12 ವರ್ಷಗಳ ಬಳಿಕ ಬೇರ್ಪಟ್ಟ ಪಾಪ್ ಗಾಯಕಿ ಶಕಿರಾ - ಫುಟ್ ಬಾಲ್ ಸ್ಟಾರ್ ಜೆರಾರ್ಡ್ ಪಿಕ್!
ಹಿಪ್ಸ್ ಡೋಂಟ್ ಲೈ ಹಾಡಿನ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡ ಜನಪ್ರಿಯತೆ ಗಳಿಸಿಕೊಂಡಿದ್ದ 45 ವರ್ಷದ ಪಾಪ್ ಗಾಯಕಿ, ಜಾಗತಿಕ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿದ್ದಾರೆ. ಇವರ 60 ಮಿಲಿಯನ್ ಗೂ ಅಧಿಕ ಅಲ್ಬಮ್ ಗಳು ವಿಶ್ವದಲ್ಲಿ ಮಾರಾಟವಾಗಿದೆ. ಇನ್ನು 35 ವರ್ಷದ ಸ್ಪೇನ್ ನ ಫುಟ್ ಬಾಲ್ ಆಟಗಾರ ಜೆರಾರ್ಡ್ ಪಿಕ್, 2010ರಲ್ಲಿ ಸ್ಪೇನ್ ತಂಡದ ವಿಶ್ವಕಪ್ ಹಾಗೂ 2012ರ ಯುರೋ ಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ. ಬಾರ್ಸಿಲೋನಾ ತಂಡದೊಂದಿಗೆ ಮೂರು ಬಾರಿ ಚಾಂಪಿಯನ್ಸ್ ಲೀಗ್ ಗೆಲುವು ಕಂಡ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ಮ್ಯಾಡ್ರಿಡ್ (ಜೂ.4): ಕೊಲಂಬಿಯಾದ ಸೂಪರ್‌ಸ್ಟಾರ್ ಶಕಿರಾ ( Colombian superstar Shakira) ಮತ್ತು ಎಫ್‌ಸಿ ಬಾರ್ಸಿಲೋನಾ ಡಿಫೆಂಡರ್ ಜೆರಾರ್ಡ್ ಪಿಕ್ ( FC Barcelona defender Gerard Pique) ಅವರು ತಮ್ಮ ಒಂದು ದಶಕಕ್ಕೂ ಹೆಚ್ಚು ಕಾಲದ ಸಂಬಂಧದಿಂದ ಅಧಿಕೃತವಾಗಿ ಬೇರ್ಪಟ್ಟಿರುವುದಾಗಿ ಶನಿವಾರ ಘೋಷಣೆ ಮಾಡಿದ್ದಾರೆ. 12 ವರ್ಷಗಳ ಕಾಲ ಇವರಿಬ್ಬರೂ ಜೊತೆಯಾಗಿ ವಾಸವಾಗಿದ್ದಲ್ಲದೆ, ಇಬ್ಬರು ಮಕ್ಕಳನ್ನೂ ಹೊಂದಿದ್ದರು.
ಹಿಪ್ಸ್ ಡೋಂಟ್ ಲೈ (Hips don't Lie) ಹಾಡಿನ ಮೂಲಕ ಜಾಗತಿಕ ಮಟ್ಟದಲ್ಲಿ ದೊಡ್ಡ ಜನಪ್ರಿಯತೆ ಗಳಿಸಿಕೊಂಡಿದ್ದ 45 ವರ್ಷದ ಪಾಪ್ ಗಾಯಕಿ, ಜಾಗತಿಕ ಸಂಗೀತ ಕ್ಷೇತ್ರದಲ್ಲಿ ದೊಡ್ಡ ಹೆಸರಾಗಿದ್ದಾರೆ. ಇವರ 60 ಮಿಲಿಯನ್ ಗೂ ಅಧಿಕ ಅಲ್ಬಮ್ ಗಳು ವಿಶ್ವದಲ್ಲಿ ಮಾರಾಟವಾಗಿದೆ. ಇನ್ನು 35 ವರ್ಷದ ಸ್ಪೇನ್ ನ ಫುಟ್ ಬಾಲ್ ಆಟಗಾರ ಜೆರಾರ್ಡ್ ಪಿಕ್, 2010ರಲ್ಲಿ ಸ್ಪೇನ್ ತಂಡದ ವಿಶ್ವಕಪ್ (2010 World Cup ) ಹಾಗೂ 2012ರ ಯುರೋ ಕಪ್ ಗೆಲುವಿನಲ್ಲಿ (2012 European Championship) ಪ್ರಮುಖ ಪಾತ್ರ ವಹಿಸಿದವರಾಗಿದ್ದಾರೆ. ಬಾರ್ಸಿಲೋನಾ ತಂಡದೊಂದಿಗೆ ಮೂರು ಬಾರಿ ಚಾಂಪಿಯನ್ಸ್ ಲೀಗ್ ( Champions League winner) ಗೆಲುವು ಕಂಡ ಸದಸ್ಯರಲ್ಲಿ ಒಬ್ಬರಾಗಿದ್ದಾರೆ.
