Asianet Suvarna News Asianet Suvarna News

ಮದ್ವೆ ಟಾರ್ಚರ್ ಯಾರನ್ನೂ ಬಿಟ್ಟಿಲ್ಲ: ಸ್ಟಾರ್ಟ್ ಅಪ್ ಒನರ್ ಏನ್‌ ಮಾಡಿದ್ರು ನೋಡಿ

  • ಸ್ಟಾರ್ಟ್‌ಅಪ್‌ವೊಂದರ ಒನರ್‌ ಪೋಸ್ಟ್ ವೈರಲ್
  • ಮದ್ವೆ ಆಗ್ಬೇಕಿದ್ದ ಹುಡುಗನಿಗೆ ಜಾಬ್ ಆಫರ್ 
  • ಮಗಳ ಕಿತಾಪತಿಗೆ ದಂಗಾದ ತಂದೆ
co founder of a startup in Bengaluru, offered a job instead of discussing marriage with a man she was matched up by her father akb
Author
Bangalore, First Published May 3, 2022, 10:50 AM IST

ತಮ್ಮ ಮಕ್ಕಳಿಗೆ ಅವರಿಗೆ ಯೋಗ್ಯವಾದ ಅದರಲ್ಲೂ ಹೆಣ್ಣು ಮಕ್ಕಳಾದರೆ ನಮ್ಮಗಿಂತಲೂ ಹೆಚ್ಚು ಅನುಕೂಲಸ್ಥರಾದ ಹೆಚ್ಚು ಓದಿರುವ ವರನನ್ನು ನೋಡಬೇಕು ಎಂಬುದು ಬಹುಪಾಲು ಪೋಷಕರ ಕನಸು. ಮಕ್ಕಳ ಮದುವೆ ಎಂಬುದು ಪೋಷಕರ ಪಾಲಿನ ಪ್ರಮುಖ ಜವಾಬ್ದಾರಿ. ಮದುವೆ ಹಾಗೂ ಅದಕ್ಕೆ ಪೋಷಕರು ನೀಡುವ ಮಹತ್ವ ಹಾಗೂ ಅದಕ್ಕಾಗಿ ಮಕ್ಕಳಿಗೆ ಅವರು ನೀಡುವ ಕಿರುಕುಳ ಎನ್ನಲಾಗದ ಕಿರುಕುಳವನ್ನು ಯಾರಿಂದಲೂ ತಪ್ಪಿಸಲಾಗದು. ಪ್ರೀತಿಸಿ ಮದ್ವೆಯಾದವರಿಗೆ ಇಂತಹ ಕಿರುಕುಳದ ಅನುಭವ ಇರದು. ಆದರೆ ಪೋಷಕರೇ ನಿಗದಿಪಡಿಸುವ ಬಹುತೇಕ ಆರೇಂಜ್ಡ್‌ ಮದ್ವೆಗಳಲ್ಲಿ ನೀವು ಇಷ್ಟವಿಲ್ಲದಿದ್ದರೂ ಈ ಕಿರುಕುಳವನ್ನು ಅನುಭವಿಸಲೇಬೇಕು. ಇದಕ್ಕೆ ಯಾರೂ ಹೊರತಲ್ಲ. ಹಾಗೆಯೇ ಒಬ್ಬರು ಮಹಿಳಾ ಉದ್ಯಮಿಗೂ ಆಕೆಯ ಪೋಷಕರು ಮದುವೆ ಮಾಡಲು ನಿರ್ಧರಿಸಿದ್ದಾರೆ.

