Asianet Suvarna News Asianet Suvarna News

ಮೊದಲ ರಾತ್ರಿಯಲ್ಲಿ ವಧುವಿಗೆ ಹೊಟ್ಟೆ ನೋವು, ಆಸ್ಪತ್ರೆ ದಾಖಲಿಸಿದ ಬೆನ್ನಲ್ಲೇ ಹೆಣ್ಣು ಮಗುವಿಗೆ ಜನ್ಮ!

ಖುಷಿ ಖುಷಿಯಿಂದ ಮದುವೆ ಸಮಾರಂಭ ಮುಗಿದಿದೆ. ಮೊದಲ ರಾತ್ರಿಗೆ ಸಿದ್ದತೆ ನಡೆದಿದೆ. ಆದರೆ ವಧು ತೀವ್ರ ಹೊಟ್ಟೆನೋವಿನಿಂದ ಬಳಲಿದ್ದಾಳೆ. ಹೀಗಾಗಿ ವರ ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮದುವೆಯಾದ ಮರುದಿನ ವಧು ಹೆಣ್ಣಮಗುವಿಗೆ ಜನ್ಮ ನೀಡಿದ್ದಾಳೆ. 
 

Bride gives birth a baby girl day after wedding in Noida no police complaint filed ckm
Author
First Published Jun 29, 2023, 7:22 PM IST

ನೋಯ್ಡಾ(ಜೂ.29) ಕುಟುಂಬಸ್ಥರು, ಹಿರಿಯರು, ಆಪ್ತರು, ಗೆಳೆಯರು ಸಮ್ಮುಖದಲ್ಲಿ ಮದುವೆ ಸಮಾರಂಭ ಮುಗಿದಿದೆ. ಸಂಜೆ ಮನೆಯಲ್ಲಿ ಔತಣಕೂಟವನ್ನು ಏರ್ಪಡಿಸಲಾಗಿದೆ. ಊಟ ಉಪಚಾರ ಮುಗಿದಿದೆ. ಇತ್ತ ನೂತನ ವಧು-ವರರ ಮೊದಲ ರಾತ್ರಿಗೆ ಗೆಳೆಯರು ಕೋಣೆಯನ್ನು ಅಲಂಕಾರ ಮಾಡಿದ್ದಾರೆ.ಹಣ್ಣುಗಳನ್ನು ಕೋಣೆಯಲ್ಲಿ ಇಟ್ಟಿದ್ದಾರೆ. ಗಂಟೆ ರಾತ್ರಿ 11 ಕಳೆದಿದೆ. ಮೊದಲ ರಾತ್ರಿಯ ಖುಷಿಯಲ್ಲಿ ವರ ಕೋಣೆಗೆ ತೆರಳಿದ್ದಾನೆ. ಇತ್ತ ಕೋಣೆಯಲ್ಲಿ ವಧು ತನಗೆ ಹೊಟ್ಟೆ ನೋವು ಎಂದು ಚೀರಾಡಿದ್ದಾಳೆ. ತೀವ್ರ ಹೊಟ್ಟೆ ನೋವಿನಿಂದ ಬಳಲಿದ್ದಾಳೆ. ಆತಂಕಗೊಂಡ ವರ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾನೆ. ತಪಾಸಣೆ ನಡೆಸಿದ ವೈದ್ಯರು ಹೊರಬಂದು ಈಕೆ ಏಳೂವರೆ ತಿಂಗಳ ಗರ್ಭಿಣಿ ಎಂದಿದ್ದಾರೆ. ಈ ಮಾತು ಕೇಳಿದ ವರ ಅಲ್ಲೆ ಕುಸಿದಿದ್ದಾನೆ. ಇತ್ತ ಕುಟುಂಬಸ್ಥರು, ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಹತಾಶೆ, ನೋವು, ಆಕ್ರೋಶದಲ್ಲೇ ಮದುವೆ ಮೊದಲ ರಾತ್ರಿ ಆಸ್ಪತ್ರೆಯಲ್ಲಿ ಕಳೆದ ವರನ ಕೈಗೆ ಮರುದಿನ ವೈದ್ಯರು ಹೆಣ್ಣು ಮಗುವನ್ನು ನೀಡಿದ್ದಾರೆ. 

