ಸೆಕ್ಸ್ ಲೈಫ್‌ನಲ್ಲಿ ಮ್ಯಾಜಿಕ್ ಮಾಡುತ್ತೆ ಚಾಕೊಲೇಟ್
ಸಿಹಿಯಾದ ಚಾಕೋಲೇಟ್ಸ್ (Chocolates) ತಿನ್ನೋದು ಅಂದ್ರೆ ಎಲ್ಲರಿಗೂ ಇಷ್ಟ. ಇದ್ರಿಂದ ಆರೋಗ್ಯ (Health)ಕ್ಕೂ ಹಲವು ಪ್ರಯೋಜನವಿದೆ ಎಂಬುದು ಬಹಳ ಜನರಿಗೆ ಗೊತ್ತು. ಆದ್ರೆ ಚಾಕೊಲೇಟ್ ಮತ್ತು ಸೆಕ್ಸ್ (Sex) ಮಧ್ಯೆನೂ ನಂಟಿದೆ ಅನ್ನೋ ವಿಚಾರ ನಿಮ್ಗೆ ಗೊತ್ತಿದ್ಯಾ ?
ಇಂದು ಜುಲೈ 7,ವಿಶ್ವ ಚಾಕೊಲೇಟ್ ದಿನ (World Chocolate Day). 2009ರಿಂದ ಪ್ರತಿ ವರ್ಷ ಜುಲೈ 7 ರಂದು ವಿಶ್ವ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ. ನಾಲಿಗೆಯ ರುಚಿಯ ಜೊತೆಗೆ ಚಾಕಲೇಟ್ ಮನಸ್ಸನ್ನು ಸಂತೋಷ (Happy)ಪಡಿಸುತ್ತದೆ. ಹೆಚ್ಚಿನ ಜನರು ಚಾಕೊಲೇಟ್ ತಿನ್ನಲು ಇಷ್ಟಪಡುತ್ತಾರೆ. ಅದು ಚಾಕೊಲೇಟ್ ಐಸ್ ಕ್ರೀಮ್, ಚಾಕೊಲೇಟ್ ಕೇಕ್ ಅಥವಾ ಚಾಕೊಲೇಟ್ ನಿಂದ ಮಾಡಿದ ಯಾವುದಾದರೂ ಆಗಿರಲಿ. ಜನರು ಚಾಕೊಲೇಟ್ ಅನ್ನು ತುಂಬಾ ಪ್ರೀತಿಯಿಂದ ತಿನ್ನುತ್ತಾರೆ. ಚಾಕೊಲೇಟ್ ಪೋಷಕಾಂಶಗಳ ಉಗ್ರಾಣವಾಗಿದೆ ಎಂಬುದು ಹಲವರಿಗೆ ತಿಳಿದಿದೆ. ಆದರೆ ಚಾಕೊಲೇಟ್ ತಿನ್ನುವುದು ಮತ್ತು ಲೈಂಗಿಕ ಕ್ರಿಯೆ (Sex) ನಡೆಸುವುದರಿಂದ ಅನೇಕ ಪ್ರಯೋಜನಗಳು ಇದೆ ಎಂದು ನಿಮಗೆ ತಿಳಿದಿದೆಯೇ?
ಕೆಲವು ಸಂಶೋಧನೆಗಳು ಚಾಕೊಲೇಟ್ ಮತ್ತು ಲೈಂಗಿಕತೆಯನ್ನು ಉತ್ತಮ ಸಂಬಂಧವೆಂದು ಪರಿಗಣಿಸಿವೆ. ಹುಡುಗಿಯರು ಚಾಕೊಲೇಟ್ ಅನ್ನು ಇಷ್ಟಪಡುತ್ತಾರೆ. ಯಾಕೆಂದರೆ ಹುಡುಗಿಯರು ಚಾಕೊಲೇಟ್ ಅನ್ನು ಲೈಂಗಿಕತೆಗೆ ಪರ್ಯಾಯವಾಗಿ ಪರಿಗಣಿಸುತ್ತಾರೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಸೆಕ್ಸ್‌ನಲ್ಲಿ ಚಾಕೊಲೇಟ್ ಮಾಡೋ ಮ್ಯಾಜಿಕ್ ಏನು ?
