46 ವರ್ಷ ಚಿಕ್ಕ ಹುಡುಗನ ಮೇಲೆ ಪ್ರೀತಿ..ತರಾತುರಿಯಲ್ಲಿ ಮದುವೆಯಾದ ಅಜ್ಜಿ, ಈಗ ಹೇಳ್ತಿದ್ದಾಳೆ ಬುದ್ಧಿವಾದ!
ಯುವಕ – ಯುವತಿಯರು ಮಾತ್ರವಲ್ಲ ವೃದ್ಧರು ಕೂಡ ಪ್ರೀತಿಯಲ್ಲಿ ಮೋಸ ಹೋಗ್ತಾರೆ. ಹಣ, ಆಸ್ತಿ ಹೆಚ್ಚಿದೆ ಎನ್ನುವವರು ಪ್ರೀತಿಸುವಾಗ ಎಚ್ಚರಿಕೆ ಹೆಜ್ಜೆ ಇಡ್ಬೇಕು. ಈಗಿನ ಕಾಲದಲ್ಲಿ ಮನಸ್ಸಿಗಿಂತ ಬ್ಯಾಂಕ್ ಖಾತೆ ಹಣಕ್ಕೆ ಬೀಳೋರೆ ಹೆಚ್ಚು.
ನಿವೃತ್ತಿ ನಂತ್ರ ನಮ್ಮ ದೇಶದ ಜನರು ವಿಶ್ರಾಂತಿ ಪಡೆಯೋಕೆ, ತೀರ್ಥಯಾತ್ರೆಗೆ ಪ್ಲಾನ್ ಮಾಡ್ತಾರೆ. ದೇವರ ದರ್ಶನ, ಭಜನೆ, ಪ್ರಾರ್ಥನೆ, ಮಕ್ಕಳು – ಮೊಮ್ಮಕ್ಕಳ ಆರೈಕೆ ಅಂತ ಮಹಿಳೆಯರು ದಿನ ಕಳೆಯುತ್ತಾರೆ. ಆದ್ರೆ ವಿದೇಶದಲ್ಲಿ ಹಾಗಲ್ಲ. ಅಲ್ಲಿನ ಜನರ ಆಲೋಚನೆ ಭಿನ್ನವಾಗಿರುತ್ತದೆ. ಯೌವನದಲ್ಲಿ ಓದು, ಕೆಲಸ, ಮಕ್ಕಳಿಗೆ ಸಮಯ ನೀಡುವ ಜನರು ನಿವೃತ್ತಿ ನಂತ್ರ ತಮ್ಮಿಷ್ಟದಂತೆ ಜೀವಿಸಲು ಮುಂದಾಗ್ತಾರೆ. ವೃದ್ಧಾಪ್ಯದಲ್ಲೂ ಅವರು ಪ್ರೀತಿಯಲ್ಲಿ ಬೀಳ್ತಾರೆ. ವಯಸ್ಸು 70 ವರ್ಷ ದಾಟಿದ ಮೇಲೂ ಮದುವೆಗೆ ನಿರ್ಧಾರ ತೆಗೆದುಕೊಳ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವೃದ್ಧರ ಪ್ರೀತಿ, ರೋಮ್ಯಾನ್ಸ್ ನಿಮಗೆ ನೋಡೋಕೆ ಸಿಗುತ್ತೆ. ಚಿಕ್ಕ ವಯಸ್ಸಿನ ಹುಡುಗ – ಹುಡುಗಿಯನ್ನು ವೃದ್ಧರು ಮದುವೆಯಾದ ಅನೇಕ ಉದಾಹರಣೆ ನಮ್ಮ ಮುಂದೆ ಇದೆ. ಈ ಅಜ್ಜಿ ಕೂಡ ತನ್ನ 83 ನೇ ವಯಸ್ಸಿನಲ್ಲಿ ತನಗಿಂತ ಅತೀ ಚಿಕ್ಕ ವಯಸ್ಸಿನ ಹುಡುಗನ್ನು ಪ್ರೀತಿಸಿದ್ಲು. ಆತನ ಭೇಟಿಗಾಗಿ ವಿದೇಶಕ್ಕೆ ಹೋದ್ಲು. ಆತುರದಲ್ಲಿ ಮದುವೆ ಕೂಡ ನಡೀತು. ಆದ್ರೆ ಮದುವೆಯಾದ ಎರಡೇ ವರ್ಷಕ್ಕೆ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. ಈಗ ಅಜ್ಜಿ, ಆನ್ಲೈನ್ ಡೇಟಿಂಗ್ ಅಪ್ಲಿಕೇಷನ್ ನಲ್ಲಿ ಸಂಗಾತಿ ಹುಡುಕಿಕೊಂಡು ಮೋಸ ಹೋಗ್ಬೇಡಿ ಅಂತ ಜನರಿಗೆ ಸಲಹೆ ನೀಡ್ತಿದ್ದಾಳೆ.
