ಮಕ್ಕಳು ಬೇಕಂತ ಸೈಫ್​ನ ಮದ್ವೆಯಾದೆ... ಇಲ್ಲದಿದ್ರೆ... ಶಾಕಿಂಗ್​ ಸ್ಟೇಟ್​ಮೆಂಟ್​ ಕೊಟ್ಟ ಕರೀನಾ ಕಪೂರ್​!

ಸೈಫ್​ ಅಲಿ ಖಾನ್​ ಮತ್ತು ಕರೀನಾ ಮದ್ವೆಯಾಗಿ 11 ವರ್ಷಗಳಾಗಿವೆ. ಈ ಸಂದರ್ಭದಲ್ಲಿ ಮದ್ವೆಯಾಗಿರುವ ಕಾರಣ ಹೀಗೆ ಕೊಟ್ಟಿದ್ದಾರೆ ನಟಿ ಕರೀನಾ
 

Kareena Kapoor reveals true motive behind marrying Saif Ali Khan suc

 ಬಾಲಿವುಡ್​ನ ಸದ್ಯದ ಯಶಸ್ವಿ ಜೋಡಿಗಳಲ್ಲಿ ಒಂದೆನಿಸಿದೆ ಸೈಫ್​ ಅಲಿ ಖಾನ್​ ಮತ್ತು ಕರೀನಾ ಕಪೂರ್​ ಅವರ ಜೋಡಿ.  ಎಲ್ಲರಿಗೂ ತಿಳಿದಿರುವಂತೆ ಇದು ಸೈಫ್​ ಅಲಿ ಅವರಿಗೆ ಎರಡನೆಯ ಮದುವೆ. ಅವರ ಮೊದಲ ಮದುವೆಯಾದದ್ದು ನಟಿ ಅಮೃತಾ ಸಿಂಗ್​ ಅವರ ಜೊತೆಗೆ. ತಮ್ಮ ಮೊದಲ ಮದುವೆಗೆ ಬಂದಿದ್ದ ಕರೀನಾ ಕಪೂರ್​ ಅವರನ್ನು ಮಗಳೇ ಎಂದು ಕರೆದಿದ್ದ ಸೈಫ್​ ಅಲಿ ನಂತರ ಆಕೆಯನ್ನೇ ಮದುವೆಯಾಗಿ ಟ್ರೋಲ್​ಗೂ ಒಳಗಾಗಿದ್ದಿದೆ. ಅದೇನೇ ಇದ್ದರೂ ಸದ್ಯ ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಕೆಲವು ಖ್ಯಾತನಾಮ ನಟರಂತೆಯೇ ಸೈಫ್​ ಅಲಿ ಕೂಡ ಇಬ್ಬರೂ ಹಿಂದೂ ಯುವತಿಯರನ್ನು ಮದುವೆಯಾಗಿ ಸಕತ್​ ಸುದ್ದಿ ಮಾಡಿದವರು. ಸೈಫ್​ ಅಲಿ ಖಾನ್​ ಕರೀನಾರಿಗಿಂತಲೂ 10 ವರ್ಷ ದೊಡ್ಡವರು. 5 ವರ್ಷಗಳ ಕಾಲ ಲಿವ್-ಇನ್ (Live in relation) ಸಂಬಂಧದಲ್ಲಿದ್ದ ಈ ಜೋಡಿ ಕೊನೆಗೆ ಮದುವೆಯಾಗಿತ್ತು. ಅದಾಗಲೇ ಲವ್ ಜಿಹಾದ್ ಎಂಬ ಬಗ್ಗೆಯೂ ದೊಡ್ಡ ಮಟ್ಟದಲ್ಲಿ ಸುದ್ದಿಯೇ ಆಗಿಬಿಟ್ಟಿತ್ತು. 

