Asianet Suvarna News Asianet Suvarna News

ಮಹಿಳೆ ಮೇಲೆ ಹೆಚ್ಚುತ್ತಿದೆ ಪ್ರೆಷರ್, ಬೇಗ ಮದುವೆ, ಜೊತೆಗೆ ದೌರ್ಜನ್ಯವೂ ಹೆಚ್ಚಳ

ಪಾಕಿಸ್ತಾನದಂತಹ ಆಳವಾದ ಪಿತೃಪ್ರಭುತ್ವದ ಸಮಾಜ ಹೊಂದಿರುವ ರಾಷ್ಟ್ರದಲ್ಲಿ ಮಹಿಳೆಯರು ಮತ್ತು ಹುಡುಗಿಯರು ದುರ್ಬಲರಾಗುತ್ತಿದ್ದಾರೆ ಅವರ ಮೇಲೆ ಶೋಷಣೆಗಳು ಹೆಚ್ಚುತ್ತಿದೆ. ಅದರಲ್ಲಿಯೂ ದೇಶದಲ್ಲಿರುವ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿದೆ.

Climate changes can affect more on women pressure increased getting married soon
Author
First Published Sep 5, 2022, 3:54 PM IST | Last Updated Sep 5, 2022, 3:54 PM IST

ಈಗ ಪಾಕಿಸ್ತಾನವು ಬಹಳ ವಿನಾಶಕಾರಿ ಹವಾಮಾನದ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಸಚಿವರ ಪ್ರಕಾರ, ಈ ವರ್ಷದ ಪ್ರವಾಹವು ದೇಶದ ಮೂರನೇ ಒಂದು ಭಾಗವನ್ನು ನೀರಿನಿಂದ ಆವರಿಸುವಂತೆ ಮಾಡಿದೆ. ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಜೊತೆಗೆ ಜನರ ಮೂಲ ಮೂಲಸೌಕರ್ಯಕ್ಕೆ ಸಂಬಂಧ ಪಟ್ಟಂತೆ, ಶತಕೋಟಿ ಡಾಲರ್ ಮೌಲ್ಯದಷ್ಟು ಹಾನಿಯಾಗಿದೆ. ಇವೆಲ್ಲದರ ನಡುವೆ ಹವಾಮಾನ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಲಕ್ಷಾಂತರ ಮಹಿಳೆಯರು ಮತ್ತು ಹುಡುಗಿಯರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ.

ಮಹಿಳೆಯ (Women) ಮೇಲೆ ದೌರ್ಜನ್ಯ
ಈ ವಾರ, ಹದಿಹರೆಯದ ಹುಡುಗಿ ಒಬ್ಬಳನ್ನು ಬಂಧಿಸಿ, ಅತ್ಯಾಚಾರ ಮಾಡಲಾಯಿತು. ಆಕೆ ದೇಶದ ಪ್ರವಾಹ ಪೀಡಿತರ ಗುಂಪಿನಲ್ಲಿ ಇದ್ದ ಸಿಂಧ್ ಪ್ರಾಂತ್ಯದವಳು ಎಂಬುದಾಗಿ ವರದಿಯಾಗಿದೆ. ಆಕೆ ಅಲ್ಪಸಂಖ್ಯಾತ ಹಿಂದೂ ಸಮುದಾಯದವಳು ಎಂದು ಹೇಳಲಾಗುತ್ತದೆ. ಅವಳಿಗೆ ಪರಿಹಾರ ನೀಡುವ ಆಮಿಷ ತೋರಿಸಿ, ಅದೇ ನೆಪದಲ್ಲಿ ಇಬ್ಬರು ಪುರುಷರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಇಂತಹ ಘಟನೆಗಳು ಸಾಮಾನ್ಯವಲ್ಲ ಮತ್ತು ಪರಿಹಾರ ದೊರಕದ ಹತಾಶೆಯು ಪುರುಷ ಸದಸ್ಯರನ್ನು ಸರಬರಾಜುಗಳಿಗಾಗಿ ಅಲೆದಾಡುವಂತೆ ಮಾಡಿದೆ ಮತ್ತು ಮಹಿಳೆಯರು ಸಹ ತಮ್ಮನ್ನು ಮತ್ತು ಅವರ ಕುಟುಂಬಗಳನ್ನು ರಕ್ಷಿಸಲು ಮನೆ ಅಥವಾ ಸಮುದಾಯದ ಸಾಮಾನ್ಯ ಮಿತಿಗಳಿಂದ ಹೊರಗಿದ್ದಾರೆ.

ಭಾವನಾತ್ಮಕ ಸಂಬಂಧವನ್ನು ಉಳಿಸಿಕೊಳ್ಳೋದು ಹೇಗೆ?

