ಸಂಸದ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಮದುವೆ ಬೆನ್ನಲ್ಲೇ ಶ್ರೀವಶ್ರಿ ಹಾಗೂ ತೇಜಸ್ವಿ ಸೂರ್ಯ ಮೊದಲ ಪೋಸ್ಟ್ ಶೇರ್ ಮಾಡಿದ್ದಾರೆ. ಈ ಪೈಕಿ ಶಿವಶ್ರೀ ಪತಿ ತೇಜಸ್ವಿ ಸೂರ್ಯಗೆ ನೀಡಿದ ಭರವಸೆ ಏನು?

ಬೆಂಗಳೂರು(ಮಾ.11) ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ ಶಿವಶ್ರಿ ಸ್ಕಂದಪ್ರಸಾದ್ ವಿವಾಹ ಮಹೋತ್ಸವ ಸರಳವಾದರೂ ಅದ್ಧೂರಿಯಾಗಿ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರು, ಸೆಲೆಬ್ರೆಟಿಗಳಾದ ಯಶ್ ಸೇರಿದಂತೆ ಹಲವು ಗಣ್ಯರು ಮದುವೆಗೆ ತೆರಳಿ ನವ ದಂಪತಿಗೆ ಶುಭ ಹಾರೈಸಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ತೇಜಸ್ವಿ ಸೂರ್ಯ ಹಾಗೂ ಶಿವಶ್ರಿ ಫೋಟೋ ಹಂಚಿಕೊಂಡು ಶುಭಾಶಯ ಕೋರಿದ್ದಾರೆ. ಇದೀಗ ಮದುವೆ ಬೆನ್ನಲ್ಲೇ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರಿ ಸೋಶಿಯಲ್ ಮೀಡಿಯಾದಲ್ಲಿ ಮಹತ್ವದ ಪೋಸ್ಟ್ ಮಾಡಿದ್ದಾರೆ. ತೇಜಸ್ವಿ ಸೂರ್ಯ ಎಲ್ಲರಿಗೂ ಧನ್ಯವಾದ ಹೇಳಿ ಪೋಸ್ಟ್ ಮಾಡಿದ್ದರೆ, ಶಿವಶ್ರಿ ಪತಿ ತೇಜಸ್ವಿ ಸೂರ್ಯಗೆ ಕೆಲ ಭರವಸೆಗಳನ್ನು ನೀಡಿದ್ದಾರೆ. 

ಶಿವಶ್ರಿ ಸ್ಕಂದಪ್ರಸಾದ್ ಮದುವೆ ಬಳಿಕ ಇನ್‌ಸ್ಟಾಗ್ರಾಂನಲ್ಲಿ ಮೊದಲ ಪೋಸ್ಟ್ ಹಂಚಿಕೊಂಡಿದ್ದಾರೆ. ಅರ್ಥಪೂರ್ಣವಾದ ಪೋಸ್ಟ್ ಮೂಲಕ ಪತಿ ತೇಜಸ್ವಿ ಸೂರ್ಯಗೆ ಭರವಸೆ ಮಾತ್ರವಲ್ಲ, ಆತ್ಮವಿಶ್ವಾಸವನ್ನು ತುಂಬಿದ್ದಾರೆ. ಹೌದು, ಶಿವಶ್ರಿ ಸ್ಕಂದಪ್ರಸಾದ್ ತಮ್ಮ ಪೋಸ್ಟ್ ಮೂಲಕ, ಸುಖ, ದುಃಖ, ಸವಾಲು, ಸಂಭ್ರಮ ಏನೇ ಇರಲಿ, ಪತಿ ತೇಜಸ್ವಿ ಸೂರ್ಯ ಜೊತೆ ನಿಲ್ಲುತ್ತೇನೆ. ಎಲ್ಲವನ್ನು ಸಮನಾಗಿ ಸ್ವೀಕರಿಸಿ ಪತಿಯ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಭರವಸೆ ನೀಡಿದ್ದಾರೆ.

ತೇಜಸ್ವಿ ಸೂರ್ಯ-ಶಿವಶ್ರಿ ಫೋಟೋಶೂಟ್‌ಗೆ ಎಲ್ಲರೂ ಫಿದಾ, ಏನಿದರ ವಿಶೇಷತೆ?

