Asianet Suvarna News Asianet Suvarna News

ಮೋಸ ಮಾಡೋ ಸಂಗಾತಿ; ಸಮಸ್ಯೆ ಬಗೆಹರಿಸಿ ಮೂವ್ ಆನ್ ಆಗೋದು ಹೇಗೆ ?

ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರಾ? ಆದರೆ ಅದನ್ನು ಹೇಗೆ ಎದುರಿಸುವುದು ಮತ್ತು ಮುಂದುವರಿಯುವುದು ಎಂಬುದರ ಕುರಿತು ನೀವು ಗೊಂದಲಕ್ಕೊಳಗಾಗಿದ್ದೀರಾ? ಹಾಗಿದ್ರೆ ದಾಂಪತ್ಯ ದ್ರೋಹವನ್ನು ಎದುರಿಸುವುದು ಹೇಗೆ ಅನ್ನೋ ವಿಚಾರವನ್ನು ತಿಳಿದುಕೊಳ್ಳೋಣ.

Caught Your Partner Cheating On You? Here Is How To Deal With It Vin
Author
First Published Nov 1, 2022, 1:19 PM IST

ಸಂಬಂಧಗಳಿದ್ದಲ್ಲಿ ಮೋಸವೂ ಇದ್ದೇ ಇರುತ್ತೆದೆ. ಸುಂದರವಾಗಿ ಆರಂಭವಾದ ಬಾಂಧವ್ಯದಲ್ಲಿ ಯಾವುದೇ ಸುಳಿವಿಲ್ಲದೆ ನಂಬಿಕೆ ದ್ರೋಹ ನುಸುಳಿಬಿಡುತ್ತದೆ. ಸಂಗಾತಿ ಮೋಸ ಮಾಡುತ್ತಿದ್ದಾರೆ ಎಂದು ತಿಳಿದಿದ್ದರೂ ಕೆಲವೊಮ್ಮೆ ಮೂಕ ಪ್ರೇಕ್ಷಕನಂತೆ ನೋಡುವುದಲ್ಲದೆ ಬೇರೇನೂ ಮಾಡಲು ಸಾಧ್ಯವಾಗುವುದಿಲ್ಲ. ಸಂಗಾತಿಯ ಫೋನ್‌ನ್ನು ಪರಿಶೀಲಿಸುತ್ತಿದ್ದು, ಸಂಗಾತಿ ತಡವಾಗಿ ಮನೆಗೆ ಬರುತ್ತಿದ್ದಾಗ ಗೊಂದಲ ಕಾಡುತ್ತಿದ್ದರೂ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂಬಂತಾಗುತ್ತದೆ. ಹೀಗಾಗಿ ಅನುಮಾನದ ಸಂಬಂಧವನ್ನು ಮುಂದುವರೆಸುವುದರಲ್ಲಿ ಅರ್ಥವಿಲ್ಲ. ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುತ್ತಿದ್ದಾರೆ ಎಂದು ನೀವು ನಿರಂತರವಾಗಿ ಯೋಚಿಸುತ್ತಿದ್ದರೆ, ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳನ್ನು ನಾವು ಹೊಂದಿದ್ದೇವೆ. 

ಸಂಗಾತಿ (Partner) ನಿಮಗೆ ಮೋಸ ಮಾಡಿದಾಗ ಹೇಗೆ ತಿಳಿದುಕೊಳ್ಳಬೇಕು, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದರ ಬಗ್ಗೆ ಮಾನಸಿಕ ಆರೋಗ್ಯ ತಜ್ಞ ಮತ್ತು ದಿ ಮೈಂಡ್‌ಫುಲ್ ಫೌಂಡೇಶನ್‌ನ ಸಂಸ್ಥಾಪಕ ಗೀತಿಕಾ ಅರೋರಾ ಭೋಜಕ್ ಅವರು ಮಾಹಿತಿ ನೀಡಿದ್ದಾರೆ.

ಸಂಗಾತಿ ಮೋಸ ಮಾಡಿದ ನಂತರ ಏನು ಮಾಡಬೇಕು ? 
ಸಂಗಾತಿ ಮೋಸ (Cheat) ಮಾಡಿರುವ ಬಗ್ಗೆ ವಿಪರೀತವಾಗಿ ಯೋಚಿಸುವುದು ಬಹಳಷ್ಟು ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಆಲೋಚನೆಗಳು ನಿಮ್ಮ ಸಂಬಂಧದಲ್ಲಿ (Relationship) ಶಾಶ್ವತ ಹಾನಿಯನ್ನುಂಟುಮಾಡುವುದು ಮಾತ್ರವಲ್ಲದೆ ನಿಮ್ಮ ಮನಸ್ಸಿನಲ್ಲಿಯೂ ಸಹ ಕಳವಳವನ್ನುಂಟು ಮಾಡುತ್ತದೆ. ವಿಶೇಷವಾಗಿ ದ್ರೋಹವು ಕೆಟ್ಟ ಭಾವನೆಯನ್ನು ಮೂಡಿಸಬಹುದು. ಮೋಸ ಹೋದ ಕಾರಣವು ಕೆಟ್ಟ ಭಯವನ್ನು ಹೆಚ್ಚಿಸಬಹುದು. ಕೆಲವೊಮ್ಮೆ ಆತಂಕ (Anxiety) ಮತ್ತು ಖಿನ್ನತೆಗೂ ಕಾರಣವಾಗಬಹುದು.

