ಮಕ್ಕಳು ಸುಳ್ಳು ಹೇಳುತ್ತಾರೆಯೆ? ಈ ಅಭ್ಯಾಸ ಹೀಗೆ ಬದಲಾಯಿಸಿ
ಅನೇಕ ಮಕ್ಕಳು ಸುಳ್ಳು ಹೇಳುವುದರಲ್ಲಿ ಎಷ್ಟು ನಿಪುಣರಾಗಿರುತ್ತಾರೆಂದರೆ, ಅವರ ಸುಳ್ಳು ಸಹ ನಿಜವೆಂದು ತೋರುತ್ತವೆ. ಕೆಲವು ಮಕ್ಕಳು ನೇರವಾಗಿ ಸುಳ್ಳು ಹೇಳೋದಿಲ್ಲ, ಆದರೆ ಸತ್ಯವನ್ನು ಮರೆ ಮಾಚುತ್ತಾರೆ. ಅಷ್ಟಕ್ಕೂ, ಮಕ್ಕಳಲ್ಲಿ ಸುಳ್ಳು ಹೇಳುವ ಅಭ್ಯಾಸಕ್ಕೆ ಯಾರು ಜವಾಬ್ದಾರರು? ಅವರು ಹುಟ್ಟು ಸುಳ್ಳುಗಾರರೇ? ಕುಟುಂಬ ಮಾತ್ರವಲ್ಲ, ಇತರ ಜನರು ಸಹ ಮಕ್ಕಳ ಈ ಅಭ್ಯಾಸದಿಂದ ತೊಂದರೆಗೀಡಾಗಿದ್ದಾರೆ. ಈ ಅಭ್ಯಾಸವನ್ನು ನೀವು ಹೇಗೆ ನಿವಾರಿಸೋದು? ಈ ಎಲ್ಲ ವಿಷಯಗಳನ್ನು ನಾವು ತಿಳಿದುಕೊಳ್ಳೋಣ.
ಮಗು ತಾನು ಏನು ನೋಡುತ್ತದೆಯೋ, ಅದನ್ನೇ ಕಲಿಯುತ್ತೆ
ಮಗು ತನ್ನ ಮನೆ ಮತ್ತು ಕುಟುಂಬದಲ್ಲಿ ಏನು ನೋಡುತ್ತದೆಯೋ, ಅವನು ಅದನ್ನೇ ಕಲಿಯುತ್ತಾನೆ. ಮನೆಯ ಹಿರಿಯ ಸದಸ್ಯರು ಸುಳ್ಳು ಹೇಳಿದರೆ ಈ ಪ್ರವೃತ್ತಿಯು ಮಕ್ಕಳಲ್ಲಿಯೂ ಬೆಳೆಯಬಹುದು. ಉದಾಹರಣೆಗೆ, ತಂದೆ ಮನೆಯಲ್ಲಿದ್ದರೆ ಮತ್ತು ಯಾರದೋ ಟೆಲಿಫೋನ್ ಅವನಿಗಾಗಿ ಬಂದರೆ, ಆಗ ಅವನು ತನ್ನ ಮಗುವಿಗೆ ಅಪ್ಪ ಮನೆಯಲ್ಲಿಲ್ಲ ಎಂದು ಹೇಳುತ್ತಾನೆ ಅಥವಾ ಉದ್ಯೋಗಸ್ಥ ತಂದೆ ಆರೋಗ್ಯವಾಗಿದ್ದರೂ ತನ್ನ ಕಚೇರಿಗೆ ಕರೆ ಮಾಡಿ, ಅನಾರೋಗ್ಯದಿಂದ ಬಳಲುತ್ತಿರೋದಾಗಿ ಹೇಳುತ್ತಾನೆ. ಈ ಎಲ್ಲಾ ಸುಳ್ಳುಗಳನ್ನು ಕೇಳಿ ಬೆಳೆಯುವ ಮಗು ತಾನು ಸುಳ್ಳು ಹೇಳಲು ಕಲಿಯುತ್ತದೆ.
ಮಕ್ಕಳು ವಯಸ್ಕರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ
ಮಕ್ಕಳು ಸುಳ್ಳು (children lies) ಹೇಳುವುದರಲ್ಲಿ ತಮ್ಮ ಹಿರಿಯರಿಗಿಂತ ಒಂದು ಹೆಜ್ಜೆ ಮುಂದೆ ಇರುತ್ತಾರೆ. ಸ್ಕೂಲ್ ನಲ್ಲಿ ಹೋಮ್ ವರ್ಕ್ ಕೊಟ್ಟಿದ್ದರೆ, ಮಕ್ಕಳು ಅನೇಕ ರೀತಿಯಲ್ಲಿ ಶಿಕ್ಷಕರಿಗೆ ಸುಳ್ಳು ಹೇಳುತ್ತಾರೆ. ಉದಾಹರಣೆಗೆ ಅತಿಥಿಗಳು ಮನೆ ಬಂದಿದ್ದರು, ತಾಯಿ ಆರೋಗ್ಯ ಕೆಟ್ಟಿತ್ತು, ನನಗೆ ಆರೋಗ್ಯ ಸಮಸ್ಯೆ ಇತ್ತು, ಇತ್ಯಾದಿಗಳಂತಹ ಸಾವಿರಾರು ನೆಪಗಳನ್ನು ಅವರು ಹೇಳುತ್ತಾರೆ.
