ಹೆಂಡತಿ ಬಿಟ್ಟು ಸ್ವಂತ ತಾಯಿ ಜತೆ ಸಂಸಾರ, ಲೈಂಗಿಕ ಬದುಕು ಮೈಂಡ್ ಬ್ಲೋಯಿಂಗ್ ಅಂತೆ ಕರ್ಮ
Weird relationship news: ಮನುಷ್ಯ ಯಾವ ಸಮಯದಲ್ಲಿ ಹೇಗಾಡ್ತಾನೆ ಗೊತ್ತಾಗೋದಿಲ್ಲ. ಜಗತ್ತಿನಲ್ಲಿ ಅನೇಕ ಪವಿತ್ರ ಸಂಬಂಧಕ್ಕೆ ಬೆಲೆಯೇ ಇಲ್ಲ. ಹುಟ್ಟಿದಾಗಿನಿಂದ ತಾಯಿಯನ್ನೇ ನೋಡದ ಮಗನೊಬ್ಬ, ಮೊದಲ ಬಾರಿ ತಾಯಿ ಭೇಟಿಯಾಗಿದ್ದಲ್ಲದೆ ಆಕೆ ಜೊತೆ ಸಂಭೋಗ ಬೆಳೆಸಿದ್ದಾನೆ.
ತಾಯಿ (Mother ) – ಮಗ (Son) ನ ಬಾಂಧವ್ಯ ಪ್ರಪಂಚದಲ್ಲಿಯೇ ಅತ್ಯಂತ ಆತ್ಮೀಯ ಮತ್ತು ಪವಿತ್ರವಾದದ್ದು. ಆದರೆ ಇತ್ತೀಚಿನ ದಿನಗಳಲ್ಲಿ ಚಿತ್ರ – ವಿಚಿತ್ರ ಸುದ್ದಿಗಳು ಕೇಳಿ ಬರ್ತಿವೆ. ಮತ್ತೊಂದು ಸುದ್ದಿ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ತಾಯಿಯನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಹಾಗೆಯೇ ತಾಯಿ – ಮಗನ ಮಧ್ಯೆ ಶಾರೀರಿಕ ಸಂಬಂಧ (Physical Relationship ) ಬೆಳೆಯುವ ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಆದ್ರೆ ಇಲ್ಲೊಬ್ಬ ಮಗ, ತಾಯಿ ಜೊತೆ ಶಾರೀರಿಕ ಸಂಬಂಧ ಬೆಳೆಸಿದ್ದಾನೆ. ಅಷ್ಟೇ ಅಲ್ಲ ಇದೇ ಕಾರಣಕ್ಕೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದಾನೆ. ತಾಯಿ ಜೊತೆ ಸಂಬಂಧ ಬೆಳೆಸುವ ಜೊತೆಗೆ ಈ ಪ್ರೀತಿಯ ನೆನಪಿಗಾಗಿ ಮಗುವಿಗೆ ಜನ್ಮ ನೀಡುವ ಆಲೋಚನೆ ಕೂಡ ಮಾಡಿದ್ದಾನೆ. ತಾಯಿ ಜೊತೆ ನಡೆಸಿದ ಸಂಬಂಧವನ್ನು ಮೈಂಡ್ ಬ್ಲೋವಿಂಗ್ ಎಂದಿದ್ದಾನೆ.
ಮತ್ತೆ ಸಿಕ್ಕ ದತ್ತು ಪಡೆದ ಮಗ : ಬೆನ್ ಫೋರ್ಡ್ ಗೆ 32 ವರ್ಷ. ಲಂಡನ್‌ನಲ್ಲಿ ಬೆಳೆದ ಅವನ ತಾಯಿ ಹೆಸರು ಕಿಮ್ ವೆಸ್ಟ್. ಆಕೆಗೆ 51 ವರ್ಷ. ಮಿಚಿಗನ್ ನಿವಾಸಿ 51 ವರ್ಷದ ಕಿಮ್ ವೆಸ್ಟ್ ಸುಮಾರು 30 ವರ್ಷಗಳ ಹಿಂದೆ ತನ್ನ ಎರಡು ವರ್ಷದ ಮಗನನ್ನು ಯಾರಿಗೋ ದತ್ತು ನೀಡಿದ್ದಳು. ಕ್ಯಾಲಿಫೋರ್ನಿಯಾದಲ್ಲಿ ವಾಸವಾಗಿದ್ದ ಕಿಮ್ ವೆಸ್ಟ್ ಗೆ 19ನೇ ವರ್ಷದಲ್ಲಿಯೇ ಬೆನ್ ಹುಟ್ಟಿದ್ದ. ಆದ್ರೆ ದತ್ತು ನೀಡಿ, ಆತನಿಂದ ಸಂಪೂರ್ಣ ಬೇರೆಯಾಗಿದ್ದಳು.
