Asianet Suvarna News Asianet Suvarna News

ಭಲೇ ಜೋಡಿ..ಕೋಲ್ಕತ್ತಾ ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ವೃದ್ಧ ದಂಪತಿ

ಮೊಬೈಲ್‌ ಫೋನ್ ಬಳಕೆ ಶುರುವಾದಾಗಿನಿಂಲೂ ಜನರು ಸೆಲ್ಫಿ ತೆಗೆದುಕೊಳ್ಳುವ ಅಭ್ಯಾಸ ಹೆಚ್ಚಾಗಿದೆ. ಹೋದಲ್ಲಿ ಬಂದಲ್ಲಿ ಸುಂದರವಾದ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇರುತ್ತಾರೆ. ಈ ಮಧ್ಯೆ ವೃದ್ಧ ದಂಪತಿಗಳು ಮೆಟ್ರೋದಲ್ಲಿ ಸೆಲ್ಪೀ ಕ್ಲಿಕ್ಕಿಸಿಕೊಂಡಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. 

Elderly Couple Tries To Click A Selfie In Kolkata Metro, Video Viral Vin
Author
First Published Dec 9, 2022, 3:44 PM IST

ಆಂಡ್ರಾಯ್ಡ್ ಫೋನ್‌ಗಳು ಬಂದಾಗಿನಿಂದ ಜನರು ತಮ್ಮ ಜೀವನದ (Life) ಸುಂದರ ಕ್ಷಣಗಳನ್ನು ಸೆರೆಹಿಡಿದು ಇಟ್ಟುಕೊಳ್ಳುತ್ತಿದ್ದಾರೆ. ಹೋದಲ್ಲಿ ಬಂದಲ್ಲಿ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಇದೆಲ್ಲದರ ಮಧ್ಯೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಜನರ ಸಂಖ್ಯೆ ಹೆಚ್ಚಾಗಿದೆ. ಫೋಟೋ ತೆಗೆಸಿಕೊಳ್ಳಲು ಹೆಚ್ಚು ಜನರ ಅಗತ್ಯವಿಲ್ಲದ ಕಾರಣ ಹೆಚ್ಚಿನವರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಆದರೆ ಹಿರಿಯರಿಗೆ ಈ ರೀತಿ ಸೆಲ್ಫಿ ತೆಗೆದುಕೊಳ್ಳಲು ಬಾರದ ಕಾರಣ ಅವರು ಒದ್ದಾಡುವಂತಾಗುತ್ತದೆ. ಹೀಗಿದ್ದೂ ಹಿರಿಯರು (Elders) ಸಹ ಇತ್ತೀಚಿನ ಟ್ರೆಂಡ್‌ಗಳನ್ನು ಫಾಲೋ ಮಾಡೋಕೆ ಇಷ್ಟಪಡುತ್ತಾರೆ. ಯುವಜನತೆಯಂತೆ ಸೆಲ್ಫಿ ಕ್ಲಿಕ್ಕಿಸೋಕೆ ಪ್ರಯತ್ನಿಸ್ತಾರೆ. ಹೀಗೆ ವೃದ್ಧ ದಂಪತಿ (Couple)ಯೊಂದು ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಲು ಯತ್ನಿಸಿದ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. 

ವೃದ್ಧ ದಂಪತಿಯ ಸೆಲ್ಫಿ ವೀಡಿಯೋ ವೈರಲ್‌
ವೃದ್ಧ ದಂಪತಿಗಳ ನಡುವಿನ ಬಾಂಧವ್ಯ (Relationship)ವನ್ನು ತೋರಿಸುವ ವೀಡಿಯೊಗಳು ನೆಟಿಜನ್‌ಗಳಿಂದ ಇಷ್ಟವಾಗುತ್ತವೆ. ಆನ್‌ಲೈನ್‌ನಲ್ಲಿ ಇಂಥಾ ಅದೆಷ್ಟೋ ವೀಡಿಯೋಗಳು ಸಿಗುತ್ತವೆ. ಸದ್ಯ ಕೋಲ್ಕತ್ತಾ ಮೆಟ್ರೋದಲ್ಲಿ ವೃದ್ಧ ದಂಪತಿಗಳು (Elder couple) ಸೆಲ್ಫಿ ಕ್ಲಿಕ್ಕಿಸಲು ಪ್ರಯತ್ನಿಸುತ್ತಿರುವ ವೀಡಿಯೋ ನೆಟ್ಟಿಗರ ಹೃದಯ ಗೆದ್ದಿದೆ. ವಿಡಿಯೋ ವೈರಲ್ ಆಗುತ್ತಿದೆ.

ಡಾನ್ಸ್‌ಗೆ ಕರೆದ ತಾತನಿಗೆ ನೋ ಎಂದ ಅಜ್ಜಿ... ಆಮೇಲೆ ತಾತ ಮಾಡಿದ್ದು ಕಿತಾಪತಿ..!