ನಟ ಸೈಫ್​ ಅಲಿ ಇದೀಗ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಟಿ ಕರೀನಾರನ್ನು (Kareena Kapoor) ಮದುವೆಯಾಗಿದ್ದರೆ, ಅಮೃತಾ ಸಿಂಗ್​ ಅವರನ್ನು ಮದುವೆಯಾದಾಗ ಸೈಫ್ ಅವರಿಗೆ ವಯಸ್ಸು 21. ಆದರೆ ಅಮೃತಾ ಸಿಂಗ್‌ ಅವರಿಗೆ 32 ವರ್ಷ ವಯಸ್ಸಾಗಿತ್ತು!  ಎಲ್ಲರನ್ನೂ ಎದುರು ಹಾಕಿಕೊಂಡು 12 ವರ್ಷ ಹಿರಿಯ ನಟಿಯನ್ನು ಮದುವೆಯಾಗಿದ್ದರು ಎಂದೇ ಸುದ್ದಿಯಾಗಿತ್ತು. ಇದು ದೊಡ್ಡ ಮಟ್ಟದಲ್ಲಿ ಹಲ್​ಚಲ್​ ಸೃಷ್ಟಿಸಿತ್ತು. ನಂತರ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 13 ವರ್ಷಗಳ  ದಾಂಪತ್ಯದ  ನಂತರ ವಿಚ್ಛೇದನ ಪಡೆದರು. 2004ರಲ್ಲಿ ಸೈಫ್‌ ಹಾಗೂ ಅಮೃತಾ ತಮ್ಮ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದಾಗ ಸಾರಾ 10 ಮತ್ತು ಇಬ್ರಾಹಿಂ 4 ವರ್ಷ ವಯಸ್ಸಿನವರಾಗಿದ್ದರು. ಇದೀಗ 53 ವರ್ಷದ ಸೈಫ್​ ಅಲಿ ಖಾನ್​ ಅವರಿಗೆ ಅಮೃತಾ ಸಿಂಗ್​ ಮತ್ತು ಕರೀನಾ ಕಪೂರ್​ ಈ ಇಬ್ಬರು  ಪತ್ನಿಯರಿಂದ ನಾಲ್ವರು ಮಕ್ಕಳಿದ್ದಾರೆ. ಅವರ ಹೆಸರು ಸಾರಾ ಅಲಿ ಖಾನ್​ (Sara Ali Khan), ಇಬ್ರಾಹಿಂ ಅಲಿ ಖಾನ್​, ತೈಮೂರು ಅಲಿ ಖಾನ್​ ಹಾಗೂ ಜೆಹ್​  ಅಲಿ ಖಾನ್​.  

30 ವರ್ಷಕ್ಕೆ ಮಕ್ಳು ಮಾಡ್ಕೊಳ್ಳೋ ಪ್ಲ್ಯಾನ್​ ಹಾಕಿದ್ದ ನಟಿ ತಮನ್ನಾ ಮದ್ವೆ ಫಿಕ್ಸ್​? ವರನಾರು ಗೊತ್ತಾ?

