ಪೋಷಕರು ಮಕ್ಕಳ ಬದುಕಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುತ್ತಾರೆ. ಮಕ್ಕಳ ಬದುಕನ್ನು ಸೊಗಸಾಗಿಸಲು ತಮ್ಮ ಬದುಕಿನ ಎಲ್ಲಾ ಆಸೆಗಳನ್ನು ತ್ಯಾಗ ಮಾಡುವ ಪೋಷಕರು, ಮಕ್ಕಳ ತಪ್ಪುಗಳನ್ನು ತಿದ್ದಿ ಸರಿ ದಾರಿ ತೋರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಒಂದು ಹಿಡಿ ಹೆಚ್ಚೇ ಅಕ್ಕರೆ.
ಪೋಷಕರು ಮಕ್ಕಳ ಬದುಕಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುತ್ತಾರೆ. ಮಕ್ಕಳ ಬದುಕನ್ನು ಸೊಗಸಾಗಿಸಲು ತಮ್ಮ ಬದುಕಿನ ಎಲ್ಲಾ ಆಸೆಗಳನ್ನು ತ್ಯಾಗ ಮಾಡುವ ಪೋಷಕರು, ಮಕ್ಕಳ ತಪ್ಪುಗಳನ್ನು ತಿದ್ದಿ ಸರಿ ದಾರಿ ತೋರುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಅಪ್ಪ ಎಂದರೆ ಒಂದು ಹಿಡಿ ಹೆಚ್ಚೇ ಅಕ್ಕರೆ. ಬಹಳಷ್ಟು ಹೆಣ್ಣು ಮಕ್ಕಳಿಗೆ ಅಪ್ಪ ಅವರ ಬದುಕಿನ ಮೊದಲ ಹೀರೋ. ಅಪ್ಪನಿಗೂ ಅಷ್ಟೇ ಮಗಳೆಂದರೆ ಇನ್ನಿಲ್ಲದ ಒಲವು. ಅಪ್ಪ ತೋರುವ ಕಾಳಜಿ ಕರುಣೆ ಎಲ್ಲೂ ಯಾರೂ ತೋರಲು ಸಾಧ್ಯವಿಲ್ಲ. ಹೀಗಾಗಿ ಪುತ್ರಿಯೊಬ್ಬಳು ಆಗಲಿದ ತನ್ನ ಅಪ್ಪನ ನೆನಪನ್ನು ಶಾಶ್ವತವಾಗಿ ಬೆಚ್ಚಗೆ ಇರಿಸಲು ಉಪಾಯವೊಂದನ್ನು ಮಾಡಿದ್ದಾಳೆ. ಆಕೆಯ ಈ ಕಾರ್ಯ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಶಭಾಷ್ ಎಂದಿದ್ದಾರೆ.
ಮನೆಯಲ್ಲಿ ಯಾರಾದರು ತೀರಿಕೊಂಡರೆ ಅವರಿಗೆ ಸಂಬಂಧಿಸಿದ ಬಟ್ಟೆ ಹಾಸಿಗೆ ಮುಂತಾದವುಗಳನ್ನು ಯಾರೂ ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಬಟ್ಟೆಗಳನ್ನೆಲ್ಲಾ ಯಾರಿಗಾದರೂ ಅನಾಥರಿಗೆ ನೀಡುತ್ತಾರೆ. ಆದರೆ ಈ ಯುವತಿ ಅಪ್ಪನ ಶರ್ಟ್ ಹಾಗೂ ಬಟ್ಟೆಗಳನ್ನೆಲ್ಲಾ ನೀಡಿ ಅದರಿಂದ ಸುಂದರವಾದ ಚಾದರವನ್ನು ನಿರ್ಮಿಸಿಕೊಂಡಿದ್ದಾರೆ. ನಿಕಿತಾ ಕಿಣಿ ಎಂಬ ಯುವತಿ ತನ್ನ ಅಗಲಿದ ಅಪ್ಪನ ನೆನಪನ್ನು ಶಾಶ್ವತವಾಗಿಸಲು ತಾನು ಏನು ಮಾಡಿದೆ ಎಂಬುದನ್ನು ವಿಡಿಯೋ ಸಮೇತ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ವಿಶ್ವ ಅಪ್ಪಂದಿರ ದಿನದಂದು ಈ ನಿಕಿತಾ ಅವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅದರ ಸಂಪೂರ್ಣ ಸಾರಾಂಶ ಇಲ್ಲಿದೆ.
ಈ ರೀಲ್ ಅನ್ನು ಪೂರ್ಣಗೊಳಿಸಲು ನನಗೆ 2 ವರ್ಷಗಳು ಬೇಕಾಯಿತು. ತಂದೆಯ ಜನ್ಮದಿನದಂದು (ಕಾಕತಾಳೀಯವಾಗಿ) ಮಾರ್ಚ್ 8, 2021 ರಂದು ಈ ಪ್ಯಾಕೇಜ್ ನನ್ನನ್ನು ಬಂದು ತಲುಪಿತು. ಇದು ನನ್ನ ಇಡೀ ಜೀವನದಲ್ಲಿ ನಾನು ಅನುಭವಿಸದ ಭಾವನೆಗಳನ್ನು ಅನುಭವಿಸುವಂತೆ ಮಾಡಿದೆ. @purkalstreeshakti (ಈ ಚಾದರವನ್ನು ನಿರ್ಮಿಸಿದವರು) ನನಗೆ ಕೇವಲ ಬೆಚ್ಚಗಿನ ಹೊದಿಕೆಗಿಂತ ಹೆಚ್ಚಿನದನ್ನು ನೀಡುವ ಕೆಲಸ ಮಾಡಿದರು.
