ಮದ್ವೆ ಅನ್ನೋದು ಜನ್ಮ ಜನ್ಮಾಂತರದ ಬಂಧ ಎನ್ನುತ್ತಾರೆ. ಹೀಗಾಗಿಯೇ ಇದನ್ನು ಶಾಸ್ತ್ರಬದ್ಧವಾಗಿ ಮಾಡಲಾಗುತ್ತದೆ. ಆದರೆ ಇತ್ತೀಚಿನ ಮದ್ವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆಯುವುದು ಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಂದು ಮದ್ವೆ ಮನೆಯಲ್ಲಿ ಬಿಸಿ ಬಿಸಿ ಪೂರಿ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಅತಿಥಿಗಳು ಕಿತ್ತಾಡಿಕೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮದುವೆ ಮನೆ ಅಂದ್ರೆ ಸಂಭ್ರಮ, ಸಡಗರ ಇದ್ದೇ ಇರುತ್ತೆ. ಆದ್ರೆ ಇತ್ತೀಚಿನ ಮದುವೆ ಮನೆಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗೋದು ಸಾಮಾನ್ಯವಾಗಿ ಹೋಗಿದೆ. ಮಂಟಪ, ಡೆಕೊರೇಷನ್, ವರದಕ್ಷಿಣೆ, ಊಟ ಹೀಗೆ ನಾನಾ ಕಾರಣಗಳಿಗೆ ಗಲಾಟೆ ನಡೆಯುತ್ತದೆ. ಕೆಲವೊಮ್ಮೆ ಸಮಾರಂಭಕ್ಕೆ ಬಂದ ಅತಿಥಿಗಳು ಸಹ ಗಲಾಟೆ ಮಾಡುತ್ತಾರೆ. ಜಾರ್ಖಂಡ್ ಮದುವೆಯೊಂದರಲ್ಲಿ ಬಿಸಿ ಪೂರಿಗಳನ್ನು ಕೊಡಲು ನಿರಾಕರಿಸಿದ್ದಕ್ಕೆ ಅತಿಥಿಗಳು ಗಲಾಟೆ ನಡೆಸಿದ್ದಾರೆ. ಮಾತ್ರವಲ್ಲ ಕಲ್ಲು ತೂರಾಟ ಕೂಡಾ ಮಾಡಿದ್ದಾರೆ. ಜಾರ್ಖಂಡ್‌ನ ಗಿರಿದಿಹ್‌ನಲ್ಲಿ ಈ ಘಟನೆ ನಡೆದಿದೆ.

Add Asianetnews Kannada as a Preferred SourcegooglePreferred

ಬಿಸಿ ಬಿಸಿ ಪೂರಿ ಕೊಡದ್ದಕ್ಕೆ ಅತಿಥಿಗಳಿಗೆ ಸಿಟ್ಟು
ಮಂಗಳವಾರ ರಾತ್ರಿ ಮುಫಾಸಿಲ್ ಠಾಣಾ ವ್ಯಾಪ್ತಿಯ ಪಟರೋಡಿ ಪ್ರದೇಶದಲ್ಲಿ ಶಂಕರ್ ಯಾದವ್ ಎಂಬುವರು ಆಯೋಜಿಸಿದ್ದ ಮದುವೆ (Marriage) ಸಮಾರಂಭದಲ್ಲಿ ಯುವಕರ ಗುಂಪೊಂದು ಪಾಲ್ಗೊಂಡಿತ್ತು. ಊಟ ಮಾಡುವ ಸಂದರ್ಭದಲ್ಲಿ ಅತಿಥಿಗಳು (Guest) ಬಿಸಿ ಬಿಸಿ ಪೂರಿಯನ್ನು ಕೇಳಿದ್ದಾರೆ. 2 ಗಂಟೆ ಸುಮಾರಿಗೆ ಬಿಸಿ ಬಿಸಿ ಪೂರಿಯನ್ನು ಕೇಳಲು ಆರಂಭಿಸಿದ ಯುವಕನೊಬ್ಬನಿಂದ ಗಲಾಟೆ ಶುರುವಾಗಿದೆ ಎಂದು ತಿಳಿದುಬಂದಿದೆ. ಬಿಸಿ ಪೂರಿ ರೆಡಿ ಇಲ್ಲವಾದ ಕಾರಣ ಜಗಳವಾಡಿದ್ದಾರೆ. ನಂತರ ಮದುವೆ ಮನೆಯಲ್ಲೇ ಎರಡು ಗುಂಪಿನ ಮಧ್ಯೆ ಮಾರಾಮಾರಿ ನಡೆದಿದೆ ಎಂದು ತಿಳಿದುಬಂದಿದೆ.

