ಇದು ಬೆಂಗಳೂರಿನ ನೇಚರ್, ಒಮ್ಮೆ ಬೆಂಗಳೂರಿಗರ ಹೃದಯ ಗೆದ್ದರೆ ಸಾಕು, ಮತ್ತೆ ಪರಿಸ್ಥಿತಿ ಏನೇ ಇದ್ದರೂ ಯಾವತ್ತೂ ಕೈಬಿಡುವುದಿಲ್ಲ. ಮುಂದಿನ ಬಾರಿ ಆರ್‌ಸಿಬಿ ಕಪ್ ಗೆಲ್ಲುತ್ತೆ. ಕಪ್ ಗೆದ್ದರೂ ಇಲ್ಲದಿದ್ದರೂ ನಮ್ಮ ಸಪೋರ್ಟ್ ಆರ್‍ಸಿಬಿಗೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಅಷ್ಟಕ್ಕೂ ತೇಜಸ್ವಿ ಸೂರ್ಯ ಆಡಿದ ಮಾತುಗಳು ಭಾರಿ ಸಂಚಲನ ಸೃಷ್ಟಿಸುತ್ತಿರುವುದೇಕೆ?
ಬೆಂಗಳೂರು(ಮಾ.11) ಸಂಸದ ತೇಜಸ್ವಿ ಸೂರ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಾಯಕಿ, ಭರತ ನಾಟ್ಯ ನೃತ್ಯಪಟು ಶಿವಶ್ರಿ ಸ್ಕಂದಪ್ರಸಾದ್ ಮದುವೆಯಾಗಿರುವ ತೇಜಸ್ವಿ ಸೂರ್ಯ ಮದುವೆ ಫೋಟೋಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದರ ಜೊತಗೆ ತೇಜಸ್ವಿ ಸೂರ್ಯ ಆರ್‌ಸಿಬಿ ಕುರಿತು ಆಡಿದ ಮಾತುಗಳ ವಿಡಿಯೋ ಕೂಡ ಭಾರಿ ಸದ್ದು ಮಾಡುತ್ತಿದೆ. ವಿಶೇಷವಾಗಿ ಆರ್‌ಸಿಬಿಯ ಕಪ್ ನಮ್ದೆ ಅಭಿಯಾನ, ಆರ್‌ಸಿಬಿ ತಂಡಕ್ಕೆ ಬೆಂಬಲ ಸೇರಿದಂತೆ ಹಲವು ವಿಚಾರಗಳನ್ನು ಹೇಳಿದ್ದಾರೆ.
ಪಾಡ್‌ಕಾಸ್ಟ್ ಒಂದರಲ್ಲಿ ಸಂಸದ ತೇಜಸ್ವಿ ಸೂರ್ಯ ಆರ್‌ಸಿಬಿ ಕುರಿತು ಪ್ರಶ್ನೆಗೆ ಅಷ್ಟೇ ಉತ್ತಮವಾಗಿ ಉತ್ತರಿಸಿದ್ದಾರೆ. ನಿಮ್ಮ ನಗರ ಬೆಂಗಳೂರು, ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತೀರಿ, ಆದರೆ ಆರ್‌ಸಿಬಿ ಎಂದು ಪ್ರಶ್ನೇ ಕೇಳಲಾಗಿದೆ. ಆದರೆ ತೇಜಸ್ವಿ ಸೂರ್ಯ ಉತ್ತರ ಬೆಂಗಳೂರಿಗನ ಹೃದಯ ಗೆದ್ದಿದೆ. ನಮಗೂ ಆರ್‌ಸಿಬಿಗೂ ವಿಶೇಷ ಸಂಬಂಧವಿದೆ. ಮೊದಲ ಆವೃತ್ತಿಯಿಂದ ನಾವು ಆರ್‌ಸಿಬಿಯನ್ನು ಬೆಂಬಲಿಸುತ್ತಿದ್ದೇವೆ. ಆರ್‌ಸಿಬಿ ಬಗ್ಗೆ ನಾವು ಅತೀವ ಪ್ಯಾಶನೇಟ್ ಆಗಿದ್ದೇವೆ. ಆದರೆ ಪಂದ್ಯ ಗೆಲ್ಲುತ್ತೇವೆ, ಸೋಲುತ್ತೇವೆ. ಇದು ನಡೆದುಕೊಂಡೇ ಬಂದಿದೆ ಎಂದಿದ್ದಾರೆ.
ತೇಜಸ್ವಿ ಸೂರ್ಯ-ಶಿವಶ್ರಿ ಫೋಟೋಶೂಟ್‌ಗೆ ಎಲ್ಲರೂ ಫಿದಾ, ಏನಿದರ ವಿಶೇಷತೆ?
