ಮಗಳು ಹುಟ್ಟಿದ ಐದು ತಿಂಗಳಿಗೆ ಎಲಾನ್ ಮಸ್ಕ್ ಗೆ ಹೊಸ ಗೆಳತಿ, ಯಾರೀಕೆ ನತಾಶಾ ಬ್ಯಾಸೆಟ್?
ಐದು ತಿಂಗಳ ಹಿಂದೆ ಮಾಜಿ ಪತ್ನಿ ಗ್ರಿಮೆಸ್ ಮೂಲಕ ಮಗಳನ್ನು ಪಡೆದುಕೊಂಡಿದ್ದ ಎಲಾನ್ ಮಸ್ಕ್ ಅದರ ಬೆನ್ನಲ್ಲಿಯೇ, ಹೊಸ ಗೆಳತಿಯ ಜೊತೆ ಸುತ್ತಾಟ ಆರಂಭಿಸಿರುವುದಾಗಿ ವರದಿಯಾಗಿತ್ತು. ಈಗ ಇದೇ ಮೊದಲ ತನಗಿಂತ 23 ವರ್ಷ ಚಿಕ್ಕವಳಾದ 27 ವರ್ಷದ ನತಾಶಾ ಬ್ಯಾಸೆಟ್ ಜೊತೆಗಿನ ಚಿತ್ರ ಎಲ್ಲೆಡೆ ವೈರಲ್ ಆಗಿದೆ.
ನವದೆಹಲಿ (ಮೇ. 31): ವಿಶ್ವದ ಶ್ರೀಮಂತ ವ್ಯಕ್ತಿ, ಜಗತ್ತಿನ ಅತ್ಯಂತ ಐಷಾರಾಮಿ ಕಾರು ಕಂಪನಿಗಳಲ್ಲಿ ಒಂದಾದ ಟೆಸ್ಲಾದ ಸಂಸ್ಥಾಪಕ ಮಾಲೀಕರೆನಿಕೊಂಡಿರವ ಎಲಾನ್ ಮಸ್ಕ್ ಹೊಸ ಗೆಳತಿಯೊಂದಿಗೆ ಸುತ್ತಾಟ ನಡೆಸುತ್ತಿದ್ದಾರೆ ಎನ್ನುವುದು ಈಗಾಗಲೇ ಬಹಿರಂಗವಾಗಿತ್ತು. 27 ವರ್ಷದ ನತಾಶಾ ಬ್ಯಾಸೆಟ್ ಬಗ್ಗೆ ಈಗಾಗಲೇ ಸಾಕಷ್ಟು ವರದಿಗಳು ಬಂದಿದ್ದವು. ಈಗ ಇದೇ ಮೊದಲ ಬಾರಿಗೆ ಎಲಾನ್ ಮಸ್ಕ್ ಹಾಗೂ ನತಾಶಾ ಬ್ಯಾಸೆಟ್ ಜೊತೆಯಾಗಿ ಸುತ್ತಾಟ ನಡೆಸಿದ ಚಿತ್ರಗಳು ಪ್ರಕಟವಾಗಿದೆ.
ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ (Elon Musk) ಮತ್ತೊಮ್ಮೆ ಹೊಸ ಗೆಳತಿಯ (New girlfriend) ಕಾರಣಕ್ಕಾಗಿ ಸುದ್ದಿಯಲ್ಲಿದ್ದಾರೆ. ಮಸ್ಕ್ ತನ್ನ ಹೊಸ ಗೆಳತಿ ನತಾಶಾ ಬ್ಯಾಸೆಟ್ (Natasha Bassett) ಜೊತೆಗಿನ ಚಿತ್ರಗಳು ಇದೇ ಮೊದಲ ಬಾರಿಗೆ ಹೊರಬಿದ್ದಿವೆ. 50 ವರ್ಷದ ಮಸ್ಕ್ ಮತ್ತು 27 ವರ್ಷದ ನತಾಶಾ ಇತ್ತೀಚೆಗೆ ಐಷಾರಾಮಿ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ದೃಶ್ಯ ಕಂಡುಬಂತು.
