ಡಾ.ಸೌಜನ್ಯ ವಸಿಷ್ಠರ ಪ್ರಕಾರ, ಸೆಕ್ಸ್ ಎಂದರೆ ಗುಪ್ತ ಶಕ್ತಿ ವಿನಿಮಯ. ಮದುವೆಪೂರ್ವ ಲೈಂಗಿಕತೆಯಿಂದ ಕೆಟ್ಟ ಶಕ್ತಿ ವರ್ಗಾವಣೆಯಾಗಿ ಸಮಸ್ಯೆಗಳಾಗುತ್ತವೆ. ಒಂದೇ ಪಾತ್ರೆಯಲ್ಲಿ ನೀರು ಕುಡಿಯುವುದರಿಂದಲೂ ಶಕ್ತಿ ವಿನಿಮಯವಾಗುತ್ತದೆ. ಇದು ಪವಿತ್ರ ಬಂಧ, ಕ್ಯಾಶುಯಲ್ ಆಗಿ ಪರಿಗಣಿಸಬಾರದು. ಡಿಎನ್ಎ ವಿನಿಮಯವಾಗಿ ಕರ್ಮವು ವರ್ಗಾವಣೆಯಾಗುತ್ತದೆ.
'S'ecret 'E'nergy 'X'change ಎಂದರೆ ಸೆಕ್ಸ್. ಒಬ್ಬರ ಶಕ್ತಿಯನ್ನು ಇನ್ನೊಬ್ಬರಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆ ಇದು. ಇಂದು ಮದುವೆಗೂ ಮುನ್ನ ಲೈಂಗಿಕ ಕ್ರಿಯೆ ಎನ್ನುವುದು ಮಾಮೂಲಾಗಿದೆ. ಮದುವೆ ಎನ್ನುವ ಪವಿತ್ರ ಬಂಧ ಎನ್ನುವ ಕಾನ್ಸೆಪ್ಟ್ ಹೋಗಿ ದಶಕಗಳೇ ಆಗಿಬಿಟ್ಟಿವೆ. ಹಾಗಿದ್ದರೆ ಮದುವೆಗೂ ಮುನ್ನದ ಲೈಂಗಿಕ ಕ್ರಿಯೆ ಎಷ್ಟು ಸರಿ? ಸೆಕ್ಸ್ ಎನ್ನುವುದು ನಿಜಕ್ಕೂ ಏನು ಎನ್ನುವ ಜೊತೆಗೆನೇ ಒಂದೇ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಹೇಗೆ ಎನರ್ಜಿ ಪಾಸ್ ಆಗುತ್ತದೆ ಎನ್ನುವ ಬಗ್ಗೆ ಮನೋವಿಜ್ಞಾನಿ ಡಾ.ಸೌಜನ್ಯ ವಸಿಷ್ಠ ಅವರು ರಾಜೇಶ್ಗೌಡ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ್ದಾರೆ.
ಅವರು ಹೇಳುವ ಪ್ರಕಾರ ಸೆಕ್ಸ್ ಎಂದರೆ 'S'ecret 'E'nergy 'X'change. ಇದರ ಅರ್ಥ ಒಬ್ಬರ ಶಕ್ತಿಯನ್ನು ಇನ್ನೊಬ್ಬರಿಗೆ ನೀಡುವುದು. ಹೊಸದೊಂದು ಜೀವವನ್ನು ಭೂಮಿಯ ಮೇಲೆ ತರುವ ಪ್ರಕ್ರಿಯೆ ಇದು. ಆದ್ದರಿಂದ ಇದಕ್ಕೆ ಅದರದ್ದೇ ಆದ ಪಾವಿತ್ರ್ಯತೆ ಇದೆ. ಆದರೆ ಇಂದು ಮದುವೆಗೂ ಮುನ್ನವೇ ಸೆಕ್ಸ್ನಲ್ಲಿ ತೊಡಗಿಸಿಕೊಳ್ಳುವುದು ಮಾಮೂಲಾಗಿರುವುದರಿಂದ ಕೆಟ್ಟ ಎನರ್ಜಿಗಳು ಹೇಗೆ ಒಬ್ಬರ ಮೂಲಕ ಇನ್ನೊಬ್ಬರಿಗೆ ಹೋಗಿ ಏನೆಲ್ಲಾ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ. ಈ ಒಂದು ಪವಿತ್ರ ಬಂಧವನ್ನು ಕ್ಯಾಸುವಲ್ ಆಗಿ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿರುವ ಡಾ.ಸೌಜನ್ಯ, ಇದಕ್ಕೆ ಒಂದು ಉತ್ತಮ ಉದಾಹರಣೆಯನ್ನೂ ನೀಡಿದ್ದಾರೆ.
