Relationship Tips: ಸಂಗಾತಿ ಜೊತೆ ವಾರಾಂತ್ಯ ರೊಮ್ಯಾಂಟಿಕ್ ಆಗಿರ್ಬೇಕಾ?
ವಾರವಿಡಿ ಕೆಲಸ.. ಸಂಗಾತಿ ಜೊತೆ ಮಾತನಾಡಲೂ ಸಮಯವಿಲ್ಲ ಎನ್ನುವವರಿಗೆ ಪ್ರೀತಿ ಮಾಡಲು ವಾರಾಂತ್ಯವಿದೆ. ವೀಕೆಂಡ್ ನಿಮ್ಮಿಷ್ಟದಂತೆ ಕಳೆಯಬಹುದು. ಇಬ್ಬರ ಮಧ್ಯೆ ರೊಮ್ಯಾನ್ಸ್ ಹೆಚ್ಚಾಗ್ಬೇಕೆಂದ್ರೆ ವಾರಾಂತ್ಯದಲ್ಲಿ ಕೆಲ ಪ್ಲಾನ್ ಮಾಡ್ಬೇಕು.
ಕೆಲಸ (Work) ದ ಒತ್ತಡ (Stress) ದಲ್ಲಿ ಜನರಿಗೆ ಬಿಡುವು ಸಿಗ್ತಿಲ್ಲ. ತರಾತುರಿಯ ಜೀವನಶೈಲಿ (Lifestyle) ಯಿಂದಾಗಿ ದಂಪತಿಗೆ ಪರಸ್ಪರ ಸಮಯ ಸಿಗುತ್ತಿಲ್ಲ. ಕಚೇರಿ ಕೆಲಸ ಮತ್ತು ಕುಟುಂಬದ ಕೆಲಸಗಳಿಂದಾಗಿ ಸಂಬಂಧದಲ್ಲಿ ಪ್ರಣಯ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದಾಗ್ಯೂ, ಕೆಲವು ಸಣ್ಣ ಉಪಾಯಗಳನ್ನು ಮಾಡುವ ಮೂಲಕ, ನೀವು ಸಂಬಂಧದಲ್ಲಿ ಪ್ರೀತಿ ಮತ್ತು ಉತ್ಸಾಹವನ್ನು ಕಾಪಾಡಿಕೊಳ್ಳಬಹುದು. ವಾರ ಪೂರ್ತಿ ನೀವು ಕೆಲಸದಲ್ಲಿದ್ದೀರಿ ಎಂದಾದರೆ ಸಂಗಾತಿ ಜೊತೆ ಸಮಯ ಕಳೆಯೋದು ಅಸಾಧ್ಯವಾದ ಮಾತು. ಆದರೆ ವಾರದ ಕೊನೆಯಲ್ಲಿ ಅಂದ್ರೆ ವೀಕೆಂಡ್ ನಲ್ಲ ಸಂಗಾತಿ ಜೊತೆ ನೀವು ಸ್ಮರಣೀಯ ಸಮಯವನ್ನು ಕಳೆಯಬಹುದು. ಇದು ಮಳೆಗಾಲ. ಈ ಋತುವಿನಲ್ಲಿ ಸಂಗಾತಿಯೊಂದಿಗೆ ಸಮಯ ಕಳೆಯುವುದು ಹೆಚ್ಚು ರೋಮ್ಯಾಂಟಿಕ್ ಆಗಿರುತ್ತೆ. ವಿವಾಹಿತ ದಂಪತಿ ಅಥವಾ ಪ್ರೇಮಿಗಳು ವೀಕೆಂಡ್‌ನಲ್ಲಿ ವಿಶೇಷ ರಜಾ ದಿನಗಳನ್ನು ಸಂಗಾತಿ ಜೊತೆ ಕಳೆಯಲು ಕೆಲವು ಸುಲಭ ಸಲಹೆಗಳನ್ನು ನಾವು ನಿಮಗೆ ಹೇಳ್ತೇವೆ.
