International Kissing Day: ಚುಂಬಕ ಶಕ್ತಿ ಅನ್ನೋದು ಸುಮ್ಮನೆಯಲ್ಲ!

ಚುಂಬನ ಎಂದಾಗ ಅದನ್ನು ದೈಹಿಕ ಸಂಪರ್ಕಕ್ಕೆ ಥಳುಕು ಹಾಕುವವರೇ ಹೆಚ್ಚು. ಆದ್ರೆ ಮುತ್ತು ಬರೀ ಇಷ್ಟಕ್ಕೆ ಸೀಮಿತವಾಗಿಲ್ಲ. ಪ್ರತಿ ಮುತ್ತಿನಲ್ಲೂ ಅನೇಕ ಸಂಗತಿಗಳು ಅಡಗಿವೆ. ಮುತ್ತು ನೀಡುವ ಮೊದಲು ಅದನ್ನು ತಿಳಿದುಕೊಳ್ಳಬೇಕು.
 

Different Types Of Kisses And Their Meaning

ಜುಲೈ 6 ರಂದು ಅಂತರ್ ರಾಷ್ಟ್ರೀಯ ಕಿಸ್ಸಿಂಗ್ ಡೇ (Kissing Day ) ಆಚರಿಸಲಾಗುತ್ತದೆ.  ಫೆಬ್ರವರಿ 13 ರಂದು ಪ್ರೇಮಿ (Lover) ಗಳ ವಾರದಲ್ಲಿ ಕೂಡ ಕಿಸ್ಸಿಂಗ್ ಡೇ (Kissing Day) ಆಚರಿಸಲಾಗುತ್ತದೆ. ಆದರೆ ಇದರ ಹೊರತಾಗಿ ಜುಲೈ 6ನೇ ತಾರೀಕನ್ನು ಅಂತರಾಷ್ಟ್ರೀಯ ಚುಂಬನ ದಿನವೆಂದು  ಆಚರಿಸಲಾಗುತ್ತದೆ. ವರ್ಷಕ್ಕೆ ಎರಡು ಬಾರಿ ಈ ದಿನವನ್ನು ಆಚರಿಸುವ ಹಿಂದಿನ ಕಾರಣವೆಂದರೆ ಆರೋಗ್ಯಕರ ರೀತಿಯಲ್ಲಿ ಚುಂಬನವನ್ನು ಉತ್ತೇಜಿಸುವುದು. ಚುಂಬನವು ಕೇವಲ ದೈಹಿಕ ಆಕರ್ಷಣೆಗೆ ಮಾತ್ರ ಸಂಬಂಧಿಸಿಲ್ಲ. ಭಾವನೆ (Emotions) ವ್ಯಕ್ತಪಡಿಸಲು ಹಾಗೂ ಆರೋಗ್ಯ (Health) ಕ್ಕೆ ಇದು ಒಳ್ಳೆಯದು. ಪ್ರಪಂಚದ ಅನೇಕ ದೇಶಗಳಲ್ಲಿ ಕಿಸ್ಸಿಂಗ್ ಡೇ ಆಚರಿಸಲಾಗುತ್ತದೆ.  ಮುತ್ತುಗಳಲ್ಲಿ ಹಲವು ವಿಧಗಳಿವೆ. ವ್ಯಕ್ತಿ ನೀಡುವ ಮುತ್ತಿನ ಮೂಲಕವೇ ಆತನ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು. ದಂಪತಿ ವಿಷ್ಯಕ್ಕೆ ಬಂದ್ರೆ ಸಂಬಂಧ ಯಾವ ಹಂತದಲ್ಲಿದೆ ಎನ್ನುವುದ್ರ ಮೇಲೆ ನೀವು ಚುಂಬಿಸುವ ವಿಧಾನವನ್ನು ಬದಲಿಸಿಕೊಳ್ಳಬೇಕು. ಆಗ ನಿಮ್ಮ ನಿಜವಾದ ಭಾವನೆ ಸಂಗಾತಿಗೆ ಅರ್ಥವಾಗುತ್ತದೆ. ಇಲ್ಲವೆಂದ್ರೆ ಸಮಸ್ಯೆ  ಎದುರಾಗುತ್ತದೆ. ಕಿಸ್ಸಿಂಗ್ ಡೇ ಪ್ರಯುಕ್ತ ನಾವಿಂದು ಚುಂಬನದ ಪ್ರಕಾರ ಹಾಗೂ ಅದರ ಅರ್ಥವನ್ನು ಹೇಳ್ತೇವೆ. 