ಬ್ರಿಟನ್ (Britain) ನ ಈ ಮಹಿಳೆ ಹೆಸರು ಐರಿಸ್ ಜೋನ್ಸ್. ಆಕೆಗೆ ಈಗ 85 ವರ್ಷ. ಜೂನ್ 2019 ರಲ್ಲಿ ಈಜಿಪ್ಟ್ (Egypt) ಮೂಲದ ಮೊಹಮ್ಮದ್ ಇಬ್ರಾಹಿಂನನ್ನು ಐರಿಸ್ ಜೋನ್ಸ್, ಸಾಮಾಜಿಕ ಜಾಲತಾಣ ಫೇಸ್ಬುಕ್ (Facebook) ನಲ್ಲಿ ಭೇಟಿಯಾಗಿದ್ದಳು. ಮರು ವರ್ಷ ಐರಿಸ್ ಜೋನ್ಸ್, ಮೊಹಮ್ಮದ್ ಭೇಟಿಗಾಗಿ ಈಜಿಪ್ಟ್ ಗೆ ಹೋಗಿದ್ದಳು. ಒಂದು ವರ್ಷದ ನಂತ್ರ ಇಬ್ಬರು ಮದುವೆ ಆಗಿದ್ದರು. 2021ರಲ್ಲಿ ಐರಿಸ್ ಜೋನ್ಸ್, ದಿಸ್ ಮಾರ್ನಿಂಗ್ ಹೆಸರಿನ ಶೋನಲ್ಲಿ ತನ್ನ ಬೆಡ್ ರೂಮ್ ಬಗ್ಗೆ ಹೇಳಿಕೊಂಡಿದ್ದಳು. ಆದ್ರೆ ಇವರಿಬ್ಬರ ಸಂಬಂಧ ದೀರ್ಘಕಾಲ ನಡೆಯಲಿಲ್ಲ. ಮದುವೆಯಾದ ಎರಡೇ ವರ್ಷಕ್ಕೆ ಐರಿಸ್ ಜೋನ್ಸ್ ಪತಿ ಮೊಹಮ್ಮದ್ ನನ್ನು ಮನೆಯಿಂದ ಹೊರಗೆ ಹಾಕಿದ್ದಾಳೆ. ಮೊಹಮ್ಮದ್ ನನ್ನು ಐರಿಸ್ ನಿಂದಿಸಿದ್ದಾಳೆ. ಚರಂಡಿಯಲ್ಲಿ ವಾಸಿಸುವ ಇಲಿ ಎಂದು ಮೊಹಮ್ಮದ್ ನನ್ನು ಐರಿಸ್ ಕರೆದಿದ್ದಾಳೆ.
