ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಮುಂದೇನು..? ಈ ಸ್ಟೋರಿ ನೋಡಿ..

ಇತ್ತೀಚಿಗಷ್ಟೇ "ಧರ್ಮಸ್ಥಳ' ಕೇಸ್‌ಗೆ ಸಂಬಂಧಪಟ್ಟು ಸುದ್ದಿಯಾಗಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಇದೀಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿರುವ ಆರೋಪದ ಅಡಿಯಲ್ಲಿ, ನಟ ಪ್ರಕಾಶ್​ರಾಜ್ (Prakash Raj) ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರಕಾಶ್ ರಾಜ್ ವಿರುದ್ಧ ದಿಲೀಪ್ ಕುಮಾರ್ ಎಂಬುವರು ಕೇಸ್ ದಾಖಲಿಸಿರುವ ಹಿನ್ನೆಲೆಯಲ್ಲಿ, ಬೆಂಗಳೂರು ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಜಾಮೀನು ರಹಿತ ವಾರಂಟ್ (NBW) ಜಾರಿಯಾಗಿದೆ. ಒಂದೇ ಹೆಸರಿನಲ್ಲಿ ನಾಲ್ಕು ವೋಟರ್ ಐಡಿ ಕಾರ್ಡ್ ಪಡೆದಿದ್ದಾರೆ ಎಂದು ಆರೋಪಿಸಿ ದಿಲೀಪ್​ಕುಮಾರ್ ಕೇಸ್ ದಾಖಲು ಮಾಡಿದ್ದಾರೆ. ಆ ಬಳಿಕ, 48ನೇ ಎಸಿಜೆಎಂ ಕೋರ್ಟ್‌ನಿಂದ ಪ್ರಕಾಶ್​ ರಾಜ್ ವಿರುದ್ಧ NBW ಜಾರಿ ಹಾಗೂ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ನೀಡಲಾಗಿತ್ತು.

2 ಬಾರಿ ಸಮನ್ಸ್​ ಹಾಗೂ 2 ಬಾರಿ NBW ಜಾರಿ ಮಾಡಿದ್ರೂ ಪ್ರಕಾಶ್​ ರಾಜ್ ಹಾಜರಾಗದ ಹಿನ್ನೆಲೆಯಲ್ಲಿ, ಇದೀಗ 3ನೇ ಬಾರಿ ಪ್ರಕಾಶ್ ರಾಜ್ ವಿರುದ್ಧ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ರಹಿತ ಅರೆಸ್ಟ್ ವಾರಂಟ್ ಜಾರಿಗೊಳಿಸಿದೆ.

ನಟ ಪ್ರಕಾಶ್ ರಾಜ್ 2 ಬಾರಿ ಸಮನ್ಸ್ ಹಾಗೂ 2 ಬಾರಿ NBW ಜಾರಿ ಮಾಡಿದ್ರೂ ಕೋರ್ಟ್‌ಗೆ ಹಾಜರಾಗಿರಲಿಲ್ಲ. 4 ರಾಜ್ಯಗಳಲ್ಲಿ, ಅಂದರೆ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಅಕ್ರಮ ವೋಟರ್ ಐಡಿ (Voter ID) ಹೊಂದಿರುವ ಗಂಭೀರ ಆರೋಪ ಪ್ರಕಾಶ್ ರಾಜ್ ಮೇಲಿದೆ. ಸಂವಿಧಾನದ ಪ್ರಕಾರ, ಒಬ್ಬ ವ್ಯಕ್ತಿ ದೇಶದ ಯಾವುದೇ ಭಾಗದಲ್ಲಿ ಒಂದೇ ಮತದಾರರ ಗುರುತಿನ ಚೀಟಿ ಹೊಂದಿರಲು ಅವಕಾಶವಿದೆ.

ಆದರೆ ನಟ ಪ್ರಕಾಶ್ ರಾಜ್ ನಾಲ್ಕು ರಾಜ್ಯಗಳಲ್ಲಿ ಮತದಾರ ಗುರುತಿನ ಚೀಟಿ ಪಡೆದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆರೋಪಿ ಆಗಿರುವ ಪ್ರಕಾಶ್ ರಾಜ್, ಸಮನ್ಸ್‌, ವಾರಂಟ್ ಯಾವುದಕ್ಕೂ ಕೇರ್ ಮಾಡದೇ, ಕೋರ್ಟ್‌ಗೆ ಹಾಜರಾಗದ ಹಿನ್ನೆಲೆಯಲ್ಲಿ ಎಸಿಜೆಎಂ ಕೋರ್ಟ್ ಗರಂ ಆಗಿದೆ ಎನ್ನಲಾಗಿದೆ.

ಹೀಗಾಗಿ, ಇದೀಗ ಮ್ಯಾಜಿಸ್ಟ್ರೇಟ್ ಕೋರ್ಟ್‌ನಿಂದ ಪ್ರಕಾಶ್ ರಾಜ್‌ಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಸಮನ್ಸ್, ವಾರಂಟ್ ಯಾವುದಕ್ಕೂ ಹಾಜರಾಗದ ಪ್ರಕಾಶ್ ರಾಜ್ ವಿರುದ್ಧ, ಈಗ ಕಾನೂನು ಉಲ್ಲಂಘನೆ ಆರೋಪವೂ ಸೇರಿಕೊಂಡಿದೆ. ಈ ಎಲ್ಲ ಕಾರಣಗಳಿಂದ ಇದೀಗ ನಟ ಪ್ರಕಾಶ್ ರಾಜ್ ಅವರಿಗೆ ಬಂಧನ ಭೀತಿ ಎದುರಾಗಿದೆ.