International Chocolate Day 2022: ಚಾಕೊಲೇಟ್ ತಿಂದ್ರೆ ಚರ್ಮ ಫಳಫಳ ಹೊಳೆಯುತ್ತೆ
ಪ್ರೀತಿಯ ಭಾವನೆ ಹುಟ್ಟು ಹಾಕುತ್ತದೆ: ಚಾಕಲೇಟ್ ತಿನ್ನೋದ್ರಿಂದ ಏನೆಲ್ಲಾ ಲಾಭ : ಡಾರ್ಕ್ ಚಾಕೊಲೇಟ್ ಸೇವಿಸುವುದರಿಂದ ಯಾವುದೇ ವ್ಯಕ್ತಿಯಲ್ಲಿ ಪ್ರೀತಿಯ ಭಾವನೆಯನ್ನು ಹುಟ್ಟುಹಾಕಬಹುದು ಎಂದು ಕೆಲವು ಸಂಶೋಧನೆಗಳು ಕಂಡುಕೊಂಡಿವೆ. ಸಂಶೋಧಕರ ಪ್ರಕಾರ, ಚಾಕೊಲೇಟ್ ನಲ್ಲಿ ಫಿನೈಲ್ ಎಥೈಲ್ಮೈನ್ ಎಂಬ ರಾಸಾಯನಿಕವಿದೆ. ಇದನ್ನು ಲವ್ ಕೆಮಿಕಲ್ ಎಂದೂ ಕರೆಯುತ್ತಾರೆ.
ಮಹಿಳೆಯರಲ್ಲಿ ಮೂಡ್ ತರಲು ಚಾಕೋಲೇಟ್ ಬೆಸ್ಟ್: ಮಹಿಳೆಯರಿಗೆ ಮೂಡ್ ಸೃಷ್ಟಿಸಲು ಚಾಕೊಲೇಟ್ ಕೂಡ ತುಂಬಾ ಪ್ರಯೋಜನಕಾರಿ. ಸಾಮಾನ್ಯವಾಗಿ ಹೆಚ್ಚಿನ ಪುರುಷರು ತಮ್ಮ ಸಂಗಾತಿಯನ್ನು ಮೆಚ್ಚಿಸಲು ಚಾಕೊಲೇಟ್ ಗಳನ್ನು ಉಡುಗೊರೆಯಾಗಿ ನೀಡುತಾತರೆ . ಮಹಿಳೆಯರು ಚಾಕೊಲೇಟ್ ಸೇವಿಸಿದಾಗ ಹೆಚ್ಚು ಉತ್ಸುಕರಾಗುತ್ತಾರೆ ಎಂದು ನಂಬಲಾಗಿದೆ. ಸಕ್ರಿಯವಾಗಿ ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಾರೆ.
ಲೈಂಗಿಕ ಕ್ರಿಯೆಗೆ ಉತ್ತಮ ರಕ್ತ ಪರಿಚಲನೆ ಹೊಂದಿಸುತ್ತದೆ: ಚಾಕೊಲೇಟ್ ನಲ್ಲಿರುವ ಕೋಕಾ ರಕ್ತದ ಹರಿವನ್ನು ಹೆಚ್ಚಿಸುವುದರಿಂದ ನಮ್ಮ ದೇಹಕ್ಕೆ ಒಳ್ಳೆಯದು ಎಂದು ಕಂಡುಬಂದಿದೆ. ನಮ್ಮ ದೇಹದ ರಕ್ತ ಸಂಚಾರ ಉತ್ತಮವಾಗಿರುವಾಗ ನಾವು ಆರೋಗ್ಯವಂತರಾಗಿದ್ದೇವೆ ಎಂದು ಅರ್ಥ. ಲೈಂಗಿಕ ಕ್ರಿಯೆ ನಡೆಸಲು ಉತ್ತಮ ರಕ್ತ ಪರಿಚಲನೆಯನ್ನು ಹೊಂದುವುದು ಸಹ ಬಹಳ ಮುಖ್ಯ. ತುಂಬಾ ಉತ್ತಮ ರಕ್ತ ಪರಿಚಲನೆಹೊಂದಿರುವ ವ್ಯಕ್ತಿಯನ್ನು ಲೈಂಗಿಕ ಕ್ರಿಯೆಯಲ್ಲಿ ಉತ್ತಮ ಎಂದು ಪರಿಗಣಿಸಲಾಗುತ್ತದೆ. ಅಂದರೆ ಸೆಕ್ಸ್ ಗೆ ಮೊದಲು ಚಾಕಲೇಟ್ ತಿನ್ನುವುದು ತುಂಬಾ ಪ್ರಯೋಜನಕಾರಿ.
