ಡಾನ್ಸ್‌ಗೆ ಕರೆದ ತಾತನಿಗೆ ನೋ ಎಂದ ಅಜ್ಜಿ... ಆಮೇಲೆ ತಾತ ಮಾಡಿದ್ದು ಕಿತಾಪತಿ..!

ಸಾಮಾನ್ಯವಾಗಿ ಐವತ್ತು 50 ದಾಟುತ್ತಿದ್ದಂತೆ ಅನೇಕರು ಬದುಕಿನ ಉತ್ಸಾಹವನ್ನು ಕಳೆದುಕೊಂಡು ಬಿಡುತ್ತಾರೆ. ಇನ್ನೇನು ನಮ್ಮದೆಲ್ಲಾ ಮುಗಿತ್ತು, ನಮಗೂ ವಯಸ್ಸಾಯ್ತು ಎಂದು ಹೇಳಲು ಶುರು ಮಾಡಿ ಎಲ್ಲದರ ಬಗ್ಗೆ ನಿರಾಸಕ್ತಿ ತೋರಿಸಲು ಆರಂಭಿಸುತ್ತಾರೆ. ಆದರೆ ಇಲ್ಲೊಂದು ಕಡೆ  70 ಕಳೆದಿರುವ ವೃದ್ಧ ಜೋಡಿಯ ಜೀವನೋತ್ಸಾಹ ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತಿದೆ. ವೃದ್ಧ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

watch viral video of Elderly couple dance, possessiveness and interest in life, video captured in Metro train akb

ಸಾಮಾನ್ಯವಾಗಿ ಐವತ್ತು 50 ದಾಟುತ್ತಿದ್ದಂತೆ ಅನೇಕರು ಬದುಕಿನ ಉತ್ಸಾಹವನ್ನು ಕಳೆದುಕೊಂಡು ಬಿಡುತ್ತಾರೆ. ಇನ್ನೇನು ನಮ್ಮದೆಲ್ಲಾ ಮುಗಿತ್ತು, ನಮಗೂ ವಯಸ್ಸಾಯ್ತು ಎಂದು ಹೇಳಲು ಶುರು ಮಾಡಿ ಎಲ್ಲದರ ಬಗ್ಗೆ ನಿರಾಸಕ್ತಿ ತೋರಿಸಲು ಆರಂಭಿಸುತ್ತಾರೆ. ಆದರೆ ಇಲ್ಲೊಂದು ಕಡೆ  70 ಕಳೆದಿರುವ ವೃದ್ಧ ಜೋಡಿಯ ಜೀವನೋತ್ಸಾಹ ಎಲ್ಲರನ್ನು ಮೂಗಿನ ಮೇಲೆ ಬೆರಳಿಡುವಂತೆ ಮಾಡುತ್ತಿದೆ. ವೃದ್ಧ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಈ ವೈರಲ್ ಆದ ವಿಡಿಯೋದಲ್ಲಿ ಕಾಣಿಸುವಂತೆ ಮೆಟ್ರೋ ರೈಲೊಂದರಲ್ಲಿ ವೃದ್ಧ ದಂಪತಿ ಪಯಾಣಿಸುತ್ತಿರುತ್ತಾರೆ. ರೈಲಿನಲ್ಲಿ ಮ್ಯೂಸಿಯನ್‌ಗಳು ಸಂಗೀತ ನುಡಿಸುತ್ತಿದ್ದು, ಇದನ್ನು ನೋಡಿದ ತಾತನಿಗೆ ಪತ್ನಿ ಜೊತೆ ಡಾನ್ಸ್ ಮಾಡುವ ಆಸೆಯಾಗಿದೆ. ಕೂಡಲೇ ಎದ್ದು ನಿಂತ ತಾತ ಡಾನ್ಸ್ ಮಾಡುವಂತೆ ಪತ್ನಿಯನ್ನು ಕರೆಯುತ್ತಾನೆ. ಆದರೆ ಪತ್ನಿ ಇದಕ್ಕೆ ಒಪ್ಪದೇ ಸುಮ್ಮನೇ ಸೀಟಿನಲ್ಲಿ ಕುಳಿತು ಬಿಡುತ್ತಾಳೆ. ಅಲ್ಲದೇ ತಾತನ ಶರ್ಟ್‌ನನ್ನು ಹಿಂದಿನಿಂದ ಹಿಡಿದುಕೊಂಡು ಮಾಡಲು ಕೆಲಸ ಇಲ್ಲವೇ ಎಂಬಂತಾ ನೋಟ ತೋರಿದ್ದಾಳೆ. ಆದರೆ ಸುಮ್ಮನೇ ಕೂರಲು ತಾತ ಮಾತ್ರ ಸಿದ್ಧನಿಲ್ಲ. ತಾತನ ಈ ಉತ್ಸಾಹ ನೋಡಿದ ರೈಲಿನಲ್ಲಿರುವ ಮಹಿಳೆಯೊಬ್ಬರು ತಾತನ ಜೊತೆ ಡಾನ್ಸ್ ಮಾಡಲು ಮುಂದೆ ಬಂದಿದ್ದಾರೆ. ಅಲ್ಲದೇ ತಾತನ ಜೊತೆಗೂಡಿ ಡಾನ್ಸ್ ಕೂಡ ಮಾಡಿದ್ದಾರೆ.