ಹೀಗಾಗಿ ಮ್ಯಾಟ್ರಿಮೊನಿಯಲ್ಲಿ ಈ ಬಗ್ಗೆ ದಾಖಲಿಸಿದ ಅವರು ಒಂದು ತಮ್ಮ ಮಗಳಿಗೆ ಯೋಗ್ಯ ವರನಾಗಬಹುದು ಎನಿಸಿದ ಒಂದು ಸಂಬಂಧದ ಸಂಪೂರ್ಣ ವಿವರವನ್ನು ಮಗಳಿಗೆ ಕಳುಹಿಸಿದ್ದಾರೆ. ಆದರೆ ತಮ್ಮ ಉದ್ಯಮದಲ್ಲೇ ಬಹುತೇಕ ಮುಳುಗಿ ತಲೆಯಲ್ಲಿ ತನ್ನ ಉದ್ಯಮವನ್ನು ಹೇಗೆ ಬೆಳೆಸುವುದು ಎಂಬ ಬಗ್ಗೆಯೇ ಯೋಚಿಸುತ್ತಿದ್ದ ಅವರ ಪುತ್ರಿ ಈ ಡಿಟೇಲ್‌ನ್ನು ತಪ್ಪಾಗಿ ತಿಳಿದು ಬಹುಶಃ ತನ್ನ ಸ್ಟಾರ್ಟ್‌ಪ್‌ನಲ್ಲಿ ಉದ್ಯೋಗಕ್ಕೆ ತಂದೆ ಕಳುಹಿಸಿದ ಪ್ರೊಫೈಲ್‌ ಇದಾಗಿರಬಹುದು ಎಂದು ಭಾವಿಸಿದ ಆಕೆ ಆತನಿಗೆ ಉದ್ಯೋಗಕ್ಕೆ ಇಂಟರ್‌ವ್ಯೂವ್‌ಗೆ ಬರುವಂತೆ ಕರೆದಿದ್ದಾಳೆ.

ಆದರೆ ವರನ ಕಡೆಯವರಿಗೆ ಇದು ಶಾಕ್ ಮೂಡಿಸಿದೆ. ನಾವು ಮದುವೆಗೆ ವಧು ನೋಡಲು ಬಯಸಿದ್ದರೆ ಈಕೆ ನಮ್ಮನ್ನೇ ಉದ್ಯೋಗಕ್ಕೆ ಕರೆಯುತ್ತಿದ್ದಾಳಲ್ಲ ಇದೇನು ಕತೆ ಎಂದು ವರನ ಕಡೆಯವರು ಉದ್ಯಮಿಯ ತಂದೆಯನ್ನು ಸಂಪರ್ಕಿಸಿದ್ದಾರೆ. ಇದರಿಂದ ತಂದೆಗೆ ಪುತ್ರಿ ಏನು ಮಾಡಿದ್ದಾಳೆ ಎಂಬುದರ ಅರಿವಾಗಿದ್ದು, ಆಕೆಯನ್ನು ತಂದೆ ತರಾಟೆಗೆ ತೆಗೆದುಕೊಂಡಿದ್ದಾರೆ. ವಾಟ್ಸಾಪ್‌ನಲ್ಲಿ ತಂದೆ ಮಾಡಿದ ಮೆಸೇಜ್‌ನ್ನು ಪುತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿದ್ದು, ಅದೀಗ ವೈರಲ್‌ ಆಗಿದೆ. 