ಮದುವೆಯಾದ್ಮೇಲೆ ಗೊತ್ತಾಯ್ತು ಹೆಂಡತಿಯ ಮಾಜಿ ಬಾಯ್‌ಫ್ರೆಂಡ್ ಜತೆ ಲೈಂಗಿಕ ಸಂಬಂಧ
30 ವರ್ಷದ ನಂತ್ರ ಸಿಕ್ಕ ತಾಯಿ : ತಾಯಿಯಿಂದ ಬೇರ್ಪಟ್ಟು ದೊಡ್ಡವನಾದ ಬೆನ್, ಬೆಳೆದು ಮದುವೆಯಾಗಿದ್ದ. ಅವನು ತನ್ನ ಹೆಂಡತಿಯೊಂದಿಗೆ ಸಂತೋಷದ ಜೀವನವನ್ನು ನಡೆಸುತ್ತಿದ್ದ.. ಬಾಲ್ಯದಿಂದಲೂ ತನ್ನ ತಾಯಿಯನ್ನು ಹುಡುಕುತ್ತಿದ್ದ ಬೆನ್ ಗೆ 30 ವರ್ಷಗಳ ನಂತ್ರ ತಾಯಿಯ ಬಗ್ಗೆ ಮಾಹಿತಿ ಸಿಕ್ಕಿದೆ. ತಾಯಿಯ ವಿಳಾಸ ಪಡೆದ ಆತ ಪತ್ರವೊಂದನ್ನು ಬರೆದಿದ್ದಾನೆ.
ಹೊಟೇಲ್ ನಲ್ಲಿ ತಾಯಿಯ ಭೇಟಿ : ತಾಯಿಗೆ ಪತ್ರ ಬರೆದ ಬೆನ್, ಹೊಟೇಲ್ ನಲ್ಲಿ ಸಿಗುವಂತೆ ವಿನಂತಿ ಮಾಡಿದ್ದ ಎನ್ನಲಾಗಿದೆ. ಕಿಮ್ ವೆಸ್ಟ್ ಕೂಡ ಮಗನನ್ನು ಭೇಟಿಯಾಗುವ ಸಂತೋಷದಲ್ಲಿದ್ದಳು. ಕಿಮ್ ಕೂಡ ಬೆನ್ನ ಭೇಟಿಗಾಗಿ ಹೊಟೇಲ್ ಗೆ ಬಂದಳು. 2016ರಲ್ಲಿ ಭೇಟಿಯಾದ ಅವರ ಸಂಬಂಧ ಮಿತಿ ಮೀರಿತ್ತು. 30 ವರ್ಷಗಳ ನಂತರ ಭೇಟಿಯಾದ ತಾಯಿ ಹಾಗೂ ಮಗ ಭ್ರಮೆಗೆ ಒಳಗಾಗಿದ್ದರು. ಇಬ್ಬರೂ ಹೋಟೆಲ್‌ನಲ್ಲಿಯೇ ದೈಹಿಕ ಸಂಬಂಧ ಬೆಳೆಸಿದ್ದರು. ಹೊಟೇಲ್ ನಲ್ಲಿ ಭೇಟಿಯಾದ ತಕ್ಷಣ ಮದ್ಯಪಾನ ಮಾಡಿದ್ವಿ. ನಂತ್ರ ಮುತ್ತಿಟ್ಟುಕೊಂಡ್ವಿ. ಇಬ್ಬರ ಮಧ್ಯೆ ಆಗ್ಲೇ ಬೇರೊಂದು ಸಂಬಂಧ ಶುರುವಾಗಿತ್ತು. ಇಬ್ಬರ ಭಾವನೆಗಳು ಬೇರೆಯಾಗಿದ್ದವು ಎಂದು ಬೆನ್ ಹೇಳಿದ್ದಾನೆ.
