ಧ್ಯಾನದಿಂದಲೂ ಸಾಧಿಸಲಾಗದ್ದನ್ನು ಸೆಕ್ಸ್‌ನಿಂದ ಸಾಧಿಸಲು ಸಾಧ್ಯ: Sex ಬಗ್ಗೆ ಓಶೋ ರಜನೀಶ್‌ ಹೇಳಿದ್ದೇನು?

Osho Rajneesh on sex: ಸೆಕ್ಸ್ ಅಂದ್ರೆ ಬರೀ ದೇಹದ ಹಸಿವಲ್ಲ. ಅದು ಅಲೌಕಿಕ, ಅಧ್ಯಾತ್ಮಿಕ ಅನುಭವವೂ ಹೌದು. ನಾವು ಅದನ್ನು ನೋಡಿ ಮೂಗು ಮುರಿಯಬೇಕಿಲ್ಲ. ಸೆಕ್ಸನ್ನು ನಾವು ಹೇಗೆ ಸ್ವಾಗತಿಸಬೇಕು ಗೊತ್ತಾ? ಏನಂತಾರೆ ಈ ಬಗ್ಗೆ 'ಸೆಕ್ಸ್ ಗುರು' ಎಂದೇ ಹೆಸರು ಪಡೆದ ಓಶೋ. 

What Osho Rajneesh tells about sex

ಅಧ್ಯಾತ್ಮಜೀವಿ ಓಶೋ (Spiritual Guru Osho Rajneesh) ಮಾತನಾಡದ ವಿಷಯಗಳೇ ಇಲ್ಲ. ಸಂಭೋಗದಿಂದ ಸಮಾಧಿಯವರೆಗೆ ಎಲ್ಲವನ್ನೂ ಅವರು ಸ್ಪರ್ಶಿಸಿದ್ದಾರೆ. ಅದರ ಬಗ್ಗೆ ಅರಿವು ಮೂಡಿಸುವ ಉಪನ್ಯಾಸಗಳನ್ನು ನೀಡಿದ್ದಾರೆ. ಅವರನ್ನು 'ಸೆಕ್ಸ್ ಗುರು' ಎಂದವರಿದ್ದಾರೆ. ಮುಕ್ತ ಕಾಮದ ಪ್ರತಿಪಾದಕ ಎಂದವರಿದ್ದಾರೆ. ಆದರೆ ಕಾಮ ನಮ್ಮ ಜೀವನದಲ್ಲಿ ಹೇಗೆ ತಳುಕು ಹಾಕಿಕೊಂಡಿದೆ, ಅದು ಏಕೆ ಮುಖ್ಯ ಎಂಬುದನ್ನು ಇವರಷ್ಟು ಚೆನ್ನಾಗಿ ವಿವರಿಸಿದವರು ಕಡಿಮೆ. 

ಸೆಕ್ಸ್ ಬಗ್ಗೆ ಅವರು ಹೇಳುತ್ತಾರೆ:     

ಲೈಂಗಿಕತೆ ಎಂದರೆ ಜೀವನದ ವಾಸ್ತವಿಕತೆ. ನಿಮ್ಮಲ್ಲಿ ಲೈಂಗಿಕತೆಯು ಹೆಚ್ಚು ಜೀವಂತವಾಗಿರುವ ಸಂಗತಿ. ಮನಸ್ಸು ಜೀವಂತವಲ್ಲ, ಅದು ಸತ್ತ ವಿಷಯ. ಅದಕ್ಕಾಗಿಯೇ ಮನಸ್ಸು ಯಾವಾಗಲೂ ಲೈಂಗಿಕತೆಗೆ ವಿರುದ್ಧವಾಗಿರುತ್ತದೆ. ಮನಸ್ಸು ಯಾವಾಗಲೂ ಸೆಕ್ಸನ್ನು ನಿಗ್ರಹಿಸಲು ಯತ್ನಿಸುತ್ತದೆ. ಲೈಂಗಿಕತೆಯು ಜೀವ ಶಕ್ತಿ. ಅದು ಹೋರಾಡುತ್ತಲೇ ಇರುತ್ತದೆ. ನೀವು ಸೆಕ್ಸ್ ಅನುಭವ ಪಡೆದಾಗ ಮನಸ್ಸು ನಿರಾಶೆಗೊಳ್ಳುತ್ತದೆ ಮತ್ತು ಹೇಳುತ್ತದೆ- "ಇದು ತಪ್ಪು. ಮತ್ತೆ ಇದನ್ನು ಮಾಡಬೇಡಿ'' ಎನ್ನುತ್ತದೆ. 

