Asianet Suvarna News Asianet Suvarna News

ಹೆಂಡತಿ ಫಿಟ್ ಆಗಿರಲು ರನ್ ಮಾಡೋದು ತಪ್ಪಾ? ಆದ್ರೊಂದು ತಪ್ಪು ಮಾಡಿದ್ದಕ್ಕೆ ಹೆಂಡತಿಗೆ ಡಿವೋರ್ಸ್!

ಈಗಿನ ಕಾಲದಲ್ಲಿ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನವಾಗ್ತಿದೆ. ದೂರ ನಿಂತು ನೋಡುವ ನಮಗೆ ಅದು ಕ್ಷುಲ್ಲಕ ಎನ್ನಿಸಿದ್ರೂ ಹತ್ತಿರುವ ಇರುವ, ಅದನ್ನು ಅನುಭವಿಸುವ ಜನರಿಗೆ ಅದು ಗಂಭೀರ ಸಮಸ್ಯೆಯಾಗಿರುತ್ತದೆ. ಚೀನಾದಲ್ಲೂ ಒಂದು ವಿಚ್ಛೇದನಕ್ಕೆ ವಿಚಿತ್ರ ಕಾರಣ, ಕಾರಣವಾಗಿದೆ. 
 

China Woman Divorce Husband After He Locked Daughter In Car For Running roo
Author
First Published Nov 17, 2023, 1:09 PM IST

ರನ್ನಿಂಗ್ ಆರೋಗ್ಯಕ್ಕೆ ಬಹಳ ಒಳ್ಳೆಯದು. ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ರನ್ನಿಂಗ್ ನಿಂದ ಕಾಪಾಡಿಕೊಳ್ಳಬಹುದು. ಬೆಳಿಗ್ಗೆ, ಸಂಜೆ ಪಾರ್ಕ್ ನಲ್ಲಿ ಜನರು ರನ್ನಿಂಗ್ ಮಾಡೋದನ್ನು ನೀವು ನೋಡ್ಬಹುದು. ಕೆಲವರು ಮನಸ್ಸಿಲ್ಲದ ಮನಸ್ಸಿನಲ್ಲಿ ಓಡ್ತಿರುತ್ತಾರೆ. ಸಂಗಾತಿಯ ಕಾಟಕ್ಕೆ ನಿದ್ದೆಗಣ್ಣಿನಲ್ಲಿ ಓಡ್ತಿದ್ದಾರೆ ನೋಡು ಅಂತಾ ನೋಡಿದೋರು ತಮಾಷೆ ಕೂಡ ಮಾಡ್ತಿರುತ್ತಾರೆ. ಬಹುತೇಕರು ತಮ್ಮ ಸಂಗಾತಿಗೆ ಅಥವಾ ಸ್ನೇಹಿತರಿಗೆ ಅವರ ಆರೋಗ್ಯ ವೃದ್ಧಿಗಾಗಿ ವ್ಯಾಯಾಮದ ಜೊತೆ ವಾಕಿಂಗ್, ರನ್ನಿಂಗ್ ಮಾಡುವಂತೆ ಸಲಹ ನೀಡ್ತಾರೆ. ಆದ್ರೆ ಈ ಮಹಿಳೆಗೆ ರನ್ನಿಂಗ್ ವಿಲನ್ ಆಗಿದೆ. ದಾಂಪತ್ಯ ಮುರಿದು ಬೀಳಲು ರನ್ನಿಂಗ್ ಕಾರಣವಾಗಿದೆ. ಇಂಥ ಕ್ಷುಲ್ಲಕ ಕಾರಣಕ್ಕೆ ವಿಚ್ಚೇದನ ನೀಡ್ತಾರಾ ಜನ ಅಂತ ನೀವು ಪ್ರಶ್ನೆ ಮಾಡಬಹುದು. ಕೆಲವೊಮ್ಮೆ ಇಂಥ ಸಣ್ಣ ಸಣ್ಣ ಕಾರಣವೇ ದಂಪತಿ ಮಧ್ಯೆ ಬಿರುಕಿಗೆ ಕಾರಣವಾಗುತ್ತದೆ. ರನ್ನಿಂಗ್ ಹೇಗೆ ವಿಚ್ಛೇದನಕ್ಕೆ ಬಂದು ನಿಲ್ತು ಎನ್ನುವ ಮಾಹಿತಿ ಇಲ್ಲಿದೆ. 