ಮಂಟಪದಲ್ಲೇ ವಧು-ವರರ ಡಿಶುಂ ಡಿಶುಂ, ಜುಟ್ಟು ಹಿಟ್ಕೊಂಡು ಕಿತ್ತಾಡಿದ ಜೋಡಿ!

ಮದ್ವೆ ಮನೆಯಲ್ಲಿ ಗಲಾಟೆ, ಪರಿಸ್ಥಿತಿ ನಿಯಂತ್ರಿಸಿದ ಪೊಲೀಸರು
ಗಲಾಟೆ ಮಾಡಲು ಕೆಲವು ಇತರ ಯುವಕರನ್ನು ಹೊರಗಿನಿಂದ ಕರೆಸಲಾಗಿತ್ತು ಎಂದು ನಂತರ ತಿಳಿದುಬಂತು. ಪರಿಸ್ಥಿತಿ ತ್ವರಿತವಾಗಿ ಉಲ್ಬಣಗೊಂಡಿತು ಮತ್ತು ಕಲ್ಲು ತೂರಾಟ ಮತ್ತು ಗೂಂಡಾಗಿರಿಯ ನಡೆಸಲಾಯಿತು. ಇದರ ಪರಿಣಾಮವಾಗಿ ಮೂರ್ನಾಲ್ಕು ಜನರಿಗೆ ಗಾಯಗಳಾಗಿವೆ (Injury). ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಪೊಲೀಸರು ಅತಿಥಿಗಳನ್ನು (Guests) ಶಾಂತಗೊಳಿಸಲು ಮತ್ತು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದರು.

ಇಡೀ ವಿವಾದಕ್ಕೆ ಪ್ರಚೋದನೆ ನೀಡಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ (Treatment) ಪಡೆಯುತ್ತಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ರಸಗುಲ್ಲಾಕ್ಕಾಗಿ ಬಿತ್ತು ಹೆಣ: ಮದುವೆ ಮನೆಯಾಯ್ತು ಮಸಣ

ನಾವು ಫಸ್ಟ್ ನಾವ್ ಫಸ್ಟ್ ..ಫೋಟೋ ಹುಚ್ಚಿಗೆ ರಣರಂಗವಾದ ಮದ್ವೆ ಮನೆ!
ವೆಡ್ಡಿಂಗ್‌ ಡೇ ಎಂಬುದು ಎಲ್ಲರ ಪಾಲಿಗೆ ಜೀವನದಲ್ಲೇ ದಿ ಬಿಗ್ ಡೇ. ಹೀಗಾಗಿಯೇ ಈ ದಿನ ಯಾವಾಗ್ಲೂ ಮೆಮೊರೆಬಲ್ ಆಗಿರಬೇಕೆಂದು ಫೋಟೋ, ವೀಡಿಯೋ ಮಾಡಿಕೊಳ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆ ನೂತನ ವಧು-ವರರ ಜೊತೆ ಫೋಟೋ ತೆಗೆದುಕೊಳ್ಳುವ ವಿಚಾರಕ್ಕಾಗಿಯೇ ರಣಾಂಗಣವಾಗಿಬಿಟ್ಟಿದೆ. 

ಮದುವೆಗಳು (Marriage) ವಿಶೇಷವಾಗಿರುತ್ತವೆ ಮತ್ತು ಮದುವೆಯ ಚಿತ್ರಗಳು ಇನ್ನೂ ಹೆಚ್ಚು ವಿಶೇಷವಾಗಿರುತ್ತವೆ. ಏಕೆಂದರೆ ಈ ಚಿತ್ರಗಳು ವಧು ಮತ್ತು ವರ ಮತ್ತು ಅವರ ಕುಟುಂಬದ ಸುಂದರ ಕ್ಷಣಗಳನ್ನು ಶಾಶ್ವತವಾಗಿ ಸೆರೆಹಿಡಿಯುತ್ತವೆ. ಆದರೆ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಮದುವೆಯೊಂದರಲ್ಲಿ, ವಧು ಮತ್ತು ವರನ (Bride-groom) ಜೊತೆ ಚಿತ್ರಗಳನ್ನು ತೆಗೆದುಕೊಳ್ಳುವ ಬಗ್ಗೆ ಗಲಾಟೆಯೇ ನಡೆದು ಹೋಯ್ತು. ಯಾರು ಮೊದಲು ಫೋಟೋ ತೆಗೆದುಕೊಳ್ಳಬೇಕು ಅನ್ನೋ ವಿಚಾರವಾಗಿ ವಧು ಮತ್ತು ವರನ ಕುಟುಂಬ ಸದಸ್ಯರ ನಡುವೆ ಜಗಳ ನಡೆದು ಜನರು ದಿಕ್ಕಾಪಾಲಾದರು. ಸುಂದರವಾದ ದಿನವೊಂದು ಗಲಾಟೆಯಲ್ಲಿ (Fight) ಕೊನೆಗೊಂಡಿತು.