Asianet Suvarna News Asianet Suvarna News

Games for Couple: ದೊಡ್ಡೊರು ಆಟ ಆಡ್ಬಾರ್ದು ಅಂತೇನಿಲ್ಲ, ಪತಿ-ಪತ್ನಿ ಆಟವಾಡಿ ಬಾಂಡಿಂಗ್ ಹೆಚ್ಚಿಸಿಕೊಳ್ಳಿ

ದಾಂಪತ್ಯ ಕೇವಲ ಮಕ್ಕಳು, ಮನೆ, ಜವಾಬ್ದಾರಿ, ಭವಿಷ್ಯದ ಕುರಿತಾದ ಗಂಭೀರ ಮಾತುಕತೆಗೆ ಸೀಮಿತವಾಗಬೇಕಾಗಿಲ್ಲ. ಬೇಸರ ಕಳೆಯಲು ಪತಿ-ಪತ್ನಿ ಆಗೀಗ ಯಾವುದಾದರೂ ಆಟದಲ್ಲಿ ತೊಡಗಿಕೊಳ್ಳಬಹುದು. ಇಬ್ಬರೇ ಖುಷಿಯಾಗಿ ಸಮಯ ಕಳೆಯಬಹುದು. ಮೊದಮೊದಲು ಮುಜುಗರ ಎನಿಸಬಹುದು, ಕ್ರಮೇಣ ಪರಸ್ಪರ ಆತ್ಮೀಯತೆ ಹೆಚ್ಚಿ ಜೀವನ ಸುಖಮಯವೆನಿಸುತ್ತದೆ. 
 

Couples can develop more affection and romance by some funny games
Author
First Published Nov 15, 2022, 4:40 PM IST

ದಿನ ಬೆಳಗಾದರೆ ತಿಂಡಿ, ಮಧ್ಯಾಹ್ನ- ಸಂಜೆಗೆ ಅಡುಗೆ, ನಿಗದಿತ ಸಮಯಕ್ಕೆ ವ್ಯಾಯಾಮ, ಸ್ವಲ್ಪ ಹೊತ್ತು ಟಿವಿ ವೀಕ್ಷಣೆ...ಹಲವರಿಗೆ ಸಮಯವೆನ್ನುವುದು ಹೀಗೆ ಬೋರಾಗಿ ಕಳೆಯುತ್ತದೆ. ಮಕ್ಕಳು ದೊಡ್ಡವರಾಗುತ್ತ ವಿದ್ಯಾಭ್ಯಾಸಕ್ಕೋ, ಕೆಲಸಕ್ಕೆಂದೋ ಪರವೂರಿಗೆ ಹೋಗಿ ಗಂಡ-ಹೆಂಡಿರಿಬ್ಬರೇ ಇದ್ದೂ ಇದ್ದು ಬೋರಾಗಿರುವವರು ನೀವಾಗಿದ್ದರೆ ಸ್ವಲ್ಪ ಭಿನ್ನವಾಗಿ ಯೋಚಿಸಬೇಕಾದ ಸಮಯ ಬಂದಿದೆ. ಅಥವಾ ಮನೆಯಲ್ಲೇ ಮಕ್ಕಳಿದ್ದರೂ ಅವರ ಪಾಡಿಗೆ ಅವರು ಓದು, ಕೆಲಸಗಳಲ್ಲಿ ಇರಬಹುದು. ಆಗ ಬೇಸರಕ್ಕೆ ಆಸ್ಪದ ನೀಡದೆ ದಂಪತಿ ಇಬ್ಬರೇ ಪರಸ್ಪರ ಖುಷಿಯಾಗಿ ಸಮಯ ಕಳೆಯಲು ಸಾಧ್ಯ. ಮನೆಯಲ್ಲಿದ್ದರೆ ಬೇಸರ ಎಂದು ಕ್ಲಬ್ಬುಗಳಿಗೆ ಮೆಂಬರಾಗಿ ಕಾರ್ಡ್ಸ್ ಆಡಿ ಹಣ ಕಳೆದುಕೊಳ್ಳುವವರಿದ್ದಾರೆ. ಫೇಸ್ ಬುಕ್, ಯೂಟ್ಯೂಬ್ ಗಳನ್ನು ನೋಡಿ ನೋಡಿ ತಮ್ಮ ಬದುಕಿನ ಕುರಿತು ಅತಿಯಾದ ಅಸಹನೆ ತಾಳಿದವರಿದ್ದಾರೆ. ಅವುಗಳ ಬದಲು ದಂಪತಿಯೇ ವಿನೋದಮಯ ಆಟಗಳನ್ನು ಆಡುವುದರಿಂದ ಬದುಕು ಖಾಲಿ ಎನಿಸುವುದಿಲ್ಲ. ಬದಲಿಗೆ ಪರಸ್ಪರರಲ್ಲಿ ಆತ್ಮೀಯತೆ ಹೆಚ್ಚಿ ಇನ್ನಷ್ಟು ಖುಷಿಯಾಗಿ ಇರಲು ಸಾಧ್ಯವಾಗುತ್ತದೆ. ಹೀಗಾಗಿ, ಯಾವುದೇ ಕಾರಣದಿಂದ ದಂಪತಿ ಇಬ್ಬರೇ ಬದುಕಬೇಕಾದ ಅನಿವಾರ್ಯತೆ ಇದ್ದಾಗ ದಿನದ ಸ್ವಲ್ಪ ಸಮಯದಲ್ಲಾದರೂ ಖುಷಿಯಾಗಿ ಇಬ್ಬರೂ ಕೆಲವು ಚಟುವಟಿಕೆ ನಡೆಸಬಹುದು. ಅವುಗಳಲ್ಲಿ ಆಟಕ್ಕೆ ಪ್ರಾಧಾನ್ಯತೆ ನೀಡಬಹುದು. ಆಟವಾಡಲು ವಯಸ್ಸಿನ ಮಿತಿಯಿಲ್ಲ. ಮನೆಯಲ್ಲೇ ಹಲವಾರು ಆಟಗಳನ್ನು ಆಡಬಹುದು.

