Asianet Suvarna News Asianet Suvarna News

'ಅಪ್ರಾಪ್ತರಿಗೆ ಕಾಂಡೋಮ್, ಗರ್ಭನಿರೋಧಕ ಮಾರುವುದಿಲ್ಲ'- ಔಷಧಿ ಅಂಗಡಿಗಳೆದುರು ಪೋಸ್ಟರ್‌

ಕಾಂಡೋಮ್‌ ಮತ್ತು ಗರ್ಭನಿರೋಧಕ ಮಾತ್ರೆ ಕುರಿತು ಅಪ್ರಾಪ್ತ ಮಕ್ಕಳಿಗೆ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಮಟ್ಟದ ಔಷಧ ನಿಯಂತ್ರಣ ಅಧಿಕಾರಿಗಳಿಗೆ ರಾಜ್ಯ ಔಷಧ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ

Condoms and contraceptives are not sold to minors, Poster in front of Medical stores Vin
Author
First Published Jan 22, 2023, 9:05 AM IST

ಕಾಂಡೋಮ್‌ ಮತ್ತು ಗರ್ಭನಿರೋಧಕ ಮಾತ್ರೆ ಕುರಿತು ಅಪ್ರಾಪ್ತ ಮಕ್ಕಳಿಗೆ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಮಟ್ಟದ ಔಷಧ ನಿಯಂತ್ರಣ ಅಧಿಕಾರಿಗಳಿಗೆ ರಾಜ್ಯ ಔಷಧ ನಿಯಂತ್ರಣ ಇಲಾಖೆ ಸೂಚನೆ ನೀಡಿದೆ. ಅಂಗಡಿಗಳ ಮುಂಭಾಗದಲ್ಲಿ ‘ಅಪ್ರಾಪ್ತ ಮಕ್ಕಳಿಗೆ ಕಾಂಡೋಮ್‌ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ಮಾರಾಟ ಮಾಡುವುದಿಲ್ಲ, ಇಂತಹ ಔಷಧಿಗಳನ್ನು ಉಪಯೋಗಿಸಬಾರದು’ ಎಂದು ಪೋಸ್ಟರ್‌ ಹಾಕಲು ಕ್ರಮ ಕೈಗೊಳ್ಳಲಾಗಿದೆ.

ಶಾಲಾ ಮಕ್ಕಳ ಬ್ಯಾಗ್‌ಗಳಲ್ಲಿ ಕಾಂಡೋಮ್‌ ಮತ್ತು ಗರ್ಭ ನಿರೋಧಕ ಮಾತ್ರೆ (Contraceptives) ಪತ್ತೆಯಾದ ಕಾರಣ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಅಗತ್ಯ ಕ್ರಮ ಕೈಗೊಳ್ಳಲು ಔಷಧ ನಿಯಂತ್ರಣ ಇಲಾಖೆಗೆ ಕೋರಿತ್ತು. ಈ ಹಿನ್ನೆಲೆಯಲ್ಲಿ ಸುತ್ತೋಲೆ ಹೊರಡಿಸಿದ್ದು, ‘ಇಲಾಖೆಯ ಅಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿನ ಔಷಧ ಅಂಗಡಿ (Medical store)ಯವರೊಂದಿಗೆ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಜಾಗೃತಿ ಕಾರ್ಯಕ್ರಮವನ್ನು ಕೈಗೊಳ್ಳಬೇಕು. ಎಲ್ಲಾ ಔಷಧ ಅಂಗಡಿಗಳ ಮುಂಭಾಗದಲ್ಲಿ ‘ಅಪ್ರಾಪ್ತ ಮಕ್ಕಳಿಗೆ ಕಾಂಡೋಮ್‌ ಮತ್ತು ಗರ್ಭನಿರೋಧಕ ಮಾತ್ರೆಗಳನ್ನು ಮಾರಾಟ ಮಾಡುವುದಿಲ್ಲ/ಇಂತಹ ಔಷಧಿಗಳನ್ನು ಉಪಯೋಗಿಸಬಾರದು’ ಎಂದು ಪೋಸ್ಟರ್‌ಗಳನ್ನು ಪ್ರದರ್ಶಿಸಿ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಇಂತಹ ವಸ್ತುಗಳನ್ನು ಔಷಧ ಅಂಗಡಿಗಳು ಮಕ್ಕಳಿಗೆ (Children) ಮಾರಾಟ ಮಾಡುವುದು ಕಂಡುಬಂದರೆ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940ರ ಅಡಿಯಲ್ಲಿ ಕಾನೂನು ಕ್ರಮ ಕೈಗೊಂಡು ವರದಿ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Unwanted Pregnancy ಈ ದೇಶದ ಸಮಸ್ಯೆ, ಯಾಕ್ಹೀಗೆ? ಮಕ್ಕಳಿಗೆ ಸಿಗುತ್ತೆ ಫ್ರೀ ಕಾಂಡೋಮ್

