡಿದ್ದು ಏನು ಎಂಬುದಷ್ಟೇ.

ಮದುವೆಯಾಗದೆ ಇರುವುದರಿಂದ ಆಗುವ ಲಾಭಗಳು:

  • ವೈಯಕ್ತಿಕ ಸ್ವಾತಂತ್ರ್ಯ ಹೆಚ್ಚು ಇರುತ್ತದೆ.
  • ಹಣಕಾಸಿನ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳಬಹುದು.
  • ವೃತ್ತಿ, ಹವ್ಯಾಸ, ಪ್ರವಾಸ ಇತ್ಯಾದಿಗಳಿಗೆ ಹೆಚ್ಚು ಸಮಯ ಕೊಡಬಹುದು.
  • ದಾಂಪತ್ಯ ಕಲಹ, ವಿಚ್ಛೇದನ ಮುಂತಾದ ಸಮಸ್ಯೆಗಳಿಂದ ದೂರ ಇರಬಹುದು.

ಎದುರಾಗುವ ಸವಾಲುಗಳು:

  • ವಯಸ್ಸಾದಂತೆ ಒಂಟಿತನ ಅನುಭವಿಸುವ ಸಾಧ್ಯತೆ ಹೆಚ್ಚಿರಬಹುದು.
  • ಅನಾರೋಗ್ಯ ಅಥವಾ ತುರ್ತು ಸಂದರ್ಭಗಳಲ್ಲಿ ಹತ್ತಿರದ ಸಂಗಾತಿಯ ಬೆಂಬಲ ಇರದೇ ಇರಬಹುದು.
  • ಮಕ್ಕಳನ್ನು ಹೊಂದಬೇಕೆಂಬ ಆಸೆ ಇದ್ದರೆ ಅದು ನೆರವೇರದೇ ಇರಬಹುದು (ಬೇರೆ ಮಾರ್ಗಗಳನ್ನು ಆಯ್ಕೆ ಮಾಡದಿದ್ದರೆ).
  • ಕೆಲವು ಸಮಾಜಗಳಲ್ಲಿ ಮದುವೆಯಾಗದವರ ಬಗ್ಗೆ ಪ್ರಶ್ನೆಗಳು ಅಥವಾ ಸಾಮಾಜಿಕ ಒತ್ತಡ ಇರಬಹುದು.

ಮದುವೆಯಿಂದ ಇಂತಿಷ್ಟೇ ಅನುಕೂಲಗಳು ಅಥವಾ ಅನಾನುಕೂಲಗಳು ಆಗುತ್ತವೆ ಎನ್ನುವುದು ನಿರ್ಧಿಷ್ಟವಾದ ಅಂಕಿಅಂಶಗಳೇನೂ ಅಲ್ಲ. ಆದರೆ, ಇದು ಸೋಷಿಯಲ್ ಮೀಡಿಯಾದ ಒಂದು ರೀಲ್ಸ್‌ನಲ್ಲಿ ಹರಿದಾಡುತ್ತಿರುವ ಇಂದು ಕಾರ್ಡ್ನಲ್ಲಿರುವ ಬರಹ. ಸೋಷಿಯಲ್ ಮೀಡಿಯಾ ಇಂದಿನ ಕಾಲದಲ್ಲಿ ಜನರ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವ ಕಾರಣಕ್ಕೆ, ಇದನ್ನು ಇಲ್ಲಿ ಈ ಮೂಲಕ ಶೇರ್ ಮಾಡಲಾಗಿದೆ. 

ನಿಮಗೆ ಮದುವೆ ಆಗಿದ್ದರೂ, ಆಗದಿದ್ದರೂ ಅಥವಾ ಆಗುವ ಕನಸಿದ್ದರೂ ಮನಸಿದ್ದರೂ ಅದೇನೇ ಇದ್ದರೂ ಈ ಬರಹವನ್ನೊಮ್ಮೆ ನೋಡಿ.. ಇದು ಒಬ್ಬರ ಅಥವಾ ಹಲವರ ಅನಿಸಿಕೆ ಆಗಿರಬಹುದು. ನಿಮಗೆ ಈ ಅಭಿಪ್ರಾಯ ಒಪ್ಪಿಗೆ ಆಗಬಹುದು ಅಥವಾ ಆಗದಿರಬಹುದು. ಅದರಲ್ಲೇನು ಸಮಸ್ಯೆ? ಇರಲಿ, 'ಲೋಕೋ ಭಿನ್ನ ರುಚಿಃ' ಎಂದು ಲೈಫಲ್ಲಿ ಮುಂದೆ ಮುಂದೆ ನಡೆದರಾಯ್ತು.. ಏನಂತೀರಾ?