Love Guru: ಮದ್ವೆಯಾಗಿ ವರ್ಷಗಳೇ ಕಳೆದರೂ ಪ್ರೀತಿ ಹೊಸದರಂತಿರಲು ಇಲ್ಲಿದೆ ಲವ್ ಮೆಡಿಸಿನ್

ಸಂಗಾತಿ ಮೋಸ ಮಾಡಿದಾಗ ಪರಿಸ್ಥಿತಿ ನಿಭಾಯಿಸುವುದು ಹೇಗೆ ?
ನಿಮ್ಮ ಸಂಗಾತಿ ನಿಮಗೆ ಮೋಸ ಮಾಡುವುದು ಅತ್ಯಂತ ದುಃಖಕರವಾಗಿರಬಹುದು. ಜೀವನ ಸಂಪೂರ್ಣ ಮುಗಿಯಿತು. ಮುಂದೇನು ಬಾಕಿಯಿಲ್ಲ ಎಂಉ ನೀವು ಅಂದುಕೊಳ್ಳಬಹುದು. ಆದರೆ ತಜ್ಞರ ಪ್ರಕಾರ, ಬ್ರೇಕಪ್‌ನಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಿದೆ. ಇದರಿಂದ ನೀವು ದುಃಖವನ್ನು ಹೋಗಲಾಡಿಸಿ ಮತ್ತೆ ಖುಷಿಯಾಗಿರಲು ಸಾಧ್ಯವಾಗುತ್ತದೆ. ಪ್ರೀತಿಯಲ್ಲಿ ದೂರವಾಗಿರುವ ನೋವನ್ನು ಹೋಗಲಾಡಿಸಿ ಖುಷಿಯಾಗಿರಲು ನೆರವಾಗುವ ಕೆಲವು ಪ್ರಮುಖ ಅಭ್ಯಾಸಗಳ ಮಾಹಿತಿ ಇಲ್ಲಿದೆ.

ಸಂಗಾತಿ ಮೋಸ ಮಾಡಿದ್ದಕ್ಕೆ ದೂಷಿಸಬೇಡಿ: ಹೆಚ್ಚಿನವರು ಸಂಗಾತಿ ಮೋಸ ಮಾಡಿದಾಗ ತಮ್ಮ ತಪ್ಪಿನಿಂದಲೇ ಹೀಗೆಲ್ಲಾ ಆಗಿದೆ ಎಂದು ಅಂದುಕೊಳ್ಳುತ್ತಾರೆ. ಮಾಡದ ತಪ್ಪಿಗೆ ತಮ್ಮನ್ನು ತಾವೇ ದೂಷಿಸಿಕೊಳ್ಳುತ್ತಾರೆ. ಆದರೆ ಹಾಗೆ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಇದು ನಿಮ್ಮ ಆತ್ಮವಿಶ್ವಾಸವನ್ನು (Confidence) ಕಡಿಮೆ ಮಾಡುತ್ತದೆ. ಎಲ್ಲವನ್ನೂ ಪರಾಮರ್ಶಿಸಿ ಹೇಳುವುದಾದರೆ ಪ್ರೀತಿಯಲ್ಲಿ ಮೋಸ ಮಾಡಲು ಯಾವುದೇ ನಿರ್ಧಿಷ್ಟ ಕಾರಣ ಬೇಕಿಲ್ಲ. ಅವೆಲ್ಲವೂ ಕೇವಲ ನೆಪಗಳಷ್ಟೇ. ಹೀಗಾಗಿ ನಿಮ್ಮನ್ನು ದೂಷಿಸಿಕೊಳ್ಳುವುದನ್ನು ಮೊದಲು ನಿಲ್ಲಿಸಬೇಕು. 