ಒಂದು ವೇಳೆ ಮಕ್ಕಳು ಪರೀಕ್ಷೆಯಲ್ಲಿ ಫೇಲ್ ಆದರೆ ಅಥವಾ ಕಡಿಮೆ ಅಂಕಗಳನ್ನು ಗಳಿಸಿದರೆ, ನಾನು ಪತ್ರಿಕೆಯನ್ನು ಚೆನ್ನಾಗಿ ಮಾಡಿದ್ದೇನೆ, ಆದರೆ ಶಿಕ್ಷಕರು ಕಡಿಮೆ ಅಂಕ ನೀಡಿದರು ಎಂದು ಹೇಳುತ್ತಾರೆ. ಇನ್ನು ಮನೆಯಿಂದ ಶಾಲೆಗೆ ಹೋಗದೇ ಇರಲೂ ಹಲವಾರು ನೆಪಗಳನ್ನು ಹೇಳುತ್ತಾರೆ. ಹೊಟ್ಟೆನೋವು, ತಲೆನೋವು ಅಥವಾ ಇಂದು ಶಾಲೆಗೆ ರಜೆ ಎಂದೆಲ್ಲಾ ಸುಳ್ಳು ಹೇಳುತ್ತಾರೆ. ಸುಳ್ಳು ಹೇಳುವುದರಲ್ಲಿ ಪರಿಣತಿ ಹೊಂದಿರುವ ಅನೇಕ ಮಕ್ಕಳು, ಸಣ್ಣ ಕಳ್ಳತನಗಳು ಮತ್ತು ಕ್ರಿಮಿನಲ್ ಪ್ರವೃತ್ತಿಗಳಲ್ಲಿ (criminal habits) ತೊಡಗುತ್ತಾರೆ ಮತ್ತು ಸಿಕ್ಕಿಬಿದ್ದಾಗ ತಾನು ಕದ್ದೇ ಇಲ್ಲ ಅಥವಾ ಅಪರಾಧ ಮಾಡೇ ಇಲ್ಲ ಎಂದು ಸುಳ್ಳು ಹೇಳುತ್ತಾರೆ.
ಮಕ್ಕಳು ಸುಳ್ಳು ಹೆಮ್ಮೆಯನ್ನು ತೋರಿಸಲು ಬಯಸುತ್ತಾರೆ
ಜನರು ಮಕ್ಕಳ ಮಾತುಗಳನ್ನು ಸತ್ಯವೆಂದು ನಂಬಿ ಬಿಡುತ್ತಾರೆ, ಮಕ್ಕಳ ಸುಳ್ಳನ್ನೇ ನಾವು ಪ್ರೋತ್ಸಾಹ ನೀಡಲು ಆರಂಭಿಸುತ್ತಾರೆ, ನಂತರ ಅವರು ದೊಡ್ಡ ಸುಳ್ಳುಗಳನ್ನು ಹೇಳಲು ಪ್ರಾರಂಭಿಸುತ್ತಾರೆ. ಮಕ್ಕಳಲ್ಲಿ ದ್ವೇಷ ಮತ್ತು ಪ್ರತೀಕಾರದ ಪ್ರಜ್ಞೆಯೂ ಸುಳ್ಳು ಹೇಳಲು ಕಾರಣವಾಗುತ್ತದೆ. ಅಭದ್ರತೆಯ ಪ್ರಜ್ಞೆಯನ್ನು ಹೊಂದಿರುವ ಮಕ್ಕಳು ಸಹ ಸುಳ್ಳುಗಳನ್ನು ಆಶ್ರಯಿಸುತ್ತಾರೆ
ಇನ್ನು ಅತಿಯಾದ ಮುದ್ದಿನಲ್ಲಿ ಬೆಳೆಯುವ ಅಥವಾ ಅವರ ಪ್ರತಿಯೊಂದು ಹಠಮಾರಿತನವನ್ನು ಪೂರೈಸುವ ಮಕ್ಕಳು ಸಹ ಸುಳ್ಳು ಹೇಳುತ್ತಾರೆ. ಈ ಮಕ್ಕಳು ತಮ್ಮ ಸುಳ್ಳು ಹೆಮ್ಮೆಯನ್ನು ತೋರಿಸಲು ಬಯಸುತ್ತಾರೆ. ಈ ಸುಳ್ಳನ್ನು ಮಕ್ಕಳು ತಮ್ಮನ್ನು ತಾವು ಹೆಚ್ಚು ಗೌರವದಿಂದ ಕಾಣಲು ಸಹ ಹೇಳುತ್ತಾರೆ. ಹೀಗೆ ಸುಳ್ಳು ಹೇಳುತ್ತಾ ಹೋದಂತೆ, ಅವರು ಮುಂದೆ ದೊಡ್ಡ ಸುಳ್ಳುಗಾರರಾಗಿ ಬೆಳೆಯುತ್ತಾರೆ.
