ಆಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿದ ಹುಡುಗಿ, ಹಾಸ್ಪಿಟಲ್‌ನಲ್ಲೇ ತಾಳಿ ಕಟ್ಟಿದ ಹುಡುಗ
ಹಿಂದಿನ ಕಾಲದಲ್ಲೆಲ್ಲಾ ಮದುವೆ ಸಮಾರಂಭ ಸಾಮಾನ್ಯವಾಗಿ ಮನೆಗಳಲ್ಲೇ ನಡೆಯುತ್ತಿತ್ತು. ಈಗೆಲ್ಲಾ ದೊಡ್ಡ ದೊಡ್ಡ ಚೌಟ್ರಿ, ಹಾಲ್ ಅಥವಾ ದೇವಸ್ಥಾನಗಳಲ್ಲಿ ಮದ್ವೆ ಮಾಡ್ತಾರೆ. ಆದ್ರೆ ಈ ಮದುವೆ ಮಾತ್ರ ಇವೆಲ್ಲಕ್ಕಿಂತ ವಿಭಿನ್ನವಾಗಿ ಆಸ್ಪತ್ರೆಯಲ್ಲಿ ನಡೀತು. ಅದ್ಯಾಕೆ, ಅದಕ್ಕೇನು ಕಾರಣ ಅನ್ನೋ ಮಾಹಿತಿ ಇಲ್ಲಿದೆ.
ಹುಡುಗ-ಹುಡುಗಿ ಸಣ್ಣ ಪುಟ್ಟ ಕಾರಣಕ್ಕೆ ಮದ್ವೆ ಕ್ಯಾನ್ಸಲ್ ಮಾಡಿಕೊಳ್ಳೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಹುಡುಗಿ ಸಣ್ಣಕ್ಕಿದ್ದಾಳೆ, ಹುಡುಗ ದಪ್ಪ ಇದ್ದಾನೆ, ಹುಡುಗ ಜಾಸ್ತಿ ಮಾತನಾಡಲ್ಲ, ಹುಡುಗಿ ಸಿಕ್ಕಾಪಟ್ಟೆ ಮಾತನಾಡ್ತಾಳೆ ಹೀಗೆ ನಾನಾ ಕಾರಣಕ್ಕೆ ಮದುವೆ ಕ್ಯಾನ್ಸಲ್ ಮಾಡಿಕೊಳ್ತಾರೆ. ಆದ್ರೆ ಇಲ್ಲೊಬ್ಬ ಹುಡುಗ. ಹುಡುಗಿಗೆ ಆಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರಿದ್ರೂ ಕೈ ಬಿಡದೆ ಮದ್ವೆಯಾಗಿ ಮಾದರಿಯಾಗಿದ್ದಾನೆ. ಮಧ್ಯಪ್ರದೇಶದ ಖಾಂಡ್ವಾದಲ್ಲಿ ಈ ಘಟನೆ ನಡ್ದಿದೆ. ಮಹಾಶಿವರಾತ್ರಿಯ ಸಂದರ್ಭದಲ್ಲಿ ಹುಡುಗಿಗೆ ಆಕ್ಸಿಡೆಂಟ್ ಆಗಿತ್ತು. ಕೈ ಕಾಲುಗಳಿಗೆ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇನ್ನು ಹುಡುಗ ತನ್ನನ್ನು ಮದುವೆಯಾಗಲ್ಲ ಎಂದೇ ಹುಡುಗಿ ಅಂದುಕೊಂಡಿದ್ದಳು. ಆದರೆ ಅಚ್ಚರಿಯೆಂಬಂತೆ ಹುಡುಗ ಆಸ್ಪತ್ರೆಗೇ ಬಂದು ಆಕೆಯನ್ನು ಮದುವೆಯಾಗಿದ್ದಾನೆ.
ನಿನ್ನ ಸಂತೋಷದಲ್ಲಿ ಮಾತ್ರವಲ್ಲ, ನಿನ್ನ ಕಷ್ಟದಲ್ಲೂ ನಾನಿರುವೆ ಎಂದು ಹುಡುಗಿಗೆ ಪ್ರಮಾಣ ಮಾಡಿದ್ದಾನೆ. ಹುಡುಗನ ಪೋಷಕರು (Parents) ಸಹ ನೀನು ನಮ್ಮ ಮಗಳಿದ್ದಂತೆ ಎಂದು ಸೊಸೆಯನ್ನು ಹರಸಿದ್ದಾರೆ. ಮಧ್ಯಪ್ರದೇಶದ ಖಾಂಡ್ವಾದ ಅವಸ್ಥಿ ಚೌಕದ ಬಳಿ ಇರುವ ಖಾಸಗಿ ಆಸ್ಪತ್ರೆಯೊಂದು ಈ ವಿಶಿಷ್ಟ ಮದುವೆಗೆ (Marriage) ಸಾಕ್ಷಿಯಾಗಿದೆ.
