ಕೊರೋನಾ ಸೋಂಕು ಹರಡುತ್ತಿದ್ದ ವರ್ಷಗಳಲ್ಲಿ ಸುದೀರ್ಘ ಲಾಕ್‌ಡೌನ್‌ ಜನರ ಆಸಕ್ತಿ, ಆದ್ಯತೆ, ಅಭಿರುಚಿ ಎಲ್ಲವನ್ನೂ ಬದಲಾಯಿಸಿದೆ. ಆನ್‌ಲೈನ್‌ ಕ್ಲಾಸ್‌ಗೆ ಒಗ್ಗಿಹೋಗಿದ್ದ ಮಕ್ಕಳಿಗೆ ಪ್ರತಿ ದಿನ ಶಾಲೆಗೆ ಹೋಗಿ ಬರುವುದು ಹೆಚ್ಚು ಆಸಕ್ತಿಯಿಲ್ಲದ ವಿಷಯವಾಗಿ ಬದಲಾಗಿದೆ. ನಿಮ್ಮ ಮಕ್ಳು ಕೂಡಾ ಸ್ಕೂಲಿಗೆ ಹೋಗೋಕೆ ಬೇಜಾರು ಅಂತಿದ್ದಾರಾ ? ಹಾಗಿದ್ರೆ ಅವ್ರ ಮನಸ್ಸನ್ನು ರಿಫ್ರೆಶ್ ಮಾಡಲು ಇಷ್ಟ್ ಮಾಡಿ ಸಾಕು.

ಮಕ್ಕಳು ಯಾವುದೇ ವಿಷಯದ ಬಗ್ಗೆ ಅತಿ ಬೇಗ ಉದಾಸೀನತೆ ಬೆಳೆಸಿಕೊಳ್ಳುತ್ತಾರೆ. ತಮ್ಮ ಕಂಫರ್ಟ್‌ ಝೋನ್‌ನಿಂದ ಹೊರಬರೋಕೆ ಇಷ್ಟಪಡುವುದಿಲ್ಲ. ಕೊರೋನಾ ಸೋಂಕು ಹರಡುತ್ತಿದ್ದ ವರ್ಷಗಳಲ್ಲಿ ಸುದೀರ್ಘ ಲಾಕ್‌ಡೌನ್‌ ಜನರ ಆಸಕ್ತಿ, ಆದ್ಯತೆ, ಅಭಿರುಚಿ ಎಲ್ಲವನ್ನೂ ಬದಲಾಯಿಸಿದೆ. ಆನ್‌ಲೈನ್‌ ಕ್ಲಾಸ್‌ಗೆ ಒಗ್ಗಿಹೋಗಿದ್ದ ಮಕ್ಕಳಿಗೆ ಪ್ರತಿ ದಿನ ಶಾಲೆಗೆ ಹೋಗಿ ಬರುವುದು ಹೆಚ್ಚು ಆಸಕ್ತಿಯಿಲ್ಲದ ವಿಷಯವಾಗಿ ಬದಲಾಗಿದೆ.ಪ್ರತಿದಿನ ಕಚೇರಿಗೆ ಹೋಗುವಾಗ ಹಿರಿಯರು ಹೇಗೆ ಬೇಸರಗೊಳ್ಳುತ್ತಾರೋ, ಅದೇ ರೀತಿ ಮಕ್ಕಳು ಸಹ ಪ್ರತಿದಿನ ಶಾಲೆಗೆ ಹೋಗಲು ಬೇಸರಗೊಳ್ಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೂ ಉಲ್ಲಾಸ ಅಗತ್ಯ. ನಿಮ್ಮ ಮಗುವನ್ನು ರಿಫ್ರೆಶ್ ಮಾಡುವ ಕೆಲವು ವಿಧಾನಗಳು ಇಲ್ಲಿವೆ.