ಕಾಂಡೋಮ್‌ ಬ್ಯಾನ್‌ ಅಲ್ಲ, ಜಾಗೃತಿಗೆ ಸೂಚನೆ
ಸುತ್ತೋಲೆ ಕುರಿತು ಸ್ಪಷ್ಟನೆ ನೀಡಿರುವ ರಾಜ್ಯ ಔಷಧ ನಿಯಂತ್ರಕ ಭಾಗೋಜಿ ಟಿ. ಖಾನಾಪೂರೆ, ‘ಕಾಂಡೋಮ್‌ ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟ ಬ್ಯಾನ್‌ ಮಾಡಿಲ್ಲ. ಅವುಗಳನ್ನು ಅಪ್ರಾಪ್ತರು ಬಳಸಬಾರದು ಎಂಬ ಕುರಿತು ಮಕ್ಕಳಿಗೆ ಜಾಗೃತಿ (Awareness) ಮೂಡಿಸುವುದಕ್ಕೆ ಕ್ರಮ ಕೈಗೊಂಡಿದ್ದೇವೆ. ಇವುಗಳನ್ನು ಖರೀದಿಸಲು ಬರುವ ಮಕ್ಕಳಿಗೆ ಕೌನ್ಸೆಲಿಂಗ್‌ ಮಾಡಲು ಮೆಡಿಕಲ್ ಶಾಪ್‌ ಮಾಲಿಕರಿಗೆ ತಿಳಿಸಿದ್ದು, ಮಕ್ಕಳು ತಮ್ಮ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗದಂತೆ ತಿಳಿ ಹೇಳಲು ಸೂಚನೆ ನೀಡಲಾಗಿದೆ’ ಎಂದು ತಿಳಿಸಿದ್ದಾರೆ.

ಲೈಂಗಿಕ ಕ್ರಿಯೆ ಮಧ್ಯೆ ಕಾಂಡೋಮ್ ಹರಿಯೋದು ಕಾಮನ್, ಪ್ರೆಗ್ನೆನ್ಸಿ ತಪ್ಪಿಸಲು ಹೀಗೆ ಮಾಡಿ

ಫ್ರಾನ್ಸ್‌ನಲ್ಲಿ 18ರಿಂದ 25 ವರ್ಷದ ಮಕ್ಕಳಿಗೆ ಕಾಂಡೋಮ್‌ ಫ್ರೀ
ಯುವಜನರಲ್ಲಿ ಅನಗತ್ಯ ಗರ್ಭಧಾರಣೆಯನ್ನು ಕಡಿಮೆ ಮಾಡಲು, 18ರಿಂದ 25 ವರ್ಷ ವಯಸ್ಸಿನವರಿಗೆ ಉಚಿತವಾಗಿ ಕಾಂಡೋಮ್‌ (Condom free) ಒದಗಿಸಲು ಫ್ರಾನ್ಸ್ ಸರ್ಕಾರ ನಿರ್ಧರಿಸಿದೆ. ಇನ್ನು ಮುಂದೆ ಫಾರ್ಮಸಿಗಳು 18ರಿಂದ 25 ವರ್ಷ ವಯಸ್ಸಿನವರಿಗೆ ಫ್ರೀಯಾಗಿ ಕಾಂಡೋಮ್ ನೀಡುತ್ತವೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಘೋಷಿಸಿದ್ದಾರೆ. 'ಇದು ಗರ್ಭನಿರೋಧಕಕ್ಕೆ ಒಂದು ಸಣ್ಣ ಕ್ರಾಂತಿಯಾಗಿದೆ' ಎಂದು ಫಾಂಟೈನ್-ಲೆ-ಕಾಮ್ಟೆಯಲ್ಲಿ ಆರೋಗ್ಯ (Health) ಚರ್ಚೆಯಲ್ಲಿ ಮ್ಯಾಕ್ರನ್ ಹೇಳಿದರು. ಔಷಧಾಲಯಗಳಲ್ಲಿ (Pharmacy), ಜನವರಿ 1ರಿಂದ 18ರಿಂದ 25 ವರ್ಷ ವಯಸ್ಸಿನವರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಮ್ಯಾಕ್ರನ್ ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ತಿಳಿಸಿದರು. 

ಲೈಂಗಿಕ ರೋಗಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ
ಲೈಂಗಿಕವಾಗಿ ಹರಡುವ ರೋಗಗಳ (ಎಸ್‌ಟಿಡಿ) ಹರಡುವಿಕೆಯನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ಮುಂದಿನ ವರ್ಷದಿಂದ ಫ್ರಾನ್ಸ್‌ನ ಯುವಜನರು ಕಾಂಡೋಮ್‌ಗಳನ್ನು ಉಚಿತವಾಗಿ ಪಡೆಯಬಹುದು ಎಂದು ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮಾಹಿತಿ ನೀಡಿದ್ದಾರೆ. X-ರೇಟೆಡ್ ಚಲನಚಿತ್ರ ಪ್ರೇಮಿಗಳಲ್ಲಿ ಕಾಂಡೋಮ್‌ಗಳ ಬಳಕೆಯನ್ನು ಉತ್ತೇಜಿಸುವ ಮತ್ತು HIV ಹರಡುವಿಕೆಯನ್ನು ತಡೆಗಟ್ಟುವ ಅಭಿಯಾನದ ಭಾಗವಾಗಿ, ಫ್ರೆಂಚ್ ಸರ್ಕಾರವು 1998ರಲ್ಲಿ ಐದು ಕಿರು ಕಾಮಪ್ರಚೋದಕ ಚಲನಚಿತ್ರಗಳನ್ನು ನಿಯೋಜಿಸಿತ್ತು. ಪ್ರತಿ ಐದರಿಂದ ಎಂಟು ನಿಮಿಷಗಳ ಚಲನಚಿತ್ರದಲ್ಲಿ ವಿಭಿನ್ನ ಸನ್ನಿವೇಶವನ್ನು ಪ್ರದರ್ಶಿಸಲಾಯಿತು. 

Follow Us:
Download App:
  • android
  • ios