ಮದುವೆ ಆಗ್ತಿದೆ ಇಬ್ಬರು ಮಾಜಿ ಗೆಳೆಯರನ್ನು ಹೇಗೆ ಮರೆಯಲಿ ಎಂದು ಕೇಳಿದ ಯುವತಿಗೆ ನೆಟ್ಟಿಗರು ಕೊಟ್ರು ಟಿಪ್ಸ್
ವಿಚ್ಛೇದನದ ನಂತ್ರ ಮೊಹಮ್ಮದ್ ಬಗ್ಗೆ ಐರಿಸ್ ಸಾಕಷ್ಟು ದೂರಿದ್ದಾಳೆ. ಮೊಹಮ್ಮದ್ ನನ್ನ ಆಸ್ತಿ ನೋಡಿ ಮದುವೆ ಆಗಿದ್ದ ಎಂದಿದ್ದಾಳೆ. ಮೊಹಮ್ಮದ್ ನ ಎಲ್ಲ ಸಾಲವನ್ನು ನಾನು ತೀರಿಸಿದ್ದೆ. ನನ್ನ ಸಂತೋಷಕ್ಕಾಗಿ ನಾನು ಮೊಹಮ್ಮದ್ ನನ್ನು ಇಷ್ಟಪಟ್ಟಿದ್ದೆ. ಆದ್ರೆ ಆತ ನನ್ನನ್ನೇ ಬದಲಿಸುವ ಪ್ರಯತ್ನ ನಡೆಸಿದ್ದ. ನನ್ನ ಕುಟುಂಬದಿಂದ ನನ್ನನ್ನು ದೂರ ಮಾಡುವ ಪ್ರಯತ್ನ ನಡೆಸಿದ್ದ. ನನ್ನ ಕುಟುಂಬ ಸದಾ ನನ್ನ ಜೊತೆಗಿತ್ತು. ಈಗ್ಲೂ ಇದೆ. ಅವರ ಸಹಾಯದಿಂದ ನಾನು ಮೊಹಮ್ಮದ್ ನನ್ನು ದೂರ ಮಾಡಿದ್ದೇನೆ ಎಂದು ಐರಿಸ್ ಹೇಳಿದ್ದಾಳೆ.
ಡೇಟಿಂಗ್ ಅಪ್ಲಿಕೇಷನ್ ಬಳಸಿ ಸಂಗಾತಿ ಹುಡುಕುವ ಸಮಯದಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರಿ ಎಂದು ಐರಿಸ್ ಸಲಹೆ ನೀಡಿದ್ದಾಳೆ. ಜನರು ಸುಳ್ಳು ಹೇಳಿ ನಿಮ್ಮನ್ನು ಮರಳುಮಾಡುವ ಪ್ರಯತ್ನ ನಡೆಸುತ್ತಾರೆ. ಅವರ ಬಗ್ಗೆ ಸರಿಯಾಗಿ ವಿಚಾರಿಸದೆ ನೀವು ಮುಂದುವರೆದಲ್ಲಿ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಐರಿಸ್ ಹೇಳಿದ್ದಾರೆ.
ನೋಡೋಕೆ ಅಮ್ಮ - ಮಗನಂತೆ ಕಾಣೋ ಇವರ ಸಂಬಂಧ ಬೇರೆನೆ ಇದೆ..
ಈಗ ಡೇಟಿಂಗ್ ಅಪ್ಲಿಕೇಷನ್ ಗಳ (Dating Apps) ಸಂಖ್ಯೆ ಸಾಕಷ್ಟಿದೆ. ವೃದ್ಧರಿಗಾಗಿಯೇ ಪ್ರತ್ಯೇಕ ಅಪ್ಲಿಕೇಷನ್ ಇದೆ. ಕಡಿಮೆ ವಯಸ್ಸಿನ ಹುಡುಗ ಅಥವಾ ಹುಡುಗಿ ಪ್ರೀತಿಗೆ ಬೀಳುವ ಜನರೂ ಹೆಚ್ಚಾಗಿದ್ದಾರೆ. ಇಂಥವರ ಮಧ್ಯೆ ನಿಜವಾದ ಪ್ರೀತಿ ಕಾಣಸಿಗೋದು ಬಹಳ ಅಪರೂಪ.