ಚೀನಾ ಹಿಂದಿಕ್ಕಿದ ಭಾರತ: ಈಗಾಗಲೇ ಭಾರತ ನಂ.1 ಜನಸಂಖ್ಯೆಯ ದೇಶ?
ಈ ವರ್ಷದ ಅಂತ್ಯಕ್ಕೆ ಚೀನಾವನ್ನು ಹಿಂದಿಕ್ಕಿ ಭಾರತವು ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆಯ ದೇಶವಾಗಲಿದೆ ಎಂಬ ವಿಶ್ವಸಂಸ್ಥೆಯ ಅಂದಾಜಿಗೆ ವ್ಯತಿರಿಕ್ತವಾಗಿ ಈಗಾಗಲೇ ಭಾರತವು ಚೀನಾವನ್ನು ಮೀರಿಸಿ ಜಗತ್ತಿನ ನಂ.1 ಜನಸಂಖ್ಯೆಯ ದೇಶವಾಗಿದೆ ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ.
ನವದೆಹಲಿ: ಈ ವರ್ಷದ ಅಂತ್ಯಕ್ಕೆ ಚೀನಾವನ್ನು ಹಿಂದಿಕ್ಕಿ ಭಾರತವು ಜಗತ್ತಿನಲ್ಲೇ ಅತಿಹೆಚ್ಚು ಜನಸಂಖ್ಯೆಯ ದೇಶವಾಗಲಿದೆ ಎಂಬ ವಿಶ್ವಸಂಸ್ಥೆಯ ಅಂದಾಜಿಗೆ ವ್ಯತಿರಿಕ್ತವಾಗಿ ಈಗಾಗಲೇ ಭಾರತವು ಚೀನಾವನ್ನು ಮೀರಿಸಿ ಜಗತ್ತಿನ ನಂ.1 ಜನಸಂಖ್ಯೆಯ ದೇಶವಾಗಿದೆ ಎಂಬ ಅಚ್ಚರಿಯ ಸಂಗತಿ ಹೊರಬಿದ್ದಿದೆ.
ಜಾಗತಿಕ ಜನಸಂಖ್ಯೆಯ ಮೇಲೆ ನಿಗಾ ಇಡುವ ಸ್ವತಂತ್ರ ಸಂಸ್ಥೆಯಾದ 'ವರ್ಲ್ಡ್ ಪಾಪ್ಯುಲೇಶನ್ ರಿವ್ಯೂ'(WPR) ಈ ಕುರಿತು ಅಧಿಕೃತ ವರದಿ ಬಿಡುಗಡೆ ಮಾಡಿದೆ. ಆ ವರದಿಯ ಪ್ರಕಾರ, ಭಾರತದ ಜನಸಂಖ್ಯೆ (population) ಈಗ ಚೀನಾಕ್ಕಿಂತ ಕನಿಷ್ಠ 50 ಲಕ್ಷದಷ್ಟು ಹೆಚ್ಚಿದೆ. ‘ಭಾರತದ ಜನಸಂಖ್ಯೆ 2022ರ ಅಂತ್ಯಕ್ಕೆ 141.7 ಕೋಟಿ ಇತ್ತು. ಜನವರಿ 17ರಂದು ಚೀನಾ (china) ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಆ ದೇಶದ ಜನಸಂಖ್ಯೆ 141.2 ಕೋಟಿ ಇದೆ. ಹೀಗಾಗಿ ಕಡಿಮೆಯೆಂದರೂ ಭಾರತದ ಜನಸಂಖ್ಯೆಯೀಗ (Indian Population) ಚೀನಾಕ್ಕಿಂತ 50 ಲಕ್ಷದಷ್ಟುಹೆಚ್ಚಿದೆ’ ಎಂದು ಡಬ್ಲ್ಯುಪಿಆರ್ ಹೇಳಿದೆ.
ಜನಸಂಖ್ಯೆ 70 ವರ್ಷದಲ್ಲೇ ಮೊದಲ ಬಾರಿ ಚೀನಾದಲ್ಲಿ ಇಳಿಕೆ
ಚೀನಾಕ್ಕಿಂತ 1.1 ಕೋಟಿ ಅಧಿಕ:
ಡಬ್ಲ್ಯುಪಿಆರ್ ಪ್ರಕಾರ ಜ.18ಕ್ಕೆ ಭಾರತದ ಜನಸಂಖ್ಯೆ 142.3 ಕೋಟಿಗೆ ಏರಿದೆ. ಆ ಪ್ರಕಾರ ಚೀನಾದ ಜನಸಂಖ್ಯೆಗಿಂತ ಭಾರತದ ಜನಸಂಖ್ಯೆಯೀಗ 1.1 ಕೋಟಿಯಷ್ಟುಅಧಿಕವಿದೆ. ಮ್ಯಾಕ್ರೋಟ್ರೆಂಡ್ಸ್ (Micro trends)ಎಂಬ ಇನ್ನೊಂದು ಸಂಸ್ಥೆಯ ಅಂದಾಜಿನ ಪ್ರಕಾರ ಭಾರತದ ಜನಸಂಖ್ಯೆಯೀಗ 142.8 ಕೋಟಿ ಇದೆ. ಅದನ್ನು ಒಪ್ಪಿದರೆ ಭಾರತದ ಜನಸಂಖ್ಯೆಯು ಈಗ ಚೀನಾಕ್ಕಿಂತ 1.6 ಕೋಟಿಯಷ್ಟು ಹೆಚ್ಚಿದೆ.
ಜನಸಂಖ್ಯೆಯೇ ಭಾರತದ ಶಕ್ತಿ ಎಂದ ಮೊದಲ ಪ್ರಧಾನಿ ಮೋದಿ, ಯುಜನೋತ್ಸವದಲ್ಲಿ ಬೊಮ್ಮಾಯಿ ಭಾಷಣ!
ಆದರೆ, ಈ ಕುರಿತು ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೋವಿಡ್ (covid) ಹಿನ್ನೆಲೆಯಲ್ಲಿ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಭಾರತ ಇನ್ನೂ ನಡೆಸಿಲ್ಲ. ಆ ಜನಗಣತಿ ನಡೆದ ಮೇಲೆ ಸ್ಪಷ್ಟಚಿತ್ರಣ ಸಿಗಲಿದೆ. ಸದ್ಯ ಭಾರತದಲ್ಲಿ ಜನಸಂಖ್ಯಾ ಸ್ಫೋಟ ನಿಂತಿದೆಯಾದರೂ, ಅದು 2050ರವರೆಗೆ ಸಣ್ಣ ಪ್ರಮಾಣದಲ್ಲಿ ಏರುತ್ತಲೇ ಇರಲಿದೆ ಎಂದು ಹೇಳಲಾಗಿದೆ. ಅದಕ್ಕೆ ಪ್ರತಿಯಾಗಿ, ಚೀನಾದ ಜನಸಂಖ್ಯೆ 1960ರ ದಶಕದ ನಂತರ ಇದೇ ಮೊದಲ ಬಾರಿ ಈ ವರ್ಷ ಇಳಿಕೆಯಾಗಲು ಆರಂಭವಾಗಿದೆ.