Arranged Marriage: ಮೊದಲ ಭೇಟಿಯಲ್ಲೇ ಈ ಪ್ರಶ್ನೆ ಕೇಳ್ಬೇಡಿ

ನಿನಗೆ ಗೊತ್ತೆ ನೀನು ಏನು ಮಾಡಿದ್ದೀಯಾ ಎಂದು? ನೀನು ಮ್ಯಾಟ್ರಿಮೋನಿಯಲ್ ಸೈಟ್‌ನಿಂದ ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವಂತಿಲ್ಲ. ಈಗ ನಾನು ಆತನ ತಂದೆಗೆ ಏನು ಹೇಳಲಿ. ನಾನು ನಿನ್ನ ಸಂದೇಶವನ್ನು ನೋಡಿದೆ. ನೀನು ಆತನಿಗೆ ಇಂಟರ್‌ವ್ಯೂ ಲಿಂಕ್ ಕಳುಹಿಸಿ ರೆಸ್ಯೂಮ್‌( ಬಯೋಡಾಟಾ) ನೀಡುವಂತೆ ಆತನಿಗೆ ಕೇಳಿದ್ದೀಯಾ. ಇದೇನು ಕತೆ. ನನಗೆ ಇದರ ಬಗ್ಗೆ ಉತ್ತರಿಸು ಹುಚ್ಚು ಹುಡುಗಿ ಎಂದು ತಂದೆ ಆಕೆಗೆ ಕೇಳಿದ್ದಾರೆ. ಇದಕ್ಕೆ ಹೆಹೆ ಎಂದು ನಗುತ್ತಾ ಉತ್ತರಿಸಿದ ಆಕೆ ಏಳು ವರ್ಷಗಳ ಫಿನ್‌ಟೆಕ್ ಅನುಭವ ಗ್ರೇಟ್ ಆಗಿದ್ದು, ನಾವು ಉದ್ಯೋಗ ನೇಮಕಾತಿ ಮಾಡುತ್ತಿದ್ದೇವೆ ಎಂದು ಪ್ರತಿಕ್ರಿಯಿಸಿದ್ದು, ನಂತರ ಸಾರಿ ಎಂದು ಹೇಳಿದ್ದಾಳೆ.

ಕ್ಯಾನ್ಸರ್‌ ವಿರುದ್ಧ ಗೆದ್ದು 52ನೇ ವಯಸ್ಸಿನಲ್ಲಿ ಮರು ಮದುವೆ... ಅಮ್ಮನ ನಿರ್ಧಾರ ಶ್ಲಾಘಿಸಿದ ಪುತ್ರ 

ಇನ್ನು ಹೀಗೆ ತನಗೆ ವಿವಾಹವಾಗಲೂ ಬಂದ ಸಂಬಂಧಕ್ಕೆ ಇಂಟರ್‌ವ್ಯೂ ಬರುವಂತೆ ಹೇಳಿದ ಉದ್ಯಮಿಯ ಹೆಸರು ಉದಿತ್ ಪಾಲ್ (Udita Pal)ಇವರು ಬೆಂಗಳೂರಿನಲ್ಲಿ ಸ್ಟಾರ್ಟ್‌ಅಪ್‌ ವೊಂದರ ಕೋ ಪೌಂಡರ್ ಆಗಿದ್ದಾರೆ. ಈಕೆಯ ಈ ಪೋಸ್ಟ್‌ಗೆ ಮ್ಯಾಟ್ರಿಮೋನಿಯಲ್ (ವಿವಾಹ ವೇದಿಕೆ) ಸೈಟ್ ಆದ ಜೀವನ್‌ ಸಾತಿ ಕೂಡ ಪ್ರತಿಕ್ರಿಯಿಸಿದ್ದು, ಖಾಲಿ ಇದ್ದೀರೆ ಎಂದು ಕೇಳಿದೆ. ಖಾಲಿ ಇದ್ದರೆ ಹೇಳಿ. ನಾವು ಸರಿಯಾದ ಲೈಫ್ ಪಾರ್ಟನರ್‌ನ್ನು ಹುಡುಕುತ್ತೇವೆ ಎಂದು ಕಾಮೆಂಟ್ ಮಾಡಿದೆ. ಇದಕ್ಕೆ ಪ್ರತಿಕ್ರಿಯಿಸಿದ ಉದಿತ್ ಪಾಲ್ ಒಂದು ತಿಂಗಳು ಉಚಿತ ಚಂದಾದಾರಿಕೆ ನೀಡುವಂತೆ ಜೀವನ್‌ಸಾತಿ ಡಾಟ್‌ ಕಾಮ್‌ಗೆ ಕೇಳಿದ್ದಾಳೆ.

Follow Us:
Download App:
  • android
  • ios