ನೋಯ್ಡಾದ ವ್ಯಕ್ತಿ, ತೆಲಂಗಾಣ ಸಿಕಂದರಾಬಾದ್‌ ಹುಡುಗಿ ಜೊತೆ ಮದುವೆಯಾಗಿದೆ. ನೋಯ್ಡಾದಲ್ಲಿ ಮದುವೆ ಸಮಾರಂಭ ನಡೆದಿದೆ. ಮದುವೆ ಬಳಿಕ ಹುಡುಗಿ ಕಟುಂಬಸ್ಥರು ಸಿಕಂದರಾಬಾದ್‌ಗೆ ಮರಳಿದ್ದಾರೆ. ಇತ್ತ ವರನ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಮೊದಲ ರಾತ್ರಿಯಂದೇ ವಧುವಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವಧುವಿನ ಚೀರಾಟ ನೋಡಿ ಆತಂಕಗೊಂಡ ವರ ತಕ್ಷಣವೇ ಆಸ್ಪತ್ರೆ ದಾಖಸಲು ನಿರ್ಧರಿಸಿದ್ದಾನೆ.

ಅಬ್ಬಬ್ಬಾ..ಇಲ್ಲಿ 6 ವರ್ಷದ ಮಕ್ಕಳೂ ಸೆಕ್ಸ್‌ ಮಾಡ್ತಾರೆ!

ಇತ್ತ ವರನ ಪೋಷಕರು ಆತಂಕಗೊಂಡಿದ್ದಾರೆ. ತಕ್ಷಣವೇ ಸ್ಥಳೀಯ ಆಸ್ಪತ್ರೆ ದಾಖಲಿಸಲಾಗಿದೆ. ತಪಾಸಣೆ ಮಾಡಿದ ವೈದ್ಯರು ಈಕೇ ಏಳೂವರೆ ತಿಂಗಳ ಗರ್ಭೀಣಿ ಎಂದಿದ್ದಾರೆ. ಈ ಮಾತು ಕೇಳಿ ವರ ಕುಸಿದುಹೋಗಿದ್ದಾನೆ. ಇತ್ತ ವರನ ಪೋಷಕರಿಗೂ ದಿಕ್ಕು ತೋಚದಾಗಿದೆ. ವಧುವಿನ ಪೋಷಕರಿಗೆ ಕರೆ ಮಾಡಿದ ವರ, ಹಿಗ್ಗಾ ಮುಗ್ಗಾ ಜಾಡಿಸಿದ್ದಾನೆ. ಆಸ್ಪತ್ರೆ ದಾಖಲಿಸಿದ ಮಾಹಿತಿ ತಿಳಿದು ಸಿಕಂದರಾಬಾದ್‌ನಿಂದ ವಧುವಿನ ಪೋಷಕರು ರೈಲು ಹತ್ತಿದ್ದಾರೆ.

ಮೊದಲ ರಾತ್ರಿ ಕಳೆಯಬೇಕಿದ್ದ ವರ ಆಸ್ಪತ್ರೆಯಲ್ಲಿ ಆಕ್ರೋಶದಿಂದಲೇ ಜಾಗರಣೆ ಮಾಡಬೇಕಾಗಿ ಬಂದಿದೆ. ಸಿಟ್ಟು, ನೋವಿನಲ್ಲಿ ರಾತಿ ಕಳೆದು ಹೋಗಿದೆ. ದಿನ ಬೆಳಗಾಗಿದೆ. ಮಧ್ಯಾಹ್ನದ ಹೊತ್ತಿಗೆ ವಧುವಿಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಬಳಿಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇತ್ತ ವರ ಮದುವೆಯಾದ ಒಂದೇ ದಿನಕ್ಕೆ ಅಪ್ಪನಾಗಿ ಭಡ್ತಿ ಪಡೆದಿದ್ದಾನೆ.