ಇದನ್ನೂ ಓದಿ: Sex Education: ಸೆಕ್ಸ್ ವೇಳೆ ಹೃದಯಾಘಾತವಾಗತ್ತೆ, ಅದಕ್ಕೆ ಮೂಲ ಕಾರಣ ಇಲ್ಲಿದೆ

ಮನಸ್ಸು ನೈತಿಕತೆಯ, ಶುದ್ಧತೆಯ, ಪುರೋಹಿತತನದ ಹಿಂದೆ ಬೀಳುತ್ತದೆ. ದೇಹವನ್ನು ಖಂಡಿಸುತ್ತದೆ. ಬದುಕಿರುವ ಎಲ್ಲವನ್ನೂ ಖಂಡಿಸುತ್ತದೆ. ಸತ್ತದ್ದನ್ನೆಲ್ಲ ಪೂಜಿಸುತ್ತದೆ. ಆದರೆ ಕಾಮವೇ ಹೆಚ್ಚು ಜೀವಂತವಾದುದು ಎಂಬುದನ್ನು ಮರೆಯಬೇಡಿ. ನಿಮ್ಮಲ್ಲಿನ ಜೀವಂತಿಕೆ ಬರುವುದೇ ಕಾಮದಿಂದ. ನೀವು ಅದರ ಮೂಲಕ ಹುಟ್ಟಿದ್ದೀರಿ. ನೀವು ಅದರ ಮೂಲಕ ಜನ್ಮ ನೀಡುತ್ತೀರಿ. ಎಲ್ಲಿ ಕಾಮವಿದೆಯೋ ಅಲ್ಲಿ ಜೀವವಿದೆ, ಜೀವನವಿದೆ. 

ಆದ್ದರಿಂದ ನಿಜವಾಗಿಯೂ ಸೆಕ್ಸ್ ನಿಮ್ಮಲ್ಲಿ ಸಂಭವಿಸುತ್ತದೆ. ವ್ಯಕ್ತಿಯು ಹೆಚ್ಚು ಲೈಂಗಿಕವಾಗಿದ್ದಾಗ ಹೆಚ್ಚು ಸೃಜನಶೀಲನಾಗಿರುತ್ತಾನೆ. ಹೆಚ್ಚು ಲೈಂಗಿಕವಾಗಿದ್ದಾಗ ಹೆಚ್ಚು ಬುದ್ಧಿವಂತನಾಗಿರುತ್ತಾನೆ. ಕಡಿಮೆ ಲೈಂಗಿಕ ಶಕ್ತಿ ಎಂದರೆ ಕಡಿಮೆ ಬುದ್ಧಿವಂತಿಕೆ ಎಂದೇ ಅರ್ಥ. ಏಕೆಂದರೆ ಲೈಂಗಿಕತೆ ಎಂದರೆ ನಿಮ್ಮ ದೇಹವನ್ನು ಮಾತ್ರವಲ್ಲ, ನಿಮ್ಮ ವಿರುದ್ಧ ಲಿಂಗದ ದೇಹವನ್ನು ಕೂಡ ಆಕರ್ಷಿಸುವ. ಬಹಿರಂಗಪಡಿಸುವ, ಒಲಿಸಿಕೊಳ್ಳುವ, ಬಳಲಿಸುವ ಆಳವಾದ ಹುಡುಕಾಟವಾಗಿದೆ.

ಪ್ರೀತಿಯನ್ನು ವ್ಯಕ್ತಪಡಿಸುವುದು ಹೇಗೆ? ದೇಹದ ಮೂಲಕವೇ ಆಗಿದೆ. ಮೊದಲು ದೇಹ ಪ್ರೀತಿಯ ಸ್ಪಂದನಗಳನ್ನು ಹೊರಸೂಸುತ್ತದೆ. ಬಳಿಕ ಮನಸ್ಸಿಗೆ ಅದು ತಾಕುತ್ತದೆ. ದೇಹದ ಸ್ಪಂದನವೇ ಸೆಕ್ಸ್ ಆಗುತ್ತದೆ. ಅದನ್ನು ಉನ್ನತ, ಆಳವಾದ, ಸೂಕ್ಷ್ಮವಾದ ಮನಸ್ಸಿನ ಮೂಲಕ ವ್ಯಕ್ತಪಡಿಸಿದರೆ ಅದನ್ನು ಪ್ರೀತಿ ಎಂದು ಕರೆಯಲಾಗುತ್ತದೆ. ಆತ್ಮದ ಮೂಲಕ ವ್ಯಕ್ತಪಡಿಸಿದರೆ ಅದು ಪ್ರಾರ್ಥನೆಯಾಗುತ್ತದೆ.