ಚಾಕೋಲೇಟ್‌ನಿಂದ ಬೆಳ್ಳುಳ್ಳಿವರೆಗೆ.. ಆಹಾರದ ಮೂಲಕ Anxiety ನಿವಾರಿಸಿಕೊಳ್ಳಿ
ಚಾಕೊಲೇಟ್ ಸೇವಿಸಿದರೆ ಹೆಚ್ಚು ಸಮಯ ಸೆಕ್ಸ್ ಮಾಡ್ಬೋದು: ಲೈಂಗಿಕ ಕ್ರಿಯೆಗೆ ಮೊದಲು ಚಾಕೊಲೇಟ್ ಸೇವಿಸಿದರೆ , ಹೆಚ್ಚು ಕಾಲ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಸಂಶೋಧನೆಯೊಂದು ತಿಳಿಸಿದೆ. ಅಷ್ಟೇ ಅಲ್ಲ ಚಾಕಲೇಟ್ ಸೇವನೆಯಿಂದ ಪುರುಷರು ಸ್ಟ್ಯಾಮಿನಾ ಬೂಸ್ಟ್ ಆಗುತ್ತದೆ ಎಂದು ಸಹ ಹೇಳಲಾಗಿದೆ. ಅಂದರೆ, ಚಾಕೊಲೇಟ್ ತಿನ್ನುವುದರಿಂದ ಪುರುಷರ ಲೈಂಗಿಕ ಕಾರ್ಯಕ್ಷಮತೆ ಸುಧಾರಿಸುತ್ತದೆ.
ಪರಾಕಾಷ್ಠೆಯನ್ನು ಪಡೆಯಲು ಸಾಧ್ಯವಾಗುತ್ತದೆ: ಚಾಕೊಲೇಟ್ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಚಾಕೊಲೇಟ್ ತಿನ್ನುವುದಕ್ಕಿಂತ ಹೆಚ್ಚು ಸಂತೋಷವಾಗಿರುವುದರಿಂದ ಲೈಂಗಿಕತೆಗೆ ಮೊದಲು ಚಾಕೊಲೇಟ್ ಸೇವಿಸುವ ಮಹಿಳೆಯರಿಗೆ ಒಳ್ಳೆಯದು. ಮಹಿಳೆಯರು ಡಾರ್ಕ್ ಚಾಕೊಲೇಟ್ ಅನ್ನು ಸೇವಿಸಬೇಕು ಏಕೆಂದರೆ ಅದು ಅವರಿಗೆ ಉತ್ತಮ ಭಾವನೆಯನ್ನು ನೀಡುತ್ತದೆ. ಚಾಕೊಲೇಟ್ ತಿಂದ ನಂತರ ಮಹಿಳೆಯರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದಾಗ ಪರಾಕಾಷ್ಠೆಯನ್ನು ಚೆನ್ನಾಗಿ ಪಡೆಯಲು ಸಾಧ್ಯವಾಗುತ್ತದೆ ಎಂದು ಕೆಲವು ಸಂಶೋಧನೆಗಳು ಕಂಡುಕೊಂಡಿವೆ.