Asianet Suvarna News Asianet Suvarna News

Unwanted Pregnancy ಈ ದೇಶದ ಸಮಸ್ಯೆ, ಯಾಕ್ಹೀಗೆ? ಮಕ್ಕಳಿಗೆ ಸಿಗುತ್ತೆ ಫ್ರೀ ಕಾಂಡೋಮ್

ಪ್ಲಾನ್ ಇಲ್ಲದೆ ಗರ್ಭ ಧರಿಸಿದಾಗ ಮಹಿಳೆಯರು ಗರ್ಭಪಾತದ ಮೊರೆ ಹೋಗ್ತಾರೆ. ಆದ್ರೆ ಇದ್ರಿಂದ ಅನೇಕ ಸಮಸ್ಯೆಯನ್ನು ಎದುರಿಸ್ತಾರೆ. ಸುರಕ್ಷಿತವಲ್ಲದ ಸೆಕ್ಸ್ ಬರೀ ಅನಗತ್ಯ ಗರ್ಭಧಾರಣೆ ಮಾತ್ರವಲ್ಲದೆ ಲೈಂಗಿಕ ರೋಗದ ವೇಗವನ್ನು ಹೆಚ್ಚಿಸುತ್ತದೆ.
 

This European Country Is Facing Crisis  Due To Unwanted Pregnancy
Author
First Published Dec 12, 2022, 3:39 PM IST

ಇತ್ತೀಚಿನ ದಿನಗಳಲ್ಲಿ ಸಂಭೋಗ ಎನ್ನುವುದು ಶಾಲೆ ಮಟ್ಟಕ್ಕೆ ಬಂದು ನಿಂತಿದೆ. ಶಾಲೆಗಳಲ್ಲಿ ಮಕ್ಕಳು ವಿದ್ಯೆ ಕಲಿಯುವ ಬದಲು ಪ್ರೀತಿ, ಶಾರೀರಿಕ ಸಂಬಂಧದಂತಹ ಕೆಲಸದಲ್ಲಿ ನಿರತರಾಗ್ತಿದ್ದಾರೆ.  ಅಸುರಕ್ಷಿತ ಸೆಕ್ಸ್ ನಿಂದಾಗಿ ಗರ್ಭಧಾರಣೆ ಪ್ರಕರಣಗಳು ಕೂಡ ಗಣನೀಯವಾಗಿ ಹೆಚ್ಚಾಗ್ತಿದೆ. ವಿಶ್ವದಾದ್ಯಂತ ಹದಿಹರೆಯದ ಮಕ್ಕಳಲ್ಲಿ ಗರ್ಭಧಾರಣೆ ಹೆಚ್ಚಾಗ್ತಿರೋದು ಆತಂಕ ಸೃಷ್ಟಿಸಿದೆ. ಇದಲ್ಲದೆ ಯುವಜನರಲ್ಲಿ ಸೆಕ್ಸ್ ಸಂಬಂಧಿ ರೋಗಗಳ ಗಣನೀಯವಾಗಿ ಹೆಚ್ಚಾಗ್ತಿದೆ. 

ಮಕ್ಕಳಿ (Children) ಗೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ (Sex Education) ನೀಡುವ ಅಗತ್ಯವಿದೆ.  ಆದ್ರೆ ಫ್ರಾನ್ಸ್ (France) ಲೈಂಗಿಕ ಶಿಕ್ಷಣ ನೀಡಿಯೂ ಸಮಸ್ಯೆ ಎದುರಿಸುತ್ತಿದೆ. ಅಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣ ಲಭ್ಯವಿದ್ರೂ 2020 ಮತ್ತು 2021 ರಲ್ಲಿ ಲೈಂಗಿಕವಾಗಿ ಹರಡುವ ಸೋಂಕಿನ ಪ್ರಕರಣಗಳಲ್ಲಿ ಶೇಕಡಾ 30ರಷ್ಟು ಹೆಚ್ಚಳ ಕಂಡು ಬಂದಿದೆ. ಇದೇ ಕಾರಣಕ್ಕೆ ಫ್ರಾನ್ಸ್ ಸರ್ಕಾರ (Govt),18 ವರ್ಷ ಮೇಲ್ಪಟ್ಟವರಿಗೆ ಕಾಂಡೋಮ್ ಉಚಿತವಾಗಿ ನೀಡುವ ಘೋಷಣೆ ಮಾಡಿದೆ. 

