ದಾಂಪತ್ಯದಲ್ಲಿ ಜಗಳ ಇಲ್ಲವೆಂದರೆ ಎಂಥ ಸ್ವಾರಸ್ಯ? ಆದರೆ ಪ್ಯಾಚ್ ಅಪ್ ಮಾಡಿಕೊಳ್ಳಲು ಇಲ್ಲಿವೆ ಟಿಪ್ಸ್
ಗಂಡ ಮತ್ತು ಹೆಂಡತಿ ಅಥವಾ ಗೆಳತಿ-ಗೆಳೆಯನ ನಡುವೆ ಜಗಳವಾಗೋದು ತುಂಬಾ ಸಾಮಾನ್ಯ. ಕೆಲವೊಮ್ಮೆ ಜಗಳ ತುಂಬ ಸಿಂಪಲ್ ವಿಷಯದ ಮೇಲೆ ಇರುತ್ತೆ, ಇದನ್ನೆಲ್ಲಾ ಸರಿ ಮಾಡಲು ಏನು ಮಾಡಬೇಕೆಂದು ಅರ್ಥವಾಗೋದಿಲ್ಲ. ಸಹಜವಾಗಿ, ಜಗಳವಾದಾಗ ನಾವು ಅದರ ಬಗ್ಗೆ ತುಂಬಾ ಕೆಟ್ಟದಾಗಿ ಭಾವಿಸೋದಿಲ್ಲ, ಆದರೆ ಜಗಳದ ನಂತರ, ಅದು ಬೇಗ ಸರಿ ಆದ್ರೆ ಸಾಕು ಎಂದು ಅನಿಸುತ್ತೆ. ಆದರೆ ಇದಕ್ಕೆಲ್ಲಾ ಅಹಂ ಅಡ್ಡ ಬರುತ್ತೆ. ಇದರಿಂದಾಗಿ ಅವರು ಪರಸ್ಪರ ಮಾತನಾಡಲು ಸಾಧ್ಯವಾಗೋದಿಲ್ಲ. ಇದನ್ನ ಸರಿ ಮಾಡೋದು ಹೇಗೆ?
ದಾಂಪತ್ಯ ಆಗಿರಲಿ, ಪ್ರೇಮಿಗಳೇ (Lovers) ಆಗಿರಲಿ, ಯಾವುದೇ ಸಂಬಂಧದಲ್ಲಿ ಜಗಳ ಆಗೋದು ತುಂಬಾ ಕಾಮನ್. ಆದರೆ ಜಗಳ ಆದ ಮೇಲೆ ಅದನ್ನು ಸರಿ ಮಾಡೋದು ದೊಡ್ಡ ತಲೆ ನೋವಿನ ವಿಷಯ. ಯಾಕೆಂದರೆ ಇಬ್ಬರ ನಡುವೆ ಅಹಂ ಬಂದು ಬಿಟ್ಟಿರುತ್ತೆ. ಈ ಸಮಯದಲ್ಲಿ ಅವಳು ಮಾತನಾಡಲಿ ಎಂದು ಅವನು, ಅವನೇ ಮಾತನಾಡಲಿ ಎಂದು ಅವಳು ಇಬ್ಬರು ಯೋಚನೆ ಮಾಡುತ್ತಾ, ಮಾಡುತ್ತಾ ಮಾತನಾಡದೆ ಇದ್ದರೆ, ಸಂಬಂಧದಲ್ಲಿ ಬಿರುಕು ಮೂಡೋದು ಖಚಿತ.
ಬಾಂಧವ್ಯ ಭದ್ರವಾಗಿರಬೇಕು
ಇಬ್ಬರ ನಡುವಿನ ಬಾಂಧವ್ಯ ಭದ್ರವಾಗಿರಬೇಕು ಎಂದು ನೀವು ಬಯಸಿದ್ರೆ ನೆನಪಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯವೆಂದ್ರೆ, ನಿಮ್ಮ ಜಗಳ ಯಾವುದೇ ವಿಷಯದ ಬಗ್ಗೆ ನಡೆದಿದ್ದರೂ ನೀವು ಅದನ್ನು ಪರಿಹರಿಸಲು ಪ್ರಯತ್ನಿಸಬೇಕು. ಇಬ್ಬರು ಪಾರ್ಟ್ನರ್ ನಲ್ಲಿ ಯಾರೂ ಜಗಳ (Fight) ಪರಿಹರಿಸಲು ಪ್ರಯತ್ನಿಸದಿದ್ದರೆ, ಆಗ ವಿಷಯವು ಹದಗೆಡಬಹುದು. ಆದ್ದರಿಂದ, ಯಾರಾದ್ರೂ ಒಬ್ರು ಜವಾಬ್ದಾರಿ ತೆಗೆದುಕೊಳ್ಳೋದು ಅಗತ್ಯ. ನಿಮ್ಮ ಜಗಳ ಸಂಗಾತಿಯೊಂದಿಗೆ ಇದ್ದರೆ ಮತ್ತು ಈ ಜಗಳವು ಮತ್ತೆ ಮತ್ತೆ ಹೆಚ್ಚುತ್ತಿದ್ದರೆ, ಅದನ್ನು ಪರಿಹರಿಸಲು ಈ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.
