Asianet Suvarna News Asianet Suvarna News

ಮದ್ವೆಯಾಗದೆ ಮಕ್ಕಳು ಮಾಡಿಕೊಂಡ್ರೂ ಸರ್ಕಾರಿ ಸೌಲಭ್ಯ ಸಿಗುತ್ತೆ, ಜನಸಂಖ್ಯೆ ಹೆಚ್ಚಿಳಕ್ಕೆ ಚೀನಾ ಕ್ರಮ

ಚೀನಾದಲ್ಲಿ ಜನಸಂಖ್ಯೆ ಇಳಿಕೆಯಾಗುತ್ತಿದೆ. ಭಾರತ ಈಗ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವೆಂದು ಹೇಳಲಾಗುತ್ತಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ರಾಷ್ಟ್ರ ಎಂಬ ಹೆಗ್ಗಳಿಕೆ ಈಗ ಚೀನಾಕ್ಕಿಲ್ಲ. ಹೀಗಾಗಿ ಇಳಿಕೆಯಾಗಿರುವ ತನ್ನ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಚೀನಾ ಶತಪ್ರಯತ್ನ ನಡೆಸ್ತಿದೆ. 

Chinas Sichuan frees unmarried people to legally have children Vin
Author
First Published Feb 1, 2023, 11:23 AM IST

ಬೀಜಿಂಗ್: ಕಳೆದ ಹಲವಾರು ವರ್ಷಗಳಿಂದಲೂ ಚೀನಾ ಜನಸಂಖ್ಯೆಯ ವಿಚಾರದಲ್ಲಿ ಮೊದಲ ಸ್ಥಾನದಲ್ಲಿತ್ತು. ಆದರೆ ಸದ್ಯ ಚೀನಾದಲ್ಲಿ ಜನಸಂಖ್ಯೆ ಇಳಿಕೆಯಾಗುತ್ತಿದೆ. ಭಾರತ ಈಗ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಷ್ಟ್ರವೆಂದು ಹೇಳಲಾಗುತ್ತಿದೆ. ಹೀಗಾಗಿ ಇಳಿಕೆಯಾಗಿರುವ ತನ್ನ ಜನಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಚೀನಾ ಎಲ್ಲಾ ರೀತಿಯಲ್ಲೂ ಪ್ರಯತ್ನ ಮಾಡ್ತಿದೆ. ಜನರಿಗೆ ಅನುಕೂಲವಾಗುವಂತೆ ಹೊಸ ಕಾನೂನುಗಳನ್ನು ಸಹ ಜಾರಿಗೆ ತರುತ್ತಿದೆ. ಚೀನಾದ ನೈಋತ್ಯ ಪ್ರಾಂತ್ಯದ ಸಿಚುವಾನ್‌ನ ಆರೋಗ್ಯ ಅಧಿಕಾರಿಗಳು ಅವಿವಾಹಿತ ವ್ಯಕ್ತಿಗಳು ಸಹ ಮಕ್ಕಳನ್ನು ಮಾಡಿಕೊಳ್ಳಲು ಅನುಮತಿ ನೀಡುತ್ತಿದೆ. ಮದುವೆಯಾಗದೆ ಮಕ್ಕಳನ್ನು ಮಾಡಿಕೊಂಡವರಿಗೂ ವಿವಾಹಿತ ದಂಪತಿಗಳಿಗಾಗಿ ನೀಡುವ ಪ್ರಯೋಜನಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಿವಾಹಿತ ವ್ಯಕ್ತಿಗಳು ಸಹ ಮಕ್ಕಳನ್ನು ಮಾಡಿಕೊಳ್ಳಲು ಅನುಮತಿ
ದೇಶದಲ್ಲಿ ಕುಸಿತವಾಗಿರುವ ಜನನ ದರ ಕುಸಿತವನ್ನು ಹೆಚ್ಚಿಸಲು ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ. ಇಲ್ಲಿಯವರೆಗೆ ವಿವಾಹಿತ ಮಹಿಳೆಯರು (Married woman) ಮಕ್ಕಳನ್ನು ಪಡೆದರೆ ಮಾತ್ರ ಅವರಿಗೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸವಲತ್ತುಗಳು (Facilities) ಲಭಿಸುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಚೀನಾದಲ್ಲಿ ಮದುವೆ ಮತ್ತು ಜನನ ದರಗಳು ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿರುವುದರಿಂದ, ಪ್ರಾಂತೀಯ ಅಧಿಕಾರಿಗಳು ಮಕ್ಕಳನ್ನು ಹೊಂದಲು ಬಯಸುವವರು ಮದುವೆಯಾಗದಿದ್ದರೂ ಪರವಾಗಿಲ್ಲ ಮಕ್ಕಳನ್ನು ಮಾಡಿಕೊಳ್ಳಬಹುದು ಎಂದಿದ್ದಾರೆ. 2019ರ ನಿಯಮವನ್ನು ಈ ರೀತಿ ಪರಿಷ್ಕರಿಸಲಾಗಿದೆ.

ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ ಮಹಿಳೆಯರಿಗೆ ಸರ್ಕಾರದಿಂದ ಸಿಗುತ್ತೆ ಭರ್ಜರಿ ಗಿಫ್ಟ್..!

ಮದುವೆಯಾಗದೆ ಮಕ್ಕಳನ್ನು ಮಾಡಿಕೊಂಡ್ರೂ ಸರ್ಕಾರಿ ಸೌಲಭ್ಯ ಲಭ್ಯ
ಈ ಮೊದಲು ಒಂದು ಕುಟುಂಬಕ್ಕೆ ಒಂದೇ ಮಗು ಎಂಬ ನೀತಿಯನ್ನು ತಂದಿದ್ದ ಚೀನಾ ಸರ್ಕಾರ (China government) ಬಳಿಕ ಇದನ್ನು ಎರಡು ಮಗು ಎಂದು ಬದಲಾಯಿಸಿತ್ತು. ಈಗ ಒಂದು ಕುಟುಂಬ ಇಷ್ಟವಿದ್ದಷ್ಟು ಮಕ್ಕಳನ್ನು ಹೊಂದಬಹುದಾಗಿದೆ. ಜೊತೆಗೆ ಹಲವು ಸರ್ಕಾರಿ ಸೌಲಭ್ಯಗಳನ್ನು ಸಹ ನೀಡಲಾಗುತ್ತಿದೆ. ಇದೀಗ ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಅವಿವಾಹಿತರಿಗೂ ಮಕ್ಕಳನ್ನು ಹೊಂದುವ ಅವಕಾಶ ನೀಡಲಾಗುತ್ತಿದೆ.

ಈ ಪ್ರಾಂತ್ಯದಲ್ಲಿ ಈವರೆಗೆ ವಿವಾಹಿತ ಮಹಿಳೆಯರು ಮಾತ್ರವೇ ಮಕ್ಕಳನ್ನು (Children) ಹೆರಲು ಕಾನೂನಿನಲ್ಲಿ ಅವಕಾಶವಿದ್ದು, ಆದರೆ ಇತ್ತೀಚಿನ ವರ್ಷಗಳಲ್ಲಿ ವಿವಾಹ ಮತ್ತು ಜನನ ದರ ದಾಖಲೆಯ ಮಟ್ಟದಲ್ಲಿ ಕುಸಿದಿರುವ ಹಿನ್ನೆಲೆಯಲ್ಲಿ ಅವಿವಾಹಿತರು ಸಹ ಮಕ್ಕಳನ್ನು ಹೆರಬಹುದು ಎಂಬ ಕಾನೂನು ಜಾರಿಗೊಳಿಸಲಾಗಿದೆ. ಆದರೆ ಅದಕ್ಕೂ ಮುನ್ನ ಪ್ರಾಂತೀಯ ಅಧಿಕಾರಿಗಳೊಂದಿಗೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಹೊಸ ನಿಯಮ ಫೆಬ್ರವರಿ 15ರಿಂದ ಜಾರಿಗೆ ಬರಲಿದೆ.