ಫ್ರಾನ್ಸ್‌ನಲ್ಲಿ 18ರಿಂದ 25 ವರ್ಷದ ಮಕ್ಕಳಿಗೆ ಕಾಂಡೋಮ್‌ ಫ್ರೀ

ಫ್ರಾನ್ಸ್ ನಲ್ಲಿ ಅನೇಕ ಯುವತಿಯರು ಅನಗತ್ಯ ಗರ್ಭಧಾರಣೆ ಸಮಸ್ಯೆಗೆ ಒಳಗಾಗಿದ್ದಾರೆ. ಗರ್ಭ ಧರಿಸಿದ ಮೇಲೆ ಏನು ಮಾಡಬೇಕೆಂದು ಅಥವಾ ಅದರಿಂದ ಹೊರಬರುವುದು ಹೇಗೆ ಎಂಬುದು ಅವರಿಗೆ ತಿಳಿಯುತ್ತಿಲ್ಲ. ಕೆಲವು ಮಹಿಳೆಯರು ಮೊದಲ ಅಥವಾ ಎರಡನೇ ವಾರದಲ್ಲಿ ಗರ್ಭಪಾತ ಮಾಡಿಸಿಕೊಳ್ತಿದ್ದಾರೆ. ಆದರೆ ಅದರ ವಿಧಾನಗಳು ಅಥವಾ ಆಯ್ಕೆಗಳ ಬಗ್ಗೆಯೂ ಅವರಿಗೆ ಸರಿಯಾಗಿ ತಿಳಿದಿಲ್ಲ. ಇದನ್ನು ತಡೆಯಲು ಸರ್ಕಾರ ಈಗ ಉಚಿತ ಕಾಂಡೋಮ್ ವ್ಯವಸ್ಥೆ ಮಾಡಿದೆ. ಫ್ರಾನ್ಸ್ ಯುವಕರಲ್ಲಿ ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಎಸ್ ಟಿಐ ಹೆಚ್ಚಾಗುತ್ತಿವೆ. 2012 ಮತ್ತು 2016 ರ ನಡುವೆ, ಕ್ಲಮೈಡಿಯ ಮತ್ತು ಗೊನೊರಿಯಾ ಪ್ರಕರಣಗಳು ಮೂರು ಪಟ್ಟು ಹೆಚ್ಚು ಏರಿಕೆ ಕಂಡಿವೆ. 2012 ರಲ್ಲಿ  ಕ್ಲಮೈಡಿಯದ 76,918 ಪ್ರಕರಣ ದಾಖಲಾಗಿತ್ತು. 2016 ರಲ್ಲಿ 267,097 ಕ್ಕೆ ಏರಿತು. 2012ರಲ್ಲಿ 15,067 ಗೊನೊರಿಯಾ ಪ್ರಕರಣ ದಾಖಲಾಗಿದ್ದರೆ 2016ರಲ್ಲಿ 49,628ಕ್ಕೆ ಏರಿಕೆಯಾಗಿತ್ತು. ಅದೇ ಸಮಯದಲ್ಲಿ, 2017 ಮತ್ತು 2019 ರ ನಡುವೆ 15 ರಿಂದ 29 ವರ್ಷ ವಯಸ್ಸಿನ ಯುವಕರಲ್ಲಿ ಶೇಕಡಾ 45 ರಷ್ಟು ಎಸ್ ಟಿಐ ಪ್ರಕರಣಗಳು ಕಂಡುಬಂದಿವೆ.  ಏಡ್ಸ್ ಮತ್ತು ಇತರ ಲೈಂಗಿಕವಾಗಿ ಹರಡುವ ಸೋಂಕುಗಳು ಹರಡದಂತೆ  ತಡೆಯುವುದು ಮತ್ತು  ಅನಪೇಕ್ಷಿತ ಗರ್ಭಧಾರಣೆಗೂ ಕಡಿವಾಣ ಹಾಕುವುದು ಫ್ರಾನ್ಸ್ ನ ಮುಖ್ಯ ಉದ್ದೇಶವಾಗಿದೆ. 

