Asianet Suvarna News Asianet Suvarna News

Eye Contact: ಕಣ್ಣು ಕಣ್ಣು ಕಲೆತಾಗ… ಮೋಡಿ ಗ್ಯಾರೆಂಟಿ

ಕಣ್ಣುಗಳ ನೋಟದ ಮಹತ್ವ ನಮಗೆ ತಿಳಿಯದ್ದೇನಲ್ಲ. ಕಣ್ಣುಗಳ ನೋಟದಲ್ಲೇ ಹೃದಯದ ಪ್ರೀತಿ, ಮಧುರವಾದ ಭಾವನೆಗಳು ವ್ಯಕ್ತವಾಗುತ್ತವೆ. ನಿಮಗೆ ಇಷ್ಟವಾಗುವವರ ಕಣ್ಣುಗಳನ್ನು ಕೆಲವು ಕ್ಷಣಗಳ ಕಾಲ ದಿಟ್ಟಿಸಿದರೆ ಖಂಡಿತವಾಗಿ ಮೋಡಿ ಮಾಡಲು ಸಾಧ್ಯ. ಅಂಥದ್ದೊಂದು ಟ್ರಿಕ್‌ ಸೋಷಿಯಲ್‌ ಮೀಡಿಯಾದಲ್ಲೀಗ ಸದ್ದು ಮಾಡುತ್ತಿದೆ. 
 

Do you know psychology love eye trick
Author
Bangalore, First Published May 10, 2022, 2:29 PM IST

“ಕಣ್ಣು ಕಣ್ಣು ಕಲೆತಾಗ… ಮನವು ಉಯ್ಯಾಲೆಯಾಗಿದೆ ತೂಗಿ, ಹೃದಯ ಬಿಡಲಾರೆ ಎಂದಿದೆ ಕೂಗಿ…ʼ ಎನ್ನುವ ಹಾಡು ಜನಪ್ರಿಯ. ಕಣ್ಣುಗಳು (Eyes) ಸೇರಿದಾಗ ಮನದಲ್ಲಿ ಅದೇನೋ ಭಾವನೆಗಳ ಉಯ್ಯಾಲೆ ಉಂಟಾಗುವುದು  ನಿಜ. ಅದರ ಅನುಭವ ಸಾಕಷ್ಟು ಜನರಿಗೆ ಇರಬಹುದು. ನೀವು ಇಷ್ಟಪಡುವವರ ಕಣ್ಣುಗಳಿಗೆ ನಿಮ್ಮ ಕಣ್ಣುಗಳನ್ನು ಕೂಡಿಸಿದಾಗ ನಿಜಕ್ಕೂ ಮ್ಯಾಜಿಕ್‌ ಆಗುತ್ತದೆ. ಕಣ್ಣುಗಳ ಮೂಲಕ ಪ್ರೀತಿ (Love) ಅರಳುತ್ತದೆ. 

ನಮ್ಮ ಕವಿಗಳಂತೂ ಕಣ್ಣುಗಳ ನೋಟವನ್ನು ಚೂಪಾದ ಬಾಣಕ್ಕೆ ಹೋಲಿಸಿದ್ದಾರೆ, ಎಂದರೆ ಇದರ ಪರಿಣಾಮ ಎಷ್ಟಿರಬಹುದು ಎನ್ನುವ ಅಂದಾಜಾಗುತ್ತದೆ. ಆ ಬಾಣ ಎದೆಗೆ ನೆಟ್ಟರೆ ಗಾಯವಾಗದೇ ಇರುತ್ತದೆಯೇ? ನಿಮಗೆ ಇಷ್ಟವಾದ ವ್ಯಕ್ತಿಗಳೊಂದಿಗೆ ಕುಳಿತು ಮಾತನಾಡುವ ಸಮಯದಲ್ಲಿ ಕಣ್ಣುಗಳನ್ನು ನೋಡಲು ನಾಚಿಕೆ ಎನಿಸುತ್ತದೆ. ದೃಷ್ಟಿ (Vision) ನೆಲಕ್ಕೇ ನೆಟ್ಟಿರುತ್ತದೆ. ಆದರೆ, ಅದೇ ದೃಷ್ಟಿ ಕಣ್ಣುಗಳನ್ನು ಪರಸ್ಪರ ಬೆಸೆಯುವಲ್ಲೂ ಮಹತ್ವದ ಪಾತ್ರ ವಹಿಸುತ್ತದೆ. ಕಣ್ಣುಗಳ ನೋಟದ ಕುರಿತ “ಸೈಕಾಲಜಿ ಲವ್‌ ಐ ಟ್ರಿಕ್‌ʼ ಎನ್ನುವ ತಂತ್ರವೊಂದು ಇತ್ತೀಚೆಗೆ ಸಾಕಷ್ಟು ವೈರಲ್‌ (Viral)  ಆಗುತ್ತಿದೆ. ಟಿಕ್‌ ಟಾಕ್‌ ನಲ್ಲಿ ಸೋಫಿ ರೋಸ್‌ ಲಾಯ್ಡ್‌ (Sophie Rose Lloyd) ಎಂಬಾಕೆ ಈ ಕುರಿತು ತಾನು ಮಾಡಿದ ಪ್ರಯೋಗಗಳ ಬಗ್ಗೆ ಹೇಳಿಕೊಂಡಿದ್ದಾಳೆ.