 

ಆದರೆ ತನ್ನ ಪತಿ ಇನ್ನೊಬ್ಬನ ಮಹಿಳೆಯ ಜೊತೆ ಡಾನ್ಸ್‌ ಮಾಡುತ್ತಿರುವುದನ್ನು ನೋಡಿದ ಅಜ್ಜಿಗೆ ತಾತನ ಈ ವರ್ತನೆ ನೋಡಿ ಉರಿದು ಹೋಗಿದ್ದು, ಕೂಡಲೇ ಎದ್ದುನಿಂತ ಆಕೆ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಯುವಕನೋರ್ವನನ್ನು ತನ್ನೊಂದಿಗೆ ಡಾನ್ಸ್ ಮಾಡುವಂತೆ ಕರೆದಿದ್ದಾಳೆ. ನಂತರ ಇಬ್ಬರು ಡಾನ್ಸ್ ಮಾಡಿದ್ದಾರೆ. ಹಣ್ಣು ಹಣ್ಣು ಮುದುಕರಾಗಿದ್ದರೂ ಇನ್ನೂ ಹೊಸದಾಗಿ ಮದುವೆಯದಂತೆ ವರ್ತಿಸುತ್ತಿರುವ ಈ ಜೋಡಿಯ ವರ್ತನೆ ನೋಡಿ ರೈಲಿನಲ್ಲಿ ಪ್ರಯಾಣಿಸುತ್ತಿರುವರೆಲ್ಲರೂ ಚಪ್ಪಾಳೆ ತಟ್ಟಿ ಈ ಜೋಡಿಯನ್ನು ಸ್ವಾಗತಿಸಿದ್ದಾರೆ.

ನಿನಗೆ ನಾನು ನನಗೆ ನೀನು: ವೃದ್ಧ ಜೋಡಿಯ ಅನುರಾಗ ತುಂಬಿದ ವಿಡಿಯೋ ವೈರಲ್

ಒಂದು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದು, goodnews_movement ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದೆ. ವಿಡಿಯೋ ನೋಡಿದ ಅನೇಕರು ಈ ವೃದ್ಧ ಜೋಡಿಯ ಜೋಡಿಯ ಜೀವನೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದಹಾಗೆ ಇದು ಬಾರ್ಸಿಲೋನಾದ ಮೆಟ್ರೋ ರೈಲಿನಲ್ಲಿ ಸೆರೆ ಹಿಡಿಯಲಾದ ದೃಶ್ಯ ಎಂದು ಕೆಲವರು ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಇವರಂತೆ ಎಲ್ಲಾ ವಿವಾಹಿತ ಜೋಡಿಗಳು ಇರಬೇಕು. ಒಬ್ಬರ ಬಗ್ಗೆ ಒಬ್ಬರು ಆಸಕ್ತಿ ಕಳೆದುಕೊಳ್ಳದೇ ಪ್ರೀತಿ ದ್ವೇಷ, ಅಸೂಯೆ, ಪ್ರೇಮ ಎಲ್ಲ ಭಾವನೆಗಳನ್ನು ಹೊಂದಿ ಜೊತೆ ಜೊತೆಯಾಗಿ ಸಾಗಿದರೆ ಸುಧೀರ್ಘ ಕಾಲ ಜೊತೆಯಾಗಿ ಬಾಳಬಹುದು ಎಂದು ನೊಡುಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಎಂಥಹಾ ಸುಂದರ ಕ್ಷಣ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದೇ ರೀತಿ ನಮ್ಮ ಅಮ್ಮ ಕೂಡ ಕೆಲವೊಮ್ಮೆ ವರ್ತಿಸುತ್ತಾಳೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಈ ಜೋಡಿ ತುಂಬಾ ಮುದ್ದಾಗಿದ್ದು, ಹಾಸ್ಯ ಹಾಗೂ ಉತ್ಸಾಹನ್ನು ಹೊಂದಿದ್ದಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. 

ನಿಮ್ಮ ಮನೆಲೂ ಅಜ್ಜಿ ತಾತ ಇಷ್ಟೊಂದು ಜೋಶಲ್ಲಿದ್ದಾರಾ... ವೈರಲ್ ವಿಡಿಯೋ

ಇದೇ ರೀತಿ ಕೆಲ ದಿನಗಳ ಹಿಂದೆ ವೃದ್ಧಜೋಡಿಯೊಂದು ಸುರಿಯುತ್ತಿರುವ ಮಳೆಯ ನಡುವೆ ಕೊಡೆ ಹಿಡಿದುಕೊಂಡು ಜೊತೆಯಾಗಿ ಸಾಗುತ್ತಿರುವ ವಿಡಿಯೋವೊಂದು ವೈರಲ್ ಆಗಿತ್ತು. ಪತ್ನಿ ಮುಂದೆ ಸಾಗುತ್ತಿದ್ದಾರೆ. ಪತಿ ಆಕೆಯ ತಲೆ ಮೇಲೆ ಛತ್ರಿ ಹಿಡಿಯುತ್ತಾ ಜೊತೆ ಜೊತೆಯಾಗಿ ನಡೆಯುತ್ತಾ ರಸ್ತೆಯನ್ನು ಹಾದು ಮುಂದೆ ಸಾಗುತ್ತಿದ್ದರು. ಪುಣೆಯ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. 

Latest Videos
Follow Us:
Download App:
  • android
  • ios