ಗರ್ಭಿಣಿ ಲಿವ್ ಇನ್ ಸಂಗಾತಿ ಕೊಲೆ ಮಾಡಿ ಸ್ಟೇಶನ್‌ಗೆ ಬಂದು ಪೆನ್ನು-ಪೇಪರ್ ಕೇಳಿದ!

ಲಿವ್ ಇನ್ ಸಂಗಾತಿ ಹತ್ಯೆ ಮಾಡಿ ನೇರವಾಗಿ ಠಾಣೆಗೆ ಬಂದ/ ನಾನು ಕೊಲೆ ಮಾಡಿದ್ದೇನೆ, ಗಲ್ಲಿಗೆ ಹಾಕಿ ಎಂದು ಬರೆದುಕೊಟ್ಟ/ ಇಬ್ಬರ ನಡುವೆ ಭಿನ್ನಾಭಿಪ್ರಾಯಲಕ್ಕೆ ಕಾರಣವಾಗಿದ್ದ ಯುವತಿ ಗರ್ಭಿಣಿ ವಿಚಾರ

Man walks into police station confesses to killing pregnant live-in partner Pune

ಪುಣೆ(ಆ. 17)  ಲಿವ್ ಇನ್  ರಿಲೇಶನ್ ಶಿಪ್ ನಲ್ಲಿ ಇದ್ದ ಗರ್ಭಿಣಿ ಸಂಗಾತಿಯನ್ನು ಹತ್ಯೆ ಮಾಡಿದ ಯುವಕನೊಬ್ಬ ನೇರವಾಗಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

27ರ ಹರೆಯದ ಯುವಕನೋರ್ವ ತನ್ನ ಗರ್ಭಿಣಿ ಲಿವ್‌ ಇನ್‌ ಸಂಗಾತಿ ಜತೆಗೆ ಜಗಳವಾಡಿ ನಂತರ ಆಕೆಯನ್ನು ಹತ್ಯೆಗೈದಿದ್ದಾನೆ.

ರಂಜನ್ ಗಾಂವ್‌ ಎಂಐಡಿಸಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕರೇಗಾಂವ್‌ ಗ್ರಾಮದಲ್ಲಿ ಶುಕ್ರವಾರ ಸಂಜೆ  ನಡೆದ ಪ್ರಕರಣ ಇದು. ಕೊಲೆ ಮಾಡಿ ವ್ಯಕ್ತಿಯು ಪೊಲೀಸ್‌ ಠಾಣೆಗೆ ತೆರಳಿ ತನ್ನ 24ರ ಹರೆಯದ ಲಿವ್‌ ಇನ್‌ ಸಂಗಾತಿಯ ಹತ್ಯೆ ಮಾಡಿದ್ದೇನೆ ಎಂದಿದ್ದಾನೆ.

ನೀರು ಕೇಳಲು ಬಂದು ಕೊಲೆ ಮಾಡಿದರು

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಿರಣ್ ಪಂಡೆ ಪೊಲೀಸ್ ಠಾಣೆಗೆ ಬಂದು ಶರಣಾದ ಆರೋಪಿ. ಹತ್ಯೆಯಾದ ಸಂಗಾತಿ ಸೋನಾಮಾನಿ ಸೋರನ್ ಸಹ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರು ಹಲವು ತಿಂಗಳಿನಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದರು.

ಆರೋಪಿಯು ಪೊಲೀಸ್‌ ಠಾಣೆಗೆ ಬಂದು ಒಂದು ತುಂಡು ಕಾಗದ ಮತ್ತು ಪೆನ್ನು ಕೇಳಿದ. ಅನಂತರ ಆತ ಕಾಗದದಲ್ಲಿ ತಾನು ಖಿನ್ನತೆಯ ರೋಗಿಯಾಗಿದ್ದು, ತನ್ನ ಗರ್ಭಿಣಿ ಲಿವ್‌ ಇನ್‌ ಸಂಗಾತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದಾಗಿ ಬೆರೆದುಕೊಂಡಿದ್ದು, ತನ್ನನ್ನು ಗಲ್ಲಿಗೇರಿಸಬೇಕೆಂದು ಕೋರಿ, ಸಂಪೂರ್ಣ ಅಡ್ರೆಸ್ ಬರೆದು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ಸುದ್ದಿ ಕೇಳಿದ ಪೊಲೀಸರು ಅವರು ವಾಸ ಮಾಡುತ್ತಿದ್ದ ಜಾಗಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಯುವತಿ ಕೋಣೆಯ ಮೂಲೆಯೊಂದರಲ್ಲಿ ಶವವಾಗಿ ಬಿದ್ದಿದ್ದಳು.

ಯುವತಿ ಗರ್ಭವತಿಯಾಗಿದ್ದು ಇಬ್ಬರ ನಡುವೆ ಆಗಾಗ ಗಲಾಟೆ ನಡೆಯಲು ಕಾರಣವಾಗಿತ್ತು.   ಗರ್ಭಪಾತದ ವಿಚಾರ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಂದಿಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

"

Latest Videos
Follow Us:
Download App:
  • android
  • ios