ಸಂಗಾತಿಗೆ ಟೈಮ್ ಮತ್ತು ಸ್ಪೇಸ್(Space) ನೀಡಿ
ಅತಿಯಾದ ಮಾತಿನಿಂದ ಜಗಳ ಕೊನೆಗೊಳ್ಳದಿದ್ದರೆ, ಕೋಪವನ್ನು ಶಾಂತಗೊಳಿಸಲು ಸಂಗಾತಿಗೆ ಸ್ವಲ್ಪ ಟೈಮ್ ಮತ್ತು ಸ್ಪೇಸ್ ನೀಡಿ. ನೀವಿಬ್ಬರೂ ಕೋಪಗೊಂಡರೆ ಮತ್ತು ಒಂದೇ ಸಮಯದಲ್ಲಿ ಮಾತನಾಡಲು ಪ್ರಯತ್ನಿಸಿದರೆ, ಆಗ ನೋವು ಹೆಚ್ಚಾಗುತ್ತೆ. ಇದರಿಂದ, ಬಾಯಿಯಿಂದ ಹೊರಬರಬಾರದ ವಿಷಯವು ಸಹ ಹೊರಬರಬಹುದು. ಆದ್ದರಿಂದ, ನೀವು ಸಂಗಾತಿಗೆ ಟೈಮ್ ಮತ್ತು ಸ್ಪೇಸ್ ಎರಡನ್ನೂ ನೀಡೋದು ಮುಖ್ಯ.
ಮೊದಲು ಮಾತನಾಡಲು(Talk) ಪ್ರಯತ್ನಿಸಿ
ಟೈಮ್ ನೀಡೋದು ಮುಖ್ಯ ನಿಜ. ಆದರೆ ಇಬ್ಬರ ನಡುವೇ ಮಾತೆ ನಿಂತು ಹೋಗಿದ್ದರೆ, ಆವಾಗ ನೀವು ಮೊದಲು ಮಾತನಾಡಲು ಪ್ರಯತ್ನಿಸಬೇಕು. ಮಾತು ನಿಂತುಹೋಗಿದ್ದರೆ, ಎಲ್ಲಿಂದಾದರೂ ಪ್ರಾರಂಭಿಸಿ. ಸಣ್ಣ ವಿಷಯಗಳನ್ನು ಒಳಗೊಂಡ ಜಗಳ ಕೆಲವೊಮ್ಮೆ ತುಂಬಾ ದೊಡ್ಡದಾಗುತ್ತವೆ ಮತ್ತು ಅದಕ್ಕಾಗಿ ನೀವು ಅಹಂ ತೋರಿಸುವ ಬದಲು ಮೊದಲು ಮಾತನಾಡೋದು ಉತ್ತಮ. ವಿವಾದಗಳು ಯಾವಾಗಲೂ ಮಾತುಕತೆ ಮೂಲಕ ಪರಿಹರಿಸಬಹುದು ಎಂದು ನೀವು ಅರ್ಥಮಾಡಿಕೊಳ್ಳಬೇಕು.
ಯಾವಾಗಲೂ ನಿಮ್ಮ ಅಭಿಪ್ರಾಯವನ್ನು ಅವರ ಮೇಲೆ ಒತ್ತಾಯಿಸಬೇಡಿ
ಯಾವಾಗಲೂ ಜಗಳದಲ್ಲಿ ಒಬ್ಬ ವ್ಯಕ್ತಿಯದ್ದೇ ತಪ್ಪಿರುತ್ತೆ ಎಂದು ಹೇಳಲಾಗೋದಿಲ್ಲ. ಹೆಚ್ಚಿನ ಮಹಿಳೆಯರು ಜಗಳದ ಸಮಯದಲ್ಲಿ ತಮ್ಮ ಅಂಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಯಾವಾಗಲೂ ಅವರು ಸರಿ ಎಂದು ಭಾವಿಸುತ್ತಾರೆ. ಇದು ಪುರುಷರ ವಿಷಯದಲ್ಲೂ ಸಂಭವಿಸುತ್ತೆ ಮತ್ತು ಒಂದು ಸಂಬಂಧದಲ್ಲಿ ಒಬ್ಬ ಪಾರ್ಟ್ನರ್ (Partner) ಇನ್ನೊಬ್ಬನ ಮೇಲೆ ತನ್ನ ಇಚ್ಛೆಯನ್ನು ಹೇರಲು ಪ್ರಯತ್ನಿಸಿದರೆ, ಅದು ತಪ್ಪಾಗುತ್ತೆ. ನಿಮ್ಮ ಅಭಿಪ್ರಾಯವು ನಿಮ್ಮ ಸಂಗಾತಿ ಮೇಲೆ ಹೇರೋದ್ರಿಂದ ಜಗಳ ಯಾವತ್ತೂ ಕೊನೆಯಾಗಲಿಕ್ಕಿಲ್ಲ.