ನಟಿ ನತಾಶಾ ಬ್ಯಾಸೆಟ್ ಮಸ್ಕ್ ಅವರ ಈವರೆಗಿನ ಅತ್ಯಂತ ಕಿರಿಯ ವಯಸ್ಸಿನ ಗೆಳತಿ. ಸಾಮಾಜಿಕ ಮಾಧ್ಯಮದಲ್ಲಿ ಜನರು ನತಾಶಾ ಬ್ಯಾಸೆಟ್ ಬಗ್ಗೆ ತಿಳಿದುಕೊಳ್ಳಲು ಸಾಕಷ್ಟು ಕುತೂಹಲವನ್ನು ಹೊಂದಿದ್ದಾರೆ. ಆಸ್ಟ್ರೇಲಿಯಾ ಮೂಲದವರಾದ ನತಾಶಾ ಬ್ಯಾಸೆಟ್, ಚಿಕ್ಕಂದಿನಿಂದಲೇ ನಟನಾ ಕ್ಷೇತ್ರದಲ್ಲಿ ಬೆಳೆಯಬೇಕು ಎನ್ನುವ ತುಡಿತ ಹೊಂದಿದ್ದರು. ತಮ್ಮ 14ನೇ ವಯಸ್ಸಿಯನಲ್ಲಿಯೇ ರೋಮಿಯೋ ಜೂಲಿಯೆಟ್ ನಾಟಕದಲ್ಲಿ ಪ್ರಧಾನ ಜೂಲಿಯೆಟ್ ಪಾತ್ರವನ್ನು ಅದ್ಭುತವಾಗಿ ನಿಭಾಯಿಸುವ ಮೂಲಕ ದೊಡ್ಡ ಮಟ್ಟದಲ್ಲಿ ಗಮನಸೆಳೆದಿದ್ದರು.
ಆಸ್ಟ್ರೇಲಿಯಾ ಮೂಲದ ಅಮೆರಿಕನ್ ನಟಿಯಾಗಿರುವ ನತಾಶಾ ಬ್ಯಾಸೆಟ್, ನಟನೆಯೊಂದಿಗೆ ಚಿತ್ರಕಥೆ ಹಾಗೂ ನಿರ್ದೇಶನದ ಮೂಲಕವೂ ಗಮನಸೆಳೆದಿದ್ದಾರೆ. 2017ರಲ್ಲಿ ಬ್ರಿಟ್ನಿ ಸ್ಪಿಯರ್ಸ್ ಅವರ ಬಯೋಪಿಕ್ ಚಿತ್ರದಲ್ಲಿ ಬ್ರಿಟ್ನಿ ಸ್ಪಿಯರ್ಸ್ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ದೊಡ್ಡ ಹೆಸರು ಗಳಿಸಿದ್ದರು. ನಂತರ, 19 ನೇ ವಯಸ್ಸಿನಲ್ಲಿ, ನತಾಶಾ ನಟನೆಯನ್ನು ಕಲಿಯಲು ಆಸ್ಟ್ರೇಲಿಯಾದಿಂದ ನ್ಯೂಯಾರ್ಕ್ ಗೆ ತೆರಳಿದರು. ಇದರ ನಂತರ, 2014 ರಲ್ಲಿ, ನತಾಶಾ ಬ್ಯಾಸೆಟ್ ಕೈಟ್ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದರು. ರೋಡ್ ಐಲ್ಯಾಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರ ಈ ಚಲನಚಿತ್ರವನ್ನು ಸಹ ಪ್ರದರ್ಶಿಸಲಾಯಿತು.
ಪ್ರಸ್ತುತ ನತಾಶಾ ಬ್ಯಾಸೆಟ್ ಅಮೆರಿಕದಲ್ಲಿ ನೆಲೆಸಿದ್ದಾರೆ. ಈಗಾಗಲೇ ಸಾಕಷ್ಟು ಚಲನಚಿತ್ರವನ್ನೂ ನಿರ್ದೇಶನ ಮಾಡಿದ್ದಾರೆ. ಈಗ ಎಲಾನ್ ಮಸ್ಕ್ ಜೊತೆ ಕಾಣಿಸಿಕೊಳ್ಳುವ ಮೂಲಕ ಬ್ಯಾಸೆಟ್ ಜಗತ್ತಿನ ಗಮನಸೆಳೆದಿದ್ದಾರೆ. ಮಸ್ಕ್ ಹಾಗೂ ಬ್ಯಾಸೆಟ್ ಈ ವರ್ಷದ ಫೆಬ್ರವರಿಯಲ್ಲಿ ಡೇಟಿಂಗ್ ಪ್ರಾರಂಭಿಸಿದರು ಎಂದು ನಂಬಲಾಗಿದೆ, ಬ್ಯಾಸೆಟ್ ಲಾಸ್ ಏಂಜಲಿಸ್ ನಲ್ಲಿ ನಲ್ಲಿ ಮಸ್ಕ್‌ನ ಖಾಸಗಿ ಜೆಟ್‌ನಿಂದ ಇಳಿಯುವುದನ್ನು