ಶಾಲೆಗೆ ಹೋಗುವ ಮಗುವಿನ ಮನಸ್ಸನ್ನು ರಿಫ್ರೆಶ್ ಮಾಡುವುದು ಹೇಗೆ ?
ಪ್ರತಿದಿನ ಬೆಳಗ್ಗೆದ್ದು ಶಾಲೆಗೆ ಹೋಗಲು ಮಕ್ಕಳಿಗೆ (Children) ಬೇಸರವಾಗುತ್ತದೆ. ಪ್ರತಿ ದಿನ ಬೆಳಿಗ್ಗೆ ಎದ್ದು ಶಾಲೆಗೆ ಹೋಗುವುದು, ಶಾಲೆಯಿಂದ ಹಿಂತಿರುಗುವುದು ಮತ್ತು ನಂತರ ಟ್ಯೂಷನ್‌ಗೆ ಹೊರಡುವುದು. ವಯಸ್ಕರು ಕಚೇರಿಗೆ ಹೋಗುವಂತೆಯೇ ಮಕ್ಕಳು ಸಹ ಪ್ರತಿದಿನ ಅದೇ ದಿನಚರಿಯಿಂದಬೇಸರಗೊಳ್ಳುತ್ತಾರೆ. ಹೀಗಾಗಿ ಅವರ ಮನಸ್ಸು ರಿಫ್ರೆಶ್‌ಗೊಳ್ಳಬೇಕಾದುದು ಮುಖ್ಯ. ನಿಮ್ಮ ಮಗುವು ಶಾಲೆಯಿಂದ ಬಂದು ದಣಿದಿರುವಾಗ ಮತ್ತು ತನ್ನ ಆಹಾರ (Food)ವನ್ನು ತಿನ್ನಲು ಬಯಸದಿದ್ದಾಗ ಅಥವಾ ಅವನು ಟ್ಯೂಷನ್‌ಗಳಿಗೆ ಅಥವಾ ಪಠ್ಯೇತರ ಚಟುವಟಿಕೆಗಳಿಗೆ ಹೋಗಲು ನಿರಾಕರಿಸಿದಾಗ, ನಿಮ್ಮ ಮಗುವು ರಿಫ್ರೆಶ್ ಆಗಬೇಕು ಎಂಬುದನನ್ನು ನೀವು ತಿಳಿದುಕೊಳ್ಳಬೇಕು. ರಿಫ್ರೆಶ್ ಮಾಡುವುದರಿಂದ ಮಗುವು ಮೊದಲಿನಂತೆ ಮತ್ತೆ ಶಾಲೆಗೆ (School) ಹೋಗಲು ಸಾಧ್ಯವಾಗುತ್ತದೆ ಮತ್ತು ಅವನು ಅಧ್ಯಯನ (Study) ಮತ್ತು ಇತರ ಚಟುವಟಿಕೆಗಳತ್ತ ಗಮನ ಹರಿಸಲು ಸಾಧ್ಯವಾಗುತ್ತದೆ.

ಬ್ಯುಸಿನೆಸ್ ಟೂರ್ ಮಧ್ಯೆಯೂ ತಂದೆ – ಮಕ್ಕಳ ಸಂಬಂಧ ಹೀಗಿದ್ದರೆ ಚೆನ್ನ

ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಕಲಿಸಿ: ಮಕ್ಕಳ ಜೀವನವೂ ಸುಲಭವಲ್ಲ. ಆ ಅಲ್ಪ ಜೀವನದಲ್ಲೂ ಅವರಿಗೆ ಸ್ನೇಹಿತರ ಜೊತೆ ಜಗಳವಾಡುವುದು, ಶಿಕ್ಷಕರಿಂದ ಬೈಯುವುದು, ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸುವುದು ಹೀಗೆ ಹಲವು ಸಮಸ್ಯೆಗಳು ಎದುರಾಗುತ್ತವೆ.ಇಂತಹ ಸಂದರ್ಭಗಳಲ್ಲಿ ಮಕ್ಕಳ ಮನಸ್ಸು ಚಂಚಲವಾಗಿ ಹಲವು ಬಾರಿ ಆತ್ಮವಿಶ್ವಾಸ (Confidence) ಕುಸಿಯಲಾರಂಭಿಸುತ್ತದೆ. ಅಂತಹ ವಿಷಯಗಳನ್ನು ತಪ್ಪಿಸಲು, ಐದರ ವರೆಗೆ ಎಣಿಸುವುದು ಅಥವಾ ಆಳವಾದ ಉಸಿರನ್ನು ತೆಗೆದುಕೊಳ್ಳುವಂತಹ ಕೆಲವು ತಂತ್ರಗಳನ್ನು ನಿಮ್ಮ ಮಗುವಿಗೆ ಕಲಿಸಿ.

ಹೊಸ ಸಾಮಗ್ರಿಗಳನ್ನು ಕೊಡಿಸಿ: ಮಕ್ಕಳು ಹೊಸ ವಸ್ತುಗಳನ್ನು ಖರೀದಿಸಲು ಇಷ್ಟಪಡುತ್ತಾರೆ. ನೀವು ಅವರನ್ನು ಸ್ಟೇಷನರಿ ಶಾಪಿಂಗ್‌ಗೆ ಕರೆದುಕೊಂಡು ಹೋಗಿ ಮತ್ತು ಅವರ ಆಯ್ಕೆಯ ಪೆನ್ನುಗಳು, ಪೆನ್ಸಿಲ್‌ಗಳು ಮತ್ತು ಪುಸ್ತಕಗಳನ್ನು ಖರೀದಿಸಿ. ಇದರಿಂದ ಮಗು ಖುಷಿಯಿಂದ ಶಾಲೆಗೆ ಹೋಗಲು ಸಿದ್ಧವಾಗುತ್ತದೆ.