ವೀಕೆಂಡ್ (Weekend) ನಲ್ಲಿ ಸಂಗಾತಿ ಜೊತೆ ಹೀಗೆ ಸಮಯ ಕಳೆಯಿರಿ :
ಸಂಗಾತಿ ಜೊತೆ ಸುತ್ತಾಟ : ವಾರಾಂತ್ಯದಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಪ್ರವಾಸಕ್ಕೆ ಹೋಗಬಹುದು. ವಾರಾಂತ್ಯದಲ್ಲಿ ದಂಪತಿ ಲಾಂಗ್ ಡ್ರೈವ್, ವಾಟರ್ ಪಾರ್ಕ್ ಅಥವಾ ಯಾವುದೇ ಹತ್ತಿರದ ಗಿರಿಧಾಮಕ್ಕೆ ಹೋಗುವ ಮೂಲಕ ಪರಸ್ಪರ ಸಮಯ ಕಳೆಯಬಹುದು. ಪ್ರವಾಸದಲ್ಲಿ ನೀವು ನಗರದಿಂದ ಹೊರಗೆ ಹೋಗಲು ಸಾಧ್ಯವಾಗದಿದ್ದರೆ, ನಿಮ್ಮ ಸಂಗಾತಿಯೊಂದಿಗೆ ನಗರದಲ್ಲಿಯೇ ಹ್ಯಾಂಗ್ ಔಟ್ ಮಾಡಿ. ಪಾರ್ಕ್ ಗೆ ಹೋಗಬಹುದು. ಇಲ್ಲವೆ ಹೊರಗೆ ಊಟಕ್ಕೆ ಪ್ಲಾನ್ ಮಾಡ್ಬಹುದು. ಸಿನಿಮಾ ವೀಕ್ಷಣೆಗೆ ಹೋಗ್ಬಹುದು. ಇಲ್ಲವೆ ಶಾಪಿಂಗ್ ಹೆಸರಿನಲ್ಲಿ ಮಾಲ್ ಸುತ್ತಾಡಬಹುದು.
ವಯಸ್ಸಾಯಿತು ಮೂವತ್ತು, ತರುತ್ತಾ ಸೆಕ್ಸ್ ಲೈಫಿಗೆ ಆಪತ್ತು?
ಒಟ್ಟಿಗೆ ಅಡುಗೆ ಮಾಡಿ ಮಜಾ ಮಾಡಿ (Cook Together) : ವಾರವಿಡಿ ಸುತ್ತಾಡಿ ಸುತ್ತಾಗಿರುವ ಅನೇಕರು ವಾರಾಂತ್ಯದಲ್ಲಿ ಮನೆಯಲ್ಲಿ ಇರಲು ಬಯಸ್ತಾರೆ. ನೀವೂ ಅವರಲ್ಲಿ ಒಬ್ಬರಾಗಿದ್ದರೆ ನೀವು ಮನೆಯಲ್ಲಿಯೇ ಸಂಗಾತಿ ಜೊತೆ ಒಂದಿಷ್ಟು ಸಮಯ ಕಳೆಯಬಹುದು. ಸಂಗಾತಿ ಜೊತೆ ಅಡುಗೆ ಮನೆಗೆ ಹೋಗಿ ಅವರಿಗೆ ನೆರವಾಗಬಹುದು. ಇಬ್ಬರು ಸೇರಿ ರುಚಿ ರುಚಿ ಅಡುಗೆ ತಯಾರಿಸಬಹುದು. ಇದರಿಂದ ಇಬ್ಬರ ನಡುವೆ ಪ್ರೀತಿ ಹೆಚ್ಚುತ್ತದೆ ಮತ್ತು ಹೆಚ್ಚು ಸಮಯ ಕಳೆಯುವ ಅವಕಾಶವಿರುತ್ತದೆ. ಸಂಗಾತಿಗಾಗಿ ಏನಾದರೂ ಸಿಹಿ ಮಾಡಬಹುದು.