ಆಸ್ಪತ್ರೆಗಳ ಕೊರತೆ ಹಾಗೂ ಹೆಚ್ಚುವ ಆರೋಗ್ಯ (Health) ಸಮಸ್ಯೆಗಳು
ಜಲಪ್ರಳಯದಿಂದಾಗಿ ಭದ್ರತೆಯ ಕೊರತೆಯಿದೆ. ಆಹಾರದ ವಿಷಯದಲ್ಲಿಯೇ ಸರಿಯಾದ ನೆರವು ಸಿಗದಿರುವ ಈ ಸಮಯದಲ್ಲಿ, ಹೆರಿಗೆಯ ವಯಸ್ಸಿನ ಮಹಿಳೆಯರಿಗೆ ವೈದ್ಯಕೀಯ ನೆರವು ದೊರಕುವುದಂತೂ ದೂರದ ಕನಸಾಗಿದೆ. ಗರ್ಭಧಾರಣೆಗಳು ಮತ್ತು ಹೆರಿಗೆಯು ತುರ್ತು ಪರಿಸ್ಥಿತಿಗಳು ಅಥವಾ ನೈಸರ್ಗಿಕ ವಿಕೋಪಗಳು ಮುಗಿಯುವವರೆಗೆ ಕಾಯಲು ಸಾಧ್ಯವಿಲ್ಲ. ಇದರಿಂದ ಮಹಿಳೆ ಮತ್ತು ಮಗು ದುರ್ಬಲವಾಗಿರುತ್ತದೆ ಅದಕ್ಕಾಗಿ ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ. ಎಂದು ಪಾಕಿಸ್ತಾನದ ಪ್ರತಿನಿಧಿ ಡಾ. ಬಕ್ತಿಯೋರ್ ಕದಿರೋವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮನೆಯವರಿಂದ ಹೆಚ್ಚಿನ ಕೆಲಸಗಳ ಹೇರಿಕೆ (Pressure)
ಹವಾಮಾನ ವೈಪರೀತ್ಯಗಳ ಕಾರಣದಿಂದ, ಒಂದು ಕಡೆ ಮಾನ್ಸೂನಿನಲ್ಲಿ ನಿರಂತರ ಮಳೆಯಿರುತ್ತದೆ ಮತ್ತು ಮತ್ತೊಂದೆಡೆ, ಅದೇ ಪ್ರದೇಶಗಳು ಬೇಸಿಗೆಯ ಋತುವಿನಲ್ಲಿ ನಿರಂತರ ಶಾಖ ಮತ್ತು ಬರಗಾಲಕ್ಕೆ ಸಾಕ್ಷಿಯಾಗುತ್ತವೆ. ಗ್ರಾಮೀಣ ಭಾಗದ ಹೆಚ್ಚಿನ ಮನೆಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರಿಗೆ, ನೀರಿಗಾಗಿ ಹೆಚ್ಚಿನ ದೂರ ನಡೆಯಲು ಒತ್ತಾಯಿಸಲಾಗುತ್ತದೆ. ಇದು ಕೂಡ ಲಿಂಗ ಆಧಾರಿತ ಅಪರಾಧಗಳ ಸಾಲಿಗೆ ಸೇರುತ್ತದೆ.

World Sexual Health Day: ಸೆಕ್ಸ್‌ ಲೈಫ್‌ ಬಗ್ಗೆ ಓಶೋ ಏನ್ ಹೇಳ್ತಾರೆ ?

ಸಣ್ಣ ವಯಸ್ಸಿನಲ್ಲಿಯೇ ಮದುವೆಯಾಗಬೇಕು (Marry) ಅನ್ನುವ ಅನಿವಾರ್ಯತೆ
ಹವಾಮಾನ ಬದಲಾವಣೆಯಿಂದಾಗಿ ಪೋಷಕರ (Parents) ಜೀವನೋಪಾಯದ ನಷ್ಟದಿಂದಾಗಿ ಹೆಣ್ಣುಮಕ್ಕಳು ಶಾಲೆಯಿಂದ ಹೊರಗುಳಿಯುವ ಪರಿಸ್ಥಿತಿಗಳು ಹೆಚ್ಚು ಇದೆ. ಮಧ್ಯದಲ್ಲಿಯೇ ಶಿಕ್ಷಣ ನಿಲ್ಲುವ ಕಾರಣದಿಂದ ಅವರ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡುವ ಹೆಚ್ಚಿನ ವಯಸ್ಸಾದ ಪುರುಷರೊಂದಿಗೆ ವಿವಾಹಕ್ಕೆ ತಳ್ಳುವ ಪದ್ಧತಿಗಳು ಕೂಡಾ ಜಾರಿಯಲ್ಲಿವೆ. ಅಂತಹ ವಿವಾಹಗಳಲ್ಲಿ ಪುರುಷರು ಹುಡುಗಿಯರ ಮೇಲೆ ಹೆಚ್ಚಿನ ಅಧಿಕಾರ ಚಲಾಯಿಸುತ್ತಾರೆ. ಹುಡುಗಿಯರು ತಮ್ಮ ಲೈಂಗಿಕ ಅಥವಾ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಮತ್ತು ಅವರು ನಿಕಟ ಸಂಗತಿಯಿಂದ ಹಿಂಸಾಚಾರದ ಅಪಾಯವನ್ನು ಹೊಂದಿರುತ್ತಾರೆ.

ನೀರು (Water) ಹಾಗೂ ಶುಚಿತ್ವದ  (Hygiene)  ಕೊರತೆ
ಬಿಕ್ಕಟ್ಟಿನ ಸಮಯದಲ್ಲಿ ಅನೇಕ ಮಹಿಳೆಯರು ವೈದ್ಯಕೀಯ ಬೆಂಬಲದ (Medical Support) ಅನುಪಸ್ಥಿತಿಯಲ್ಲಿ ಮಕ್ಕಳಿಗೆ ಜನ್ಮ (Delivery) ನೀಡುತ್ತಾರೆ. ಪ್ರವಾಹ (Flood) ಅಥವಾ ಅನಾವೃಷ್ಟಿಯಂತಹ ನೈಸರ್ಗಿಕ ವಿಪತ್ತುಗಳ (Natural Calamities) ಸಮಯದಲ್ಲಿ ಮಹಿಳೆಯರು ಮತ್ತು ಹುಡುಗಿಯರು ಶುದ್ಧ ನೀರು ಅಥವಾ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಕೊರತೆಯನ್ನು ಕೂಡ ಎದುರಿಸಬೇಕಾಗುತ್ತದೆ.

Latest Videos
Follow Us:
Download App:
  • android
  • ios