ಮುರಿದ ಸಂಬಂಧಗಳಿಗೆ "ಹೋಹೋ ಪೊನೊ ಪೊನೊ" ಪರಿಹಾರವೆನ್ನುತ್ತಾರೆ ಮನೋವಿಜ್ಞಾನಿ ಡಾ.ಸೌಜನ್ಯ. "ಐ ಆಮ್ ಸಾರಿ, ಪ್ಲೀಸ್ ಫರ್ಗೀವ್ ಮಿ, ಥ್ಯಾಂಕ್ಯೂ, ಐ ಲವ್ ಯೂ" ಎಂದು 108 ಬಾರಿ ಪಠಿಸಿದರೆ ದೂರಾದವರು ವಾಪಸ್ಸಾಗಬಹುದು. ನೀರಿನಲ್ಲಿ ಶಕ್ತಿ ವರ್ಗಾವಣೆಯಾಗುವುದರಿಂದ ಒಂದೇ ಪಾತ್ರೆಯಿಂದ ನೀರು ಕುಡಿಯಬಾರದೆಂದೂ ಅವರು ಸಲಹೆ ನೀಡಿದ್ದಾರೆ.

ಸಂಬಂಧಗಳಲ್ಲಿ ಸಿಟ್ಟು-ಕೋಪ, ತಾಪ ಸಹಜ. ಆದರೆ ಕೆಲವೊಮ್ಮೆ ಯಾವುದೇ ಒಂದು ಚಿಕ್ಕ ಪುಟ್ಟ ವಿಷಯಗಳೇ ದೊಡ್ಡದಾಗಿ ಬಿರುಕು ಮೂಡುವುದು ಇದೆ. ಇಬ್ಬರ ನಡುವಿನ ಸಂಬಂಧ ಚೆನ್ನಾಗಿದ್ದರೂ, ಒಬ್ಬರ ಮೇಲೆ ಇನ್ನೊಬ್ಬರಿಗೆ ಪ್ರೀತಿಯೇ ಇದ್ದರೂ ಅಹಂ ಎನ್ನುವುದು ಮಧ್ಯೆ ಅಡ್ಡ ಬಂದು ಬಿರುಕು ದೊಡ್ಡದಾಗುತ್ತಲೇ ಸಂಬಂಧ ಮರೆಯಾಗುತ್ತದೆ. ಬಹುತೇಕ ಬ್ರೇಕಪ್​ಗಳಲ್ಲಿ ಕೂಡ ಅಡ್ಡ ಬರುವುದು ಇದೇ ಅಹಂ. ಅವರು ಕ್ಷಮೆ ಕೋರಲಿ ಎಂದು ಇವರು, ಇವರು ಕ್ಷಮೆ ಕೋರಲಿ ಎಂದು ಅವರು... ಹೀಗೆ ಯಾರೂ ಕ್ಷಮೆ ಕೋರದೇ ದೂರದೂರವಾಗಿ ಕೊನೆಗೆ ಸಂಬಂಧವೇ ಕುಸಿದು ಬೀಳುವುದು ಇದೆ. ಸಂಬಂಧ ಚೆನ್ನಾಗಿದ್ದು, ಅದರಲ್ಲಿ ಯಾವುದೇ ಕೆಟ್ಟ ಉದ್ದೇಶ ಇಲ್ಲದ ಸಂದರ್ಭಗಳಲ್ಲಿ, ದೂರ ಆದವರು ಮತ್ತೆ ತಮ್ಮ ಬಳಿ ಬರಬೇಕು ಎನ್ನುವ ಮನಸ್ಸು ಇದ್ದರೆ ಇದೊಂದು ಟಿಪ್ಸ್​ ಫಾಲೋ ಮಾಡಿದರೆ ಸಾಕು ಎನ್ನುತ್ತಾರೆ ಮನೋವಿಜ್ಞಾನಿ ಡಾ.ಸೌಜನ್ಯ ವಸಿಷ್ಠ. ರಾಜೇಶ್​ಗೌಡ ಯೂಟ್ಯೂಬ್​ ಚಾನೆಲ್​ನಲ್ಲಿ ಈ ಕುರಿತು ಅವರು ಮಾತನಾಡಿದ್ದಾರೆ. 

ಇದಕ್ಕೆ ಏನ್​ಷಿಯೆಂಟ್​ ಹವಾಯನ್​ ಪ್ರೇಯರ್​ ಎನ್ನುತ್ತಾರೆ. ಹೋಹೋ ಪೊನೊ ಪೊನೊ ಟೆಕ್ನಿಕ್​ ಎಂದೂ ಇದನ್ನು ಕರೆಯುತ್ತಾರೆ ಎಂದು ಡಾ.ಸೌಜನ್ಯ ವಸಿಷ್ಠ ಹೇಳಿದ್ದಾರೆ. ಈ ನಾಲ್ಕು ಶಬ್ದಗಳು ಎಂದರೆ, ಐ ಅ್ಯಮ್​ ಸಾರಿ (I am Sorry), ಪ್ಲೀಸ್​ ಫಾರ್​ಗೀವ್ ಮಿ​ (Please forgive Me), ಥ್ಯಾಂಕ್ಯೂ (Thank you) ಮತ್ತು ಐ ಲವ್​ ಯೂ (I love You). ನಿಮ್ಮ ಸಂಬಂಧ ಚೆನ್ನಾಗಿದ್ದರೆ ನಿಮ್ಮಿಂದ ದೂರವಾದವರು ವಾಪಸ್​ ಬರುತ್ತಾರೆ. ಇದನ್ನು ಒಮ್ಮೆ ಕನಿಷ್ಠ 108 ಬಾರಿ ಹೇಳಬೇಕು. ಒಂದೇ ಸಲಕ್ಕೆ ಹೇಳಲು ಆಗದಿದ್ದರೆ ಬೆಳಿಗ್ಗೆ ಮತ್ತು ಸಂಜೆ ಇದನ್ನು ಹೇಳಬಹುದು ಎಂದಿದ್ದಾರೆ ಡಾ.ಸೌಜನ್ಯ.