ಫ್ರಾನ್ಸ್ ನಲ್ಲಿ ಇದೇ ವರ್ಷ ಸರ್ಕಾರ  26 ವರ್ಷದವರೆಗಿನ ಎಲ್ಲಾ ಮಹಿಳೆಯರಿಗೆ ಗರ್ಭನಿರೋಧಕಗಳನ್ನು (Contraceptives) ಉಚಿತವಾಗಿ ನೀಡುವ ಯೋಜನೆ ಜಾರಿಗೆ ತಂದಿದೆ. ಹಣದ ಕೊರತೆ ಕಾರಣಕ್ಕೆ ಗರ್ಭನಿರೋಧಕದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಸರ್ಕಾರ ಈ ಯೋಜನೆ ಶುರು ಮಾಡಿದೆ. ಸುಮಾರು 30 ಲಕ್ಷ ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.

ಫ್ರಾನ್ಸ್ ನಲ್ಲಿ ಮಾತ್ರವಲ್ಲ ವಿಶ್ವದ ಅನೇಕ ದೇಶಗಳಲ್ಲಿ ಅನಗತ್ಯ ಗರ್ಭಧಾರಣೆ ಹಾಗೂ ಲೈಂಗಿಕ ರೋಗಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಗರ್ಭನಿರೋಧಕ ವಿಧಾನಗಳ ಬಳಕೆ ಕೆಲವರಿಗೆ ತಿಳಿದಿಲ್ಲ. ಇನ್ನು ಕೆಲ ಮಹಿಳೆಯರು ಬಳಸುವ ಗರ್ಭನಿರೋಧಕ ವಿಧಾನಗಳು ವಿಫಲವಾಗುತ್ತವೆ. ಇದರಿಂದಾಗ ಮಹಿಳೆಯರು ತೊಂದರೆ ಅನುಭವಿಸುತ್ತಾರೆ. 

ಗರ್ಭಿಣಿಯರಿಗೂ ಮೊಟ್ಟೆ ಒಳ್ಳೇಯದು, ಇತಿ ಮಿತಿಯಲ್ಲಿರುವಂತೆ ಇರಲಿ ಎಚ್ಚರ!

ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿ ವರದಿಯೊಂದರ ಪ್ರಕಾರ, ಪ್ರತಿ ವರ್ಷ 120 ದಶಲಕ್ಷಕ್ಕೂ ಹೆಚ್ಚು ಯೋಜಿತವಲ್ಲದ ಗರ್ಭಧಾರಣೆಯ ಪ್ರಕರಣಗಳು ವಿಶ್ವಾದ್ಯಂತ ಸಂಭವಿಸುತ್ತವೆ. ಶೇಕಡಾ 60ಕ್ಕಿಂತಲೂ ಹೆಚ್ಚು ಯೋಜಿತವಲ್ಲದ ಗರ್ಭಧಾರಣೆಗಳು ಗರ್ಭಪಾತದಲ್ಲಿ ಕೊನೆಗೊಳ್ಳುತ್ತವೆ. ಶ್ರೀಮಂತ ದೇಶಗಳಲ್ಲಿ ಗರ್ಭಪಾತ ಕಾನೂನುಬದ್ಧವಾಗಿದೆ ಮತ್ತು ಗರ್ಭಪಾತ ವಿಧಾನಗಳು ಸಾಮಾನ್ಯವಾಗಿ ಅಲ್ಲಿನ ಮಹಿಳೆಯರಿಗೆ ಲಭ್ಯವಾಗುತ್ತವೆ. ಆದ್ರೆ ಯುಎನ್ ವರದಿಯ ಪ್ರಕಾರ, ಸುಮಾರು ಅರ್ಧದಷ್ಟು ಶೇಕಡಾ 45 ರಷ್ಟು ಗರ್ಭಪಾತ ಅಸುರಕ್ಷಿತವಾಗಿ ನಡೆಯುತ್ತದೆಯಂತೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ 1990 ರ ದಶಕದ ಉತ್ತರಾರ್ಧದಿಂದ ಅನಗತ್ಯ ಗರ್ಭಧಾರಣೆಯ ಸಂಖ್ಯೆಯಲ್ಲಿ ಕುಸಿತ ಕಂಡುಬಂದಿದೆ. ವರದಿಯ ಪ್ರಕಾರ, ಈ ದೇಶಗಳಲ್ಲಿ ಗರ್ಭನಿರೋಧಕಗಳು ಮತ್ತು ಲೈಂಗಿಕ ಶಿಕ್ಷಣದ ಲಭ್ಯತೆ ಹೆಚ್ಚಿರುವುದು ಇದಕ್ಕೆ ಒಂದು ಕಾರಣ. ಆದ್ರೆ ಎಲ್ಲ ದೇಶಗಳಲ್ಲಿ ಇಳಿಕೆಯಾಗ್ತಿಲ್ಲ. ಯೋಜಿತವಲ್ಲದ ಗರ್ಭಧಾರಣೆಯನ್ನು ಎದುರಿಸುತ್ತಿರುವ ಮಹಿಳೆಯರ ಸಂಖ್ಯೆಯಲ್ಲಿ ವಾಸ್ತವಿಕವಾಗಿ ಶೇಕಡಾ 13 ರಷ್ಟು ಏರಿಕೆಯಾಗಿದೆ.

ಗರ್ಭಧಾರಣೆಯನ್ನು ತಪ್ಪಿಸಲು ಪ್ರಪಂಚದಾದ್ಯಂತ ಸುಮಾರು 257 ಮಿಲಿಯನ್ ಮಹಿಳೆಯರು ಸುರಕ್ಷಿತ ಮತ್ತು ಆಧುನಿಕ ಗರ್ಭನಿರೋಧಕ ವಿಧಾನಗಳನ್ನು ಬಳಸುವುದಿಲ್ಲ. ವಿಶ್ವದ ಮಹಿಳೆಯರಲ್ಲಿ ಕಾಲು ಭಾಗದಷ್ಟು ಅಥವಾ  ಶೇಕಡಾ 25 ರಷ್ಟು ಮಹಿಳೆಯರು ಲೈಂಗಿಕತೆ ಬೇಡಿಕೆಯನ್ನು ನಿರಾಕರಿಸಲು ಸಮರ್ಥರಾಗಿಲ್ಲ. ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ರಕ್ಷಣೆಯ ಬಗ್ಗೆ ಮಾಹಿತಿ ಮತ್ತು ಅರಿವಿನ ಕೊರತೆ ಅವರನ್ನು ಕಾಡ್ತಿದೆ. ಲೈಂಗಿಕ ಹಿಂಸೆ ಸೇರಿದಂತೆ ಅನೇಕ ಕಾರಣಗಳು ಅನಗತ್ಯ ಗರ್ಭಧಾರಣೆಗೆ ಕಾರಣವಾಗ್ತಿದೆ. ಇದ್ರಿಂದ ಲೈಂಗಿಕ ಖಾಯಿಲೆಯಲ್ಲಿ ಏರಿಕೆ ಕಂಡು ಬರ್ತಿದೆ. 
 

Follow Us:
Download App:
  • android
  • ios