ವಿಧಿಯೇ ಎಷ್ಟು ಕ್ರೂರ..ಕಾಲಿಲ್ಲದವನ ಬಾಳಿಗೆ ಕಣ್ಣಾದಳು, ಕೈ ಬಿಟ್ಟು ಹೊರಟೇ ಹೋದ!
ಮದುವೆಯ ಹಿಂದಿನ ದಿನ ಆಕ್ಸಿಡೆಂಟ್ ಆಗಿ ಆಸ್ಪತ್ರೆಗೆ ದಾಖಲಾದ ಯುವತಿ
ಉಜ್ಜಯಿನಿಯ ಭೇರುಘಾಟ್ ನಿವಾಸಿ ಸೌದನ್ ಸಿಂಗ್ ಅವರ ಪುತ್ರ ರಾಜೇಂದ್ರ ಹಾಗೂ ಜುಲ್ವಾನಿಯಾ ಗ್ರಾಮದ ಸುಭಾಷ್ ಅವರ ಪುತ್ರಿ ಶಿವಾನಿ ಅವರ ವಿವಾಹ ಫೆ.16ರಂದು ಅದ್ಧೂರಿಯಾಗಿ ನಡೆಯಬೇಕಿತ್ತು. ವಧು ಮತ್ತು ವರನ ಸಂಬಂಧಿಕರು ಖಾಂಡ್ವಾದ ಭಗವಾನ್‌ಪುರ ನಿವಾಸಿಗಳಾಗಿರುವುದರಿಂದ, ಎರಡೂ ಕುಟುಂಬಗಳು ಅವಿರೋಧವಾಗಿ ವಿವಾಹ ಸಮಾರಂಭವನ್ನು ಖಾಂಡ್ವಾದಲ್ಲಿ ಮಾಡಲು ನಿರ್ಧರಿಸಿದರು. ಆದರೆ ಮದುವೆಗೂ ಎರಡು ದಿನ ಮೊದಲೇ ಹುಡುಗಿಗೆ ಅಪಘಾತವಾಗಿ ಕೈ-ಕಾಲು ಮುರಿತದಿಂದ ಆಸ್ಪತ್ರೆಗೆ (Hospital) ದಾಖಲಾದಳು.
ಶಿವಾನಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ (Vehicle)ವೊಂದು ಆಕೆಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಆಕೆಯ ಕೈ ಮತ್ತು ಕಾಲಿಗೆ ಗಾಯವಾಗಿದೆ. ಮನೆಯವರು ಆಕೆಯನ್ನು ಬರ್ವಾನಿ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿಂದ ಖಾಂಡ್ವಾಕ್ಕೆ ಕರೆತಂದು ಅವಸ್ಥಿ ಕ್ರಾಸ್‌ರೋಡ್ಸ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಅವಳ ಕೈ ಮತ್ತು ಕಾಲಿಗೆ ಶುಕ್ರವಾರ ಶಸ್ತ್ರಚಿಕಿತ್ಸೆ (Treatment) ಮಾಡಿದರು. ಮದುವೆಗೆ ಒಂದು ದಿನ ಮೊದಲು ಈ ಆಪರೇಷನ್ ನಡೆಯಿತು. ಮದುವೆಯನ್ನು ಮುಂದೂಡಲು ಹೆಚ್ಚಿನವರು ಸಲಹೆ ನೀಡಿದರು. ಆದ್ರೆ ಇದು ಕೆಟ್ಟ ಶಕುನ ಎಂದು ಹಲವರು ನಂಬಿದ್ದರಿಂದ ಮದುವೆಯನ್ನು ಮುಂದೂಡದೆ ವರನು ಆಸ್ಪತ್ರೆಯಲ್ಲೇ ಮದುವೆಯಾಗಲು ನಿರ್ಧರಿಸಿದನು. ವರ-ವಧುವಿನ ಪರಸ್ಪರ ಒಪ್ಪಿಗೆಯೊಂದಿಗೆ ಆಸ್ಪತ್ರೆಯಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಮದುವೆ ನಡೆಯಿತು.