'S'ecret 'E'nergy 'X'change ಎಂದರೇನು? ನೀರಿನಿಂದ ಶಕ್ತಿ ಬದಲಾಗೋದು ಹೇಗೆ? ಡಾ.ಸೌಜನ್ಯ ಮಾತು ಕೇಳಿ...

ನಿಮ್ಮ ಎದುರಿಗೆ ಆ ವ್ಯಕ್ತಿ ಇರುವಂತೆ ಕಲ್ಪಿಸಿಕೊಂಡು ಈ ನಾಲ್ಕು ಶಬ್ದಗಳನ್ನು ಹೇಳಿ. ತಪ್ಪು ನಿಮ್ಮದೇ ಇದ್ದಿರಲಿ, ಅವರದ್ದೇ ಇದ್ದಿರಲಿ ನೀವು ಅವರ ಬಳಿ ಕ್ಷಮೆ ಕೋರಿ ಸಾರಿ ಎನ್ನಿ, ನನ್ನನ್ನು ಕ್ಷಮಿಸು ಎಂದು ಹೇಳಿ, ಬಳಿಕ ಅವರು ನಿಮ್ಮ ಜೊತೆ ಅಷ್ಟು ದಿನ ಇದ್ದುದಕ್ಕೆ ಧನ್ಯವಾದ ಸಲ್ಲಿಸಿ ಬಳಿಕ ಅವರಿಗೆ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳಿ ಎಂದಿದ್ದಾರೆ ಅವರು. ಇದನ್ನು ಅಪ್ಪ-ಅಮ್ಮನ ಜೊತೆ ನಿಮ್ಮ ಸಂಬಂಧ ಹಾಳಾಗಿದ್ದರೂ ಈ ಟೆಕ್ನಿಕ್​ ಉಪಯೋಗಿಸಬಹುದು ಎಂದಿದ್ದಾರೆ ಸೌಜನ್ಯ. 

ಇದೇ ಸಂದರ್ಶನದಲ್ಲಿ ಎನರ್ಜಿ ಬಗ್ಗೆ ಮಾತನಾಡಿರುವ ಅವರು, ಲೈಂಗಿಕ ಕ್ರಿಯೆಯ ಬಗ್ಗೆ ತಿಳಿಸಿದ್ದಾರೆ (ಅದರ ಲಿಂಕ್​ ಮೇಲಿದೆ). ಇದೇ ವೇಳೆ, ನೀರಿನ ಎನರ್ಜಿಯ ಬಗ್ಗೆಯೂ ಸೌಜನ್ಯ ಅವರು ಮಾತನಾಡಿದ್ದಾರೆ. ಒಂದೇ ಬಾಟಲಿ ಅಥವಾ ಒಂದೇ ಚೊಂಬುವಿನಿಂದ ನೀರನ್ನು ಬೇರೆ ಬೇರೆಯವರು ಕುಡಿಯುವುದು ಕೂಡ ತಪ್ಪು ಎಂದು ಅವರು ಹೇಳಿದ್ದಾರೆ. ನೀವು ಹಿಂದಿನವರಿಗೆ ನೋಡಿದರೆ ತಿಳಿಯುತ್ತದೆ. ಅವರು ಅವರದ್ದೇ ಆದ ಪ್ರತ್ಯೇಕ ನೀರಿನ ಕುಡಿಯುವ ವ್ಯವಸ್ಥೆ ಮಾಡಿಟ್ಟುಕೊಳ್ಳುತ್ತಿದ್ದರು. ಒಂದೇ ಬಾಟಲಿಯ ನೀರನ್ನು ಮತ್ತೊಬ್ಬರು ಕುಡಿಯುವುದು ಸರಿಯಲ್ಲ. ಅದರಲ್ಲಿ ಒಬ್ಬರ ಎನರ್ಜಿಯನ್ನು ಇನ್ನೊಬ್ಬರಿಗೆ ಕೊಟ್ಟಂತೆ ಆಗುತ್ತದೆ ಎಂದಿದ್ದಾರೆ ಸೌಜನ್ಯ. 

ಮದ್ವೆ ಫಿಕ್ಸ್​ ಆದಾಗ್ಲೂ ನನ್ನಮ್ಮಂಗೆ ಆ ಜಯಂತನೇ ಕಾಡ್ತಿದ್ದ, ಮದ್ವೆ ಮಾಡಿಸೋಕೆ ಹೆದರಿದ್ರು ಎಂದ 'ಚಿನ್ನುಮರಿ'

YouTube video player