ಅನ್ನ ತಿಂದು ಮುಗಿಸುವ ಮುನ್ನ ಪಾಯಸ ಬಡಿಸಿದ್ದಕ್ಕೆ ಸಿಟ್ಟು, ರಣಾಂಗಣವಾಯ್ತು ಮದ್ವೆ ಮನೆ!

ಮದುವೆ ಮನೆ ಎಂದರೆ ಅಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಲಿ ಎಂದು ಮನೆ ಮಂದಿ ಎಲ್ಲಾ ರೀತಿಯ ಆರೇಂಜ್‌ಮೆಂಟ್ಸ್ ಮಾಡಿಕೊಳ್ಳುತ್ತಾರೆ. ಆದರೆ ಇತ್ತೀಚಿನ ಮದ್ವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆಯುವುದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದು ಮದ್ವೆ ಮನೆಯಲ್ಲಿ ಪಾಯಸದ ವಿಚಾರಕ್ಕೆ ಜಗಳ ನಡೆದು ಮನೆಯೇ ರಣಾಂಗಣವಾಗಿ ಹೋಗಿದೆ.

Clash between families of bride and groom for serving payasam before finishing rice Vin

ಮದುವೆ ಮನೆ ಎಂದರೆ ಅಲ್ಲಿ ಸಂತೋಷ ಸಂಭ್ರಮ ಎಷ್ಟಿರುತ್ತದೆಯೋ, ಭಯ, ಆತಂಕ ಕೂಡಾ ಅಷ್ಟೇ ಇರುತ್ತದೆ. ಎಲ್ಲಾ ಸಿದ್ಧತೆಗಳನ್ನು ಸರಿಯಾಗಿ ಮಾಡಿದ್ದರೂ ಏನಾದರೂ ತಪ್ಪಾದರೆ ಎಂದು ಮನೆ ಮಂದಿ ಕಳವಳ ಪಡುತ್ತಾರೆ. ಏನಾದರೂ ಹೆಚ್ಚು ಕಡಿಮೆ ಆಗುತ್ತದೆಯೋ ಎನ್ನೋ ಈ ಆತಂಕ ಹೆಣ್ಣಿನ ಮನೆಯವರಿಗೆ ತುಸು ಜಾಸ್ತಿಯೇ ಇರುತ್ತದೆ. ಅದರಲ್ಲೂ ಭಾರತೀಯ ಮದುವೆ ಸಂಪ್ರದಾಯಗಳಲ್ಲಿ ಹಿಂದಿನ ದಿನಗಳಿಂದಲೂ ಗಂಡಿನ ಮನೆಯವರಿಗೆ ಹೆಚ್ಚು ಗೌರವ ನೀಡಲಾಗುತ್ತದೆ. ಹೀಗಾಗಿಯೇ ಅವರನ್ನು ಸತ್ಕರಿಸುವ ರೀತಿಯಲ್ಲಿ ಯಾವುದೇ ತೊಂದರೆ ಆಗಬಾರದೆಂದು ಹೆಣ್ಣಿನ ಕಡೆಯವರು ಕಾಳಜಿ ವಹಿಸುತ್ತಾರೆ. ಆದರೆ ಇತ್ತೀಚಿನ ಮದ್ವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆಯುವುದು ಸಾಮಾನ್ಯವಾಗಿದೆ. 

ಡೆಕೊರೇಷನ್‌ ಚೆನ್ನಾಗಿಲ್ಲ, ಊಟದ ವ್ಯವಸ್ಥೆ ಸರಿಯಾಗಿಲ್ಲ, ಹುಡುಗಿ ಸೀರೆ ಗ್ರ್ಯಾಂಡ್ ಆಗಿಲ್ಲ ಹೀಗೆ ಸಣ್ಣಪುಟ್ಟ ಕಾರಣಕ್ಕೆ ಜಗಳ ಮಾಡಿಕೊಂಡು ಮದುವೆ ಕ್ಯಾನ್ಸಲ್ ಮಾಡಿಕೊಳ್ಳುತ್ತಾರೆ. ಹಾಗೆಯೇ ಇಲ್ಲೊಂದು ನಿಶ್ಚಿತಾರ್ಥ (Engagement) ಕಾರ್ಯಕ್ರಮದಲ್ಲಿ ಪಾಯಸದ ವಿಚಾರಕ್ಕೆ ವಧು (Bride) ಮತ್ತು ವರನ (Groom) ಸಂಬಂಧಿಕರು ಕಿತ್ತಾಡಿಕೊಂಡಿದ್ದಾರೆ. ತಮಿಳುನಾಡಿನ ಮೈಲಾಡುತೊರೈ ಜಿಲ್ಲೆಯ ಸಿರ್ಕಾಜಿಯಲ್ಲಿ ಈ ಘಟನೆ ನಡೆದಿದೆ.

ಬಿಸಿ ಪೂರಿ ಕೊಡದ್ದಕ್ಕೆ ಸಿಟ್ಟು, ಮದುವೆ ಮನೆಯಲ್ಲಿ ಅತಿಥಿಗಳ ರಂಪಾಟ!