ಮಕ್ಕಳಿಗೆ ಹೊಡೆಯೋದು ಸರಿಯಲ್ಲ
ಮಕ್ಕಳ ಈ ಅಭ್ಯಾಸವನ್ನು ತೊಡೆದು ಹಾಕಲು, ಅವರನ್ನು ಹೊಡೆಯುವುದು (beating kids) ಅಥವಾ ಅವಮಾನಿಸುವುದು ಸರಿಯಲ್ಲ, ಏಕೆಂದರೆ ಅದು ಮಕ್ಕಳನ್ನು ಹಠಮಾರಿಯನ್ನಾಗಿ ಮಾಡುತ್ತದೆ. ಸುಳ್ಳು ಹೇಳಿದ್ದಕ್ಕಾಗಿ ಅವರನ್ನು ಶಿಕ್ಷಿಸುವ ಬದಲು ಅವರಿಗೆ ವಿವರಿಸಿ. ಸತ್ಯದ ಮಹತ್ವ ಮತ್ತು ಸುಳ್ಳುಗಳ ದುಷ್ಪರಿಣಾಮಗಳನ್ನು ಅವರಿಗೆ ತಿಳಿಸಿ. ಯಾವಾಗಲೂ ಸುಳ್ಳು ಹೇಳುವ ವ್ಯಕ್ತಿಯು ಎಂದಾದರೂ ಸತ್ಯವನ್ನು ಮಾತನಾಡಿದರೂ ಸಹ, ಅದನ್ನು ಜನ ಸುಳ್ಳು ಎಂದು ನಂಬುತ್ತಾರೆ.
ಮಕ್ಕಳನ್ನು ನಿರ್ಭೀತಿ ಮತ್ತು ಆತ್ಮವಿಶ್ವಾಸದಿಂದ ಬೆಳೆಸಿ, ಇದರಿಂದ ಅವರು ತಮ್ಮ ತಪ್ಪನ್ನು ಹಿಂಜರಿಕೆಯಿಲ್ಲದೆ ಒಪ್ಪಿಕೊಳ್ಳಬಹುದು. ಮಕ್ಕಳಿಗೆ ಸತ್ಯವನ್ನು ಎದುರಿಸಲು ಕಲಿಸಿ, ಅದರಿಂದ ಓಡಿಹೋಗದಂತೆ ಕಲಿಸಿ. ಸುಳ್ಳನ್ನು ಹೇಳಿದರೆ ಅದರಿಂದ ಮೋಸ ಮಾಡಿದಂತೆ ಆಗುತ್ತೆ ಅನ್ನೋದನ್ನು ಮಕ್ಕಳಿಗೆ ಅರ್ಥ ಮಾಡಿಸಿ, ಇದರಿಂದ ಮಗು ಸುಳ್ಳು ಹೇಳೋದನ್ನು ಬಿಡಬಹುದು.
kids
ಪೋಷಕರು ಮತ್ತು ಶಿಕ್ಷಕರು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅದಕ್ಕೆ ಅನುಗುಣವಾಗಿ ಮಕ್ಕಳನ್ನು ಉಪಚರಿಸಬೇಕು. ಈ ಕೆಟ್ಟ ಪ್ರವೃತ್ತಿಯು ಮಗುವಿನಲ್ಲಿ ಎಲ್ಲಿಂದ ಬರುತ್ತಿದೆ ಎಂಬುದನ್ನು ಪರಿಶೀಲಿಸಬೇಕು. ಅವನ ಸಂಗಡಿಗರು ತಪ್ಪು ಮಾಡಿದ್ದರೆ, ಮಗುವನ್ನು ಅವರಿಂದ ದೂರ ಇರುವಂತೆ ಮಾಡಿ. ಮಕ್ಕಳಿಗೆ ಸತ್ಯವನ್ನು ಮಾತನಾಡಲು ಪ್ರೇರೇಪಿಸುವ ಕಥೆಗಳು ಮತ್ತು ಸ್ಪೂರ್ತಿದಾಯಕ ಪ್ರಸಂಗಗಳನ್ನು ಹೇಳಬೇಕು. ಸತ್ಯ ಯಾವಾಗಲೂ ಗೌರವ ನೀಡುತ್ತೆ ಎಂದು ಅವರು ಅರಿತುಕೊಂಡಾಗ, ಅವರು ಆಟೊಮ್ಯಾಟಿಕ್ ಆಗಿ ಸುಳ್ಳು ಹೇಳುವುದನ್ನು ನಿಲ್ಲಿಸುತ್ತಾರೆ.