ಚುಂಬನದ ವಿಧಗಳು : 

ಹಣೆಯ ಮೇಲೆ ಮುತ್ತು : ಆಗಾಗ್ಗೆ ತಾಯಿ  ತನ್ನ ಮಗುವನ್ನು  ಮುದ್ದಿಸುವಾಗ  ಹಣೆಯ ಮೇಲೆ ಚುಂಬಿಸುವುದನ್ನು ನೀವು ನೋಡಿರಬಹುದು. ನೀವೂ ನೀಡಿರ್ತೀರಿ. ಹಣೆಯ ಮೇಲೆ ಚುಂಬನ ಎಂದರೆ ಮುರಿಯಲಾಗದ ಮತ್ತು ಆಳವಾದ ಸಂಬಂಧ ಎಂಬುದನ್ನು ಸೂಚಿಸುತ್ತದೆ. ಹಣೆಯ ಮೇಲೆ ಮುತ್ತು ನೀಡುವುದು ಆಳವಾದ ಸಂಬಂಧದ ಸಂಕೇತವಾಗಿದೆ. 

RELATIONSHIP TIPS: ಸಂಗಾತಿ ಜೊತೆ ವಾರಾಂತ್ಯ ರೊಮ್ಯಾಂಟಿಕ್ ಆಗಿರ್ಬೇಕಾ?

ಕೈಗೆ ಕಿಸ್ : ಯಾರಾದ್ರೂ ನಿಮ್ಮ ಕೈಗೆ ಮುತ್ತಿಟ್ರೆ ಅವರು ನಿಮ್ಮನ್ನು ಗೌರವಿಸುತ್ತಾರೆ ಎಂದರ್ಥ. ಮನೆಯ ಮಕ್ಕಳು ತಮ್ಮ ತಂದೆ-ತಾಯಿ ಅಥವಾ ಹಿರಿಯರ ಕೈಗೆ ಮುತ್ತಿಟ್ಟು ನಮಸ್ಕರಿಸಿ ಆಶೀರ್ವಾದ ಪಡೆಯುವುದು ಟರ್ಕಿಯ ಸಂಪ್ರದಾಯ. ಸ್ನೇಹಿತರು ಸಹ ಕೈ ಚುಂಬಿಸಿ ಗೌರವ ವ್ಯಕ್ತಪಡಿಸುತ್ತಾರೆ.

ಕಿವಿಗೆ ಚುಂಬನ : ಆಗಾಗ್ಗೆ ದಂಪತಿ  ಪರಸ್ಪರ ಕಿವಿಗೆ ಚುಂಬಿಸುತ್ತಾರೆ. ಇದನ್ನು ಇಯರ್ಲೋಬ್ ಕಿಸ್ ಎಂದು ಕರೆಯಲಾಗುತ್ತದೆ. ಇದೊಂದು ರೊಮ್ಯಾಂಟಿಕ್ ಕಿಸ್. ಸಂಗಾತಿ ಕಿವಿಗೆ ಮುತ್ತಿಡುವ ಮೂಲಕ ಸಂಗಾತಿಯನ್ನು ಪ್ರಣಯಕ್ಕೆ ಉತ್ತೇಜಿಸುವುದಾಗಿದೆ.  

ಹಿಂದಿನಿಂದ ಬಂದು ಕಿಸ್ : ನಿಮ್ಮ ಸಂಗಾತಿ ಹಿಂದಿನಿಂದ ಬಂದು ನಿಮ್ಮನ್ನು ತೋಳುಗಳಲ್ಲಿ ಹಿಡಿದುಕೊಂಡು ಚುಂಬಿಸಿದಾಗ ಅದನ್ನು ಸ್ಪೈಡರ್ ಕಿಸ್ ಎಂದು ಕರೆಯಲಾಗುತ್ತದೆ. ಸಂಗಾತಿ ಹಿಂದಿನಿಂದ ಮುತ್ತು ಕೊಟ್ಟರೆ ಇಬ್ಬರ ನಡುವೆ ಬಾಂಧವ್ಯ ಜಾಸ್ತಿ ಇದೆ ಎಂದರ್ಥ.  

