ಈ ಒಂದು ವಿಷಯ ಇಗ್ನೋರ್ ಮಾಡಿದ್ರೆ ಸಂಬಂಧ ಯಾವಾಗ್ಲೂ ಗಟ್ಟಿಯಾಗಿರುತ್ತೆ!
ನಿನ್ನೆಯವರೆಗೆ ಪ್ರೀತಿಯ ಅಲೆಯಲ್ಲಿ, ಸಂಗಾತಿಯನ್ನು ಸ್ವೀಕರಿಸಿದವರು, ಇದೀಗ ಜೊತೆಯಲ್ಲಿದ್ದ ನಂತರ ಅವರ ಬಗ್ಗೆ ಒಂದೊಂದೆ ನ್ಯೂನ್ಯತೆಗಳ ಬಗ್ಗೆ ದೂರು ನೀಡಲು ಆರಂಭಿಸುತ್ತಾರೆ. ಇದರಿಂದ ಸಂಬಂಧ ಉಳಿಸಲು ಕಷ್ಟವಾಗುತ್ತೆ. ಹಾಗಿದ್ರೆ ಸಂಬಂಧ ಗಟ್ಟಿಯಾಗಿರಲು ಏನು ಮಾಡಬೇಕು?
ಇಬ್ಬರು ಅಪರಿಚಿತ ವ್ಯಕ್ತಿಗಳು ಸಂಪರ್ಕಕ್ಕೆ ಬಂದಾಗ ಮತ್ತು ಪರಸ್ಪರ ಆಕರ್ಷಿತರಾದಾಗ, ಅವರು ಮೊದಲು ವ್ಯಕ್ತಿಯ ಒಳ್ಳೆಯತನವನ್ನು ನೋಡುತ್ತಾರೆ. ಹೃದಯವು ಅವನ ಗುಣಗಳಿಗೆ ಸೋತು ಹೋಗುತ್ತೆ, ಅವರು ಆ ವ್ಯಕ್ತಿಯೊಂದಿಗೆ ಹೆಚ್ಚು ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ. ಆದರೆ ಅಂತಹ ಸಂಬಂಧಗಳಲ್ಲಿಯೂ (Relationship) ಸಹ, ಕೆಲವೊಮ್ಮೆ ಇಬ್ಬರೂ ಬೇರೆ ಬೇರೆಯಾಗುವ ಸಾಧ್ಯತೆ ಇರುತ್ತೆ. ಇದಕ್ಕೆ ಕಾರಣ ಏನು ಗೊತ್ತಾ?
ಒಬ್ಬರನ್ನೊಬ್ಬರು ಬಿಟ್ಟಿರಲಾರಷ್ಟು ಪ್ರೀತಿಸಿ, ನಂತರ ಬೇರೆಯಾಗೋದಕ್ಕೆ ಸಣ್ಣ ಕಾರಣವಿದೆ. ಇದನ್ನು ಸಮಯಕ್ಕೆ ನಿಯಂತ್ರಿಸದಿದ್ದರೆ, ಬಹಳ ದೊಡ್ಡ ರೂಪವನ್ನು ತೆಗೆದುಕೊಳ್ಳುತ್ತದೆ. ಗೌರ್ ಗೋಪಾಲ್ ದಾಸ್ (Gaur Gopal Das) ತಮ್ಮ ಪ್ರವಚನವೊಂದರಲ್ಲಿ ಸಂಬಂಧವು ದೀರ್ಘಕಾಲ ಉಳಿಯಬೇಕಾದರೆ ಏನು ಮಾಡಬೇಕೆಂದು ವಿವರಿಸಿದರು. ಅದರ ಬಗ್ಗೆ ವಿವರವಾಗಿ ತಿಳಿಯೋಣ.