ಸಾಶಾ ಪಿಕ್ ಮೆಬಾರಕ್ ಹಾಗೂ ಮಿಲಾನ್ ಪಿಕ್ ಮೆಬಾರಕ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದ ದಂಪತಿಗಳು ಬಾರ್ಸಿಲೋನಾದ ಹೊರವಲಯದಲ್ಲಿ ಒಟ್ಟಿಗೆ ವಾಸವಿದ್ದರು. "ನಾವು ಬೇರ್ಪಡುತ್ತಿದ್ದೇವೆ ಎಂದು ಖಚಿತಪಡಿಸಲು ವಿಷಾದಿಸುತ್ತೇವೆ. ನಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ, ನಮ್ಮ ಅತ್ಯಂತ ಆದ್ಯತೆಯಾಗಿರುತ್ತದೆ, ನಾವು (ನಮ್ಮ) ಗೌಪ್ಯತೆಗೆ ಗೌರವವನ್ನು ಕೋರುತ್ತೇವೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲ್ಯಾಟಿನ್ ಮತ್ತು ಅರೇಬಿಕ್ ಲಯಗಳು ಮತ್ತು ರಾಕ್ ಪ್ರಭಾವದ ಮಿಶ್ರಣವನ್ನು ತಮ್ಮ ಗೀತೆಗಳಲ್ಲಿ ಅದ್ಭುತವಾಗಿ ಬಳಸುತ್ತಿದ್ದ ಶಕೀರಾ, ಲ್ಯಾಟಿನ್ ಅಮೆರಿಕದ ಅತಿದೊಡ್ಡ ತಾರೆಗಳಲ್ಲಿ ಒಬ್ಬರು. "ಹಿಪ್ಸ್ ಡೋಂಟ್ ಲೈ" ಮತ್ತು "ವೆನ್ವೆರ್, ವೇರ್ವರ್" ನಂತಹ ಪ್ರಮುಖ ಜಾಗತಿಕ ಹಿಟ್ ಗೀತೆಗಳನ್ನು ಹಾಡಿದ ಸಾಧಕಿಯಾಗಿದ್ದಾರೆ. ಅಲ್ಲದೆ, ಸಂಗೀತ ಕ್ಷೇತ್ರದ ನೊಬೆಲ್ ಎಂದೇ ಹೇಳಲಾಗುವ ಗ್ರ್ಯಾಮಿ ಪ್ರಶಸ್ತಿಯನ್ನು ಮೂರು ಬಾರಿ ಗೆದ್ದಂಥ ತಾರೆಯಾಗಿದ್ದಾರೆ.
2020ರಲ್ಲಿ ಮಿಯಾಮಿಯಲ್ಲಿ ನಡೆದ ಎನ್ಎಫ್ಎಲ್ ಸೂಪರ್ ಬೌಲ್ ಚಾಂಪಿಯನ್ ಷಿಪ್ ನ ಫೈನಲ್ ಪಂದ್ಯದ ಮೊದಲಾರ್ಧದ ಬಳಿಕ, ಜೆನ್ನಿಫರ್ ಲೋಪಜ್ ಅವರೊಂದಿಗೆ ಶಕಿರಾ ಪ್ರದರ್ಶನ ನೀಡಿದ್ದರು. ಇದು ಅಮೆರಿಕದ ಇತಿಹಾಸದಲ್ಲಿಯೇ ಟಿವಿಯಲ್ಲಿ ವೀಕ್ಷಣೆ ಮಾಡಿದ ದಾಖಲೆಯ ಅರ್ಧಗಂಟೆಯ ಕಾರ್ಯಕ್ರಮ ಎನಿಸಿದೆ.