ಕ್ಷಮೆಯಾಚಿಸೋದು ಯಾರನ್ನೂ ಸಣ್ಣವರನ್ನಾಗಿ ಮಾಡೋದಿಲ್ಲ
ಇದು ಬಹಳ ಸಿಂಪಲ್ ವಿಷಯವಾಗಿದ್ದು, ಹೆಚ್ಚಿನ ಜನರು ಇದರ ಬಗ್ಗೆ ಚಿಂತಿತರಾಗಿರ್ತಾರೆ. ಕ್ಷಮೆ ಕೇಳೋದು ತುಂಬಾ ಕಷ್ಟ , ಜನರು ಅದನ್ನು ಅರ್ಥಮಾಡಿಕೊಳ್ಳುವಷ್ಟು ಸುಲಭವಲ್ಲ. ನಿಮ್ಮ ಸಂಗಾತಿಗೆ ಕ್ಷಮೆಯಾಚಿಸಲು ನೀವು ನಿಮ್ಮ ಅಹಂ ಅನ್ನು ಬದಿಯಲ್ಲಿ ಇಟ್ಟುಕೊಳ್ಳಬೇಕು.ತಪ್ಪು ನಿಮ್ಮ ಸೈಡ್ ಇದ್ದರೆ, ಮುಂದೆ ಹೋಗಿ ಸಾರಿ(Sorry) ಕೇಳೋದ್ರಲ್ಲಿ, ತಪ್ಪೇನೂ ಇಲ್ಲ.
ಜಗಳಕ್ಕೆ ಕಾರಣಗಳನ್ನು(Reasons) ಹುಡುಕಲು ಪ್ರಯತ್ನಿಸಬೇಡಿ
ನೀವು ಆಗಾಗ್ಗೆ ಜಗಳವಾಡುತ್ತಿದ್ದರೆ, ಅದರ ಬಗ್ಗೆ ನೆಪಗಳನ್ನು ಹೇಳಲು ಪ್ರಯತ್ನಿಸಬೇಡಿ. ಜಗಳ ಯಾಕೆ ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳೋದು ಹೆಚ್ಚು ಮುಖ್ಯ. ಏನಾಯಿತು ಮತ್ತು ಅದು ಏಕೆ ಸಂಭವಿಸಿತು ಎಂಬುದರ ಬಗ್ಗೆ ನೀವು ನೆಪಗಳನ್ನು ಹೇಳುತ್ತಲೇ ಇದ್ದರೆ, ಆಗ ಜಗಳ ಪರಿಹಾರವಾಗೋದಿಲ್ಲ. ನೀವು ಜಗಳ ಶುರು ಮಾಡಿದ್ದರೆ ಮತ್ತು ಏನಾದರೂ ತಪ್ಪು ಹೇಳಿದರೆ, ಅದನ್ನು ಸ್ವೀಕರಿಸಿ.
ಸಂಬಂಧಗಳ ಮೇಲೆ ಹೆಚ್ಚು ಗಮನ ಹರಿಸಿ, ಜಗಳದ ಬಗ್ಗೆ ಅಲ್ಲ
ನೀವು ಆಗಾಗ್ಗೆ ಜಗಳವಾಡುತ್ತಿದ್ದರೆ, ಅದರಿಂದ ಸಂಬಂಧ ಹಾಳಾಗಬಹುದು. ಆದುದರಿಂದ ಸಂಬಂಧದ ಬಗ್ಗೆ ಹೆಚ್ಚು ಗಮನ ಹರಿಸಬೇಕು, ಜಗಳದ ಮೇಲಲ್ಲ. ನೀವು ಜಗಳದ ಬಗ್ಗೆ ಯೋಚಿಸುತ್ತಿದ್ದರೆ, ನೀವು ಮುಂದೆ ಹೋಗಲು ಸಾಧ್ಯವಾಗೋದಿಲ್ಲ. ಬದಲಾಗಿ, ನೀವು ಸಂಬಂಧದ ಮೇಲೆ ಗಮನ ಹರಿಸಬೇಕು, ಇದರಿಂದ ಭವಿಷ್ಯದಲ್ಲಿ ನಿಮ್ಮ ಸಂಬಂಧವು ಉತ್ತಮವಾಗಿರುತ್ತೆ. ನಿಮ್ಮ ಸಂಬಂಧ ಹಳಸಿದ್ದರೆ, ಕಪಲ್ಸ್ ಥೆರಪಿ(Couple therapy) ಸಹ ಉತ್ತಮ ಆಯ್ಕೆ..