ದೀರ್ಘಕಾಲ ಒಟ್ಟಿಗೆ ಇರುವಾಗ ಈ ವಿಷಯಗಳು ಕಾಣಿಸಿಕೊಳ್ಳುತ್ತವೆ
ಗುರು ಗೋಪಾಲ್ ದಾಸ್ ಹೇಳುತ್ತಾರೆ, ನಾವು ಯಾರಿಗಾದರೂ ಹತ್ತಿರವಿದ್ದಾಗ, ಅವರೊಂದಿಗೆ ದೀರ್ಘಕಾಲ ಇದ್ದಾಗ, ನಾವು ಎಲ್ಲವನ್ನೂ ಹೆಚ್ಚು ಆಳವಾಗಿ ನೋಡಲು ಪ್ರಾರಂಭಿಸುತ್ತೇವೆ. ನಾವು ಹೆಚ್ಚು ಸಮಯ ಒಬ್ಬರ ಜೊತೆ ಕಳೆದಷ್ಟು, ಅವರನ್ನು ಅರ್ಥ ಮಾಡಿಕೊಂಡಷ್ಟು ಅವರ ಬಗ್ಗೆ ನ್ಯೂನ್ಯತೆಗಳು ಹೆಚ್ಚು ಹೆಚ್ಚು ತಿಳಿಯಲು ಆರಂಭವಾಗುತ್ತೆ.
ಸಂಬಂಧವನ್ನು ಬಲವಾಗಿಡಲು ಬಯಸಿದರೆ, ಈ ಗುಣಗಳನ್ನು ಕಲಿಯಿರಿ.
ನಾವು ಇತರರ ನ್ಯೂನತೆಗಳು ಅಥವಾ ತಪ್ಪುಗಳ ಮೇಲೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದರೆ, ನಾವು ಆ ವ್ಯಕ್ತಿಯನ್ನು ಧೂಷಿಸಲು ಪ್ರಾರಂಭಿಸುತ್ತೇವೆ ಎಂದು ಗೌರ್ ಗೋಪಾಲ್ ದಾಸ್ ಹೇಳುತ್ತಾರೆ. ಹಾಗಾಗಿ ನೀವು ಯಾರೊಂದಿಗಾದರೂ ನಿಕಟ ಸಂಬಂಧ ಹೊಂದಿದ್ದರೆ, ಅವರ ನ್ಯೂನತೆಗಳನ್ನು ನಿರ್ಲಕ್ಷಿಸಲು ಕಲಿಯಿರಿ ಎಂದು ಅವರು ಹೇಳುತ್ತಾರೆ.
ಸಂಬಂಧವನ್ನು ಬಲವಾಗಿಡುವುದು ಹೇಗೆ?
ನ್ಯೂನ್ಯತೆಗಳನ್ನು (mistakes) ಎದುರಿಸಿ
ಗೋಪಾಲ್ ದಾಸ್ ಹೇಳುವಂತೆ ವ್ಯಕ್ತಿಯಲ್ಲಿ ನೀವು ನೋಡುವ ದುಷ್ಕೃತ್ಯಗಳನ್ನು ಅಥವಾ ನ್ಯೂನ್ಯತೆಗಳನ್ನು ನಿರ್ಲಕ್ಷಿಸಲು ನಿಮಗೆ ಸಾಧ್ಯವಾಗದಿದ್ದರೆ, ಅದನ್ನು ಎದುರಿಸಿ. ಅವನ ಒಳ್ಳೆಯ ಗುಣಗಳಿಗೆ ಗಮನ ಕೊಡಲು ಪ್ರಾರಂಭಿಸಿ. ಇದರಿಂದ ಸಂಬಂಧ ಸುಧಾರಿಸಲು ಪ್ರಾರಂಭಿಸುತ್ತೆ ಎಂದು ಹೇಳಿದ್ದಾರೆ.
ಸಂವಹನ ಮುಖ್ಯ
ಗುರು ಗೋಪಾಲ್ ದಾಸ್ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ. ಆದರೆ, ಗಂಡ-ಹೆಂಡತಿ ಸಂಬಂಧದ ವಿಷಯಕ್ಕೆ ಬಂದಾಗ, ಪ್ರತಿ ಬಾರಿಯೂ ವಿಷಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರಿಗೆ ಈ ಪರಿಸ್ಥಿತಿಯನ್ನು ಎದುರಿಸಲು ಉತ್ತಮ ಮಾಧ್ಯಮವೆಂದರೆ ಮಾತನಾಡುವುದು (communication). ಸಂವಹನವು ಸಂಬಂಧದ ಕೀಲಿಯಾಗಿದೆ, ಇದು ದೊಡ್ಡ ಗೊಂದಲವನ್ನು ಸಹ ತೆಗೆದುಹಾಕುತ್ತದೆ.