•    ಕಾರ್ಡ್ ಗೇಮ್ಸ್ (Card) ಮತ್ತು ಬೋರ್ಡ್ (Board) ಗೇಮ್ಸ್
ಇಸ್ಪೀಟು ಸೇರಿದಂತೆ ಹಲವಾರು ರೀತಿಯ ಕಾರ್ಡ್ ಗಳನ್ನು ಇಟ್ಟುಕೊಂಡು ವಿವಿಧ ವಿನೋದಮಯ ಆಟಗಳನ್ನು (Funny Games) ಆಡಬಹುದು. ಹಾಗೆಯೇ, ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ಬೋರ್ಡ್ ಗೇಮ್ ಗಳನ್ನು ಸಹ ಆಟಬಹುದು. ಈಗಂತೂ ಸಾಕಷ್ಟು ವೈವಿಧ್ಯಮಯ ಆಟಗಳು ಇರುತ್ತವೆ. ಅವುಗಳನ್ನು ಅರಿತುಕೊಳ್ಳುವುದು ಸಹ ಸುಲಭ. ಹಳೆಯ ಪಗಡೆಯಿಂದ ಹಿಡಿದು ಹೊಸ ರೀತಿಯ ಆಟಗಳನ್ನು ಆಡುವ ವಿವಿಧ ಬೋರ್ಡ್ ಗಳು ಆನ್ ಲೈನ್ ಅಥವಾ ಮಾರುಕಟ್ಟೆಗಳಲ್ಲಿ ಸಿಗುತ್ತವೆ, ಚೆಕ್ ಮಾಡಿ.

ದಾಂಪತ್ಯದಲ್ಲಿ ಜಗಳ ಇಲ್ಲವೆಂದರೆ ಎಂಥ ಸ್ವಾರಸ್ಯ? ಆದರೆ ಪ್ಯಾಚ್ ಅಪ್ ಮಾಡಿಕೊಳ್ಳಲು ಇಲ್ಲಿವೆ ಟಿಪ್ಸ್

•    ಸತ್ಯ (Truth) ಅಥವಾ ಧೈರ್ಯ (Dare)
ಯಾವುದೇ ಸಲಕರಣೆ ಇಲ್ಲದೆ ಪರಸ್ಪರ ಮಾತನಾಡುತ್ತಲೇ ಆಡಬಹುದು. ಇದರಲ್ಲಿ ಪ್ರಶ್ನೆಗಳನ್ನು ಮಾಡಲಾಗುತ್ತದೆ. “ಸತ್ಯ’ವನ್ನು ಆಯ್ಕೆ ಮಾಡಿಕೊಂಡರೆ ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಸತ್ಯವನ್ನೇ ಹೇಳಬೇಕು. “ಧೈರ್ಯ’ ಆಯ್ಕೆ ಮಾಡಿಕೊಂಡರೆ ಅವರು ಏನು ಮಾಡಿದರೂ ಒಪ್ಪಿಕೊಳ್ಳಬೇಕು! ಈ ಆಟದಿಂದ ದಂಪತಿಯಲ್ಲಿ ರೋಮ್ಯಾನ್ಸ್ (Romance) ಹೆಚ್ಚುತ್ತದೆ.