ಇದೀಗ ಕರೀನಾ ಕಪೂರ್​ ತಾವು ಸೈಫ್​ ಅಲಿ ಖಾನ್​ ಅವ್ರನ್ನು ಮದ್ವೆಯಾಗಿರುವ ಕಾರಣವನ್ನು ಬಹಿರಂಗಗೊಳಿಸಿದ್ದಾರೆ. ಅದೇನೆಂದರೆ ಸೈಫ್​ ಅಲಿ ಖಾನ್​ ಅವರನ್ನು ಕರೀನಾ ಮದುವೆಯಾಗಿದ್ದು, ಮಕ್ಕಳನ್ನು ಹೆರುವುದಕ್ಕಾಗಿಯಂತೆ! ಹೌದು. ಹೀಗೆಂದು ಖುದ್ದು ಕರೀನಾ ಡರ್ಟಿ ಎಂಬ ಮ್ಯಾಗಜೀನ್​ಗೆ ಸಂದರ್ಶನ ಕೊಟ್ಟಿದ್ದಾರೆ.  ಮದುವೆಯಾಗುವ ಮೊದಲು ಸೈಫ್​ ಮತ್ತು ಕರೀನಾ ಸುಮಾರು  5 ವರ್ಷ ಲಿವಿಂಗ್ ಟುಗೆದರ್​ನಲ್ಲಿದ್ದರು. ಈ ಕುರಿತೂ ಈ ಹಿಂದೆ ಕರೀನಾ ಹೇಳಿಕೊಂಡಿದ್ದರು.  ತಾವು ಮದುವೆಯಾಗುವ ಮೊದಲು ಐದು ವರ್ಷ ಸೈಫ್​ ಜೊತೆ ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದೆ.  ಆಗ ನನಗೆ ಮಕ್ಕಳನ್ನು ಮಾಡಿಕೊಳ್ಳುವ ಆಸೆಯಾಯಿತು.  ಅದಕ್ಕಾಗಿ ಮದುವೆಯಾದೆವು. ನಮಗಿಬ್ಬರಿಗೂ ಮಕ್ಕಳು ಬೇಕು ಎನಿಸಿದ ಕಾರಣ ಮದುವೆಯಾದೆವು. ಇಲ್ಲದಿದ್ದರೆ ಮದುವೆಯಾಗದೆಯೇ ಜೊತೆಗಿರುತ್ತಿದ್ದೆವು. ಮಕ್ಕಳನ್ನು ಹೆರುವ ಉದ್ದೇಶವಿಲ್ಲದಿದ್ದರೆ ಇಬ್ಬರೂ ಲಿವ್​ ಇನ್​ನಲ್ಲಿ ಖುಷಿಯಾಗಿದ್ದೆವು. ಅಷ್ಟಕ್ಕೂ  ನಾವು ನಮ್ಮ ರಿಲೇಷನ್​ಶಿಪ್​​ನಲ್ಲಿ ಮುಂದಿನ ಹಂತಕ್ಕೆ ಹೋಗಿದ್ದು ಮಕ್ಕಳನ್ನು ಮಾಡಿಕೊಳ್ಳಲು  ಮಾತ್ರ ಎಂದಿದ್ದಾರೆ.

ಲವ್​ ಜಿಹಾದ್​ ಎಂದೇ ಇವರ ಮದುವೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ್ದ ಸೈಫ್​ ಅಲಿ ಖಾನ್​, ನಾನು ಎಲ್ಲ ಧರ್ಮವನ್ನೂ ಪಾಲಿಸುವವ. ಕರೀನಾ ಜೊತೆ ಪ್ರೀತಿ ಮಾಡಿ ಮದುವೆ ಮಾಡಿಕೊಂಡಿದ್ದೇನೆ. ಯಾವುದೇ  ಕಾರಣಕ್ಕೂ ಆಕೆಯ ಮತಾಂತರಕ್ಕೆ ನಾನು ಬಲವಂತಗೊಳಿಸಲಿಲ್ಲ. ಆಕೆ ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾಳೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ಅದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಮೆಂಟ್​ ಹಾಕಿರುವ ನೆಟ್ಟಿಗರು, ಎಲ್ಲವೂ ಸರಿ, ಹಿಂದೂಗಳನ್ನು ಮದ್ವೆಯಾಗಿರುವ ಖಾನ್​ ನಟರು ತಮ್ಮ ಹಿಂದೂ ಧರ್ಮದ ಬಗ್ಗೆ ಇಷ್ಟೆಲ್ಲಾ ಎದುರುಗಡೆ ಮಾತನಾಡುವವರು ಮಕ್ಕಳಿಗೆ ಮಾತ್ರ ಖಾನ್​ ಎನ್ನುವುದನ್ನು ಇಡಲು ಮರೆಯುವುದಿಲ್ಲ, ಭೇಷ್​ ಭೇಷ್​ ಎನ್ನುತ್ತಿದ್ದಾರೆ.

ನಾಲಿಗೆ ಜಾರಿ ಐಶ್ವರ್ಯ ರೈ ಬಗ್ಗೆ ತಪ್ಪಾಗಿ ಮಾತಾಡಿದೆ... ಪಾಕ್​ ಕ್ರಿಕೆಟಿಗನಿಂದ ಹೀಗೆ ಕ್ಷಮೆ ಕೋರಿಕೆ...
 

Latest Videos
Follow Us:
Download App:
  • android
  • ios