ಮೆಟ್ರೋದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ ದಂಪತಿ
ಕೋಲ್ಕತ್ತಾ ಮೂಲದ ಕಲ್ಪಕ್ ಎಂಬ ಛಾಯಾಗ್ರಾಹಕ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ದಂಪತಿಯನ್ನು ಮೆಟ್ರೋ ರೈಲಿನ ಕಾರ್ನರ್ ಸೀಟ್‌ಗಳಲ್ಲಿ ಕೂರಿಸಿ, ವ್ಯಕ್ತಿ ತನ್ನ ಪತ್ನಿ (Wife)ಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಪತ್ನಿಯೂ ಕೂದಲನ್ನು (Hair) ಸರಿಪಡಿಸಿಕೊಳ್ಳುವ ಮೂಲಕ ಫೋಟೋಗೆ ಫೋಸ್ ಕೊಡಲು ಸಜ್ಜಾಗುತ್ತಾರೆ. ಹೀಗಿದ್ದೂ ಅವರಿಗೆ ಸರಿಯಾಗಿ ಸೆಲ್ಫಿ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. 

ಕೆಲವು ವಿಫಲ ಪ್ರಯತ್ನಗಳ ನಂತರ, ವ್ಯಕ್ತಿ ತಮ್ಮ ಪತ್ನಿಗೆ ಉತ್ತಮ ಫೋಟೋ ಸಿಗುತ್ತದೆ ಎಂಬ ಭರವಸೆ ನೀಡುತ್ತಾರೆ. ಅಂತಿಮವಾಗಿ, ಮೆಟ್ರೋ ರೈಲಿನಿಂದ ಇಳಿಯುವ ಮೊದಲು ದಂಪತಿ ಸುಂದರವಾದ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ನವೆಂಬರ್ 21ರಂದು ಪೋಸ್ಟ್ ಮಾಡಲಾದ ಕ್ಲಿಪ್ 4.6 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇನ್‌ಸ್ಟಾಗ್ರಾಂನಲ್ಲಿ  'ಒಳ್ಳೆಯ ಚಿತ್ರಕ್ಕಾಗಿ ನಿರೀಕ್ಷಿಸಿ. ಸರಿಯಾದ ವ್ಯಕ್ತಿಯೊಂದಿಗೆ ಜೀವನವು ಸ್ವಲ್ಪ ಉತ್ತಮಗೊಳ್ಳುತ್ತದೆ, ಅಲ್ಲವೇ?' ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. 

ನಿಮ್ಮ ಮನೆಲೂ ಅಜ್ಜಿ ತಾತ ಇಷ್ಟೊಂದು ಜೋಶಲ್ಲಿದ್ದಾರಾ... ವೈರಲ್ ವಿಡಿಯೋ

ವೃದ್ಧ ದಂಪತಿಯ ಸೆಲ್ಫಿ ವೀಡಿಯೋಗೆ ನೆಟ್ಟಿಗರ ಮೆಚ್ಚುಗೆ
ವೀಡಿಯೋ ನೋಡಿ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. 'ಈ ವೀಡಿಯೋ ನನ್ನ ದಿನವನ್ನು ಸುಂದರಗೊಳಿಸಿದೆ' ಎಂದು ವ್ಯಕ್ತಿಯೊಬ್ಬರು ಹೇಳಿದರೆ, ಇನ್ನೊಬ್ಬರು, 'ಈ ರೀಲ್ ಪರಿಪೂರ್ಣವಾಗಿದೆ' ಎಂದು ತಿಳಿಸಿದ್ದಾರೆ. 'ಇದು ಒಂದು ಸುಂದರ ಪ್ರೇಮಕಥೆ' ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 'ವಾವ್‌. ನೀವು ಸಣ್ಣ ವಿಷಯಗಳಲ್ಲಿ ಸಂತೋಷ (Happiness)ವನ್ನು ಕಾಣುತ್ತೀರಿ' ಎಂದು ಇನ್ನೊಬ್ಬ ನೆಟಿಜನ್ ಬರೆದಿದ್ದಾರೆ.

ಕಳೆದ ತಿಂಗಳು, ವಯಸ್ಸಾದ ದಂಪತಿಗಳು ಲತಾ ಮಂಗೇಶ್ಕರ್ 'ಆ ಜಾನೆ ಜಾನ್' ಹಾಡಿಗೆ ನೃತ್ಯ ಮಾಡಿದ ವೀಡಿಯೊ ಇಂಟರ್ನೆಟ್‌ನಲ್ಲಿ ಗೆದ್ದಿತ್ತು. ವಯಸ್ಸಾದ ದಂಪತಿಗಳು ತಮ್ಮ ಸುತ್ತಲಿನ ಜನರನ್ನು ಲೆಕ್ಕಿಸದೆ ಪರಸ್ಪರರ ತೋಳುಗಳಲ್ಲಿ ನೃತ್ಯ ಮಾಡುವುದನ್ನು ಕ್ಲಿಪ್ ನಲ್ಲಿ ತೋರಿಸಲಾಗಿತ್ತು. ಅದೇನೆ ಇರ್ಲಿ, ಪ್ರೀತಿಸಿ ಎರಡೇ ದಿನದಲ್ಲಿ ಬ್ರೇಕಪ್ ಮಾಡಿಕೊಳ್ಳೋ ಯುವಜನರ ಮಧ್ಯೆ, ವರ್ಷಗಳ ಕಾಲ ಜೊತೆಗಿದ್ದು, ಖುಷಿಯಾಗಿರುವ ವೃದ್ಧ ದಂಪತಿಗಳು ಎಲ್ಲರಿಗೂ ಮಾದರಿಯಾಗಿದ್ದಾರೆ.

Follow Us:
Download App:
  • android
  • ios