ಕಣ್ಣುಗಳನ್ನು ನೋಡುತ್ತ ಮಾತನಾಡುವುದು ಒಂದು ಕಲೆ. ಎಲ್ಲರಿಗೂ ಅದು ಸಾಧ್ಯವಿಲ್ಲ. ಕೆಲವರು ಮತ್ತೊಬ್ಬರ ಕಣ್ಣುಗಳಿಗೆ ಕಣ್ಣುಗಳನ್ನು ಕೂಡಿಸಿ ಮಾತನಾಡಲು ಹಿಂಜರಿಯುತ್ತಾರೆ. ಬೇರೆಲ್ಲೋ ನೋಡುತ್ತ ಮಾತಾಡುತ್ತಾರೆ. ಅಥವಾ ತುಟಿ(Tips)ಗಳನ್ನು ಗಮನಿಸುತ್ತಾರೆ. ಆದರೆ, ಕಣ್ಣುಗಳನ್ನು ನೋಡಿ ಮಾತನಾಡುವುದರಿಂದ ನಿಮ್ಮ ಸಂವಹನ ಉತ್ತಮವಾಗುತ್ತದೆ. ಅದು ಆತ್ಮವಿಶ್ವಾಸವನ್ನು (Confidence) ತೋರುತ್ತದೆ. ಹಾಗೆಯೇ, ಪ್ರೀತಿಯನ್ನು ಅರಳಿಸಲೂ ಕಣ್ಣುಗಳು ಬೇಕು. ಸೋಫಿ ಹೇಳಿರುವ ಈ ವಿಧಾನವನ್ನು ನಿಮಗಿಷ್ಟವಾಗುವ ವ್ಯಕ್ತಿಯ ಜತೆ ನೇರವಾಗಿ ಮಾತುಕತೆಯಲ್ಲಿದ್ದಾಗಲಷ್ಟೇ ಈ ಟ್ರಿಕ್‌ (Trick) ಬಳಸಬೇಕು. ಗುಂಪಿನಲ್ಲಿರುವಾಗ ಸಾಧ್ಯವಿಲ್ಲ. ಹಾಗೆಯೇ, ಮೊದಲ ಬಾರಿ ಯಾವುದಾದರೂ ವ್ಯಕ್ತಿಯನ್ನು ನಿರ್ದಿಷ್ಟ ಉದ್ದೇಶವಿಲ್ಲದೆ ಭೇಟಿಯಾದ ಸಮಯದಲ್ಲಿ, ಅಪರಿಚಿತರ ಮೇಲೆ ಪ್ರಯೋಗ ಮಾಡಿದರೆ ಯಶಸ್ವಿಯಾಗುತ್ತದೆ ಎನ್ನುವ ಗ್ಯಾರೆಂಟಿಯಿಲ್ಲ. 

ಇದನ್ನೂ ಓದಿ: ಹೆಂಡತಿ ಬಿಟ್ಟು ಸ್ವಂತ ತಾಯಿ ಜತೆ ಸಂಸಾರ, ಲೈಂಗಿಕ ಬದುಕು ಮೈಂಡ್‌ ಬ್ಲೋಯಿಂಗ್‌ ಅಂತೆ