ಗಮನಿಸಿದರು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಾಜಿ ಗೆಳತಿ ಗ್ರಿಮ್ಸ್‌ನೊಂದಿಗೆ ಮಸ್ಕ್ ತನ್ನ ಎರಡನೇ ಮಗುವನ್ನು ಬಾಡಿಗೆ ತಾಯ್ತನದ ಮೂಲಕ ಸ್ವಾಗತಿಸಿದರು. ಅದಕ್ಕೂ ಎರಡು ತಿಂಗಳ ಮುನ್ನ ಗ್ರಿಮ್ಸ್ ಅವರಿಂದ ವಿಚ್ಛೇದನವನ್ನೂ ಪಡೆದಿದ್ದರು. ಗ್ರಿಮ್ಸ್ ಜೊತೆಗಿನ ವಿಚ್ಛೇದನದ ಬಳಿಕ ಬ್ಯಾಸೆಟ್ ಹಾಗೂ ಮಸ್ಕ್ ಹಲವು ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರು ಕಳೆದ ವಾರ ಕೇನ್ಸ್‌ನಲ್ಲಿ ಅನೇಕ ಕಾರ್ಯಕ್ರಮಗಳಿಗೆ ಹಾಜರಾಗಿದ್ದರು, ಅಲ್ಲಿ ಮಸ್ಕ್‌ನ ಮಾಡೆಲ್ ತಾಯಿ ಮಾಯೆ ಕೂಡ ಅತಿಥಿಯಾಗಿದ್ದರು. ಈ ಜೋಡಿಯು ಬ್ಯಾಸೆಟ್‌ನ ಹೊಸ ಚಿತ್ರ ಎಲ್ವಿಸ್‌ನ ಪ್ರಿಮಿಯರ್ ನಲ್ಲೂ ಜೊತೆಯಾಗಿ ಹೋಗುವ ನಿರೀಕ್ಷೆಯಿದೆ. ಬಯೋಪಿಕ್‌ನಲ್ಲಿ ಅವರು ಗಾಯಕನ ಗೆಳತಿಯರಲ್ಲಿ ಒಬ್ಬರಾಗಿ ನಟಿಸಿದ್ದಾರೆ.
Elon Musk Dating: ದೊಡ್ಡ ಶ್ರೀಮಂತನ ಹೊಸ ಗೆಳತಿ 27ರ ನತಾಶಾ.. ಮಸ್ಕ್ ಮಸ್ತ್ ಓಡಾಟ
50 ವರ್ಷದ ಎಲಾನ್ ಮಸ್ಕ್ ಜೀವನದಲ್ಲಿ ಬಂದ ಐದನೇ ಹುಡುಗಿ ನತಾಶಾ ಬ್ಯಾಸೆಟ್. 2000 ರಿಂದ 2008ರ ವರೆಗೆ ಮಸ್ಕ್ ಜಸ್ಟೀನ್ ವಿಲ್ಸನ್ ಜೊತೆ ಬಾಳ್ವೆ ನಡೆಸಿದ್ದರು. ವಿಲ್ಸನ್ ಅವರೊಂದಿಗೆ ಮಸ್ಕ್ ಐದು ಮಕ್ಕಳನ್ನು ಹೊಂದಿದ್ದಾರೆ. ವಿಲನ್ಸ್ ಜೊತೆಗಿನ ವಿಚ್ಛೇದನದ ಬಳಿಕ ಬ್ರಿಟಿಷನ್ ನಟಿ ಟೌಲುಲಾ ರಿಲ್ಲೇ ಜೊತೆ 2010ರಿಂದ 6 ವರ್ಷಗಳ ಕಾಲ ಬದುಕಿದ್ದರು. ಈಕೆಯ ಜೊತೆ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಟೌಲುಲಾ ರಿಲ್ಲೇ ಅವರನ್ನು ಮಸ್ಕ್ ಎರಡು ಬಾರಿ ವಿವಾಹವಾಗಿದ್ದರು.
ರಹಸ್ಯ ಇನ್ಸ್ಟಾಗ್ರಾಮ್ ಖಾತೆ ಹೊಂದಿದ್ದಾರಂತೆ ಎಲಾನ್ ಮಸ್ಕ್: ಯಾಕೆ ಗೊತ್ತಾ?
2016ರಲ್ಲಿ ರಿಲ್ಲೇ ಜೊತೆಗಿನ ವಿಚ್ಛೇದನದ ಬಳಿಕ ಅಂಬೆರ್ ಹೆರ್ಡ್ ಜೊತೆ 2017ರಿಂದ ಒಂದು ವರ್ಷಗಳ ಕಾಲ ಜೊತೆಯಲ್ಲಿದ್ದರು. 2018ರಲ್ಲಿ ಗ್ರಿಮ್ಸ್ ಅವರನ್ನು ವಿವಾಹವಾಗಿದ್ದ ಮಸ್ಕ್, ಆಕೆಯಿಂದ ಎರಡು ಮಕ್ಕಳನ್ನು ಪಡೆದುಕೊಂಡಿದ್ದು, ಕಳೆದ ವರ್ಷ ಈಕೆಗೆ ವಿಚ್ಛೇದನ ನೀಡಿದ್ದಾರೆ.