ಇಲ್ಲಿ ವಧು ಮದ್ವೆಗೆ ಬಂದ ಎಲ್ಲಾ ಬ್ಯಾಚುಲರ್ಸ್‌ ಹುಡುಗರಿಗೆ ಕಿಸ್ ಕೊಡ್ತಾಳೆ!

ಸಂಜೆ ಹೊತ್ತಿಗೆ ವಧುವಿನ ಪೋಷಕರು ಆಸ್ಪತ್ರೆ ತಲುಪಿದ್ದಾರೆ. ಇಲ್ಲೊಂದು ಸುತ್ತು ಜಗಳ ನಡೆದಿದೆ. ಬಳಿಕ ವರ ಹಾಗೂ ವಧುವಿನ ಪೋಷಕರು ಒಪ್ಪಂದ ಮಾಡಿಕೊಂಡಿದ್ದಾರೆ. ದೂರು ದಾಖಲಿಸಿದೇ ಇರಲು ನಿರ್ಧರಿಸಿದ್ದಾರೆ. ಹಲವು ವರ್ಷಗಳಿಂದ ಹುಡುಗಿ ನೋಡಿದರೂ ಮದುವೆಯಾಗರಲಿಲ್ಲ. ಹಲವು ಹುಡುಗಿಯರು ಮದುವೆಯಾಗಲು ಒಪ್ಪಿರಲಿಲ್ಲ. ಹೀಗಾಗಿ ಇದೀಗ ದೂರು ದಾಖಿಸಿದರೆ ಇನ್ನು ಮದುವೆಯೇ ಆಗುವುದಿಲ್ಲ ಎಂದ ವರ ಪೋಷಕರು ಒಪ್ಪಂದಕ್ಕೆ ಮುಂದಾಗಿದ್ದಾರೆ.

ಗರ್ಭಿಣಿ ಅನ್ನೋ ವಿಚಾರ ವಧುವಿನ ಪೋಷಕರಿಗೆ ತಿಳಿದಿತ್ತು. ಮದುವೆಗೂ ಮುಂಚೆ ಇದ್ದ ಸಂಬಂಧ ಮಗು ಅನ್ನೋದು ವಧುವಿನ ಪೋಷಕರಿಗೆ ತಿಳಿದಿತ್ತು. ಆದರೆ ಈ ವಿಚಾವನ್ನು ವರ ಹಾಗೂ ಆತನ ಕುಟುಂಬಸ್ಥರಿಂದ ಮುಚ್ಚಿಡಲಾಗಿತ್ತು. ಅನುಮಾನ ಬರದಂತೆ ಮಾಡಲು, ಹುಡುಕೃಗಿ ಇತ್ತೀಚೆಗೆ ಬೆಲ್ಲಿ ಫ್ಯಾಟ್ ತೆಗೆಸಿದ್ದಾಳೆ. ಹಾಗಾಗಿ ಹೊಟ್ಟೆ ಹಾಗೂ ಸೊಂಟದ ಭಾಗ ಸ್ವಲ್ಪ ದಪ್ಪ ಕಾಣಿಸುತ್ತಿದೆ ಎಂದಿದ್ದಾರೆ.

ವರನ ಆಕ್ರೋಶ ಹೆಚ್ಚಾಗಿದೆ. ಯಾವದೇ ಕಾರಣಕ್ಕೂ ಮಗು ಹಾಗೂ ವಧುವನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾನೆ. ವರನ ಪೋಷಕರ ಮಾತಿನಂತೆ ದೂರು ದಾಖಲಿಸಿಲ್ಲ. ಆದರೆ ವಧು ಹಾಗೂ ಮಗುವನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾನೆ. ಇದರಂತೆ ವಧು ಹಾಗೂ ಮಗುವನ್ನು ಸಿಕಂದರಾಬಾದ್‌ಗೆ ಕರೆದುಕೊಂಡು ಹೋಗಲು ಹುಡುಗಿಯ ಪೋಷಕರು ಒಪ್ಪಿದ್ದಾರೆ. 

Follow Us:
Download App:
  • android
  • ios