ಪಾಯಸ ಪರಸ್ಪರ ಎರಚಾಡಿಕೊಂಡು ಕಿತ್ತಾಡಿದ ವಧು-ವರನ ಸಂಬಂಧಿಕರು
ಇಲ್ಲಿನ ಸಿರ್ಕಾಜಿಯ ಕಲ್ಯಾಣ ಮಂಟಪದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯುತ್ತಿತ್ತು. ಶಾಸ್ತ್ರ ಸಂಪ್ರದಾಯವೆಲ್ಲಾ ಮುಗಿದ ಮೇಲೆ ವರನ ಕಡೆಯವರು ಊಟಕ್ಕೆ ಕುಳಿತಿದ್ದರು. ಈ ವೇಳೆ ಅನ್ನ (Rice) ತಿಂದು ಮುಗಿಸುವ ಮುನ್ನವೇ ಪಾಯಸ (Payasam) ಬಡಿಸಿದ್ದು, ವರನ ಸಂಬಂಧಿಕರು ತಗಾದೆ ತೆಗೆದರು. ಅಲ್ಲದೆ, ಪಾಯಸದ ರುಚಿ ಬಗ್ಗೆಯೂ ಅಸಮಾಧಾನವಿತ್ತು. ಈ ಬಗ್ಗೆ ವಧುವಿನ ಕಡೆಯವರನ್ನು ಪ್ರಶ್ನಿಸಿದಾಗ ಎರಡೂ ಗುಂಪಿನ ಮಧ್ಯೆ ಜಗಳ ಏರ್ಪಟ್ಟಿತು. ಜಗಳದ ನಡುವೆ ತಾಳ್ಮೆ ಕಳೆದುಕೊಂಡ ವರನ ಸಂಬಂಧಿಕರು ಪಾಯಸವನ್ನು ವಧುವಿನ ಸಂಬಂಧಿಕರತ್ತ ಎರಚಿದರು. ಇದರಿಂದ ವಧುವಿನ ಕಡೆಯವರು ಆಕ್ರೋಶಗೊಂಡರು. 

ನಂತರ ಎರಡು ಕಡೆಯವರು ಕಲ್ಯಾಣ ಮಂಟಪದಲ್ಲೇ ಹೊಡೆದಾಡಿಕೊಂಡರು. ಊಟದ ಹಾಲ್​ನಲ್ಲಿದ್ದ ಪೀಠೋಪಕರಣಗಳನ್ನು ಎತ್ತಿ ಬಿಸಾಡಿ ಹೊಡೆದಾಡಿಕೊಂಡಿದ್ದಾರೆ. ಗಲಾಟೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಸಿರ್ಕಾಜಿ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಂತರ ಎರಡೂ ಗುಂಪಿನ ಸದಸ್ಯರ ನಡುವೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲಾಯಿತು. ಗಲಾಟೆ ಸಂಬಂಧ ಯಾರೂ ದೂರು ನೀಡದೇ ಇರುವುದರಿಂದ ಯಾವುದೇ ದೂರು ದಾಖಲಾಗಿಲ್ಲ. ಆ ನಂತರ ಎಂಗೇಜ್‌ಮೆಂಟ್ ನಡೀತೋ ಇಲ್ವೋ ಗೊತ್ತಿಲ್ಲ. ಆದರೆ ಸದ್ಯ  ಗಲಾಟೆಗೆ ಸಂಬಂಧಿಸಿದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಮಂಟಪದಲ್ಲೇ ವಧು-ವರರ ಡಿಶುಂ ಡಿಶುಂ, ಜುಟ್ಟು ಹಿಟ್ಕೊಂಡು ಕಿತ್ತಾಡಿದ ಜೋಡಿ!

ಮದ್ವೆ, ಎಂಗೇಜ್‌ಮೆಂಟ್ ಕಾರ್ಯಕ್ರಮಗಳಲ್ಲಿ ಈ ರೀತಿ ರಾದ್ಧಾಂತ ನಡೆಯೋದು ಹೊಸತೇನಲ್ಲ. ಜಾರ್ಖಂಡ್ ಮದುವೆಯೊಂದರಲ್ಲಿ ಬಿಸಿ ಪೂರಿಗಳನ್ನು ಕೊಡಲು ನಿರಾಕರಿಸಿದ್ದಕ್ಕೆ ಅತಿಥಿಗಳು ಗಲಾಟೆ ನಡೆಸಿದ್ದರು. ಮಾತ್ರವಲ್ಲ ಕಲ್ಲು ತೂರಾಟ ಕೂಡಾ ಮಾಡಿದ್ದರು. ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಈ ಘಟನೆ ನಡೆದಿತ್ತು. ಅದಕ್ಕೂ ಹಿಂದೆ ಕೇರಳದಲ್ಲಿ ಅಂಥದ್ದೇ ಒಂದು ಘಟನೆ ನಡೆದಿತ್ತು. ಇಲ್ಲಿ ಜಗಳ ಆರಂಭವಾದದ್ದು ಕೇವಲ ಹಪ್ಪಳದ ವಿಚಾರವಾಗಿ. ಗಂಡಿನ ಕಡೆಯವರು ಊಟಕ್ಕೆ ಕುಳಿತಿದ್ದಾಗ ಹೆಚ್ಚುವರಿ ಹಪ್ಪಳ ನೀಡುವಂತೆ ಕೇಳಿದ್ದಾರೆ. ಆದರೆ, ಸಾಧ್ಯವಿಲ್ಲಎಂದು ಅಡುಗೆ ಎಜೆನ್ಸಿಯವರಿಂದ ಉತ್ತರ ಬಂದಿದೆ. ಹೀಗಾಗಿ ವರ ಹಾಗೂ ವಧುವಿನ ಸಂಬಂಧಿಕರ ಮಧ್ಯೆ ಜಗಳವಾಗಿತ್ತು.

Latest Videos
Follow Us:
Download App:
  • android
  • ios