ಪತಿಗೆ ಶುರುವಾಗಿದೆ ರನ್ನಿಂಗ್ (Running) ಭೂತ : ಮದ್ಯಪಾನ (Drinking), ಧೂಮಪಾನ (Smoking) ಮಾತ್ರ ವ್ಯಸನವಲ್ಲ. ಕೆಲವೊಂದು ಒಳ್ಳೆ ಹವ್ಯಾಸಗಳು ಚಟವಾದ್ರೂ ಅದು ಮಾನಸಿಕ ಆರೋಗ್ಯ (health) ಹಾಳು ಮಾಡುವ ಜೊತೆಗೆ ಆಪ್ತರನ್ನು ದೂರ ಮಾಡುತ್ತದೆ. ಈ ಹುನಾನ್‌ ವ್ಯಕ್ತಿ ಜೀವನದಲ್ಲೂ ಅದೇ ಆಗಿದೆ.  ಹುನಾನ್ (Hunan) ಮಹಿಳೆ ಹೆಸರು ಝಾವೊ. ಆಕೆ ಪತಿ ರನ್ನಿಂಗ್ ವ್ಯಸನಿಯಾಗಿದ್ದಾನೆ. ಎಲ್ಲಕ್ಕಿಂತ ಅವನಿಗೆ ರನ್ನಿಂಗ್ ಜೀವನದಲ್ಲಿ ಅತಿಮುಖ್ಯವಾಗಿದೆ. ಸದಾ ರನ್ನಿಂಗ್ ಬಗ್ಗೆಯೇ ಆತ ಆಲೋಚನೆ ಮಾಡ್ತಾನೆ. ಇದು ಝಾವೊ ಹಾಗೂ ಆಕೆ ಪತಿ ದಾಂಪತ್ಯದಲ್ಲಿ ಬಿರುಕು ಮೂಡಿಸಿದೆ.

ಈ ಒಂದು ವಿಷಯ ಇಗ್ನೋರ್ ಮಾಡಿದ್ರೆ ಸಂಬಂಧ ಯಾವಾಗ್ಲೂ ಗಟ್ಟಿಯಾಗಿರುತ್ತೆ!

ಕಾಲ್ಮೇಲೆ ಕಲ್ಲು ಹಾಕಿಕೊಂಡ ಝಾವೊ : ವಿಷ್ಯ ಏನಪ್ಪ ಅಂದ್ರೆ ಪತಿ ಪೆಂಗ್ ಮೊದಲು ಹೀಗಿರಲಿಲ್ಲ. ಆತನ ಆರೋಗ್ಯ ಚೆನ್ನಾಗಿರಲಿ ಎನ್ನುವ ಕಾರಣಕ್ಕೆ ಝಾವೊ, ಪೆಂಗ್ ಗೆ ರನ್ನಿಂಗ್ ಮಾಡುವಂತೆ ಸಲಹೆ ನೀಡಿದ್ದಾಳೆ. ಆರೋಗ್ಯಕ್ಕಾಗಿ ರನ್ನಿಂಗ್ ಶುರು ಮಾಡಿದ ಪೆಂಗ್ ಗೆ ಅದು ಚಟವಾಗಿದೆ. ರನ್ನಿಂಗ್ ಇಲ್ಲದೆ ಆತ ಇರಲು ಸಾಧ್ಯವಿಲ್ಲ ಎನ್ನುವಂತಾಗಿದೆ. ಯಾವುದೇ ಕೆಲಸ ಬಂದ್ರೂ ಅದ್ರ ಮಧ್ಯೆ ರನ್ನಿಂಗ್ ತೂರಿಸ್ತಾನೆ ಪೆಂಗ್.

ಮಗಳನ್ನು ಮರೆತ ಪೆಂಗ್ : ಝಾವೊ ತನ್ನ ವಿಚ್ಛೇದನದ ನಿರ್ಧಾರವನ್ನು ತುಂಬಾ ಆಲೋಚನೆ ಮಾಡಿ ತೆಗೆದುಕೊಂಡಿದ್ದಾಳೆ. ತನ್ನ ಹಾಗೂ ಮಗಳ ಸುರಕ್ಷತೆ ದೃಷ್ಟಿಯಿಂದ ಈ ತೀರ್ಮಾನ ತೆಗೆದುಕೊಂಡಿರೋದಾಗಿ ಆಕೆ ಹೇಳಿದ್ದಾಳೆ. 

ಮಕ್ಕಳು ಬೇಕಂತ ಸೈಫ್​ನ ಮದ್ವೆಯಾದೆ... ಇಲ್ಲದಿದ್ರೆ... ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟ ಕರೀನಾ ಕಪೂರ್​!

ಒಂದು ದಿನ ಐದು ವರ್ಷದ ಮಗಳ ಜೊತೆ ಹೊರಗೆ ಹೋಗಿದ್ದ ಪೆಂಗ್, ರನ್ನಿಂಗ್ ಗುಂಗಿನಲ್ಲಿ ಮಗಳ ಸುರಕ್ಷತೆಯನ್ನು ನಿರ್ಲಕ್ಷ್ಯಿಸಿದ್ದಾನೆ. ಮಗಳನ್ನು ಕಾರಿನಲ್ಲಿ ಕುಳಿಸಿ ತಾನು ರನ್ನಿಂಗ್ ಮಾಡಿದ್ದಾನೆ. ಮಗಳಿಗೆ ಅಗತ್ಯವಿರುವ ಆಹಾರ ತಂದುಕೊಟ್ಟಿದ್ದಲ್ಲದೆ, ಆಕೆಗೆ ಮೊಬೈಲ್ ನೀಡಿ ರನ್ನಿಂಗ್ ಗೆ ಹೋಗಿದ್ದಾನೆ. ಮಗಳು ಮನೆಗೆ ಬಂದು ಎಲ್ಲ ವಿಷ್ಯವನ್ನು ಝಾವೊಗೆ ಹೇಳಿದ್ದಾಳೆ. ಇದನ್ನು ಕೇಳಿದ ಝಾವೊ ಕೋಪಗೊಂಡಿದ್ದಾಳೆ. ಪತಿಯ ರನ್ನಿಂಗ್ ಗೀಳಿಗೆ ಬೇಸತ್ತ ಝಾವೊ ವಿಚ್ಛೇದನಕ್ಕೆ ಮುಂದಾಗಿದ್ದಾಳೆ. 

ತನ್ನ ಪತಿಯ ರನ್ನಿಂಗ್ ಚಟವೇ ನಮ್ಮ ಸಂಬಂಧ ಹಾಳಾಗಲು ಕಾರಣವೆಂದು ಝಾವೊ ಹೇಳಿದ್ದಾಳೆ. ಆರಂಭದಲ್ಲಿ ನಾನು ಎಲ್ಲವನ್ನೂ ನಿರ್ಲಕ್ಷ್ಯ ಮಾಡಿದೆ. ಪತಿಯ ಆರೋಗ್ಯ ಮುಖ್ಯ ಎನ್ನುವ ಕಾರಣಕ್ಕೆ ಸುಮ್ಮನಿದ್ದೆ. ಆದ್ರೆ ರನ್ನಿಂಗ್ ಆತನ ಬಾಳಲ್ಲಿ ಇಷ್ಟೆಲ್ಲ ಮಾಡುತ್ತೆ ಎನ್ನುವ ಕಲ್ಪನೆ ಇರಲಿಲ್ಲ. ಮಗಳ ಸುರಕ್ಷತೆ ವಿಷ್ಯ ಬಂದಾಗ ನಾನು ಸೂಕ್ತ ನಿರ್ಧಾರ ತೆಗೆದುಕೊಳ್ಳುವುದು ಅವಶ್ಯವಾಗಿತ್ತು. ಹಾಗಾಗಿ ಪೆಂಗ್ ನಿಂದ ದೂರವಾಗ್ತಿದ್ದೇನೆ ಎಂದಿದ್ದಾಳೆ. 
 

Follow Us:
Download App:
  • android
  • ios