Big 3 Hero: ಮೂರ್ತಿ ಚಿಕ್ಕದಾದರೂ ಈತನ ಕೆಲಸ ದೊಡ್ಡದು: ಮನ ಮಿಡಿಯುತ್ತೆ ತಂದೆ-ಮಗನ ಪ್ರೀತಿ
ಅವರು ನನ್ನ ತಂದೆಯ ಅವರ ಶರ್ಟ್‌ಗಳನ್ನು ನನ್ನ ಚರಾಸ್ತಿಯನ್ನಾಗಿ ಮಾಡಿದರು. ತಂದೆ ನಮ್ಮ ಜೊತೆಗೆ ಇದ್ದಿದ್ದರೆ ನಾವು ಅವರ ಶರ್ಟ್‌ಗಳನ್ನು ದಾನ ಮಾಡಿದ್ದೇವೆ ಎಂದರೆ ಅದನ್ನು ಅವರು ಒಪ್ಪುತ್ತಿರಲಿಲ್ಲ. ಆದ್ದರಿಂದ ಅವರ ಅಸ್ತಿತ್ವಕ್ಕೆ ಗೌರವ ಸಲ್ಲಿಸಲು ನನಗೆ ಇದಕ್ಕಿಂತ ಉತ್ತಮ ಮಾರ್ಗವನ್ನು ಕಂಡುಹಿಡಿಯಲಾಗಲಿಲ್ಲ ಎಂದು ನಿಖಿತಾ ಕಿಣಿ ಬರೆದುಕೊಂಡಿದ್ದಾರೆ.
ಅಪ್ಪ ಬದುಕಿದ್ದಾಗ ಯಾವಾಗಲೂ ಅತ್ಯಂತ ದುಬಾರಿ ಶರ್ಟ್‌ಗಳನ್ನೇ ಆಯ್ಕೆ ಮಾಡುತ್ತಿದ್ದರು. ಏಕೆ ಎಂದು ಕೇಳಿದರೆ ಅದು ಹಲವು ವರ್ಷಗಳ ಕಾಲ ಬಾಳಿಕೆ ಬರಬೇಕೆಂದು ಹೇಳುತ್ತಿದ್ದರು. ಆದರೆ ಸದಾ ಬೀದಿ ಬದಿ ಶಾಪಿಂಗ್ ಮಾಡುತ್ತಿದ್ದ ನನಗೆ ಆಗ ಇದು ಅರ್ಥವಾಗಿರಲಿಲ್ಲ. ಆದರೆ ಈಗ ನಾನು ನನ್ನ ತಂದೆಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅಪ್ಪನ ಶರ್ಟ್‌ಗಳು ನಮ್ಮಲ್ಲಿ ಈಗ ಶಾಶ್ವತವಾಗಿ ಉಳಿದಿವೆ. ಇಲ್ಲಿರುವ ಪ್ರತಿಯೊಬ್ಬರಿಗೂ ತಂದೆಯ ದಿನದ ಶುಭಾಶಯಗಳು. ಅಪ್ಪ ಎಂದಿಗೂ ನಿಮ್ಮಿಂದ ದೂರವಾಗುವುದಿಲ್ಲ ಎಂದು ನಿಮಗೆ ತಿಳಿದಿದೆ ಎಂದು ಆಕೆ ಬರೆದುಕೊಂಡಿದ್ದಾರೆ.
ಮಗನ ಮಾರ್ಕ್‌ಶೀಟ್ ಹೆಮ್ಮೆಯಿಂದ ತೋರಿಸಿದ ಆಟೋ ಚಾಲಕ ಅಪ್ಪ
ಅಪ್ಪನ ಕಾಳಜಿ ಮಕ್ಕಳಲ್ಲಿ ಭದ್ರತೆ ಹಾಗೂ ಬೆಚ್ಚನೆಯ ಭಾವವನ್ನು ಮೂಡಿಸುತ್ತದೆ. ಅಪ್ಪ ಎಂದರೆ ಆಕಾಶ ಎಂಬಂತೆ ಅಪ್ಪನ ಶಾಶ್ವತ ನೆನಪನ್ನು ಅದೇ ಬೆಚ್ಚನೆಯ ರೀತಿ ಉಳಿಸಿಕೊಳ್ಳಲು ಈ ಮಗಳು ಚಾದರ ರೂಪದಲ್ಲಿ ಅಪ್ಪನ ಅಸ್ತಿತ್ವವನ್ನು ಉಳಿಸುವ ಪ್ರಯತ್ನ ಮಾಡಿದ್ದಾಳೆ.