ನಾಚಿಕೆಯಾಗುತ್ತೆ ಅಂತ ಹನಿಮೂನ್ ರಾತ್ರಿ ಪಕ್ಕದ ಮನೆಯಲ್ಲಿ ಬಚ್ಚಿಟ್ಟುಕೊಂಡ ವರ!
ಮದುವೆ ಮಂಟಪದಂತೆ ಸಿಂಗಾರಗೊಂಡ ಹಾಸ್ಪಿಟಲ್ ವಾರ್ಡ್
ಆಸ್ಪತ್ರೆಯ ಸಾಮಾನ್ಯ ವಾರ್ಡ್ ಮದುವೆ ಸ್ಥಳವಾಯಿತು. ವಾರ್ಡ್ ಪೂರ್ತಿ ಶೃಂಗಾರಗೊಂಡಿದ್ದು, ಶಿವಾನಿ ಹಾಸಿಗೆಯನ್ನು ಮಂಟಪದಂತೆ ಅಲಂಕರಿಸಲಾಗಿತ್ತು. ಪಂಡಿತನು ಮದುವೆಗೆ ಸಂಬಂಧಿಸಿದ ವಿಧಿವಿಧಾನಗಳನ್ನು ಪೂರ್ಣಗೊಳಿಸಿದರು. ಇಬ್ಬರೂ ಪರಸ್ಪರ ಹಾರ ಹಾಕಿಕೊಂಡು ತಾಳಿ ಕಟ್ಟಲಾಯಿತು. ಸಂಬಂಧಿಕರು ಹೊಸ ಜೋಡಿಯನ್ನು ಮನದುಂಬಿ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವರ ರಾಜೇಂದ್ರ, 'ಶಿವಾನಿ ಅಪಘಾತದಿಂದ ಕಂಗಾಲಾಗಿ ಹೋಗಿದ್ದಳು. ಅಂಥಾ ಸಂದರ್ಭದಲ್ಲಿ ಆಕೆಯನ್ನು ಬಿಟ್ಟು ಹೋಗಿದ್ದರೆ ತಪ್ಪಾಗುತ್ತಿತ್ತು. ಹೀಗಾಗಿ ನಾನು ತಕ್ಷಣ ಮದುವೆಯಾಗಲು ನಿರ್ಧರಿಸಿದೆ. ಶಿವಾನಿ ಸಂಪೂರ್ಣ ಚೇತರಿಸಿಕೊಂಡ ನಂತರ ಮನೆಗೆ ಕರೆದುಕೊಂಡು ಹೋಗುತ್ತೇನೆ' ಎಂದಿದ್ದಾರೆ.
ವಧುವಿನ ತಂದೆ ಸುಭಾಷ್ ಯಾದವ್ ಮಾತನಾಡಿ, 'ಮಗಳನ್ನು ಒಳ್ಳೆಯ ಕುಟುಂಬಕ್ಕೆ ಕೊಟ್ಟಿದ್ದು ನಮಗೆ ಸಂತಸ ತಂದಿದೆ. ಅಳಿಯ ಹಾಗೂ ಸಂಬಂಧಿಕರು ಒಳ್ಳೆಯ ಮನಸ್ಸಿನಿಂದ ಮದುವೆಯನ್ನು ಮುರಿಯದೆ, ಶೀಘ್ರ ಮದುವೆ ಮಾಡಿ ನಮಗೆ ಸಹಾಯ ಮಾಡಿದ್ದಾರೆ' ಎಂದರು. ರಾಜೇಂದ್ರನ ಚಿಕ್ಕಮ್ಮ ಮಾತನಾಡಿ, 'ಅದೇ ಘಟನೆ ನಮ್ಮ ಮಗಳಿಗೂ ಆಗಿದ್ದರೆ ಅಳಿಯನಿಗೆ ಮದುವೆ ಆಗದೇ ಇದ್ದಿದ್ದರೆ ನಮಗೆ ತುಂಬಾ ಬೇಸರವಾಗುತ್ತಿತ್ತು. ಅದಕ್ಕಾಗಿಯೇ ನಾವು ರಾಜೇಶ್ ಮತ್ತು ಶಿವಾನಿ ಅವರ ಮದುವೆಯನ್ನು ಮುಂದೆ ನಿಂತು ಮಾಡಿಸಿದ್ದೇವೆ. ಅದರೊಂದಿಗೆ ಆಸ್ಪತ್ರೆಯಲ್ಲಿಯೇ ಆಕೆಗೆ ಸಂಪೂರ್ಣ ಚಿಕಿತ್ಸೆ ಕೊಡಿಸುತ್ತೇವೆ' ಎಂಉ ಹೇಳಿದರು.