ಬೇಕಾದ ವಿಷಯವನ್ನು ಕಲಿಯಲಿ: ಮಕ್ಕಳ ನಿಮ್ಮ ಇಷ್ಟಕಷ್ಟಗಳನ್ನು ಹೇರಬೇಡಿ. ಮಕ್ಕಳ ಆಲೋಚನೆಗಳಿಗೆ ಪ್ರೋತ್ಸಾಹ (Encourage) ನೀಡಿ. ಅವರ ಅಭಿರುಚಿಗಳು ಬೆಳೆಯಲು, ಬೆಳೆಸಲು ಇದು ನೆರವಾಗುತ್ತದೆ. ಮಕ್ಕಳು ಎಲ್ಲವನ್ನೂ ಎಂಜಾಯ್ ಮಾಡಲು ಕಲಿತುಕೊಳ್ಳುತ್ತಾರೆ. 

ಮಕ್ಕಳು ಸುಳ್ಳು ಹೇಳುತ್ತಾರೆಯೆ? ಈ ಅಭ್ಯಾಸ ಹೀಗೆ ಬದಲಾಯಿಸಿ

ಊಟದ ಬಾಕ್ಸ್ ಖರೀದಿಸಿ: ಮಗುವಿನೊಂದಿಗೆ ಮಾರುಕಟ್ಟೆಗೆ ಹೋಗಿ ಮತ್ತು ಅವರಿಗೆ ಇಷ್ಟವಾದ ಆಕರ್ಷಕ ಊಟದ ಬಾಕ್ಸ್ ಮತ್ತು ನೀರಿನ ಬಾಟಲಿಯನ್ನು ತಂದುಕೊಡಿ. ಇದನ್ನು ತೆಗೆದುಕೊಂಡ ನಂತರ, ಮಕ್ಕಳಿಗೆ ಈ ಹೊಸ ವಸ್ತುಗಳ್ನು ತನ್ನ ಸ್ನೇಹಿತರಿಗೆ ತೋರಿಸಬೇಕು ಎಂಬ ತುಡಿತ ಉಂಟಾಗುತ್ತದೆ. ಈ ಕಾರಣದಿಂದ ಮಗು ಸ್ವತಃ ಶಾಲೆಗೆ ಹೋಗಲು ಮನಸ್ಸು ಮಾಡುತ್ತದೆ.

ಹೋಂ ವರ್ಕ್ ಮಾಡಲು ಸ್ಥಳಾವಕಾಶ: ಮಕ್ಕಳು ಮನೆಕೆಲಸವನ್ನು ಆನಂದಿಸಬೇಕು. ನೀವು ಮನೆಯಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಿ ಮತ್ತು ಅಲ್ಲಿ ಮಗುವಿಗೆ ಹೋಮ್‌ವರ್ಕ್ ಮಾಡಲು ಸೆಟಪ್ ಮಾಡಿ. ಅಲ್ಲಿ ಮಕ್ಕಳಿಗೆ ಇಷ್ಟವಾಗುವ ಇಂಟಿರೀಯರ್‌ ಇರಲಿ. ಇಂಥಾ ವಾತಾವರಣದಲ್ಲಿ ಹೋಂ ವರ್ಕ್‌ ಮಾಡಲು ಮಕ್ಕಳು ಇಷ್ಟಪಡುತ್ತಾರೆ. 

ಶಾಲೆಯ ನಂತರ ಐಸ್ ಕ್ರೀಮ್: ಶಾಲೆಯ ನಂತರ ವಾರಕ್ಕೊಮ್ಮೆ ಮಗುವಿಗೆ ಐಸ್ ಕ್ರೀಮ್ ಕೊಡಿಸಿ. ಇದರಿಂದ ಮಗುವಿನ ಮನಸ್ಸನ್ನು ಶಾಲೆಯೊಂದಿಗೆ ಕನೆಕ್ಟ್ ಆಗುತ್ತದೆ. ಶಾಲೆಗೆ ಹೋಗುವುದರಲ್ಲಿ ಸಂತೋಷವೂ ಸಿಗುತ್ತದೆ.