ಎಲ್ಲವೂ ಸರಿಯಾಗಿದ್ದರೆ, ಲೈಂಗಿಕತೆಯು ಸ್ವಾಭಾವಿಕವಾಗಿದ್ದರೆ, ಸಹಜವಾಗಿ ಹರಿಯುವ ನದಿಯಂತೆ ಇದ್ದರೆ ಅದು ಸುಂದರವಾದ ಅನುಭವ. ಏಕೆಂದರೆ ನೀವು ಅದರ ಮೂಲಕ ಎರಡನೇ ದೇಹವನ್ನು ನೊಡುತ್ತೀರಿ. ಲೈಂಗಿಕತೆಯಲ್ಲಿ ತುಂಬಾ ಆಳವಾಗಿ ಹೋದರೆ ನೀವು ಅದರಲ್ಲಿ ನಿಮ್ಮನ್ನು ಸಂಪೂರ್ಣವಾಗಿ ಮರೆತುಬಿಡುತ್ತೀರಿ. ಲೈಂಗಿಕತೆಯ ಸಂಪೂರ್ಣ ಪರಾಕಾಷ್ಠೆಯ ಅನುಭವ ಅಥವಾ ಆರ್ಗ್ಯಾಸಂ ಎಂಬುದು ನೀವು ಯೋಗದಲ್ಲಿ ಸಹ ಸಾಧಿಸಲು ಸಾಧ್ಯವಾಗದ ತುರೀಯಾವಸ್ಥೆಯಾಗಿದೆ. ಆಗ ನಿಮ್ಮ ಪ್ರಜ್ಞೆಯು ನಿಮ್ಮ ದೇಹವನ್ನೂ ಮೀರಿ ಬೇರೊಂದೇ ಆಯಾಮದಲ್ಲಿ ಇರುತ್ತದೆ. ಇದು ನಿಮ್ಮ ಪ್ರಜ್ಞೆಯನ್ನು ಉನ್ನತ ಹಂತಕ್ಕೆ ಒಯ್ಯುತ್ತದೆ.

ಇದನ್ನೂ ಓದಿ: ಗೆಳತಿಯೊಂದಿಗೆ ಸೆಕ್ಸ್ ನಡೆಸುತ್ತಿದ್ದಾಗ ಹೃದಯಾಘಾತ, 28 ವರ್ಷದ ವ್ಯಕ್ತಿ ಸಾವು!

ಆದರೆ ಲೈಂಗಿಕತೆಯು ವಿಫಲವಾದರೆ, ವ್ಯಕ್ತಿಗೆ ಸರಿಯಾದ ಸೆಕ್ಸ್ ಸಿಗದಿದ್ದರೆ ಏನಾಗುತ್ತದೆ? ಮನಸ್ಸಿನಲ್ಲಿ ಅನೇಕ ವಿಕೃತಿಗಳು ಸಂಭವಿಸುತ್ತವೆ. ಈ ವಿಕೃತಿಗಳು ದ್ವೇಷದಲ್ಲಿ ವ್ಯಕ್ತವಾಗುತ್ತವೆ. ದ್ವೇಷವೆಂದರೆ ಲೈಂಗಿಕತೆಯ ವೈಫಲ್ಯ, ಪ್ರೀತಿಯ ಶಕ್ತಿಯ ವೈಫಲ್ಯ, ಹಿಂಸೆ, ಹಣಕ್ಕಾಗಿ ಲಾಲಸೆ, ಅಹಂಕಾರಗಳ ನಿರಂತರ ಸಂಘರ್ಷ, ಯುದ್ಧ, ಕೊಳಕು ರಾಜಕೀಯ- ಇವೆಲ್ಲವೂ ಲೈಂಗಿಕ ವಿಕೃತಿಗಳು. 

ಹಾಗಿದ್ದರೆ ವ್ಯಕ್ತಿ ಏನು ಮಾಡಬೇಕು? ಸೆಕ್ಸನ್ನು ಸಹಜವಾಗಿ ಸ್ವೀಕರಿಸಬೇಕು. ಅದು ಬಂದಾಗ, ದೇಹ ಅದನ್ನು ಅಪೇಕ್ಷಿಸಿದಾಗ ಅದನ್ನು ನೀಡಬೇಕು. ಆದರೆ ನಿಮ್ಮ ಹಾಗೆಯೇ ನಿಮ್ಮ ಸಂಗಾತಿಗೂ ಅದು ಸಹಜವಾಗಿರಬೇಕು ಎಂಬುದನ್ನು ಮರೆಯುವಂತಿಲ್ಲ. ಇಬ್ಬರೂ ಕೂಡಿ ಏಕಕಾಲಕ್ಕೆ ಪಡೆಯುವ ತುರೀಯಾವಸ್ಥೇ ಅಥವಾ ಆರ್ಗ್ಯಾಸಂ ಎಂಬುದು ಇಬ್ಬರ ದೇಹಗಳನ್ನು ಮಾತ್ರವಲ್ಲ, ಪ್ರಜ್ಞೆ- ಮನಸ್ಸು ಎಲ್ಲವನ್ನೂ ಒಂದಾಗಿಸುತ್ತದೆ. ಹೀಗೆ ಒಂದಾಗುವ ಸಂಗಾತಿಗಳು ಜೀವನಪೂರ್ತಿ ಒಂದಾಗಿಸಲು ಶಕ್ತರಾಗಿರುತ್ತಾರೆ. ಇಬ್ಬರ ಮನಸ್ಸಿನ ಮಾತುಗಳು ಪರಸ್ಪರ ಹೇಳದೆಯೇ ಇಬ್ಬರಿಗೂ ತಿಳಿದುಬಿಡುತ್ತವೆ. 

Latest Videos
Follow Us:
Download App:
  • android
  • ios