ಚೀನಾ ಹಿಂದಿಕ್ಕಿದ ಭಾರತ: ಈಗಾಗಲೇ ಭಾರತ ನಂ.1 ಜನಸಂಖ್ಯೆಯ ದೇಶ?

ಸರ್ಕಾರದಿಂದ ಜನಸಂಖ್ಯೆ ಹೆಚ್ಚಿಸಲು ಕ್ರಮ
ಈ ಕ್ರಮವು ದೀರ್ಘಾವಧಿಯ ಮತ್ತು ಸಮತೋಲಿತ ಜನಸಂಖ್ಯೆಯ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಸಿಚುವಾನ್‌ನ ಆರೋಗ್ಯ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಹೇಳಿಕೆಯಲ್ಲಿ ತಿಳಿಸಿದೆ.ಇಲ್ಲಿಯವರೆಗೆ, ಆಯೋಗವು ಎರಡು ಮಕ್ಕಳನ್ನು ಹೊಂದಲು ಬಯಸುವ ವಿವಾಹಿತ ದಂಪತಿಗಳಿಗೆ ಮಾತ್ರ ಸ್ಥಳೀಯ ಅಧಿಕಾರಿಗಳಲ್ಲಿ ನೋಂದಾಯಿಸಲು ಅವಕಾಶ ನೀಡುತ್ತಿತ್ತು. ಸ್ಥಳೀಯ ಅಧಿಕಾರಿಗಳೊಂದಿಗೆ ನೋಂದಾಯಿಸಲು ದಂಪತಿಗಳಿಗೆ ರಾಷ್ಟ್ರವ್ಯಾಪಿ ನೋಂದಾವಣೆ ವ್ಯವಸ್ಥೆಯು ವೈದ್ಯಕೀಯ ಬಿಲ್‌ಗಳನ್ನು ಕವರ್ ಮಾಡಲು ಹೆರಿಗೆ ವಿಮೆಯನ್ನು ಖಚಿತಪಡಿಸುತ್ತದೆ, ಆದರೆ ವಿವಾಹಿತ ಮಹಿಳೆಯರಿಗೆ ಹೆರಿಗೆ ರಜೆಯ (Maternity leave) ಸಮಯದಲ್ಲಿ ತಮ್ಮ ಸಂಬಳವನ್ನು ಉಳಿಸಿಕೊಳ್ಳಲು ಅವಕಾಶ ನೀಡುತ್ತದೆ.

ಈ ಪ್ರಯೋಜನಗಳನ್ನು ಈಗ ಸಿಚುವಾನ್‌ನಲ್ಲಿ ಒಂಟಿ ಮಹಿಳೆಯರು ಮತ್ತು ಪುರುಷರಿಗೆ (Men) ವಿಸ್ತರಿಸಲಾಗುವುದು, ಇದು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅಥವಾ ಅದರ ಜನಸಂಖ್ಯೆಯ 21% ಕ್ಕಿಂತ ಹೆಚ್ಚಿನವರಿಗೆ ಸಂಬಂಧಿಸಿದಂತೆ ರಾಷ್ಟ್ರದಲ್ಲಿ ಏಳನೇ ಸ್ಥಾನದಲ್ಲಿದೆ ಎಂದು ಸರ್ಕಾರಿ ಅಂಕಿಅಂಶಗಳು ತೋರಿಸುತ್ತವೆ. ಚೀನಾದ ಹೆಚ್ಚಿನ ಜನಸಂಖ್ಯಾ ಕುಸಿತವು 1980 ಮತ್ತು 2015 ರ ನಡುವೆ ಹೇರಿದ ಒಂದು ಮಗುವಿನ ನೀತಿಯಿಂದ ಉಂಟಾಗಿದೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios