ತೇಜಸ್ವಿ ಸೂರ್ಯ-ಶಿವಶ್ರಿ ಫೋಟೋಶೂಟ್‌ಗೆ ಎಲ್ಲರೂ ಫಿದಾ, ಏನಿದರ ವಿಶೇಷತೆ?
ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ, ನೃತ್ಯಗಾರ್ತಿ ಶಿವಶ್ತಿ ಸ್ಕಂದಪ್ರಸಾದ್ ಮದುವೆ ಆರತಕ್ಷತೆ ಕಾರ್ಯಕ್ರಮ ಸರಳವಾಗಿ ನಡೆದಿದೆ. ಇದಕ್ಕೂ ಮೊದಲು ತೇಜಸ್ವಿ ಸೂರ್ಯ ಹಾಗೂ ಶಿವಶ್ರಿ ಫೋಟೋಶೂಟ್ ಇದೀಗ ಭಾರಿ ಗಮನಸೆಳೆದಿದೆ.

ಸಂಸದ ತೇಜಸ್ವಿ ಸೂರ್ಯ ಹಾಗೂ ಗಾಯಕಿ ಶಿವಶ್ರಿ ಸ್ಕಂದಪ್ರಸಾದ್ ವಿವಾಹ ಮಹೋತ್ಸವ ಸರಳವಾಗಿ ನಡೆದಿದೆ. ಇದೀಗ ಆರತಕ್ಷತೆಯೂ ಅಚ್ಚುಕಟ್ಟಾಗಿ ನೆರವೇರಿದೆ. ಸಿಎಂ ಸಿದ್ದರಾಮಯ್ಯ, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ಗಣ್ಯರು ತೇಜಸ್ವಿ ಸೂರ್ಯ ಆರತಕ್ಷತೆಯಲ್ಲಿ ಪಾಲ್ಗೊಂಡಿದ್ದಾರೆ. ನವ ದಂಪತಿಗಳಿಗೆ ಗಣ್ಯರು, ಸೆಲೆಬ್ರೆಟಿಗಳು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಹಲವು ಶುಭಕೋರಿದ್ದಾರೆ.
ಮದುವೆ ದಿನ ತೇಜಸ್ವಿ ಸೂರ್ಯ ಹಾಗೂ ಶಿವಶ್ರಿ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನರ್ ಸ್ಪೇಸ್ ಪ್ರೊಡಕ್ಷನ್ ಈ ಜವಾಬ್ದಾರಿಯನ್ನು ನಿರ್ವಹಿಸಿದೆ. ನವ ದಂಪತಿಗಳ ಅದ್ಭುತ ಫೋಟೋಗಳನ್ನು ಸೆರೆ ಹಿಡಿಯಲಾಗಿದೆ. ಶಿವಶ್ರಿ ಸ್ಕಂದ ಪ್ರಸಾದ್ ಅವರ ಹಳದಿ ಸೀರೆಯುಟ್ಟಿದ್ದರೆ, ತೇಜಸ್ವಿ ಸೂರ್ಯ ಶೆರ್ವಾನಿಯಲ್ಲಿ ಮಿಂಚಿದ್ದಾರೆ.
ತೇಜಸ್ವಿ ಸೂರ್ಯ ಹಾಗೂ ಶಿವಶ್ರಿ ಫೋಟೋ ಶೂಟ್ ಎಲ್ಲರ ಗಮನಸೆಳೆಯಲು ಪ್ರಮುಖ ಕಾರಣವಿದೆ. ಇವರಿಬ್ಬರ ಸರಳತೆ ಹಾಗೂ ಅದಕ್ಕೆ ತಕ್ಕಂತೆ ತೆಗೆದ ಫೋಟೋಗಳು ಮೆರುಗು ಹೆಚ್ಚಿಸಿದೆ. ಅತ್ಯಂತ ಸರಳವಾಗಿ ಹಾಗೂ ನ್ಯಾಚ್ಯುರಲ್ ಆಗಿ ಇಬ್ಬರು ಫೋಟೋಗೆ ಪೋಸ್ ನೀಡಿದ್ದಾರೆ. ಹೀಗಾಗಿ ಈ ಫೋಟೋಶೂಟ್ ಹಲವರ ನೆಚ್ಚಿನ ಫೋಟೋಶೂಟ್ ಆಗಿದೆ.
ಶಿವಶ್ರಿ ಮೆಟ್ಟಿಲುಗಳಲ್ಲಿ ಕುಳಿತಿದ್ದರೆ, ತೇಜಸ್ವಿ ಸೂರ್ಯ ಮೆಟ್ಟಿಲುಗಳಲ್ಲಿ ನಿಂತ ಫೋಟೋಗಳು ಅದ್ಭುತವಾಗಿ ಮೂಡಿ ಬಂದಿದೆ. ಮದುವೆ, ಆರತಕ್ಷತೆ ಸಮಾರಂಭವನ್ನು ಸರಳವಾಗಿ, ಅತ್ಯಂತ ಅಚ್ಚುಕಟ್ಟಾಗಿ ಆಯೋಜಿಸಿದ ಈ ಜೋಡಿ ಫೋಟೋಶೂಟ್‌ನಲ್ಲಿ ಅದೇ ಸರಳತೆಯನ್ನು ತರುವಲ್ಲಿ ಯಶಸ್ವಿಯಾಗಿದೆ. ಈ ಕಾರಣದಿಂದ ಈ ಫೋಟೋಶೂಟ್ ಹಲವರ ಫೇವರಿಟ್ ಆಗಿದೆ.
ಈ ಫೋಟೋ ಶೂಟ್‌ಗೆ ಇಬ್ಬರು ಧರಿಸಿದ ಉಡುಗೆ ತೊಡುಗೆ, ಆಯ್ಕೆ ಮಾಡಿಕೊಂಡ ಸ್ಥಳ ಎಲ್ಲವೂ ಸಿಂಪಲ್ ಆದರೆ ಅಷ್ಟೇ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ತೋರಿಸುತ್ತಿದೆ. ಇವರ ಸುಂದರ ಫೋಟೋ ಶೂಟ್‌ಗೆ ಮೆಚ್ಚುಗೆಯ ಸುರಿಮಳೆ ವ್ಯಕ್ತವಾಗಿದೆ. ಹಲವರು ಕ್ಯೂಟ್ ಜೋಡಿ ಎಂದು ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರಿ ಮದುವೆ ಕನಕಪರು ರಸ್ತೆಯಲ್ಲಿರುವ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿತ್ತು. ಮಾರ್ಚ್ 6 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ಆಯೋಜಿಸಲಾಗಿತ್ತು.