ಪತ್ನಿಗೆ ವಿಷ್ಯ ತಿಳಿಸಿದ್ದ ಬೆನ್ : ಸಂಭೋಗ ಬೆಳೆಸಿದ ಮೂರು ದಿನಗಳ ನಂತರ ತಾಯಿ ಮತ್ತು ಮಗನ ನಡುವೆ ಬಿರುಕು ಉಂಟಾಗಿತ್ತು. ಆ ನಂತ್ರ ಬೆನ್ ಇದನ್ನು ತನ್ನ ಹೆಂಡತಿಗೆ ಹೇಳಿದ್ದಾನೆ. ಪತ್ನಿ ವಿಕ್ಟೋರಿಯಾ ಈಗಾಗಲೇ ತಾಯಿ – ಮಗನ ನಿಕಟ ಸಂಬಂಧದ ಬಗ್ಗೆ ಚಿಂತಿತರಾಗಿದ್ದಳಂತೆ. ಆದರೆ ಕಿಮ್ ಮದುವೆಯ ಬಗ್ಗೆ ಅಸೂಯೆ ಹೊಂದಿದ್ದಳಂತೆ.
Parenting Tips : ಮಕ್ಕಳ ಕಣ್ಣಿನ ಮೇಲಿರಲಿ ಪಾಲಕರ ಗಮನ
ವಿಕ್ಟೋರಿಯಾ ನನ್ನನ್ನು ಸ್ವಾಗತಿಸಿದ್ದಳು. ಆದರೆ ನನಗೆ ಇದು ಇಷ್ಟವಿರಲಿಲ್ಲ. ನನಗೆ ಸ್ಪರ್ಧೆಯ ಭಾವನೆ ಶುರುವಾಗಿತ್ತು. ಮಗ ಬೆನ್, ವಿಕ್ಟೋರಿಯಾ ಮುಟ್ಟಿದಾಗ ಅಸೂಯೆಯಾಗ್ತಿತ್ತು ಎಂದು ಕಿಮ್ ಹೇಳಿದ್ದಾಳೆ. ಬೆನ್ ಜೊತೆ ಸಮಯ ಕಳೆಯುವುದನ್ನು ಇಷ್ಟಪಡದ ವಿಕ್ಟೋರಿಯಾ, ಅವನಿಗೆ ನಿರಂತರ ಕರೆ ಮಾಡ್ತಿದ್ದಳಂತೆ. ಕಿಮ್ ಜೊತೆ ಬೆನ್ ಇರುವುದು ನನಗೆ ನೋವುಂಟು ಮಾಡ್ತಿದೆ ಎಂಬುದನ್ನು ವಿಕ್ಟೋರಿಯಾ ಒಪ್ಪಿಕೊಂಡಿದ್ದಳಂತೆ. ಕಿಮ್ ಳನ್ನು, ವಿಕ್ಟೋರಿಯಾ ಮಮ್ಮಿ ಗರ್ಲ್ ಫ್ರೆಂಡ್ ಎಂದು ಕರೆಯುತ್ತಿದ್ದಳಂತೆ.
ಕಿಮ್ ಮತ್ತು ಬೆನ್ ಪರಸ್ಪರ ತಮ್ಮ ಸಂಬಂಧವನ್ನು 'ಜೆನೆಟಿಕ್ ಲೈಂಗಿಕ ಆಕರ್ಷಣೆ' ಎಂದು ಹೇಳಿದ್ದಾರೆ. ಇಬ್ಬರೂ ಒಟ್ಟಿಗಿರುವ ನಿರ್ಧಾರ ಕೈಗೊಂಡಿದ್ದರು. ನಿನ್ನ ಜೊತೆ ಸಂಬಂಧ ಬೆಳೆಸುವಾಗ ನನಗೆ ಕಿಮ್ ನೆನಪಾಗ್ತಾಳೆ. ಅವಳಿಗೆ ಮುತ್ತಿಡುವ ಕಲ್ಪನೆಯಲ್ಲಿ ನಿನಗೆ ಮುತ್ತಿಡ್ತೇನೆಂದು ವಿಕ್ಟೋರಿಯಾಗೆ ಬೆನ್ ಹೇಳಿದ್ದನಂತೆ. ನಂತ್ರ ಬೆನ್ ವಿಚ್ಛೇದನ ನೀಡಿದ್ದಾನಂತೆ. ಅನೇಕ ದಿನಗಳ ಕಾಲ ಲಿವ್ ಇನ್ ನಲ್ಲಿದ್ದರೂ ಅದನ್ನು ಬಹಿರಂಗಪಡಿಸದ ಜೋಡಿ ನಂತ್ರ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಈಗ ತಾಯಿ – ಮಗ ಒಟ್ಟಿಗೆ ಇದ್ದಾರಾ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ.