ಹೆಂಡ್ತಿ ಪರಪುರುಷನ ಹಿಂದೆ ಹೋಗೋದು ಇದೇ ಕಾರಣಕ್ಕಂತೆ !

ಎಲ್ಲಾ ಸಂಬಂಧ (Relationship)ಗಳಲ್ಲೂ ಮೋಸ ಅನ್ನೋದು ಸಾಮಾನ್ಯವಾಗಿದೆ. ನಂಬಿಕೆಯಿಂದ ಒಂದು ಸಂಬಂಧ ಆರಂಭವಾದರೆ ಮೋಸದಿಂದ ಕೊನೆಗೊಳ್ಳುತ್ತದೆ. ಆದರೆ ಮೋಸ ಮಾಡಲು ಪ್ರತಿಯೊಬ್ಬರಿಗೂ ವಿಭಿನ್ನ ಕಾರಣಗಳಿರುತ್ತವೆ. ಅದರಲ್ಲೂ ಹೆಂಡ್ತಿ, ಗಂಡನನ್ನು ಮೋಸ  (Cheat) ಮಾಡೋಕೆ ಕಾರಣವಾಗೋದೇನು. ತಿಳ್ಕೊಳ್ಳೋಣ.

Reasons Why Women Cheat Men, According To Expert Vin

ಮೋಸ (Cheat) ಮಾಡುವುದರಲ್ಲಿ ಯಾರು ಮುಂದು. ಗಂಡಸರಾ (Men) ಅಥವಾ ಹೆಂಗಸರಾ (Women) ಎಂದು ಕೇಳಿದರೆ ಗೊಂದಲ ಎದುರಾಗಬಹುದು. ಯಾಕೆಂದರೆ ಎಲ್ಲಾ ರೀತಿಯ ಸಂಬಂಧ (Relationship)ದಲ್ಲಿ ಎಲ್ಲರೂ ಮೋಸ ಮಾಡುತ್ತಾರೆ. ಆದರೆ ಮೋಸ ಮಾಡುವ ರೀತಿ ವಿಭಿನ್ನವಾಗಿರುತ್ತದೆ ಅಷ್ಟೆ,. ಮಹಿಳೆಯರು ಪುರುಷರಿಗಿಂತ ಹೆಚ್ಚು ಅಥವಾ ವಿಭಿನ್ನವಾಗಿ ಮೋಸ ಮಾಡುತ್ತಾರೆಯೇ ಎಂಬ ಪ್ರಶ್ನೆ ಯಾವಾಗಲೂ ಎದುರಾಗಿದೆ. ಅತೃಪ್ತ ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಇರಲು ಇಷ್ಟಪಡುವುದಿಲ್ಲ. ಇತರ ಜನರೊಂದಿಗೆ ತಮ್ಮ ಅಗತ್ಯತೆಗಳು ಮತ್ತು ಆಸೆಗಳನ್ನು ಪೂರೈಸಲು ಯತ್ನಿಸುತ್ತಾರೆ. ಈ ಮೂಲಕ ಸಂಗಾತಿಗೆ ಮೋಸ ಮಾಡುತ್ತಾರೆ.. ಈ ಪ್ರಕ್ರಿಯೆಯಲ್ಲಿ,, ಮಹಿಳೆಯರು ಮೋಸ ಮಾಡುವುದರಲ್ಲಿ ವಿಭಿನ್ನ ಮಾರ್ಗ ಮತ್ತು ದೃಷ್ಟಿಕೋನವಿದೆ ಎಂದು ಪರಿಗಣಿಸಲಾಗಿದೆ. ಆ ಬಗ್ಗೆ ತಿಳಿಯೋಣ.

ಮಹಿಳೆಯರು ಹೇಗೆ ಮೋಸ ಮಾಡುತ್ತಾರೆ ?
ಮಹಿಳೆಯರು ತಮ್ಮ ಪತಿಗಿಂತ ಆರೋಗ್ಯಕರ, ಉತ್ತಮ ಆಯ್ಕೆಯನ್ನು ಕಂಡುಕೊಂಡಾಗ ಮೋಸ ಮಾಡುತ್ತಾರೆ ಎಂದು ಅನೇಕ ಸಂಶೋಧನೆಗಳು ಸೂಚಿಸುತ್ತವೆ. ಅವರು ಉತ್ತಮ ಸಮಯವನ್ನು ಹೊಂದಲು ಮತ್ತು ಅವರ ಪ್ರಸ್ತುತ ಮದುವೆಯ ಒತ್ತಡದಿಂದ ದೂರವಿರಲು ಆಯ್ದ ಅವಕಾಶಗಳನ್ನು ಹುಡುಕುತ್ತಾರೆ. ಇಂಥಾ ಸಂದರ್ಭದಲ್ಲಿ ಪರಪುರುಷನತ್ತ ಆಕರ್ಷಿತರಾಗುತ್ತಾರೆ ಎಂದು ತಿಳಿದುಬಂದಿದೆ. ಆದರೂ ಮಹಿಳೆಯರು ಹೇಗೆ ಮೋಸ ಮಾಡುತ್ತಾರೆ ಎಂಬುದರ ಬಗ್ಗೆ ಅವರು ಬಹಳ ವಿವೇಚನೆಯಿಂದ ಇರುತ್ತಾರೆ. ತಮ್ಮ ಗಂಡನ ನಡವಳಿಕೆಯ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿದ್ದಾರೆ, ಇದು ಅವರ ದಾಂಪತ್ಯ ದ್ರೋಹವನ್ನು ಮರೆಮಾಚಲು ಸುಲಭವಾಗುತ್ತದೆ. ಅವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಪತಿಯ ಮನಸ್ಥಿತಿಯನ್ನು ಉತ್ತಮವಾಗಿ ನಿಯಂತ್ರಿಸುತ್ತಾರೆ ಎಂದು ತಿಳಿದುಬಂದಿದೆ.

Real Story: ಬೆಡ್ ರೂಮಲ್ಲಿ ಪರಪುರುಷನ ಜೊತೆ ಪತ್ನಿ! ಇದಕ್ಕೆ ಕಾರಣ ನಾನೇ ಎಂದ ಪತಿ

ಮಹಿಳೆಯರು ದಾಂಪತ್ಯದಲ್ಲಿ ದ್ರೋಹ ಮಾಡಲು ಕಾರಣಗಳು
ಕೆಲವು ಮಹಿಳೆಯರು ತುಂಬಾ ಕಡಿಮೆ ಸ್ವಾಭಿಮಾನವನ್ನು ಹೊಂದಿರುತ್ತಾರೆ ಮತ್ತು ಆದ್ದರಿಂದ, ಅವರು ತಮ್ಮ ಸಂಬಂಧದ ಹೊರಗೆ ಮೌಲ್ಯಾಂಕನವನ್ನು ಹುಡುಕುತ್ತಾರೆ. ಕೆಲವು ಮಹಿಳೆಯರು ದ್ವೇಷ ಅಥವಾ ಕೋಪದಿಂದ ಅಥವಾ ಸಂಬಂಧದಲ್ಲಿ ಅತೃಪ್ತರಾದಾಗ ಮೋಸ ಮಾಡುತ್ತಾರೆ. ಒಂಟಿತನ ಮತ್ತು ಭಾವನಾತ್ಮಕ ಪರಿತ್ಯಾಗವು ಮಹಿಳೆಯರು ಸಾಮಾನ್ಯವಾಗಿ ಮೋಸ ಮಾಡುವ ಇತರ ಕೆಲವು ಕಾರಣಗಳಾಗಿವೆ. 