ನನ್ನ ಮಾರ್ಗದರ್ಶಕ, ನನ್ನ ಆತ್ಮೀಯ ಸ್ನೇಹಿತ, ನನ್ನ ಶಕ್ತಿ, ನನ್ನ ಎಲ್ಲವೂ ಆಗಿರುವ, ಜೀವನವೂ ನಮ್ಮನ್ನು ಎಲ್ಲಿಗೆ ಕರೆದೊಯ್ಯಲಿ, ಸುಖ, ದುಃಖ ಏನೇ ಇದ್ದರೂ ನಾನು ನಿಮ್ಮೊಂದಿಗೆ, ಹಿಂಜರಿಕೆಯಿಲ್ಲದೆ ಹೆಜ್ಜೆ ಹಾಕುತ್ತೇನೆ. ನೀನು ನನ್ನ ಜೊತೆಯಲ್ಲಿದ್ದಾಗ ನನಗೆ ಬೇಕಾದುದೆಲ್ಲವೂ ಇದೆ ಎಂದು ನನಗೆ ತಿಳಿದಿದೆ ನನ್ನ ರಾಘವ ಎಂದು ಶಿವಶ್ರಿ ಸ್ಕಂದಪ್ರಸಾದ್ ಪೋಸ್ಟ್ ಮೂಲಕ ಹೇಳಿದ್ದಾರೆ.

View post on Instagram

ಇತ್ತ ತೇಜಸ್ವಿ ಸೂರ್ಯ ತಮ್ಮ ಪೋಸ್ಟ್ ಮೂಲಕ ತುಂಬು ಹೃದಯ ಪ್ರೀತಿ ಅರ್ಪಿಸಿದ್ದಾರೆ. ಇಷ್ಟು ಸಂಖ್ಯೆಯಲ್ಲಿ ಮದುವೆಗೆ ಆಗಮಿಸಿ ಹರಸಿದಿ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಇಷ್ಟು ಪ್ರೀತಿ ಸಂಪಾಸಿದ್ದೇನೆ ಅನ್ನೋ ಭಾವುಕತೆ, ಜವಾಬ್ದಾರಿಯೂ ಹೆಗಲೇರಿದೆ.ಸಣ್ಣ ಮಕ್ಕಳಿಂದ ಹಿಡಿದು, 95 ವರ್ಷದ ವೃದ್ಧರ ವರೆಗೂ ಮದುವೆಗೆ ಆಗಮಿಸಿ ಹರಸಿದ್ದೀರಿ. ಪ್ರೀತಿ ತೋರಿದ್ದೀರಿ. 2 ಗಂಟೆ ಕ್ಯೂನಲ್ಲಿ ನಿಂತು ಹರಿಸಿದ್ದೀರಿ. ಕೆಲವರಿಗೆ ಸ್ಟೇಜ್ ಬಳಿ ಬರಲು ಸಾಧ್ಯವಾಗದೆ ದೂರದಿಂದಲೇ ಹರಸಿದ್ದೀರಿ. ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ ಕಾರಣ ಹಲವರಿಗೆ ತೊಂದರೆಗಳು ಆಗಿರಬಹುದು. ಇದಕ್ಕಾಗಿ ಕ್ಷಮೆ ಇರಲಿ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಯಾರಿಗೂ ಸಮಸ್ಯೆಯಾಗಬಾರದು ಎಂದು ಮತುವರ್ಜಿ ವಹಿಸಿ ಕಾರ್ಯಕ್ರಮ ಆಯೋಜಿಸಿದ್ದೇವೆ. ಆದರೆ ಹೆಚ್ಚಿನ ಸಂಖ್ಯೆ ಜನರಿದ್ದ ಕಾರಣ ಹಲವರಿಗೆ ಸಮಸ್ಯೆಯಾಗಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ನಾನು ಚಿರಋಣಿಯಾಗಿದ್ದೇನೆ. ನೀವು ತೋರಿದ ಪ್ರೀತಿ, ವಿಶ್ವಾಸಕ್ಕೆ ಪ್ರತಿಯಾಗಿ ನಾನು ಏನು ಕೊಡಲಿ. ನಾನು ಹಾಗೂ ಶಿವಶ್ರಿ ಈ ದೇಶದ ಅಭಿವೃದ್ಧಿಗಾಗಿ, ಸಂಸ್ಕೃತಿಯ ಉಳಿವಿಗಾಗಿ, ಜನರ ನೆಮ್ಮದಿಗಾಗಿ ನಮ್ಮ ನಮ್ಮ ಕ್ಷೇತ್ರದಲ್ಲಿ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತೇವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಕಪ್ ಗೆಲ್ಲದಿದ್ರೂ ಆರ್‌ಸಿಬಿ ಬೆಂಗಳೂರಿಗರ ಹೃದಯಲ್ಲಿದೆ ಯಾಕೆ? ತೇಜಸ್ವಿ ಸೂರ್ಯ ಬಿಚ್ಚಿಟ್ಟ ಫ್ಯಾನ್ಸ್ ಸೀಕ್ರೆಟ್