ಸಾವಧಾನವಾಗಿರುವುದು: ಜೀವನದಲ್ಲಿ ಅನಿರೀಕ್ಷಿತವಾಗಿ ಏನಾದರೂ ನಡೆದಾಗ ಸಮಾಧಾನವಾಗಿ (Calm) ಆ ಸಮಸ್ಯೆಯನ್ನು ಬಗೆಹರಿಸಲು ಕಲಿಯಬೇಕಾಗಿದೆ.ಧಾವಂತದಿಂದ ಯಾವುದೇ ನಿರ್ಧಾರ (Decision) ತೆಗೆದುಕೊಂಡರೂ ಅದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆಯಷ್ಟೇ. ಹೀಗಾಗಿ ಸಮಸ್ಯೆಯನ್ನು ಬಗೆಹರಿಸಲು ಸಾವಧಾನತೆ ಅತೀ ಹೆಚ್ಚು ಅಗತ್ಯವಾಗಿದೆ. ವಾಸ್ತವವಾಗಿ, ಮೈಂಡ್‌ಫುಲ್‌ನೆಸ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಹೆಚ್ಚು ಜಾಗರೂಕರಾಗಿರುವ ಜನರು ಹೆಚ್ಚು ಕ್ಷಮಿಸುವ ಪ್ರವೃತ್ತಿಯನ್ನು ಹೊಂದಿರುತ್ತಾರೆ ಎಂದು ಕಂಡುಹಿಡಿದಿದೆ. 

'ಪಾಕಿಸ್ತಾನದ ಮೊಗ್ಗಿನ ಮನಸು..' 52 ವರ್ಷದ ಶಿಕ್ಷಕನಿಗೆ ಮನಸ್ಸು ಕೊಟ್ಟ 20 ವರ್ಷದ ವಿದ್ಯಾರ್ಥಿನಿ!

ಮೋಸ ಮಾಡುವ ಪಾಲುದಾರರೊಂದಿಗೆ ಹೇಗೆ ವ್ಯವಹರಿಸಬೇಕು ?
ಮೋಸ ಮಾಡುವ ಪಾಲುದಾರರೊಂದಿಗೆ ಬಹುತೇಕರು ಮಾತನಾಡುವುದನ್ನೇ ಬಿಟ್ಟು ಬಿಡುತ್ತಾರೆ. ಆದರೆ ಹಾಗೆ ಮಾಡಲೇಬೇಕೆಂದೇನಿಲ್ಲ. ಸಂಗಾತಿಯು ನಿಮಗೆ ಮೋಸ ಮಾಡುವ ಆಘಾತವನ್ನು ಜಯಿಸಲು ಸಕಾರಾತ್ಮಕ ಕಾರ್ಯವಿಧಾನಗಳನ್ನು ಕಂಡುಹಿಡಿಯುವುದು ಪ್ರಮುಖವಾಗಿದೆ. ನಿಮ್ಮನ್ನು ಸುತ್ತುವರೆದಿರುವ ಪ್ರೀತಿಯ ಸ್ನೇಹಿತರು ಮತ್ತು ಕುಟುಂಬಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸಿ. ಮತ್ತು ಗುಣಪಡಿಸುವಿಕೆಯ ದೊಡ್ಡ ಭಾಗವೆಂದರೆ ನೀವು ಹೊಂದಿದ್ದ ಒಳ್ಳೆಯ ಸಮಯಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಮತ್ತು ಈ ಜೀವನದ ಘಟನೆಯಿಂದಾಗಿ ನೀವು ಹೊಸ ಪಾಠವನ್ನು ಕಲಿತಂತಾಗುತ್ತದೆ. 

ಜಸ್ಟ್ ಮೂವ್ ಆನ್‌: ಜೀವನದಲ್ಲಿ ಯಾವುದೂ ಶಾಶ್ವತ (Permanent) ಅಲ್ಲ. ಸಂಬಂಧಗಳು ಸಹ. ಅವುಗಳು ಸದಾ ನಮ್ಮೊಂದಿಗಿರುತ್ತವೆ ಎಂದು ಅಂದುಕೊಳ್ಳುವುದೇ ಮೂರ್ಖತನ. ಎಲ್ಲಾ ಸಂಬಂಧಗಳು ನಿರ್ಧಿಷ್ಟ ಹಂತಕ್ಕೆ ತಲುಪಿದಾಗ ಕೊನೆಯಾಗಿ ಬಿಡುತ್ತವೆ. ಹಾಗಂತ ಅವುಗಳಿಗಾಗಿ ಕೊರಗಿ ಜೀವನದ ಉಳಿದದ ಸಮಯವನ್ನು ಕಳೆಯುವುದರಲ್ಲಿ ಅರ್ಥವಿಲ್ಲ. ಒಲ್ಲದ ಸಂಬಂಧ ಯಾವತ್ತೂ ಖುಷಿ ನೀಡಲು ಸಾಧ್ಯವಿಲ್ಲ. ಹೀಗಾಗಿ ಘಟನೆಯನ್ನು ಮರೆತು ಮೂವ್ ಆನ್‌ ಆಗಲು ಕಲಿಯಿರಿ.

Follow Us:
Download App:
  • android
  • ios