ಪ್ರಾಧಾನ್ಯತೆ ನೀಡದಿರುವುದು: ಎಲ್ಲಾ ಸಂಬಂಧದಲ್ಲೂ ಹೆಣ್ಣು ಯಾವಾಗಲೂ ನನಗೆ ಹೆಚ್ಚು ಪ್ರಾಧಾನ್ಯತೆ ದೊರೆಯಬೇಕೆಂದು ಅಂದುಕೊಳ್ಳುತ್ತಾಳೆ. ಆದರೆ ಗಂಡ ಮನೆಯವರು, ಕೆಲಸ ಎಂಬ ಜಂಜಾಟದಲ್ಲಿ ಆಕೆಗೆ ಪ್ರಾಧಾನ್ಯತೆ ನೀಡದಿದ್ದಾಗ ಆಕೆ ಸಂಸಾರದಿಂದ ವಿಮುಖಳಾಗುತ್ತಾಳೆ. ಪ್ರಾಧಾನ್ಯತೆ ನೀಡದ ಗಂಡ ನನಗೆ ಸೂಕ್ತ ಜೋಡಿಯಲ್ಲವೆಂದು ಅಂದುಕೊಳ್ಳುತ್ತಾಳೆ. ಮನೆಯಿಂದ ಹೊರಗೆ ಪ್ರೀತಿಯನ್ನು ಹುಡುಕಲು ಶುರು ಮಾಡುತ್ತಾಳೆ.

ಪುರುಷರ ಈ ಗುಣಗಳು ಮಹಿಳೆಯರ ಮೂಡ್ ಆನ್ ಮಾಡತ್ತೆ, ಯಾವುದು ಆ ಗುಣಗಳು?

ಲೈಂಗಿಕ ತೃಪ್ತಿಯ ಅಭಾವ: ದಂಪತಿಗಳು ವಂಚನೆಗೆ ಒಲವು ತೋರಲು ಲೈಂಗಿಕ ಅಭಾವವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ತಮ್ಮ ಲೈಂಗಿಕ ಅಗತ್ಯಗಳನ್ನು ಪೂರೈಸದಿದ್ದಾಗ ಸಹಜವಾಗಿಯೇ ಅವರು ಬೆಡ್‌ರೂಮ್‌ನಿಂದ ಹೊರಗೆ ಅದನ್ನು ಹುಡುಕುತ್ತಾರೆ. ಪುರುಷರು ಸಾಮಾನ್ಯವಾಗಿ ಇಂಥಾ ಸಂದರ್ಭದಲ್ಲಿ ಅಡ್ಜೆಸ್ಟ್ ಮಾಡಿಕೊಳ್ಳುತ್ತಾರೆ. ಆದರೆ ಮಹಿಳೆಯರು ತಮ್ಮ ಲೈಂಗಿಕ ತೃಪ್ತಿಯನ್ನು ಪಡೆಯಲು ವ್ಯಕ್ತಿಯನ್ನು ಹುಡುಕಲು ಶುರು ಮಾಡುತ್ತಾರೆ. ಹೀಗಿರುವಾಗ ಸ್ನೇಹಿತರ ವಲಯದಲ್ಲಿರುವ ನಿಕಟವರ್ತಿಗಳೊಂದಿಗೇ ಸಂಬಂಧ ಬೆಳೆಸಿಕೊಳ್ಳುತ್ತಾರೆ.

ಅತಿಯಾದ ರಿಸ್ಟ್ರಿಕ್ಷನ್‌: ಕೆಲವು ಗಂಡಸರು ತಮ್ಮ ಪತ್ನಿಯನ್ನು ಅತಿಯಾಗಿ ಕಂಟ್ರೋಲ್ ಮಾಡುತ್ತಿರುತ್ತಾರೆ.  ಇಂಥಾ ಸ್ವಭಾವ ಸಾಮಾನ್ಯವಾಗಿ ಪತ್ನಿಯರಿಗೆ ಇಷ್ಟವಾಗುವುದಿಲ್ಲ. ಎಲ್ಲವನ್ನೂ ಅನುಸರಿಸಿಕೊಂಡು ಜೀವನ ನಡೆಸುವುದು ಕಷ್ಟವೆನಿಸುತ್ತದೆ. ಹೀಗಾಗಿ ಗಂಡನನ್ನು ಬಿಟ್ಟು ಪರಪುರುಷನಲ್ಲಿ ಪ್ರೀತಿ ಹುಡುಕಲು ಆರಂಭಿಸುತ್ತಾರೆ. ಈ ರೀತಿ ಗಂಡನಿಗೇ ಮೋಸ ಮಾಡುತ್ತಾರೆ.

Latest Videos
Follow Us:
Download App:
  • android
  • ios