ಸಂಗಾತಿ ಜೊತೆ ಮಾತನಾಡಿ : ವಾರ ಪೂರ್ತಿ ಕೆಲಸದ ಕಾರಣದಿಂದಾಗಿ ನಿಮ್ಮಿಬ್ಬರ ನಡುವೆ ಯಾವುದೇ ಸಂವಹನ ಇಲ್ಲದಿರಬಹುದು. ಆದ್ದರಿಂದ, ಸಂಗಾತಿಗೆ ವಾರಾಂತ್ಯದಲ್ಲಿ ರಜೆ ಇದ್ದಾಗ, ಇಬ್ಬರೂ ಸಂಜೆ ಬಾಲ್ಕನಿ ಅಥವಾ ಟೆರೇಸ್‌ನಲ್ಲಿ ಚಹಾ ಅಥವಾ ಕಾಫಿಯೊಂದಿಗೆ ಆಹ್ಲಾದಕರ ವಾತಾವರಣದಲ್ಲಿ ಕುಳಿತು ಮುಕ್ತವಾಗಿ ಮಾತನಾಡಬಹುದು. ಆದ್ರೆ ಮಾತು ದೂರಾಗಿರಬಾರದು. ಇಲ್ಲವೆ ಮಾತು ವಾದಕ್ಕೆ ಇಳಿಯಬಾರದು. ಇಬ್ಬರು ಪರಸ್ಪರ ಪ್ರೀತಿ ಹಂಚಿಕೊಳ್ಳಬೇಕು. ಮಾತು ವಾದವಾದ್ರೆ ಅದು ಜಗಳಕ್ಕೆ ಕಾರಣವಾಗುತ್ತದೆ.
ಪಾರ್ಟಿ (Party) : ನೀವಿಬ್ಬರೂ ಪರಸ್ಪರ ಸಮಯ ಕಳೆಯಲು ಮನೆಯಲ್ಲಿ ಡಿನ್ನರ್ ಅಥವಾ ಡ್ಯಾನ್ಸ್ ಪಾರ್ಟಿ ಏರ್ಪಡಿಸಬಹುದು. ನಿಮಗಿಷ್ಟವಿದ್ರೆ ನೀವಿಬ್ಬರೇ ಈ ಪಾರ್ಟಿ ಎಂಜಾಯ್ ಮಾಡ್ಬಹುದು. ಇಲ್ಲವೆಂದ್ರೆ ನಿಮ್ಮಿಷ್ಟದ ಸ್ನೇಹಿತರನ್ನು ಇದ್ರಲ್ಲಿ ಸೇರಿಸಿಕೊಳ್ಳಬಹುದು. ಕ್ಯಾಂಡಲ್ ಲೈಟ್ ಡಿನ್ನರ್ ಮತ್ತು ರೊಮ್ಯಾಂಟಿಕ್ ಹಾಡುಗಳನ್ನು ಹಾಡುವ ಮೂಲಕ ನೃತ್ಯ ಮಾಡಬಹುದು.
ವರನ ನೋಡಿ ಅಳಲು ಶುರು ಮಾಡಿದ ವಧು: ವಿಡಿಯೋ ವೈರಲ್
ಮನೆ ಕೆಲಸದಲ್ಲಿ ಸಹಾಯ : ವಾರಾಂತ್ಯದಲ್ಲಿ ಪತ್ನಿ ಮನೆ ಕೆಲಸ ಮಾಡ್ತಿದ್ದರೆ ಪತಿ ಟಿವಿ ನೋಡ್ತಿರುತ್ತಾನೆ ಎಂಬ ಆರೋಪವೊಂದಿದೆ. ಆಕೆ ಕೆಲಸ ಮಾಡುವಾಗ ನೀವು ಸುಮ್ಮನೆ ಕುಳಿತುಕೊಳ್ಳಬೇಡಿ. ಟಿವಿ ಅಥವಾ ಮೊಬೈಲ್ ನಿಂದ ದೂರವಿರಿ. ಆಕೆ ಕೆಲಸದಲ್ಲಿ ನೀವು ಸಹಾಯ ಮಾಡಿ. ಮನೆ ಸ್ವಚ್ಛಗೊಳಿಸುವ ಕೆಲಸವನ್ನು ಇಬ್ಬರು ಒಟ್ಟಿಗೆ ಮಾಡುವ ವೇಳೆ ಅದಕ್ಕೊಂದಿಷ್ಟು ರೋಮ್ಯಾನ್ಸ್ ಬೆರೆಸಿ.