ಕಣ್ಣುಗಳ ಲೋಕದಲ್ಲಿ
ಇಷ್ಟವಾಗುವ ವ್ಯಕ್ತಿಯೊಂದಿಗೆ ಡೇಟ್‌ (Date) ಮಾಡಲು, ಅವರ ಪ್ರೀತಿ ಗಳಿಸಲು ಯಾರಿಗೆ ಇಷ್ಟವಿಲ್ಲ ಹೇಳಿ? ಹೀಗಾಗಿ, ಸೋಫಿ ಹೇಳಿರುವ ವಿಧಾನ ಇದೀಗ ಸಾಕಷ್ಟು ಜನಪ್ರಿಯವೂ ಆಗಿದೆ. ಅಂದ ಹಾಗೆ, ಮಾತುಕತೆ ನಡೆಯುತ್ತಿರುವ ಸಮಯದಲ್ಲಿ ಮಾತ್ರವೇ ಕಣ್ಣುಗಳನ್ನು ಸೇರಿಸಿ ಮಾತನಾಡಲು ಸಾಧ್ಯ. ಅವರೊಂದಿಗೆ ಹೊರಗೆಲ್ಲೋ ಅಡ್ಡಾಡುವ ಸಮಯದಲ್ಲಿ ಅಥವಾ ಶಾಪಿಂಗ್‌ ಹೋದಾಗ ಕಣ್ಣುಗಳನ್ನು ನೋಡುತ್ತಿರಲು ಸಾಧ್ಯವಿಲ್ಲ. ಅಷ್ಟಕ್ಕೂ ಕಣ್ಣುಗಳನ್ನು ಕೂಡಿಸುವುದೆಂದರೆ ಸುಮ್ಮನೆ ಕಣ್ಣುಗಳನ್ನು ನೋಡುತ್ತಿರುವುದಲ್ಲ. ಅದಕ್ಕೂ ಒಂದು ತಂತ್ರವಿದೆ. ಮೊದಲಿಗೆ, ನಿಮ್ಮ ಎದುರು ಇರುವ ವ್ಯಕ್ತಿಯ ಎಡಗಣ್ಣನ್ನು (Left Eye) ಒಂದು ಸೆಕೆಂಡ್‌ ಕಾಲ ನೋಡಬೇಕು. ಬಳಿಕ ದೃಷ್ಟಿಯನ್ನು ಎರಡು ಸೆಕೆಂಡ್‌ ಗಳ ಕಾಲ ಅವರ ತುಟಿಗಳ ಮೇಲೆ ಹಾಯಿಸಬೇಕು, ನಂತರ ಅವರ ಬಲಗಣ್ಣನ್ನು (Right Eye) ದಿಟ್ಟಿಸಬೇಕು. ಅಲ್ಲಿಗೆ ಒಂದು ತ್ರಿಕೋನ (Triangle) ಸೃಷ್ಟಿಯಾಗುತ್ತದೆ. ಕೇಲವೇ ಸೆಕೆಂಡ್‌ ಗಳಲ್ಲಿ ಈ ಮ್ಯಾಜಿಕ್‌ ಮುಗಿಯುತ್ತದೆ. ಎದುರಿಗಿರುವ ವ್ಯಕ್ತಿ ಖಂಡಿತವಾಗಿ ಮೋಡಿಗೆ ಒಳಗಾಗುತ್ತಾರೆ. ಹಾಗೆಂದು ಸುಖಾಸುಮ್ಮನೆ ಎದುರಿಗಿರುವವರನ್ನು ಆಟವಾಡಿಸಲು ಹೀಗೆ ಮಾಡಬಾರದು, ಏಕೆಂದರೆ, ಅವರಲ್ಲಿ ಈ ತಂತ್ರ ಒಂದು ಸಂಚಲನವನ್ನಂತೂ ಮೂಡಿಸುತ್ತದೆ. ನಿಮ್ಮ ಬಗ್ಗೆ ಮಧುರವಾದ ಭಾವನೆ ಮೂಡಿಸಲು ಸಹಕಾರಿಯಾಗುತ್ತದೆ. 

ಇದನ್ನೂ ಓದಿ: ತಪ್ಪಾದ ಬ್ರಾ ಗಾತ್ರ ಧರಿಸುವುದನ್ನು ಬಿಟ್ಟುಬಿಡಿ, ಸರಿಯಾದ ಸೈಜ್ ತಿಳಿದುಕೊಳ್ಳಲು ಇಲ್ಲಿದೆ ಟಿಪ್ಸ್‌

ಸೋಫಿ ಈ ಟ್ರಿಕ್‌ ಅನ್ನು ಹಲವಾರು ಜನರ ಮೇಲೆ ಪ್ರಯೋಗ ಮಾಡಿದ್ದಾರಂತೆ. ಅವೆಲ್ಲವೂ ಯಶಸ್ವಿಯಾಗಿವೆ ಎಂದು ಅವರು ಹೇಳಿಕೊಂಡಿದ್ದಾರೆ. ಪ್ರಯೋಗಕ್ಕೋಸ್ಕರ ಸ್ನೇಹಿತರ ಮೇಲೂ ಕಣ್ಣುಗಳ ನೋಟಗಳ ಬಾಣ ಎಸೆದಿದ್ದಾರಂತೆ. ಎಲ್ಲ ಬಾರಿಯೂ ಅವರನ್ನು ಮೋಡಿಗೆ ಒಳಪಡಿಸಲು ಸಾಧ್ಯವಾಗಿದೆ ಎಂದವರು ಹೇಳಿದ್ದಾರೆ. 

Follow Us:
Download App:
  • android
  • ios