ಫ್ಲೈಯಿಂಗ್ ಕಿಸ್ (Flying Kiss) : ಯಾರಾದರೂ ನಿಮ್ಮನ್ನು ಮುಟ್ಟದೆ ದೂರದಿಂದ ಚುಂಬಿಸುವಂತೆ ಸನ್ನೆ ಮಾಡಿದರೆ ಅದನ್ನು ಫ್ಲೈಯಿಂಗ್ ಕಿಸ್ ಎಂದು ಕರೆಯಲಾಗುತ್ತದೆ. ಈ ರೀತಿಯ ಕಿಸ್ ದಂಪತಿ ಮಾತ್ರವಲ್ಲದೆ ಇತರ ಸಂಬಂಧಗಳಲ್ಲಿಯೂ ನೀಡಬಹುದು. ಫ್ಲೈಯಿಂಗ್ ಕಿಸ್ ಎಂದರೆ ಮಿಸ್ ಯು ಅಥವಾ ವಿದಾಯ ಹೇಳು ಎಂದರ್ಥ. 

ಧ್ಯಾನದಿಂದಲೂ ಸಾಧಿಸಲಾಗದ್ದನ್ನು ಸೆಕ್ಸ್‌ನಿಂದ ಸಾಧಿಸಲು ಸಾಧ್ಯ: Sex ಬಗ್ಗೆ ಓಶೋ ರಜನೀಶ್‌ ಹೇಳಿದ್ದೇನು?

ಕೆನ್ನೆಗೆ ಮುತ್ತು : ಜನರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪರಸ್ಪರ ಕೆನ್ನೆಯ ಮೇಲೆ ಮುತ್ತಿಡುತ್ತಾರೆ. ದಂಪತಿ (Couple), ಸ್ನೇಹಿತರು (Friends), ಕುಟುಂಬ ಸದಸ್ಯರು (Family Members) ಪರಸ್ಪರ ಕೆನ್ನೆಯ ಮೇಲೆ ಕಿಸ್ ಮಾಡಬಹುದು. ಕೆನ್ನೆಗೆ ಕಿಸ್ ನೀಡುವುದು ಪ್ರೀತಿಯನ್ನು ವ್ಯಕ್ತಪಡಿಸುತ್ತದೆ.   

ಎಸ್ಕಿಮೊ ಕಿಸ್ (Eskimo Kiss) : ಚುಂಬಿಸುತ್ತಿರುವಾಗ ದಂಪತಿ ಒಬ್ಬರಿಗೊಬ್ಬರು ಹತ್ತಿರ ಬಂದಾಗ, ದಂಪತಿ ಮೂಗು ಪರಸ್ಪರ ಟಚ್ ಆಗುವುದನ್ನು  ಎಸ್ಕಿಮೋ ಕಿಸ್ ಎಂದು ಕರೆಯಲಾಗುತ್ತದೆ. ಇದು ದಂಪತಿ  ನಡುವಿನ ಪ್ರಣಯವನ್ನು ಹೆಚ್ಚಿಸುತ್ತದೆ. 

ತುಟಿಗಳ ಮೇಲೆ ಚುಂಬನ : ಪ್ರೀತಿ ಮತ್ತು ಪ್ರೀತಿಯ ಭಾವನೆಯನ್ನು ವ್ಯಕ್ತಪಡಿಸಲು ದಂಪತಿ ತುಟಿ ಮೇಲೆ ಚುಂಬಿಸುತ್ತಾರೆ. ಈ ಮುತ್ತು ಕೇವಲ ಸಂಗಾತಿ ಮಧ್ಯೆ ನಡೆಯಬೇಕು. 

 

Different Types Of Kisses And Their Meaning

 

Latest Videos
Follow Us:
Download App:
  • android
  • ios