ಮದ್ವೆ ಫಿಕ್ಸ್ ಆದಾಗ್ಲೂ ನನ್ನಮ್ಮಂಗೆ ಆ ಜಯಂತನೇ ಕಾಡ್ತಿದ್ದ, ಮದ್ವೆ ಮಾಡಿಸೋಕೆ ಹೆದರಿದ್ರು ಎಂದ 'ಚಿನ್ನುಮರಿ'
ನೀವು ದಕ್ಷಿಣ ಭಾರತೀಯರು ಆಗಿದ್ದರೆ, ಅನ್ನ- ಸಾಂಬಾರ್ ಬೇಕಾಗುತ್ತದೆ. ಅದೇ ನೀವು ಉತ್ತರ ಭಾರತಕ್ಕೆ ಹೋದಾಗ ಅಲ್ಲಿ ತಿಂಗಳುಗಟ್ಟಲೆ ಅಲ್ಲಿಯ ಆಹಾರವನ್ನು ತಿನ್ನುತ್ತಿದ್ದರೆ, ಆರಂಭದಲ್ಲಿ ನಿಮಗೆ ಅದು ಸಮಸ್ಯೆ ಆಗಬಹುದು. ನನಗೆ ಒಂದು ಹಿಡಿಯಷ್ಟಾದರೂ ಅನ್ನ-ರಸಂ ನೀಡಿ ಎಂದು ಕೇಳಬಹುದು. ಅಂದರೆ ನಿಮಗೆ ಅಲ್ಲಿ ಅಡ್ಜಸ್ಟ್ ಆಗುವುದು ಕಷ್ಟವಾಗುತ್ತದೆ. ಅದೇ ರೀತಿ, ಸುಮ್ಮನೇ ಒಂದು ಪರಿಚಯದಲ್ಲಿ ಆ ವ್ಯಕ್ತಿಗಳ ಬಗ್ಗೆ ಏನೂ ಅರಿಯದೇ ದೈಹಿಕ ಆಕರ್ಷಣೆಗೆ, ಮುಂದೇನು ಎನ್ನುವುದನ್ನೂ ಯೋಚನೆ ಮಾಡದೆಯೇ ಮದುವೆಗೂ ಮುನ್ನವೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೆ, ಅಲ್ಲಿ ಸಂಪೂರ್ಣ ಡಿಎನ್ಎ ಎಕ್ಸ್ಚೇಂಜ್ ಆಗುತ್ತದೆ. ಆ ವ್ಯಕ್ತಿಯ ಕರ್ಮವನ್ನೂ ನೀವು ತೆಗೆದುಕೊಳ್ಳುತ್ತಾ ಹೋಗುತ್ತೀರಿ. ಅಲ್ಲಿ ಕೆಟ್ಟ ಕರ್ಮ ಇದ್ದರೆ ನಿಮಗೂ ಕೆಟ್ಟದ್ದೇ ಆಗುತ್ತದೆ. ಆದ್ದರಿಂದ ನಿಮ್ಮ ಎನರ್ಜಿ ಒಳಗೆ ಯಾರದ್ದೇ ಎನರ್ಜಿ ಬಿಡುವಾಗಲೂ ಕೇರ್ಫುಲ್ ಆಗಿ ಇರಬೇಕು ಎಂದಿದ್ದಾರೆ.
ಇದೇ ವೇಳೆ, ನೀರಿನ ಎನರ್ಜಿಯ ಬಗ್ಗೆಯೂ ಸೌಜನ್ಯ ಅವರು ಮಾತನಾಡಿದ್ದಾರೆ. ಒಂದೇ ಬಾಟಲಿ ಅಥವಾ ಒಂದೇ ಚೊಂಬುವಿನಿಂದ ನೀರನ್ನು ಬೇರೆ ಬೇರೆಯವರು ಕುಡಿಯುವುದು ಕೂಡ ತಪ್ಪು ಎಂದು ಅವರು ಹೇಳಿದ್ದಾರೆ. ನೀವು ಹಿಂದಿನವರಿಗೆ ನೋಡಿದರೆ ತಿಳಿಯುತ್ತದೆ. ಅವರು ಅವರದ್ದೇ ಆದ ಪ್ರತ್ಯೇಕ ನೀರಿನ ಕುಡಿಯುವ ವ್ಯವಸ್ಥೆ ಮಾಡಿಟ್ಟುಕೊಳ್ಳುತ್ತಿದ್ದರು. ಒಂದೇ ಬಾಟಲಿಯ ನೀರನ್ನು ಮತ್ತೊಬ್ಬರು ಕುಡಿಯುವುದು ಸರಿಯಲ್ಲ. ಅದರಲ್ಲಿ ಒಬ್ಬರ ಎನರ್ಜಿಯನ್ನು ಇನ್ನೊಬ್ಬರಿಗೆ ಕೊಟ್ಟಂತೆ ಆಗುತ್ತದೆ ಎಂದಿದ್ದಾರೆ ಸೌಜನ್ಯ. ಈ ಕುರಿತು ಅವರು ನೀಡಿರುವ ಸಂಪೂರ್ಣ ಸಂದರ್ಶನ ಈ ಕೆಳಗಿದೆ:
ಗಿಣಿರಾಮ, ಪಾಪ ಪಾಂಡು ನಟಿ ನಯನಾ ಧಾರಾವಾಹಿಗಳಿಂದ್ಲೇ ಬ್ಯಾನ್: ಆತನ ವಿರುದ್ಧ ಮಾತಾಡಿದ್ದೇ ತಪ್ಪಾಯ್ತು!