ಕನ್ನಡದಲ್ಲಿ ಪ್ರತಿ ಐಪಿಎಲ್ ಆವೃತ್ತಿ ಆಗಮಿಸಿದ ಅಭಿಯಾನ ನಡೆಯುತ್ತದೆ. ಈ ಸಲ ಕಪ್ ನಮ್ದೆ ಅಭಿಯಾನ. ಆದರೆ ಈ ಅಭಿಯಾನಕ್ಕೆ ದಶಕಗಳಾದರೂ ಆರ್‌ಸಿಬಿ ಕಪ್ ಗೆದ್ದಿಲ್ಲ. ಆದರೆ ನಮ್ಮ ಮಹಿಳಾ ಆರ್‌ಸಿಬಿ ತಂಡ ಕಪ್ ಗೆದ್ದಿದೆ. ನಮಗೆ ಅಚಲವಾದ ವಿಶ್ವಾಸವಿದೆ. ಆರ್‌ಸಿಬಿ ಟ್ರೋಫಿ ಗೆಲ್ಲುತ್ತೆ ಎಂದು ತೇಜಸ್ವಿ ಸೂರ್ಯಹೇಳಿದ್ದಾರೆ. ಇದು ಬೆಂಗಳೂರಿನ ನೇಚರ್. ಕಾರಣ ಒಮ್ಮೆ ನಾವು ಇಷ್ಟಪಟ್ಟರೆ ಮುಗೀತು. ಬಳಿಕ ನಮ್ಮ ಬೆಂಬಲ ಯಾವತ್ತೂ ಇದ್ದೇ ಇರುತ್ತೆ. ಪರಿಸ್ಥಿತಿ ಹೇಗೆ ಇರಲಿ, ಸೋಲು, ಗೆಲುವು ಏನೇ ಆಗಲಿ, ಬೆಂಗಳೂರಿಗರು ಬೆಂಬಲ ನೀಡುತ್ತಲೇ ಇರುತ್ತಾರೆ. ಆರ್‌ಸಿಬಿ ಎಂದಾಗ ಬೆಂಗಳೂರಿಗರು ಒಗ್ಗಟ್ಟಾಗುತ್ತಾರೆ. ಏನೇ ಆದರೂ ಬೆಂಬಲ ಹಾಗೇ ಇರುತ್ತೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಆರ್‌ಸಿಬಿ ಕುರಿತು ತೇಜಸ್ವಿ ಸೂರ್ಯ ಆಡಿದ ಮಾತುಗಳು ವೈರಲ್ ಆಗುತ್ತಿದೆ. ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೂ ಟ್ರೋಫಿ ಗೆದ್ದಿಲ್ಲ. ಆದರೆ ಪ್ರತಿ ಆರ್‌ಸಿಬಿ ಪಂದ್ಯದ ವೇಳೆ ತಂಡವನ್ನು ಬೆಂಬಲಿಸಲು ಅಭಿಮಾನಿಗಳು ಕಿಕ್ಕಿರಿದು ಸೇರುತ್ತಾರೆ. ಹೃದಯ ತುಂಬಿ ಹರಸುತ್ತಾರೆ, ಚಿಯರ್ ಮಾಡುತ್ತಾರೆ. ಈ ಸಲ ಕಪ್ ನಮ್ದೆ ಎಂದು ಭರ್ಜರಿ ಸಪೋರ್ಟ್ ಮಾಡುತ್ತಾರೆ. ಪಂದ್ಯ ಗೆದ್ದರೆ, ಟೂರ್ನಿಯಿಂದದಲೇ ಹೊರಬಿದ್ದರೆ, ಮುಂದಿನ ಆವೃತ್ತಿಯಲ್ಲಿ ಮತ್ತೆ ಆರ್‌ಸಿಬಿ ಪರ ಅಭಿಯಾನಗಳು ಆರಂಭಗೊಳ್ಳುತ್ತದೆ ಎಂದು ಆರ್‌ಸಿಬಿ ಅಭಿಮಾನಿಗಳು ಹಲವು ಬಾರಿ ಹೇಳಿದ್ದಾರೆ.
ತೇಜಸ್ವಿ ಸೂರ್ಯ ಮಾತ್ರವಲ್ಲ, ಕರ್ನಾಟಕದ ಸೆಲೆಬ್ರೆಟಿಗಳು, ರಾಜಕಾರಣಿಗಳು, ನಾಯಕರು ಸೇರಿದಂತೆ ಅಪಾರ ಅಭಿಮಾನಿಗಳ ನೇಚರ್ ಇದು. ಆರ್‌ಸಿಬಿ ಯಾವುದೇ ಸಂಕಷ್ಟ ಅನುಭವಿಸಲಿ,ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ನೀಡದೇ ಇರಲಿ, ಆದರೆ ಬೆಂಬಲ ಮಾತ್ರ ಆರ್‌ಸಿಬಿಗೆ ಇದ್ದೇ ಇರುತ್ತೆ. ಹೀಗಾಗಿ ಐಪಿಎಲ್ ಆವೃತ್ತಿಯಲ್ಲಿ ಲಾಯಲ್ ಫ್ಯಾನ್ಸ್ ಇರುವ ಏಕೈಕ ತಂಡ ಆರ್‌ಸಿಬಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
'ಆರ್‌ಸಿಬಿ ಈ ಸಲವೂ ಕಪ್ ಗೆಲ್ಲಬಾರ್ದು ಎಂದು ಪ್ರಾರ್ಥಿಸ್ತೇನೆ': ಮತ್ತೆ ವಿಷ ಕಾರಿದ CSK ಮಾಜಿ ಕ್ರಿಕೆಟಿಗ!