•    ಟ್ಯೂನ್ ಗುರುತಿಸುವುದು (Guess Tune) ಅಥವಾ ಅಂತ್ಯಾಕ್ಷರಿ (Singing)
ಹಾಡು (Song), ಸಂಗೀತವೆಂದರೆ ಇಷ್ಟಪಡುವ ದಂಪತಿ (Couple) ನೀವಾಗಿದ್ದರೆ ಈ ಆಟ ಆಡಬಹುದು. ಹಾಡಿನ ಮೊದಲ ಕೆಲವು ಸೆಕೆಂಡ್ ಗಳ ಟ್ಯೂನ್ ಕೇಳಿಸಿ ಯಾವುದೆಂದು ಗೆಸ್ ಮಾಡಬಹುದು. ಶಬ್ದ ಅಥವಾ ಹಾಡುಗಳ ಅಂತ್ಯಾಕ್ಷರಿ ಕೂಡ ಸಾಕಷ್ಟು ಜನಪ್ರಿಯ ಆಟ. 

ವಿಡಿಯೋ ಗೇಮ್ ನಿಂದ ಮಕ್ಕಳಲ್ಲಿ ಹೆಚ್ಚಿದ ಹಾರ್ಟ್ ಅಟ್ಯಾಕ್!

•    ದೃಷ್ಟಿಯುದ್ಧ (Stare Eyes)
ಅಪರೂಪಕ್ಕೆ ದೃಷ್ಟಿಯುದ್ಧ ಮಾಡಿ ನೋಡಿ. ಯಾರು ಮೊದಲು ಕಣ್ಣುಗಳ ರೆಪ್ಪೆ ಬಡಿಯುತ್ತಾರೋ ಅವರು ಸೋತಂತೆ. ಇದನ್ನು ಸಾಮಾನ್ಯವಾಗಿ ಚಿಕ್ಕ ಮಕ್ಕಳು ಆಡುತ್ತಾರೆ, ದೊಡ್ಡವರೂ ಆಡಬಾರದು ಎಂದೇನಿಲ್ಲ!

•    ನಗಿಸುವ ಆಟ, ಇದು ಅಥವಾ ಅದು
ಜೋಕು (Jokes) ಅಥವಾ ಏನಾದರೂ ತಮಾಷೆಯ ವರ್ತನೆ ಮೂಲಕ ಇನ್ನೊಬ್ಬರನ್ನು ನಗಿಸುವ ಸವಾಲು ಸ್ವೀಕರಿಸಿ ಆಟವಾಡಬಹುದು. “ಇದು ಅಥವಾ ಅದು’ ಆಟದಲ್ಲಿ ಪ್ರಶ್ನೆಗಳಿರುತ್ತವೆ. ಉದಾಹರಣೆಗೆ, ಟಿವಿ ಅಥವಾ ಪುಸ್ತಕದಲ್ಲಿ ಯಾವುದು ಇಷ್ಟ? ಐಸ್ ಕ್ರೀಮ್ ಅಥವಾ ಚಾಕೊಲೇಟ್, ನಾಯಿ ಅಥವಾ ಬೆಕ್ಕು... ಹೀಗೆಯೇ ಪ್ರಶ್ನಾವಳಿ ಮಾಡಬಹುದು.

•    ಸ್ಕ್ರಾಬಲ್ (Scrabble)
ಮಕ್ಕಳು (Children) ಮಾತ್ರವಲ್ಲ, ದೊಡ್ಡವರೂ ಇದನ್ನು ಖುಷಿಯಾಗಿ ಆಡಬಹುದು. ಹಾಗೆಯೇ, ಅಟ್ಲಾಸ್ (Atlas) ಇಟ್ಟುಕೊಂಡು ಆಟವಾಡಬಹುದು. ಎರಡು ಸತ್ಯ ಸಂಗತಿ ಒಂದು ಸುಳ್ಳು (Lie) ಹೇಳಿ, ಸುಳ್ಳನ್ನು ಗುರುತಿಸುವ ಆಟವಾಡಬಹುದು. ಕಥೆ (Story) ಹೇಳುವುದು, ವಿಡಿಯೋ ಗೇಮ್ಸ್, ಮನೆಯಲ್ಲಿ ಎಲ್ಲಾದರೂ ಗಿಫ್ಟ್ ಅಡಗಿಸಿ ಇಟ್ಟು ಹುಡುಕುವಂತೆ ಮಾಡುವುದು, ಟಂಗ್ ಟ್ವಿಸ್ಟರ್ (Tongue Twister) ಸೇರಿದಂತೆ ಸಾಕಷ್ಟು ಆಟಗಳನ್ನು ಎಲ್ಲರೂ ಆಡಬಹುದು. ಮಕ್ಕಳಿಗೆ ಚಿಕ್ಕವರಿದ್ದಾಗ ಹೇಳಿಕೊಡುತ್ತಿದ್ದ ಆಟಗಳನ್ನು ನೆನಪಿಸಿಕೊಳ್ಳಿ, ಆಟವಾಡಿ ಎಂಜಾಯ್ ಮಾಡಿ. 

Follow Us:
Download App:
  • android
  • ios