ಹುಟ್ಟಿದ ಮಗುವಿನ ತಂದೆ ಯಾರು ಎಂದು ತಗಾದೆ ತೆಗೆದ ಪತಿಯ ನಡೆಗೆ ಬೇಸತ್ತ ತಾಯಿ 14 ದಿನ ನವಜಾತ ಶಿಶುವನ್ನು ಬಾವಿಗೆಸೆದಿದ್ದಾಳೆ. ಮನೆಯ ಸಮೀಪದ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.

ಕೊಲೆ ಆರೋಪದಲ್ಲಿ ಪೊಲೀಸರು ಮಹಿಳೆಯರನ್ನು ಬಂಧಿಸಿದ್ದಾರೆ. ಬಂಕುರಾದ ಮಂಕನಾಲಿ ಪಂಚಾಯತ್‌ನ ಕರಂಜೋರಾದಲ್ಲಿ ಘಟನೆ ನಡೆದಿದೆ. ಘಟನೆ ಸಂಬಂಧಿಸಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಆನ್‌ಲೈನ್ ಮೀಟಿಂಗ್ ಮಧ್ಯೆಯೇ ಜೋಡಿಯ ಲೈವ್ ಸೆಕ್ಸ್, ಆಡಿಯೋ ಮ್ಯೂಟ್ ಮಾಡಿದ್ರು!

ತಂದೆ ಯಾರು ಎನ್ನುವ ವಿಚಾರವಾಗಿ ದಂಪತಿ ಮಧ್ಯೆ ವಾಗ್ವಾದ ನಡೆದು ಜಗಳ ತಾರಕಕ್ಕೇರಿತ್ತು. ಕರಂಜೋರಾ ಗ್ರಾಮದ ಆಶಿಸ್ ಬಾವುರಿ  ಪ್ರೀತಿಸಿ ಮದುವೆಯಾಗಿದ್ದರು. ಕೆಲವು ವಾರದ ಹಿಂದೆ ಆತನ ಪತ್ನಿ ಬಂಕುರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಮಗು ಹುಟ್ಟಿದ ಕೂಡಲೇ ದಂಪತಿ ಮಧ್ಯೆ ಜಗಳ ಶುರುವಾಗಿದೆ.

ಡೆಲಿವರಿ ನಂತರ ಆಸ್ಪತ್ರೆ ಆತ್ನ ಪತ್ನಿಗಾಗಿ ನೀಡಿದ ನಂಬರ್ ಆಶಿಸ್ ಕಳೆದುಕೊಂಡಿದ್ದ. ನಂತರ ಮಗುವ ತಪ್ಪಿ ಹೋಗಿದೆಯಾ, ತಂದೆ ಯಾರು ಎಂಬ ವಿಚಾರವಾಗಿ ಜಗಳ ಆರಂಭವಾಗಿದೆ.

ಗರ್ಭಿಣಿ ಲಿವ್ ಇನ್ ಸಂಗಾತಿ ಕೊಲೆ ಮಾಡಿ ಸ್ಟೇಶನ್‌ಗೆ ಬಂದು ಪೆನ್ನು-ಪೇಪರ್ ಕೇಳಿದ!

ಆಗಸ್ಟ್ 18ರಂದು ಅರ್ಚನಾ ಮನೆಗೆ ಬಂದಿದ್ದಳು. ಆದರೆ ಜಗಳ ಮಾತ್ರ ಕೊನೆಯಾಗಿಲ್ಲ. ಆಗಸ್ಟ್ 20ರಂದು ಬೆಳಗ್ಗೆ ಮಗು ಕಾಣೆಯಾಗಿತ್ತು. ಆದರೆ ತನಿಖೆ ನಂತರ ಅರ್ಚನ ಮಗುವನ್ನು ಬಾವಿಗೆಸೆದು ಕೊಂದಿರುವುದು ತಿಳಿದು ಬಂದಿದೆ.