ತೆರಿಗೆ ವಿಚಾರಣೆ ಎದುರಿಸಲಿರುವ ಶಕಿರಾ: ಬಾರ್ಸಿಲೋನಾ ನ್ಯಾಯಾಲಯವು ಗಾಯಕಿಯ ಮನವಿಯನ್ನು ವಜಾಗೊಳಿಸಿದ ನಂತರ, ಸ್ಪೇನ್ ನಲ್ಲಿ ತೆರಿಗೆ ವಂಚನೆಯ ಕುರಿತಾಗಿ ಸ್ಟ್ಯಾಂಡಿಂಗ್ ವಿಚಾರಣೆಗೆ ಶಕಿರಾ ಹತ್ತಿರವಾಗುತ್ತಿದ್ದಾರೆ ಎಂದು ಸ್ಪೇನ್ ನ್ಯಾಯಾಲಯದ ದಾಖಲೆಗಳು ತೋರಿಸಿವೆ. ಈ ಬೆಳವಣಿಗೆ ನಡೆದ ಒಂದು ವಾರದಲ್ಲಿ ದಂಪತಿಗಳಿಬ್ಬರು ತಾವು ಪ್ರತ್ಯೇಕವಾಗಿರುವುದನ್ನು ಘೋಷಣೆ ಮಾಡಿದ್ದಾರೆ. 2012 ಮತ್ತು 2014 ರ ನಡುವೆ ಗಳಿಸಿದ ಆದಾಯದ ಮೇಲೆ 14.5 ಮಿಲಿಯನ್ ಯುರೋಗಳಷ್ಟು ($ 15.5 ಮಿಲಿಯನ್) ಸ್ಪ್ಯಾನಿಷ್ ತೆರಿಗೆ ಕಚೇರಿಗೆ ವಂಚಿಸಿದ್ದಾರೆ ಎಂದು ಸ್ಪ್ಯಾನಿಷ್ ಪ್ರಾಸಿಕ್ಯೂಟರ್‌ಗಳು ಶಕಿರಾ ಮೇಲೆ ಆರೋಪಿಸಿದ್ದಾರೆ.
ಬೇರೆ ಹುಡ್ಗಿ ಜೊತೆ ಸುತ್ತಾಡುವಾಗಲೇ ಹೆಂಡ್ತಿ ಶಕಿರಾಗೆ ಸಿಕ್ಕಿಬಿದ್ದ ಜೆರಾರ್ಡ್ ಪಿಕ್, ಬ್ರೇಕ್ ಅಪ್ ಗೆ ಸಿದ್ಧತೆ!
ಪಿಕ್ ಅವರೊಂದಿಗಿನ ಸಂಬಂಧ ಸಾರ್ವಜನಿಕವಾಗಿ ತಿಳಿದ ಬಳಕ, 2011ರಿಂದ ಶಕಿರಾ ಸ್ಪೇನ್ ನಲ್ಲಿ ವಾಸವಿದ್ದರು. ಆದರೆ, 2015ರವರೆಗೂ ತಮ್ಮ ಅಧಿಕೃತ ನಿವಾಸದ ದಾಖಲೆಯಾಗಿ ಬಹಮಾಸ್ ಎಂದು ಹೆಸರಿದ್ದರು ಎಂದು ಸ್ಪೇನ್ ನ ವಕೀಲರು ಹೇಳಿದ್ದಾರೆ. ಆದರೆ, ಶಕಿರಾ ಪರ ವಕೀಲರು, 2015ರಿಂದ ಶಕಿರಾ ಪೂರ್ಣವಾಗಿ ತಮ್ಮ ವಾಸವನ್ನು ಸ್ಪೇನ್ ಗೆ ಬದಲಾಯಿಸಿದ್ದಾರೆ. "ಅವಳು ತೆರಿಗೆ ಪಾವತಿಸಬೇಕಾದ ಎಲ್ಲಾ ದೇಶಗಳಲ್ಲಿ ತೆರಿಗೆ ವಿಷಯಗಳ ಮೇಲಿನ ನಡವಳಿಕೆಯು ಯಾವಾಗಲೂ ಉತ್ತಮವಾಗಿದೆ' ಎಂದು ತಿಳಿಸಿದ್ದಾರೆ.
ಧಮ್ ಇದ್ರೆ 'ಆಂಟಿ' ಅಂತ ಕರಿರೀ: ಫ್ಯಾನ್ಸ್‌ಗೆ ಸಮಂತಾ ಸವಾಲಿದು..!
2019 ರಲ್ಲಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಶಕಿರಾ, ಎರಡು ವರ್ಷಗಳ ಹಿಂದೆ ತನ್ನ ಧ್ವನಿಯನ್ನು ತಾತ್ಕಾಲಿಕವಾಗಿ ಕಳೆದುಕೊಂಡಿದ್ದು ತಮ್ಮ ಜೀವನದ ಕರಾಳ ಕ್ಷಣ ಮತ್ತು ಇದು ತನ್ನ ಮೇಲೆ "ಆಳವಾಗಿ" ಪರಿಣಾಮ ಬೀರಿದೆ ಎಂದಿದ್ದರು. ವೈದ್ಯರ ಶಿಫಾರಸಿನಂತೆ ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಗತ್ಯವಿಲ್ಲದೆ, ನಂತರ ಅವರು ತಮ್ಮ ಧ್ವನಿಯನ್ನು ಸ್ವಾಭಾವಿಕವಾಗಿ ಪಡೆದುಕೊಂಡಿದ್ದೆ ಆ ಬಳಿಕ 2018 ರಲ್ಲಿ ವಿಶ್ವ ಪ್ರವಾಸವನ್ನು ನಡೆಸಿದ್ದಾಗಿ ತಿಳಿಸಿದ್ದರು.